ಅಖಾಡಕ್ಕಿಳಿದ ಗವರ್ನರ್​​; ಕೇಂದ್ರಕ್ಕೆ ತುರ್ತು ವರದಿ: ಸರ್ಕಾರ ವಜಾ - ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು?

Governor Recommends President Rule?: ಸರ್ಕಾರ ಬಹುಮತವನ್ನು ಕಳೆದುಕೊಂಡಿದ್ದು, ನಿಗದಿ ಮಾಡಿದ ಸಮಯದೊಳಗೆ ವಿಶ್ವಾಸಮತ ಯಾಚಿಸಿಲ್ಲ. ಈ ಹಿನ್ನೆಲೆ ರಾಜ್ಯ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಶಿಫಾರಸು ಮಾಡಿರುವ ಸಾಧ್ಯತೆಯೂ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Sharath Sharma Kalagaru | news18
Updated:July 19, 2019, 3:11 PM IST
ಅಖಾಡಕ್ಕಿಳಿದ ಗವರ್ನರ್​​; ಕೇಂದ್ರಕ್ಕೆ ತುರ್ತು ವರದಿ: ಸರ್ಕಾರ ವಜಾ - ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು?
ಸಿಎಂ ಎಚ್​ಡಿಕೆ ಮತ್ತು ರಾಜ್ಯಪಾಲ ವಜೂಭಾಯಿ ವಾಲಾ
  • News18
  • Last Updated: July 19, 2019, 3:11 PM IST
  • Share this:
ಬೆಂಗಳೂರು: ರಾಜ್ಯ ರಾಜಕೀಯ ಕ್ಷಣಕ್ಕೊಂದು ತಿರುವುಗಳನ್ನು ಪಡೆಯುತ್ತಿದ್ದು, ರಾಜ್ಯಪಾಲ ವಜುಬಾಯ್​ ವಾಲಾರವರು ಮತ್ತೆ ಅಖಾಡಕ್ಕಿಳಿದಿದ್ದಾರೆ. ಗುರುವಾರ ಸಂಜೆ ಬಿಜೆಪಿ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಬಹುಮತ ಸಾಬೀತು ಪಡಿಸಲು ಸಮಯ ನಿಗದಿ ಮಾಡುವಂತೆ ಕೋರಿದ್ದರು. ಅದರ ಬೆನ್ನಲ್ಲೇ ಮುಖ್ಯಮಂತ್ರಿ ಎಚ್​ ಡಿ ಕುಮಾರಸ್ವಾಮಿ ಅವರಿಗೆ ಶುಕ್ರವಾರ ಮಧ್ಯಾಹ್ನ 1.30ರೊಳಗೆ ಬಹುಮತ ಸಾಬೀತು ಪಡಿಸುವಂತೆ ಗವರ್ನರ್​ ಗಡುವು ನೀಡಿದ್ದರು. 

ಆದರೆ ಸದನದಲ್ಲಿ ಚರ್ಚೆ ಅಂತ್ಯವಾಗದೇ ಮತಯಾಚನೆಗೆ ಅವಕಾಶ ಸಾಧ್ಯವಿಲ್ಲ ಎಂದು ಸ್ಪೀಕರ್​ ರಮೇಶ್​ ಕುಮಾರ್​ ಸ್ಪಷ್ಟಪಡಿಸುವ ಮೂಲಕ, ರಾಜ್ಯಪಾಲರ ಆದೇಶವನ್ನು ಪಾಲಿಸಲು ತಿರಸ್ಕರಿಸಿದ್ದಾರೆ. ಇದರ ಬೆನ್ನಲ್ಲೇ ರಾಜ್ಯಪಾಲ ವಜುಬಾಯ್​ ವಾಲಾ ಅವರು ಕೇಂದ್ರ ಗೃಹ ಇಲಾಖೆಗೆ ತುರ್ತು ವರದಿಯೊಂದನ್ನು ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಲ್ಲಮೂಲಗಳ ಪ್ರಕಾರ, ರಾಜ್ಯಪಾಲರು ಮಧ್ಯಾಹ್ನ ಈ ವರದಿಯನ್ನು ಸಲ್ಲಿಸಿದ್ದು, ರಾಷ್ಟ್ರಪತಿ ಆಳ್ವಿಕೆಗೆ ಸೂಚಿಸಿದ್ದಾರ ಎಂಬ ಊಹಾಪೋಹಗಳು ಕೇಳಿ ಬರುತ್ತಿದೆ. ಸರ್ಕಾರ ಬಹುಮತವನ್ನು ಕಳೆದುಕೊಂಡಿದ್ದು, ನಿಗದಿ ಮಾಡಿದ ಸಮಯದೊಳಗೆ ವಿಶ್ವಾಸಮತ ಯಾಚಿಸಿಲ್ಲ. ಈ ಹಿನ್ನೆಲೆ ರಾಜ್ಯ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಶಿಫಾರಸು ಮಾಡಿರುವ ಸಾಧ್ಯತೆಯೂ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ರಾಜ್ಯ ರಾಜಕೀಯ ನಾಟಕದ ಕ್ಷಣಕ್ಷಣದ ಮಾಹಿತಿಗಾಗಿ ಇದನ್ನು ಕ್ಲಿಕ್​ ಮಾಡಿ

ಒಂದೆಡೆ ಸದನದಲ್ಲಿ ರಾಜ್ಯಪಾಲರ ನಡೆಯನ್ನು ಕಾಂಗ್ರೆಸ್​ - ಜೆಡಿಎಸ್​ ನಾಯಕರು ಖಂಡಿಸಿದ್ದಾರೆ. ಸ್ಪೀಕರ್​ ಅಧಿಕಾರ ವ್ಯಾಪ್ತಿಯಲ್ಲಿ ಹಸ್ತಕ್ಷೇಪ ಮಾಡುವ ಹಕ್ಕು ರಾಜ್ಯಪಾಲರಿಗಿಲ್ಲ. ರಾಜ್ಯಪಾಲರು ಬಿಜೆಪಿಯ ಏಜೆಂಟರಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಮೈತ್ರಿ ಪಕ್ಷದ ನಾಯಕರು ಸದನದಲ್ಲಿ ಆರೋಪಿಸಿದ್ದರು. ಜತೆಗೆ 'ಗೋ ಬ್ಯಾಕ್​ ಗವರ್ನರ್​​' ಎಂದು ಕೂಗು ಆರಂಭಿಸಿದ್ದರು.

First published: July 19, 2019, 3:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading