IPS Praveen Sood: ನೂತನ ಸಿಬಿಐ ನಿರ್ದೇಶಕರಾಗಿ ಕರ್ನಾಟಕದ ಡಿಜಿಪಿ ಪ್ರವೀಣ್ ಸೂದ್ ನೇಮಕ

ಪ್ರವೀಣ್ ಸೂದ್

ಪ್ರವೀಣ್ ಸೂದ್

ನೂತನ ಸಿಬಿಐ ನಿರ್ದೇಶಕರಾಗಿ (CBI Director) ಹಿರಿಯ ಐಪಿಎಸ್ ಅಧಿಕಾರಿ, ಕರ್ನಾಟಕದ (DGP) ಡಿಜಿಪಿ ಪ್ರವೀಣ್ ಸೂದ್ (Praveen Sood) ನೇಮಕಗೊಂಡಿದ್ದಾರೆ.

  • Share this:

ಬೆಂಗಳೂರು: ಕರ್ನಾಟಕದ ಚುನಾವಣಾ ಫಲಿತಾಂಶ ಹೊರ ಬಿದ್ದ ಬೆನ್ನಲ್ಲೇ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದ್ದು, ನೂತನ ಸಿಬಿಐ ನಿರ್ದೇಶಕರಾಗಿ (CBI Director) ಹಿರಿಯ ಐಪಿಎಸ್ ಅಧಿಕಾರಿ, ಕರ್ನಾಟಕದ (DGP) ಡಿಜಿಪಿ ಪ್ರವೀಣ್ ಸೂದ್ (Praveen Sood) ನೇಮಕಗೊಂಡಿದ್ದಾರೆ.


ಡಿಜಿ & ಐಜಿಪಿ ಪ್ರವೀಣ್ ಸೂದ್ ಅವರನ್ನು ನೂತನ ಸಿಬಿಐ (ಸೆಂಟ್ರಲ್ ಬ್ಯೂರೋ ಇನ್ವೆಸ್ಟಿಗೇಷನ್) ಘಟಕದ ಮುಖ್ಯಸ್ಥರನ್ನಾಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು, ಆ ಮೂಲಕ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಐಪಿಎಸ್ ಅಧಿಕಾರಿಯೊಬ್ಬರು ಕೇಂದ್ರ ಸರ್ಕಾರದ ಪ್ರಮುಖ ಸಂಸ್ಥೆಯೊಂದಕ್ಕೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.


ಇದನ್ನೂ ಓದಿ: Karnataka Police: ಸರ್ಕಾರ ಬದಲಾದ ಬೆನ್ನಲ್ಲೇ ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ? ಏನಿದು ಕೇಂದ್ರದ ಪ್ಲಾನ್‌!


ಪೊಲೀಸ್ ಇಲಾಖೆಯ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಕುಳಿತಿರುವ ಅಧಿಕಾರಿಗಳನ್ನು ಬದಲಾವಣೆ ಮಾಡಲು ಕೇಂದ್ರಾಡಳಿತ ಮುಂದಾಗಿದೆ ಎಂದು ನಿನ್ನೆಯಿಂದಲೂ ಸುದ್ದಿ ಹರಿದಾಡ್ತಿತ್ತು. ಡಿಜಿ ಪ್ರವೀಣ್ ಸೂದ್ ಅವರ ಹುದ್ದೆಗೆ ಬೇರೆಯವರನ್ನು ನೇಂಕ ಗೊಳಿಸಿ ಪ್ರವೀಣ್ ಸೂದ್ ಅವರನ್ನು ಸಿಬಿಐ ನಿರ್ದೇಶಕನ ಸ್ಥಾನಕ್ಕೆ ನೇಮಕ ಮಾಡುತ್ತಾರೆ ಎಂದು ಬೆಳಗಿನಿಂದಲೂ ಚರ್ಚೆಯಾಗುತ್ತಿತ್ತು.


ಆಯ್ಕೆ ಹೇಗಿರುತ್ತೆ?


ಸಾಮಾನ್ಯವಾಗಿ ಸಿಬಿಐ ನಿರ್ದೇಶಕ ಸ್ಥಾನಕ್ಕೆ ಹಿರಿಯ ಐಪಿಎಸ್ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ. ಪ್ರಧಾನಮಂತ್ರಿ ಒಳಗೊಂಡ ಮೂವರು ಸದಸ್ಯರ ಪ್ಯಾನೆಲ್‌ನಲ್ಲಿ ಸಿಬಿಐ ನಿರ್ದೇಶಕ ಸ್ಥಾನಕ್ಕೆ ಅಧಿಕಾರಿಗಳ ಹೆಸರು ಫೈನಲ್ ಆಗುತ್ತದೆ. ಶನಿವಾರ ನಡೆದಿದ್ದ ಸಭೆಯಲ್ಲಿ ಪ್ರವೀಣ್ ಸೂದ್ ಅವರ ಹೆಸರೇ ಮುಂದಿನ ಸಿಬಿಐ ನಿರ್ದೇಶಕ ಸ್ಥಾನಕ್ಕೆ ಅಂತಿಮಗೊಂಡಿತ್ತು. 1986ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಪ್ರವೀಣ್ ಸೂದ್ ಅವರು ಮೂರು ವರ್ಷಗಳ ಹಿಂದೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕಗೊಂಡಿದ್ದರು. ಮುಂದಿನ ವರ್ಷ (2024ರ) ಪ್ರವೀಣ್ ಸೂದ್ ಅವರು ಸೇವೆಯಿಂದ ನಿವೃತ್ತಿ ಆಗಲಿದ್ದು, ಹೀಗಾಗಿ ಸಿಬಿಐ ನಿರ್ದೇಶಕರಾದ್ರೆ ಪುನಃ ಎರಡು ವರ್ಷಗಳ ಕಾಲ ಕೆಲಸ ನಿರ್ವಹಣೆ ಮಾಡುವ ಅವಕಾಶ ಸಿಕ್ಕಂತಾಗುತ್ತದೆ.


ಇದನ್ನೂ ಓದಿ: Delhi Metro: ದೆಹಲಿ ಮೆಟ್ರೋದಲ್ಲಿ ಲಿಪ್‌ಲಾಕ್‌ ವಿಡಿಯೋ ಹರಿದಾಡಿದ ಬೆನ್ನಲ್ಲೇ ಮತ್ತೊಂದು ದೃಶ್ಯ ವೈರಲ್



ಪ್ರವೀಣ್ ಸೂದ್‌ ಜಾಗಕ್ಕೆ ಇನ್ಯಾರು?

top videos


    ಹಿರಿಯ ಐಪಿಎಸ್‌ ಅಧಿಕಾರಿ, ಡಿಜಿ & ಐಜಿಪಿ, ಪ್ರವೀಣ್ ಸೂದ್ ಅವರು ಸಿಬಿಐ ನಿರ್ದೇಶಕರಾದ ಹಿನ್ನೆಲೆ ಮುಂದಿನ ರಾಜ್ಯದ ಡಿಜಿ & ಐಜಿಪಿ ಯಾರಾಗ್ತಾರೆ ಎನ್ನುವ ಪ್ರಶ್ನೆಯೂ ಮೂಡಿದ್ದು, ಹೀಗಾಗಿ ಹಿರಿತನದ ಆಧಾರದ ಮೇಲೆ 1987ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಆಗಿರುವ ಅಲೋಕ್ ಮೋಹನ್‌ಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಉಳಿದಂತೆ ಡಾ.ಪಿ ರವೀಂದ್ರನಾಥ್, ಕಮಲ್ ಪಂಥ್, ಪ್ರತಾಪ್ ರೆಡ್ಡಿ ಮತ್ತು ಪ್ರಶಾಂತ್ ಕುಮಾರ್ ಠಾಕೂರ್ ಕೂಡ ಡಿಜಿ & ಐಜಿಪಿ ರೇಸ್‌ನಲ್ಲಿದ್ದಾರೆ.

    First published: