ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧೆಗಿಳಿದ ನಿವೃತ್ತ ನ್ಯಾಯಮೂರ್ತಿ ಕರ್ಣನ್​!

ಕರ್ಣನ್​ ಈಗಾಗಲೇ ಕೇಂದ್ರ ಚೆನ್ನೈನಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ. ಎರಡನೇ ಕ್ಷೇತ್ರವಾಗಿ ವಾರಾಣಸಿಯನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ.

Rajesh Duggumane | news18
Updated:April 9, 2019, 2:26 PM IST
ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧೆಗಿಳಿದ ನಿವೃತ್ತ  ನ್ಯಾಯಮೂರ್ತಿ ಕರ್ಣನ್​!
ಕರ್ಣನ್​
Rajesh Duggumane | news18
Updated: April 9, 2019, 2:26 PM IST
ನವದೆಹಲಿ (ಏ.9): ಜೈಲುವಾಸ ಅನುಭವಿಸಿದ ಮೊದಲ ಹೈಕೋರ್ಟ್​​ ನ್ಯಾಯಾಧೀಶ ಎನ್ನುವ ಕುಖ್ಯಾತಿಗೆ ಪಾತ್ರರಾಗಿರುವ ಸಿಎಸ್​ ಕರ್ಣನ್​ ಅವರು ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾರಾಣಾಸಿಯಲ್ಲಿ ಕಣಕ್ಕೆ ಇಳಿಯುವುದಾಗಿ ಹೇಳಿದ್ದಾರೆ.

ಭೀಮ್​ ಆರ್ಮಿ ಮುಖ್ಯಸ್ಥ ಚಂದ್ರಶೇಖರ್​ ಆಜಾದ್​​ ಮತ್ತು ನಿವೃತ್ತ ಬಿಎಸ್​​ಪಿ ಕಾನ್​ಸ್ಟೇಬಲ್​ ತೇಜ್​ ಯಾದವ್​ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಅಚ್ಚರಿ ಎಂದರೆ, ಕರ್ಣನ್​ ಈಗಾಗಲೇ ಕೇಂದ್ರ ಚೆನ್ನೈನಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ. ಎರಡನೇ ಕ್ಷೇತ್ರವಾಗಿ ವಾರಾಣಸಿಯನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ. 2018ರ ಮೇ ತಿಂಗಳಲ್ಲಿ ‘ಆ್ಯಂಟಿ ಕರಪ್ಶನ್​ ಡೈನಾಮಿಕ್​ ಪಾರ್ಟಿ’ ಹೆಸರಿನ ಪಕ್ಷವನ್ನು ಕರ್ಣನ್​ ಸ್ಥಾಪಿಸಿದ್ದರು.

ಸುಪ್ರೀಂಕೋರ್ಟ್​ ನ್ಯಾಯಮೂರ್ತಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವ ಮೂಲಕ ಜೈಲುಶಿಕ್ಷೆ ಅನುಭವಿಸಿದ್ದರು. ನಾನು ದಲಿತ ಎನ್ನುವ ಕಾರಣಕ್ಕೆ ಈ ರೀತಿ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದರು. ಈ ಪ್ರಕರಣ ಭಾರೀ ಚರ್ಚೆಗೂ ಕಾರಣವಾಗಿತ್ತು.  "ಒಟ್ಟು 545 ಲೋಕಸಭಾ ಕ್ಷೇತ್ರಗಳಲ್ಲೂ  ನಮ್ಮ ಪಕ್ಷದವರು ಸ್ಪರ್ಧಿಸುತ್ತಾರೆ. ಪ್ರತಿ ಕ್ಷೇತ್ರದಿಂದ ಮಹಿಳೆಯರೇ ಕಣಕ್ಕೆ ಇಳಿಯಲಿದ್ದಾರೆ," ಎಂದು ಕರ್ಣನ್​ ಈ ಮೊದಲು ಹೇಳಿದ್ದರು.

ಇದನ್ನೂ ಓದಿ: ಅಮ್ಮ, ಮಗ ತಪ್ಪು ಮಾಡಿದ್ದರಿಂದಲೇ ಜಾಮೀನು ಕೇಳುತ್ತಿದ್ದಾರೆ: ಸೋನಿಯಾ, ರಾಹುಲ್ ವಿರುದ್ಧ ಮೋದಿ ವಾಗ್ದಾಳಿ

First published:April 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626