HOME » NEWS » National-international » KARNATAKA ASSEMBLY BY ELECTIONS 2019 KARNATAKA BY ELECTION WILL TAKE PLACE ON OCTOBER 21 SAYS ELECTION COMMISSION RMD

Elections 2019: ಮಹಾರಾಷ್ಟ್ರ, ಹರಿಯಾಣದಲ್ಲಿ ಅ. 21ರಂದು ವಿಧಾನಸಭಾ ಚುನಾವಣೆ; ಕರ್ನಾಟಕದ 15 ಕ್ಷೇತ್ರಗಳಿಗೂ ಅಂದೇ ಉಪಚುನಾವಣೆ

ಚುನಾವಣೆ ದಿನಾಂಕ ಘೋಷಣೆ ಆದ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಸರ್ಕಾರ ಯಾವುದೇ ಹೊಸ ಯೋಜನೆ ಜಾರಿಗೆ ತರಲು ಸಾಧ್ಯವಿಲ್ಲ.

Rajesh Duggumane | news18-kannada
Updated:September 21, 2019, 3:33 PM IST
Elections 2019: ಮಹಾರಾಷ್ಟ್ರ, ಹರಿಯಾಣದಲ್ಲಿ ಅ. 21ರಂದು ವಿಧಾನಸಭಾ ಚುನಾವಣೆ; ಕರ್ನಾಟಕದ 15 ಕ್ಷೇತ್ರಗಳಿಗೂ ಅಂದೇ ಉಪಚುನಾವಣೆ
ಪ್ರಾತಿನಿಧಿಕ ಚಿತ್ರ
  • Share this:
ನವದೆಹಲಿ: ಮಹಾರಾಷ್ಟ್ರ ಹಾಗೂ ಹರಿಯಾಣ ರಾಜ್ಯಗಳಿಗೆ ನಡೆಯಬೇಕಿರುವ ವಿಧಾನಸಭೆ ಚುನಾವಣೆಗಳ ದಿನಾಂಕವನ್ನು ಆಯೋಗ ಪ್ರಕಟ ಮಾಡಿದೆ.  ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಅಕ್ಟೋಬರ್​ 21ರಂದು ಮತದಾನ ನಡೆಯಲಿದ್ದು, ಅಕ್ಟೋಬರ್​ 24ಕ್ಕೆ ಫಲಿತಾಂಶ ಹೊರ ಬೀಳಲಿದೆ. ಇದೇ ವೇಳೆ ರಾಜ್ಯದ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.

ಮಹಾರಾಷ್ಟ್ರದ 288 ವಿಧಾನಸಭೆ ಕ್ಷೇತ್ರಗಳಿಗೆ ಹಾಗೂ ಹರಿಯಾಣದ 90 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಎರಡೂ ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.  ರಾಜ್ಯದ 15 ಕ್ಷೇತ್ರ ಸೇರಿ ದೇಶಾದ್ಯಂತ 17 ರಾಜ್ಯಗಳಿಂದ ಒಟ್ಟು 64 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ರಾಜ್ಯದ ಮಸ್ಕಿ ಹಾಗೂ ರಾಜ ರಾಜೇಶ್ವರಿ ನಗರ ಕ್ಷೇತ್ರದ ಉಪಚುನಾವಣೆ ದಿನಾಂಕ ಘೋಷಣೆ ಆಗಿಲ್ಲ.

ಮಹಾರಾಷ್ಟ್ರ, ಹರಿಯಾಣ ಚುನಾವಣೆ ವೇಳಾಪಟ್ಟಿ
ಗೆಜೆಟ್ ನೋಟಿಫಿಕೇಶನ್: ಸೆ. 27
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ: ಅ. 4
ನಾಮಪತ್ರ ಪರಿಶೀಲನೆ: ಅ. 5
ನಾಮಪತ್ರ ವಾಪಸ್​ಗೆ ಕೊನೆಯ ದಿನ: ಅ. 7ಮತದಾನದ ದಿನ: ಅ. 21
ಫಲಿತಾಂಶ ಪ್ರಕಟ: ಅ. 24

64 ಕ್ಷೇತ್ರಗಳ ಉಪಚುನಾವಣೆ ವೇಳಾಪಟ್ಟಿ: 
ಗೆಜೆಟ್ ನೋಟಿಫಿಕೇಶನ್: ಸೆ. 23
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ: ಸೆ. 30
ನಾಮಪತ್ರ ಪರಿಶೀಲನೆ: ಅ. 1
ನಾಮಪತ್ರ ವಾಪಸ್​ಗೆ ಕೊನೆಯ ದಿನ: ಅ. 3
ಮತದಾನದ ದಿನ: ಅ. 21
ಫಲಿತಾಂಶ ಪ್ರಕಟ: ಅ. 24
ಚುನಾವಣೆ ಮುಕ್ತಾಯಕ್ಕಿರುವ ಗಡುವು: ಅ. 27

ರಾಜ್ಯದಲ್ಲಿ ಮೈತ್ರಿ ಸರ್ಕಾರದ 17 ಶಾಸಕರು ರಾಜೀನಾಮೆ ನೀಡಿದ್ದರು. ಈ ಶಾಸಕರನ್ನು ಅಂದಿನ ಸ್ಪೀಕರ್​ ರಮೇಶ್​ ಕುಮಾರ್​ ಅನರ್ಹಗೊಳಿಸಿದ್ದರು. ಈ ಪ್ರಕರಣ ಸುಪ್ರೀಂಕೋರ್ಟ್​ನಲ್ಲಿರುವಾಗಲೇ ಚುನಾವಣೆ ಘೋಷಣೆ ಆಗಿದೆ. ಇದು ಅನರ್ಹರಿಗೆ ಸಂಕಷ್ಟ ಉಂಟು ಮಾಡಿದೆ.

ಚುನಾವಣೆಯನ್ನು ಶಾಂತ ರೀತಿಯಲ್ಲಿ ನಡೆಸಲು ಹೆಚ್ಚಿನ ಭದ್ರತೆ ನಿಯೋಜಿಸುವುದಾಗಿ ಮುಖ್ಯ ಚುನಾವಣಾ ಆಯುಕ್ತ ಸುನಿಲ್​ ಅರೋರಾ ಹೇಳಿದ್ದಾರೆ. ಚುನಾವಣೆ ದಿನಾಂಕ ಘೋಷಣೆ ಆದ ಹಿನ್ನೆಲೆಯಲ್ಲಿ ಇವತ್ತಿನಿಂದಲೇ ನೀತಿ ಸಂಹಿತೆ ಜಾರಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಯಾವುದೇ ಹೊಸ ಯೋಜನೆ ಜಾರಿಗೆ ತರಲು ಸಾಧ್ಯವಿಲ್ಲ. ಮಹಾರಾಷ್ಟ್ರದ ಹಾಲಿ ವಿಧಾನಸಭಾ ಅವಧಿ ನವೆಂಬರ್​ 9 ಹಾಗೂ ಹರಿಯಾಣ ಹಾಲಿ ವಿಧಾನಸಭಾ ಅವಧಿ ನ. 2ರಂದು ಪೂರ್ಣಗೊಳ್ಳಲಿದೆ.

Election Commission announces dates of state elections
ಚುನಾವಣಾ ಆಯೋಗ


ಮುಖ್ಯ ಚುನಾವಣಾ ಆಯುಕ್ತ ಸುನಿಲ್​ ಅರೋರಾ, ಚುನಾವಣಾ ಆಯುಕ್ತ ಅಶೋಕ್​ ಹಾಗೂ ಸುಶಿಲ್​ ಚಂದ್ರಾ ತಿಂಗಳ ಆರಂಭದಲ್ಲಿ ಮಹಾರಾಷ್ಟ್ರ ಹಾಗೂ ಹರಿಯಾಣಕ್ಕೆ ಭೇಟಿ ನೀಡಿ ಚುನಾವಣೆ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿದ್ದರು.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಇವಿಎಂ ಬಳಕೆ ಮಾಡಲು ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಇದು ಸಾಧ್ಯವಿಲ್ಲ. ಬ್ಯಾಲೆಟ್​ ಪೇಪರ್​ಗಳು ಈಗ ಇತಿಹಾಸ ಎಂದು ಸುನಿಲ್​ ಅರೋರ ಹೇಳಿದ್ದರು. ಈ ಮೂಲಕ ಈ ಬಾರಿಯ ಚುನಾವಣೆಯಲ್ಲಿ ಮತದಾನಕ್ಕೆ ಇವಿಎಂ ಬಳಕೆ ಮಾಡಲಾಗುತ್ತದೆ ಎನ್ನುವುದನ್ನು ಸ್ಪಷ್ಟಪಡಿಸಿದ್ದರು.

ಕಳೆದ ಬಾರಿ ಮಹಾರಾಷ್ಟ್ರ-ಹರಿಯಾಣ ಚುನಾವಣೆ ಸೆ.12ರಂದು ನಡೆದಿತ್ತು. ಮತ ಎಣಿಕೆ ಅಕ್ಟೋಬರ್​ 15ರಂದು ನಡೆದಿತ್ತು ಹಾಗೂ ಫಲಿತಾಂಶ ಅ.19ರಂದು ಘೋಷಣೆ ಆಗಿತ್ತು. ಶಿವಸೇನೆ ಜೊತೆ ಸೇರಿ ಬಿಜೆಪಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಿದರೆ, ಹರಿಯಾಣದಲ್ಲಿ ಬಿಜೆಪಿ ಆಡಳಿತದಲ್ಲಿದೆ.

 

First published: September 21, 2019, 12:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading