KERC Recruitment 2020: ನಿರ್ದೇಶಕ, ಉಪನಿರ್ದೇಶಕ, ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಹಾಯಕ ಹುದ್ದೆಗಳಿಗೆ ಯಾವುದಾದರು ಪದವಿ ವಿದ್ಯಾರ್ಹತೆಯನ್ನು ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ

jobs

jobs

 • Share this:
  ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಖಾಲಿ ಇರುವ ನಿರ್ದೇಶಕರು, ಉಪನಿರ್ದೇಶಕರು ಮತ್ತು ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಡಿಸೆಂಬರ್ 19,2020ರೊಳಗೆ ಅರ್ಜಿ ಸಲ್ಲಿಸಲು ತಿಳಿಸಿದೆ.

  ವಿದ್ಯಾರ್ಹತೆ:

  -ನಿರ್ದೇಶಕರು ಹುದ್ದೆಗಳಿಗೆ ಎಲೆಕ್ಟ್ರಿಕಲ್, ಪವರ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರಾಗಿರಬೇಕು.

  -ಉಪನಿರ್ದೇಶಕರು ಹುದ್ದೆಗಳಿಗೆ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿರಬೇಕು

  -ಸಹಾಯಕ ಹುದ್ದೆಗಳಿಗೆ ಯಾವುದಾದರು ಪದವಿ ವಿದ್ಯಾರ್ಹತೆಯನ್ನು ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ

   ವಯೋಮಿತಿ:

  -ನಿರ್ದೇಶಕರು, ಉಪನಿರ್ದೇಶಕರು ಹುದ್ದೆಗಳಿಗೆ ಗರಿಷ್ಟ 65 ವರ್ಷ

  -ಸಹಾಯಕ ಹುದ್ದೆಗಳಿಗೆ ಗರಿಷ್ಟ 60 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಹಾಕಬಹುದು.

  ಅರ್ಜಿ ಸಲ್ಲಿಸುವುದು ಹೇಗೆ?:

  ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಕಚೇರಿ ಅಥವಾ ಅಧಿಕೃತ ವೆಬ್‌ಸೈಟ್​ಗೆ  https://karunadu.karnataka.gov.in/kerc/Pages/home.aspx ಭೇಟಿ ನೀಡಿ ಭರ್ತಿಮಾಡಬೇಕು. ಡಿಸೆಂಬರ್ 19,2020ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
  Published by:Harshith AS
  First published: