ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕೇಂದ್ರ ಹಣಕಾಸು ಸಚಿವರ ಭೇಟಿ

ಭಾಷಾ ಪ್ರೌಢಿಮೆಯನ್ನು ಕೌಶಲ್ಯ ವ್ಯಾಪ್ತಿಯಲ್ಲಿ ಪರಿಗಣಿಸಿ, ನೇಮಕಾತಿ ಪೂರ್ವದಲ್ಲೇ ಸ್ಥಳೀಯ ಭಾಷಾ ಕೌಶಲ್ಯ ಪರೀಕ್ಷೆ ತೇರ್ಗಡೆ ಹೊಂದುವುದನ್ನು ಕಡ್ಡಾಯ ಮಾಡಬೇಕು ಎಂದು ನಿಯೋಗ ಮನವಿ ಮಾಡಿದೆ

ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿಯೋಗ

ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿಯೋಗ

  • Share this:
ನವದೆಹಲಿ, ಡಿ. 22: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರ (Kannada Development Board President TS Nagabharana) ನೇತೃತ್ವದ ನಿಯೋಗವು (Delegation)  ನವದೆಹಲ್ಲಿ ಬುಧವಾರ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ (Union Finance Minister Nirmala Seetaraman) ಅವರನ್ನು ಭೇಟಿ ಮಾಡಿ ಕೇಂದ್ರ ಹಣಕಾಸು ಇಲಾಖೆಯಿಂದ (Finance Department) ಆಗಬೇಕಿರುವ ಕೆಲಸಗಳ ಬಗ್ಗೆ ಮನವಿ ಸಲ್ಲಿಸಿತು. ನಿಯೋಗವು ಎರಡು ದಿನಗಳಿಂದ ದೆಹಲಿಯಲ್ಲಿ ಇದ್ದು ಕೇಂದ್ರ ಸರ್ಕಾರದ ವಿವಿಧ ಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತಿದೆ. ಬುಧವಾರ ಹಣಕಾಸು ಸಚಿವಾಲಯಕ್ಕೆ ಸಲ್ಲಿಸಿದ ಅಂಶಗಳು ಈ ಕೆಳಕಂಡಂತಿವೆ.

ಐಬಿಪಿಎಸ್ ಕೇಂದ್ರೀಕೃತ ವ್ಯವಸ್ಥೆ ಅಪಾಯ
ನಾಡಿನ ಅಭಿವೃದ್ಧಿಯಲ್ಲಿ ಅಲ್ಲಿನ ಬ್ಯಾಂಕಿಂಗ್ ವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ. ಎಲ್ಲ ನಾಗರೀಕರಿಗೂ ಬ್ಯಾಂಕಿಂಗ್ ಸೇವೆಗಳು ದೊರೆಯುವಂತಾಗಬೇಕು ಅನ್ನುವ ಉದ್ದೇಶದಿಂದ ‘ಜನಧನ’ ಅಂತಹ ಯೋಜನೆಗಳನ್ನು ಕೇಂದ್ರ ಸರ್ಕಾರ ರೂಪಿಸಿದೆ. ಇದಲ್ಲದೇ ಸರ್ಕಾರವು ರೂಪಿಸಿರುವ ಕಲ್ಯಾಣ ಯೋಜನೆಗಳ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ. ಆದರೆ, ಬ್ಯಾಂಕಿಂಗ್ ಸೇವೆಗಳು ಮಾತ್ರ ಜನ ಭಾಷೆಗಳಲ್ಲಿ ನಡೆಯುತ್ತಿಲ್ಲ. ಬಹುತೇಕ ಎಲ್ಲ ಬ್ಯಾಂಕಿಂಗ್ ಸೇವೆಗಳು ಹಿಂದಿ ಮತ್ತು ಇಂಗ್ಲೀಷ್‌ಗೆ ಸೀಮಿತವಾಗಿವೆ. ಆಯಾ ರಾಜ್ಯದಲ್ಲಿ ಅಲ್ಲಿನ ಭಾಷೆಗಳಲ್ಲಿ ಎಲ್ಲ ಹಂತದ ಬ್ಯಾಂಕಿಂಗ್ ಸೇವೆಗಳು ದೊರೆತಾಗ ಮಾತ್ರ ಸರ್ಕಾರದ ಸದಾಶಯ ಸಫಲವಾಗುತ್ತದೆ ಪ್ರಜಾಪ್ರಭುತ್ವದ ಆಶಯ ಸಾಕಾರಗೊಳ್ಳುತ್ತದೆ.

ಜನ ಭಾಷೆಯಲ್ಲಿ ಬ್ಯಾಂಕ್ ವ್ಯವಹಾರ ನಡೆಯಬೇಕಾದರೆ, ಸಿಬ್ಬಂದಿಗಳು ಜನ ಭಾಷೆ ಬಲ್ಲವರಾಗಿರಬೇಕು. ಸದ್ಯದ ನೇಮಕಾತಿ ವ್ಯವಸ್ಥೆಯಲ್ಲಿ(ಐಬಿಪಿಎಸ್) ಜನ ಭಾಷೆಗಳಿಗೆ ಮಾನ್ಯತೆಯಿಲ್ಲ. ತಾವು ಕಳೆದ ವರ್ಷ ಎಸ್ ಬಿಐ ನೇಮಕಾತಿಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ಮಾನ್ಯತೆ ನೀಡಿರುವುದಕ್ಕೆ ಪ್ರಾಧಿಕಾರ ಅಖಂಡ ಕನ್ನಡ ಮನಸ್ಸುಗಳ ಪರವಾಗಿ ಅಭಿನಂದಿಸುತ್ತದೆ. ‘ವಿವಿಧತೆಯಲ್ಲಿ ಏಕತೆ’ಅನ್ನುವ ನೀತಿಗೆ ಐಬಿಪಿಎಸ್ ಕೇಂದ್ರೀಕೃತ ವ್ಯವಸ್ಥೆ ಅಪಾಯ ತರುತ್ತದೆ.

ರಾಜ್ಯ ಭಾಷೆಗಳಲ್ಲಿ ಪರೀಕ್ಷೆ ಬರೆಯುವ ಅವಕಾಶ ಸೃಷ್ಟಿಸಿ
ಸರ್ಕಾರದ ವಿವಿಧ ಇಲಾಖೆಗಳ ಹಾಗೂ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಸಿಬ್ಬಂದಿ ನಾನ್ ಗೆಜಿಟೆಡ್ ಹುದ್ದೆಗಳ ನೇಮಕಾತಿಗಾಗಿ ನಡೆಯವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಮಾನ್ಯ ಅರ್ಹತಾ ಪರೀಕ್ಷೆ (ಸಿಇಟಿ) ನಡೆಸಲು ರಾಷ್ಟ್ರೀಯ ನೇಮಕಾತಿ ಸಂಸ್ಥೆಯನ್ನು ಸ್ಥಾಪಿಸಲಾಗುವುದು ಎಂದು 2020-21ರ ಆಯ-ವ್ಯಯದಲ್ಲಿ ಪ್ರಕಟಸಲಾಗಿದೆ. ಈ ರಾಷ್ಟ್ರೀಯ ನೇಮಕಾತಿ ಸಂಸ್ಥೆಯು ನಡೆಸುವ ಎಲ್ಲ ಪರೀಕ್ಷೆಗಳೂ ಹಿಂದಿ, ಇಂಗ್ಲಿಷ್ ಜೊತೆಗೆ ಸಂವಿಧಾನದ ಅನುಸೂಚಿ 8ರಲ್ಲಿರುವ ಎಲ್ಲ 22 ಭಾಷೆಗಳಲ್ಲೂ ನಡೆಸಬೇಕು ಹಾಗೂ ಆಯಾಯ ರಾಜ್ಯ ಭಾಷೆಯನ್ನು 1 ರಿಂದ 10ನೇ ತರಗತಿಯವರೆಗೆ ಒಂದು ಭಾಷೆಯಾಗಿ ವ್ಯಾಸಂಗ ಮಾಡಿರುವವರು ಮಾತ್ರ ಆಯಾಯ ರಾಜ್ಯದಲ್ಲಿ ಅರ್ಜಿ ಸಲ್ಲಿಸಲು ಅರ್ಹರು ಎಂಬ ನಿಯಮವನ್ನು ರೂಪಿಸಬೇಕು.

ಐಬಿಪಿಎಸ್ ಪ್ರಸ್ತುತ ನೇಮಕಾತಿ ಪರೀಕ್ಷೆಗಳನ್ನು ಹಿಂದಿ, ಇಂಗ್ಲಿಷ್‌ಗಳಲ್ಲಿ ಮಾತ್ರ ನಡೆಸುತ್ತಿದೆ. ಅಭ್ಯರ್ಥಿಯ ಆಯ್ಕೆ ಮಾಡಿಕೊಳ್ಳುವ ಪ್ರಾದೇಶಿಕ ಭಾಷಾ ಜ್ಞಾನವು ಅಪೇಕ್ಷಣೀಯ ಅಂದಿರುವುದರಿಂದ ಹಿಂದಿ ಮತ್ತು ಇಂಗ್ಲಿಷ್ ಜ್ಞಾನ ಇಲ್ಲದವರಿಗೆ ನೇಮಕಾತಿಯಲ್ಲಿ ಅವಕಾಶ ಸಿಗುತ್ತಿಲ್ಲ. ಅದನ್ನು ಸರಿಪಡಿಸಲು 2012ರವರೆಗೆ ಇದ್ದ ‘ಅಭ್ಯರ್ಥಿಯು ಆಯ್ಕೆ ಮಾಡಿಕೊಳ್ಳುವ ರಾಜ್ಯದ ಅಧಿಕೃತ ಭಾಷೆಯಲ್ಲಿ ಪರಿಣಿತರಾಗಿರಬೇಕು, ಅಂದರೆ ಮೆಟ್ರಿಕ್ಯುಲೇಷನ್ / ಎಸ್ಸೆಸ್ಸೆಲ್ಸಿ/ಹತ್ತನೇ ತರಗತಿಗಳ ಹಂತದಲ್ಲಿ ಒಂದು ಭಾಷೆಯಾಗಿ ಕಡ್ಡಾಯವಾಗಿ ಓದಿರಲೇಬೇಕು’ಎಂಬ ನಿಯಮವನ್ನು ಜಾರಿಗೆ ತರಬೇಕು.

ಇದನ್ನು ಓದಿ: ಕ್ರಿಸ್ಮಸ್-ಹೊಸ ವರ್ಷ​ ಆಚರಣೆಗೆ ಇಲ್ಲ ಅವಕಾಶ; ಕರ್ನಾಟಕ ಬಳಿಕ ದೆಹಲಿಯಲ್ಲಿ ಟಫ್ ರೂಲ್ಸ್​

ಪತ್ರ ಬರೆದಿರುವ ಮುಖ್ಯಮಂತ್ರಿ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮನವಿಗೆ ಸ್ಪಂದಿಸಿ ಕೇಂದ್ರ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಬ್ಯಾಂಕುಗಳ ಐಬಿಪಿಎಸ್ ಪರೀಕ್ಷೆಯನ್ನು ಕನ್ನಡ ಸೇರಿದಂತೆ 13 ಭಾರತೀಯ ಭಾಷೆಗಳಲ್ಲಿ ಬರೆಯಲು ಅವಕಾಶ ನೀಡುವ ಬಗ್ಗೆ ಭರವಸೆ ನೀಡಲಾಗಿತ್ತು. ರೈಲ್ವೆ ನೇಮಕಾತಿಯಲ್ಲಿರುವಂತೆ ಅನುಚ್ಛೇಧ-8 ರಲ್ಲಿರುವ 22 ಭಾಷೆಗಳಲ್ಲೂ ಪರೀಕ್ಷೆ ಬರೆಯಲು ಅವಕಾಶವಿರಬೇಕು. ಆಯ್ಕೆಯಾದ ಅಭ್ಯರ್ಥಿಗಳು ತಾವು ಆಯ್ದುಕೊಂಡ ರಾಜ್ಯದ ಅಧಿಕೃತ ಭಾಷೆಯನ್ನು 10ನೇ ತರಗತಿ ಯವರೆಗೆ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಅಭ್ಯಸಿಸಿರಬೇಕು. ಈ ಕುರಿತು ಮುಖ್ಯಮಂತ್ರಿಗಳು ತಮಗೆ  ಪತ್ರ ಬರೆದಿರುತ್ತಾರೆ.

ಭಾಷಾ ಕೌಶಲ್ಯ ಪರೀಕ್ಷೆ ತೇರ್ಗಡೆ ಕಡ್ಡಾಯ ಮಾಡಿ
ಭಾಷಾ ಪ್ರೌಢಿಮೆಯನ್ನು ಕೌಶಲ್ಯ ವ್ಯಾಪ್ತಿಯಲ್ಲಿ ಪರಿಗಣಿಸಿ, ನೇಮಕಾತಿ ಪೂರ್ವದಲ್ಲೇ ಸ್ಥಳೀಯ ಭಾಷಾ ಕೌಶಲ್ಯ ಪರೀಕ್ಷೆ ತೇರ್ಗಡೆ ಹೊಂದುವುದನ್ನು ಕಡ್ಡಾಯ ಮಾಡಬೇಕು. 2015 ರಿಂದ ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು  ಸಿಬ್ಬಂದಿ ಕಡ್ಡಾಯವಾಗಿ ಸ್ಥಳೀಯ ಅಧಿಕೃತ ರಾಜ್ಯ ಭಾಷೆಯನ್ನು (ಕನ್ನಡ) 6 ತಿಂಗಳಲ್ಲಿ ಕಲಿಯಬೇಕೆಂಬ ನಿಯಮವಿದೆ. ಆ ನಿಯಮದನ್ವಯ ಕನ್ನಡ ಕಲಿಯದ ಸಿಬ್ಬಂದಿಯನ್ನು ಸೇವೆಯಿಂದ ಬಿಡುಗಡೆಗೊಳಿಸಬೇಕು.

ಇದನ್ನು ಓದಿ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗದಿಂದ ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಭೇಟಿ

ಜನರಿಗೆ ಬ್ಯಾಂಕಿಂಗ್ ಸೇವೆಗಳನ್ನು ಪರಿಣಾಮಕಾರಿಯಾಗಿ ತಲುಪಿಸಲು ಭಾರತ ಸರ್ಕಾರ ಪ್ರಯತ್ನಿಸುತ್ತಿದೆ. ಇದು ಶ್ಲಾಘನೀಯ. ಕೇಂದ್ರದ ಈ ಜನಪರ ಆಶಯ ಸಫಲವಾಗಬೇಕಾದರೆ ಬ್ಯಾಂಕ್ ವ್ಯವಹಾರ ಜನಭಾಷೆಯಲ್ಲಿರಬೇಕು ಅಂದರೆ, ಆಯಾ ರಾಜ್ಯದಲ್ಲಿ ಅಲ್ಲಿನ ಭಾಷೆಗಳಲ್ಲಿ ಎಲ್ಲ ಹಂತದ ಬ್ಯಾಂಕಿಂಗ್ ಸೇವೆಗಳು ದೊರೆಯುವಂತಾಗಬೇಕು. ಸದ್ಯ ಬ್ಯಾಂಕಿಂಗ್ ಸೇವೆಗಳು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಿಗೆ ಮಾತ್ರ ಸೀಮಿತವಾಗಿವೆ. ಬ್ಯಾಂಕ್ ಸೇವೆಗಳು ತ್ರಿಭಾಷಾ ಸೂತ್ರದಲ್ಲಿ ಕಡ್ಡಾಯವಾಗಿ ನಡೆಯುವಂತಾಗಬೇಕು. ಅಂದರೆ,ಸರ್ಕಾರವು ಸಂವಿಧಾನದ 8ರ ಅನುಚ್ಛೇದದಲ್ಲಿರುವ ಎಲ್ಲ 22 ಭಾಷೆಗಳಲ್ಲೂ ಬ್ಯಾಂಕ್ ವ್ಯವಹಾರಗಳು ನಡೆಯುವಂತೆ ಆದೇಶ ನೀಡಬೇಕು ಎಂಬ ಅಂಶಗಳ  ಕುರಿತು ಮನವಿ ಪತ್ರ ಸಲ್ಲಿಸಿದರು.
Published by:Seema R
First published: