• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Karnataka Election 2023: ಗ್ಯಾಂಗ್‌ಸ್ಟರ್ ಅತೀಕ್​ ಅಹ್ಮದ್ ಆಪ್ತ ಈಗ ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕ! ಕೈ ವಿರುದ್ಧ ಮುಗಿಬಿದ್ದ ಕಮಲಕಲಿಗಳು

Karnataka Election 2023: ಗ್ಯಾಂಗ್‌ಸ್ಟರ್ ಅತೀಕ್​ ಅಹ್ಮದ್ ಆಪ್ತ ಈಗ ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕ! ಕೈ ವಿರುದ್ಧ ಮುಗಿಬಿದ್ದ ಕಮಲಕಲಿಗಳು

ಅತೀಕ್ ಅಹ್ಮದ್​ ಆಫ್ತ  ಇಮ್ರಾನ್‌ ಪ್ರತಾಪ್‌ಘರ್ಹಿ ಕಾಂಗ್ರೆಸ್​ನ ಸ್ಟಾರ್ ಪ್ರಚಾರಕ

ಅತೀಕ್ ಅಹ್ಮದ್​ ಆಫ್ತ ಇಮ್ರಾನ್‌ ಪ್ರತಾಪ್‌ಘರ್ಹಿ ಕಾಂಗ್ರೆಸ್​ನ ಸ್ಟಾರ್ ಪ್ರಚಾರಕ

ಅತೀಕ್ ಅಹ್ಮದ್​ ಮತ್ತು ಅಶ್ರಫ್​ ಅಹ್ಮದ್​ರನ್ನು ಇಮ್ರಾನ್​ ತನ್ನ ಗುರುಗಳು ಎಂದು ಪರಿಗಣಿಸಿದ್ದ, ಅವರನ್ನು ಸಹೋದರರು ಎಂದು ಹಲವು ಬಾರಿ ಹೇಳಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

  • Share this:

ಬೆಂಗಳೂರು: ಇತ್ತೀಚೆಗೆ ಉತ್ತರಪ್ರದೇಶದ (Uttar Pradesh) ಪ್ರಯಾಗ್‌ರಾಜ್‌ನಲ್ಲಿ ಮೂವರು ಶೂಟರ್​ಗಳಿಂದ ಮಾಫಿಯಾ ಡಾನ್‌ ಹಾಗೂ ಮಾಜಿ ಎಂಪಿ ಅತೀಕ್‌ ಅಹ್ಮದ್​  (Atiq Ahmed) ಹತ್ಯೆ ನಡೆದಿತ್ತು. ಪೊಲೀಸ್​ ಹಾಗೂ ಮಾಧ್ಯಮದ (Media) ಎದುರಲ್ಲೇ ಹತ್ಯೆ ಮಾಡಲಾಗಿತ್ತು.  ಆ ವಿಚಾರ ದೇಶದಲ್ಲೇ ಕೋಲಾಹಲ ಎಬ್ಬಿಸುತ್ತಿದೆ. ಎದುರಾಳಿ ಪಕ್ಷಗಳು ಅಲ್ಲಿನ ಸರ್ಕಾರದ ವಿರುದ್ಧ ಟೀಕೆಗಳ ಸುರಿಮಳೆಗೈಯುತ್ತಿವೆ. ಆದರೆ ಆತನ ಬೆಂಬಲಿಗ ಎನ್ನಲಾದ ರಾಜ್ಯಸಭಾ ಸದಸ್ಯ ಇಮ್ರಾನ್‌ ಪ್ರತಾಪ್‌ಗರ್ಹಿಯನ್ನು (Imran Pratapgarhi) ರಾಜ್ಯ ಕಾಂಗ್ರೆಸ್​  (Congress) ವಿಧಾನಸಭಾ ಚುನಾವಣೆಗೆ ಸ್ಟಾರ್​ ಪ್ರಚಾರಕರ (Star Campaigner) ಪಟ್ಟಿಯಲ್ಲಿ ಸೇರಿಸುವುದನ್ನ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje ) ಟೀಕಿಸಿದ್ದಾರೆ.


ಅತೀಕ್​ನನ್ನು ಸಹೋದರ ಎಂದಿದ್ದ ಇಮ್ರಾನ್


ಅತೀಕ್ ಅಹ್ಮದ್​ ಮತ್ತು ಅಶ್ರಫ್​ ಅಹ್ಮದ್​ರನ್ನು ಇಮ್ರಾನ್​ ತನ್ನ ಗುರುಗಳು ಎಂದು ಪರಿಗಣಿಸಿದ್ದ, ಅವರನ್ನು ಸಹೋದರರು ಎಂದು ಹಲವು ಬಾರಿ ಹೇಳಿಕೊಂಡಿದ್ದರು ಎಂದು ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಹೇಳಿದ್ದು, ಅಂತಹವರನ್ನು ರಾಜ್ಯಕ್ಕೆ ಚುನಾವಣಾ ಪ್ರಚಾರಕ್ಕಾಗಿ ಕಾಂಗ್ರೆಸ್​ ಕರೆತಂದಿರುವುಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಕಾಂಗ್ರೆಸ್‌ಗೆ ಹಿಂದಿನಿಂದಲೂ ಮಾಫಿಯಾ ಜೊತೆ ಲಿಂಕ್‌ ಇದೆ. ಈಗ ಗ್ಯಾಂಗ್‌ಸ್ಟರ್‌ಗಳಾದ ಅತೀಕ್‌ ಅಹ್ಮದ್‌ ಹಾಗೂ ಆತನ ಸಹೋದರ ಅಶ್ರಫ್​ನನ್ನ ಸ್ನೇಹಿತರು, ಗುರುಗಳು ಎಂದಿದ್ದ ಇಮ್ರಾನ್‌ ಪ್ರತಾಪ್‌ಗರ್ಹಿಯನ್ನು ಕರ್ನಾಟಕ ಚುನಾವಣೆಗೆ ಸ್ಟಾರ್‌ ಪ್ರಚಾರಕನನ್ನಾಗಿ ನೇಮಕ ಮಾಡಿದೆ. ಕ್ರಿಮಿನಲ್‌ಗಳು ಹಾಗೂ ದೇಶದ್ರೋಹಿಗಳಿಗೆ ಕಾಂಗ್ರೆಸ್‌ ಬೆಂಬಲ ನೀಡುತ್ತಿದೆ ಎನ್ನುವುದು ಇದರಿಂದ ಗೊತ್ತಾಗುತ್ತಿದೆ ಎಂದು ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ.


ಇದನ್ನೂ ಓದಿ: Atiq Ahmed: ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್‌ ಹುತಾತ್ಮ, ಅವ್ರಿಗೆ ಭಾರತ ರತ್ನ ಕೊಡಿ! ಕಾಂಗ್ರೆಸ್ ನಾಯಕನಿಂದ ಆಗ್ರಹ


ಹಿಂದೂ ವಿರೋಧಿ ಹೇಳಿಕೆ


ಇಮ್ರಾನ್ ಪ್ರತಾಪ್​ಘರ್ಹಿ ಈ ಹಿಂದೆ ಹಿಂದೂ ವಿರೋಧಿ ಹೇಳಿಕೆ ನೀಡಿದ್ದರು. ಮುಸ್ಲಿಮರು ಯಾರಿಗೂ ತಲೆ ಬಾಗುವವರಲ್ಲ, ತಲೆ ಕತ್ತರಿಸುವವರು ತನ್ನ ಭಾಷಣದಲ್ಲಿ ಹೇಳಿದ್ದ. ಇಮ್ರಾನ್‌ ಇಂತಹ ಭಾಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದಾರೆ. ಅಲ್ಲದೆ ಅತೀಕ್‌ ಅಹ್ಮದ್‌ ಜೊತೆ ಈತ ಸಂಪರ್ಕದಲ್ಲಿದ್ದ. ಅಂತಹ ವ್ಯಕ್ತಿಯನ್ನ ಕಾಂಗ್ರೆಸ್‌ ತನ್ನ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ಸೇರಿಸಿದೆ. ಇಡೀ ಕಾಂಗ್ರೆಸ್‌ ಕ್ರಿಮಿನಲ್‌ಗಳ ಜೊತೆ ಕೈ ಜೋಡಿಸಿದೆ ಎಂದು ಶೋಭಾ ಕಿಡಿಕಾರಿದ್ದಾರೆ.
ವಿಡಿಯೋ ಶೇರ್ ಮಾಡಿದ ಅಮಿತ್ ಮಾಳವೀಯ


ರಾಹುಲ್ ಗಾಂಧಿ ಅವರಿಂದ ರಾಜ್ಯಸಭಾ ಸದಸ್ಯ ಪಡೆದಿರುವ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕ ಇಮ್ರಾನ್ ಪ್ರತಾಪ್‌ಘರ್ಹಿ ಅವರು ಡಾನ್ ಮತ್ತು ಈಗ ಕೊಲೆಯಾದ ಕ್ರಿಮಿನಲ್ ಅತೀಕ್ ಅಹ್ಮದ್‌ನ ಬೆಂಬಲಿಗರಾಗಿದ್ದರು ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದಾರೆ. ಜೊತೆಗೆ ಅತಿಕ್ ಅಹ್ಮದ್ ಅವರು ಕಾಂಗ್ರೆಸ್ ಸಂಸದರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುತ್ತಿರುವುದನ್ನು ಮತ್ತು ಅವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿರುವ ವೀಡಿಯೋವನ್ನೂ ಮಾಳವಿಯಾ ಹಂಚಿಕೊಂಡಿದ್ದಾರೆ.


ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾಗಿರು ಇಮ್ರಾನ್ "ಅತಿಕ್ ಭಾಯ್" ಮತ್ತು "ಅಶ್ರಫ್ ಸಾಹಿಬ್" ಅವರೊಂದಿಗೆ ಬಹಳ ನಿಕಟ ಸಂಬಂಧ ಹೊಂದಿದ್ದಾರೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಸಲಹೆಗಾರ ಕಾಂಚನ್ ಗುಪ್ತಾ ವ್ಯಂಗ್ಯ ಮಾಡಿದ್ದು, ಅತೀಕ್ ಜೊತೆ ಕಾಣಿಸಿಕೊಂಡಿರುವ ಇಮ್ರಾನ್​ ಪ್ರತಾಪ್​ಘರ್ಹಿ ಫೋಟೋಗಳನ್ನು ಶೇರ್ ಮಾಡಿದ್ದಾರೆ.


ಇದನ್ನೂ ಓದಿ: Atiq Ahmed: 17 ವರ್ಷಕ್ಕೆ ಮೊದಲ ಕೊಲೆ, ಶಾಸಕನಾದ ಮೂರೇ ತಿಂಗಳಿಗೆ ರೌಡಿ ಹತ್ಯೆ! ಇದು ಟಾಂಗಾ ಚಾಲಕನ ಮಗ ಗ್ಯಾಂಗ್‌ಸ್ಟರ್‌ ಆದ ಕರಾಳ ಕಥೆ


 ಅತೀಕ್​ಗೆ ಭಾರತರತ್ನ ಕೊಡಬೇಕೆಂದ ಕಾಂಗ್ರೆಸ್ ನಾಯಕ


ದರೋಡೆಕೋರ ಅತೀಕ್ ಅಹ್ಮದ್‌ನನ್ನು (Atiq Ahmed) ಹುತಾತ್ಮ ಎಂದು ಬಣ್ಣಿಸಿದ ಕಾಂಗ್ರೆಸ್ (Congress) ನಾಯಕ , ಕೌನ್ಸಿಲರ್ ಅಭ್ಯರ್ಥಿ ರಾಜ್‌ಕುಮಾರ್ ಸಿಂಗ್ ಅಲಿಯಾಸ್ ರಜ್ಜು ಭಯ್ಯಾ (Rajkumar singh) ಮಾಫಿಯಾ ಡಾನ್​ಗೆ ಭಾರತ ರತ್ನ ನೀಡಬೇಕೆಂದು ಒತ್ತಾಯಿಸಿದ್ದಾರೆ. ಅತೀಕ್​ಗೆ ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನ ಕೊಡಬೇಕೆಂದಿರುವ ಕಾಂಗ್ರೆಸ್​ ನಾಯಕ ಜೊತೆಗೆ ಅತೀಕ್ ಅಹ್ಮದ್ ದೇಹವನ್ನು ತ್ರಿವರ್ಣ ಧ್ವಜದಲ್ಲಿ ಸುತ್ತಿಡಬೇಕಿತ್ತು ಎಂದು ಹೇಳಿ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದ್ದಾರೆ. ಸದ್ಯಕ್ಕೆ ಆತನನ್ನು ಪೊಲೀಸರು ಬಂಧಿಸಿದ್ದರೆ, ಕಾಂಗ್ರೆಸ್ ಪಕ್ಷವೂ ಉಚ್ಛಾಟನೆ ಮಾಡಿದೆ.

top videos
    First published: