Kargil Vijay Diwas 2021: ಇಂಡೋ-ಪಾಕ್ ಯುದ್ಧದ ಬಗ್ಗೆ 7 ಕುತೂಹಲಕಾರಿ ಸಂಗತಿಗಳು ಇಲ್ಲಿವೆ..!

ಐತಿಹಾಸಿಕ ಕಾರ್ಗಿಲ್ ಯುದ್ಧವು 1999 ರ ಮೇ ಮತ್ತು ಜುಲೈ ನಡುವೆ ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿ ನಡೆಯಿತು.

ವಿಜಯ್ ಕಾರ್ಗಿಲ್ ದಿವಸ

ವಿಜಯ್ ಕಾರ್ಗಿಲ್ ದಿವಸ

  • Share this:

ಕಾರ್ಗಿಲ್‌ ಯುದ್ಧ ಬಹುತೇಕ ಎಲ್ಲರಲ್ಲೂ ಈಗಲೂ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಜಮ್ಮು ಕಾಶ್ಮೀರದ ಕಾರ್ಗಿಲ್‌ನಲ್ಲಿ ನಡೆದ ಈ ಯುದ್ಧದಲ್ಲಿ ಪಾಕಿಸ್ತಾನವನ್ನು ಭಾರತದ ವೀರ ಯೋಧರು ಸದೆಬಡಿದು, ಅವರು ಆಕ್ರಮಿಸಿಕೊಂಡಿದ್ದ ಜಾಗವನ್ನು ವಶಕ್ಕೆ ಪಡೆದರು. ಈ ಯುದ್ಧದಲ್ಲಿ ಹಲವಾರು ಯೋಧರು ದೇಶಕ್ಕಾಗಿ ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ. ಐತಿಹಾಸಿಕ ಕಾರ್ಗಿಲ್ ಯುದ್ಧವು 1999 ರ ಮೇ ಮತ್ತು ಜುಲೈ ನಡುವೆ ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿ ನಡೆಯಿತು. ಪಾಕಿಸ್ತಾನದ ಪಡೆಗಳು ಆಕ್ರಮಿಸಿಕೊಂಡ ತಾಣಗಳ ಮೇಲೆ ಭಾರತ ಜಯ ಸಾಧಿಸಿದಾಗ ನಮ್ಮ ಸೇನೆಯ ಹೋರಾಟ, ಉತ್ಸಾಹ ಮತ್ತು ಸ್ಥಿತಿಸ್ಥಾಪಕತ್ವವು ಫಲ ನೀಡಿತು. ಪ್ರತಿ ವರ್ಷ, ಯುದ್ಧದಲ್ಲಿ ಹುತಾತ್ಮರಾದ ಸೈನಿಕರನ್ನು ಸ್ಮರಿಸಲು ದೇಶವು ಜುಲೈ 26 ರಂದು ಕಾರ್ಗಿಲ್ ದಿವಸ್ ಅನ್ನು ಆಚರಿಸುತ್ತದೆ.


ಈ ದಿನ, ದೇಶವು ಹುತಾತ್ಮರಿಗೆ ಗೌರವ ಸಲ್ಲಿಸುತ್ತದೆ ಮತ್ತು ಯುದ್ಧದ ಸಮಯದಲ್ಲಿ ಭಾರತೀಯ ಸೈನಿಕರು ಮಾಡಿದ ತ್ಯಾಗಗಳನ್ನು ನೆನಪಿಸಿಕೊಳ್ಳುತ್ತಾರೆ. ಮೇ 3, 1999 ರಂದು ಪಾಕಿಸ್ತಾನವು ಕಾರ್ಗಿಲ್‌ನ ಪರ್ವತ ಪ್ರದೇಶದಲ್ಲಿ ಸುಮಾರು 5,000 ಸೈನಿಕರೊಂದಿಗೆ ಎತ್ತರದ ಪ್ರದೇಶಗಳಿಗೆ ನುಗ್ಗಿ ಕಲ್ಲುಗಳಿಂದ ತುಂಬಿದ್ದ ಬೆಟ್ಟಗಳ ಪ್ರದೇಶವನ್ನು ವಶಪಡಿಸಿಕೊಂಡಾಗ ಯುದ್ಧ ಪ್ರಾರಂಭವಾಯಿತು. ನೆರೆಯ ದೇಶ ಪಾಕಿಸ್ತಾನದ ಪ್ರತಿಕ್ರಿಯೆಯಾಗಿ ಭಾರತೀಯ ಸೇನೆಯು 'ಆಪರೇಷನ್ ವಿಜಯ್' ಅನ್ನು ಪ್ರಾರಂಭಿಸಿತು.


ಹಲವಾರು ವಾರಗಳವರೆಗೆ, ಉಭಯ ದೇಶಗಳು ತಮ್ಮ ಸಮಗ್ರತೆಯನ್ನು ಎತ್ತಿ ಹಿಡಿಯಲು ಹೋರಾಡಿದವು ಮತ್ತು ಜುಲೈ 26 ರಂದು, ಭಾರತೀಯ ಸೈನಿಕರು ವಶಪಡಿಸಿಕೊಂಡ ಪ್ರದೇಶಗಳಿಂದ ಪಾಕಿಸ್ತಾನದ ಸೈನ್ಯವನ್ನು ಹಿಮ್ಮೆಟ್ಟಿಸಿದ ನಂತರ ಯುದ್ಧವು ಅಂತ್ಯವಾಯಿತು. ಹಲವು ಪಾಕ್‌ ಯೋಧರು ಸಹ ಈ ಯುದ್ಧದಲ್ಲಿ ಬಲಿಯಾಗಿದ್ದಾರೆ.


ಇದನ್ನೂ ಓದಿ:Petrol Price Today: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರ ಹೀಗಿದೆ..!

ದೇಶವು ತನ್ನ ಕೆಚ್ಚೆದೆಯ ಸೈನಿಕರು ಮತ್ತು ಹುತಾತ್ಮರನ್ನು ನೆನಪಿಸಿಕೊಳ್ಳುತ್ತಿದ್ದಂತೆ, ಇಂಡೋ-ಪಾಕ್ ಯುದ್ಧದ ಬಗ್ಗೆ 7 ಕುತೂಹಲಕಾರಿ ಸಂಗತಿಗಳು ಇಲ್ಲಿವೆ -


1) ಕಾರ್ಗಿಲ್ 1947 ರಲ್ಲಿ ಭಾರತದ ವಿಭಜನೆಗೆ ಮೊದಲು ಲಡಾಖ್‌ನ ಬಾಲ್ಟಿಸ್ತಾನ್ ಜಿಲ್ಲೆಯ ಭಾಗವಾಗಿತ್ತು. ಇದನ್ನು ಮೊದಲ ಕಾಶ್ಮೀರ ಯುದ್ಧದ ನಂತರ ಎಲ್‌ಒಸಿ ಮೂಲಕ ಪ್ರತ್ಯೇಕಿಸಲಾಯಿತು.

2) ಕಾರ್ಗಿಲ್ ಯುದ್ಧದ ಮೊದಲು, ಭಾರತ ಮತ್ತು ಪಾಕಿಸ್ತಾನ 1971 ರಲ್ಲಿ ಮತ್ತೊಂದು ಯುದ್ಧವನ್ನು ನಡೆಸಿವೆ. ಆ ವೇಳೆಯೂ ಭಾರತ ಸೇನೆ ಪಾಕಿಸ್ತಾನ ಸೇನೆ ವಿರುದ್ಧ ಜಯಗಳಿಸಿದೆ. ಅದು ಬಾಂಗ್ಲಾದೇಶದ ರಚನೆಗೆ ಕಾರಣವಾಯಿತು.


3) ಮೇ 3, 1999 ರಂದು ಕಾರ್ಗಿಲ್ ತಪ್ಪಲಿನಲ್ಲಿ ಕೆಲವು ಸ್ಥಳೀಯ ಕುರಿ ಕಾಯುವವರು ಪ್ರಮುಖ ಚಟುವಟಿಕೆಗಳನ್ನು ಗಮನಿಸಿ ಅನುಮಾನ ಬಂದ ನಂತರ ಭಾರತ ಸೇನೆಗೆ ಮಾಹಿತಿ ತಿಳಿಯಿತು. ನಂತರ ಕಾರ್ಗಿಲ್ ಯುದ್ಧ ಪ್ರಾರಂಭವಾಯಿತು. ಪಾಕಿಸ್ತಾನದ ಪಡೆಗಳು ಮತ್ತು ಭಯೋತ್ಪಾದಕರು ಈ ಚಟುವಟಿಕೆಯನ್ನು ನಡೆಸಿದ್ದಾರೆ ಎಂದು ನಂತರ ಕಂಡುಕೊಳ್ಳಲಾಯಿತು.

4) ಕಾರ್ಗಿಲ್‌ ಪರ್ವತದ ಪ್ರದೇಶದಲ್ಲಿ ಯುದ್ಧ ನಡೆಯುವಾಗ ಮೈನಸ್ 10 ಡಿಗ್ರಿ ಸೆಲ್ಸಿಯಸ್ ತಾಪಮಾನದವರೆಗೂ ದಾಖಲಾಗಿತ್ತು. ಅಂತಹ ಕೊರೆಯುವ ಚಳಿಯಲ್ಲೂ ನಮ್ಮ ವೀರ ಯೋಧರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ನಡೆಸಿದ್ದಾರೆ.


ಇದನ್ನೂ ಓದಿ:Karnataka Rains Today: ರಾಜ್ಯದಲ್ಲಿ ಮಳೆಯ ಆರ್ಭಟಕ್ಕೆ ಸಿಕ್ಕಿ ನಲುಗಿದ 283 ಗ್ರಾಮಗಳು; ನಿರಾಶ್ರಿತರಾದ ಸಾವಿರಾರು ಮಂದಿ

5) ಮೇ 26 ರಂದು, ಭಾರತೀಯ ವಾಯುಪಡೆ (ಐಎಎಫ್) 'ಆಪರೇಷನ್ ಸಫೇದ್‌ ಸಾಗರ್' ಅನ್ನು ಪ್ರಾರಂಭಿಸಿತು ಮತ್ತು ಪಾಕಿಸ್ತಾನದ ಸೈನಿಕರ ಮೇಲೆ ದಾಳಿ ಮಾಡಲು ಇಂಡಿಯನ್ ಮಿಗ್ -21, ಮಿಗ್ -27 ಮತ್ತು ಮಿರಾಜ್ 2000 ನಂತಹ ಯುದ್ಧ ವಿಮಾನಗಳನ್ನು ಬಳಸಿತು. ಪಾಕ್‌ ಯೋಧರು ಹಾಗೂ ಉಗ್ರರು ಅಂದರೆ ಶತ್ರುಗಳನ್ನು ನಿರ್ಮೂಲನೆ ಮಾಡಲು ಐಎಎಫ್‌ ಯೋಧರು ಈ ವಿಮಾನಗಳಿಂದ ರಾಕೆಟ್ ಮತ್ತು ಕ್ಷಿಪಣಿಗಳನ್ನು ಹಾರಿಸಿದರು.


6) ತೈಲ ಮತ್ತು ಇಂಧನ ಪೂರೈಕೆಯನ್ನು ನಿಲ್ಲಿಸಲು ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಬಂದರುಗಳನ್ನು ನಿರ್ಬಂಧಿಸಲು ಭಾರತೀಯ ನೌಕಾಪಡೆ 'ಆಪರೇಷನ್ ತಲ್ವಾರ್' ಅನ್ನು ಪ್ರಾರಂಭಿಸಿತು.




7) ಬಂದೂಕುಗಳ ಜೊತೆಗೆ, ರಾಕೆಟ್‌ಗಳು ಮತ್ತು ಬಾಂಬ್‌ಗಳನ್ನು ಯುದ್ಧದಲ್ಲಿ ಬಳಸಲಾಗುತ್ತಿತ್ತು. ಸಂಘರ್ಷದ ಸಮಯದಲ್ಲಿ 2.50 ಲಕ್ಷಕ್ಕೂ ಹೆಚ್ಚು ಶೆಲ್‌ಗಳು, ಬಾಂಬುಗಳು ಮತ್ತು ರಾಕೆಟ್‌ಗಳನ್ನು ಹಾರಿಸಲಾಯಿತು.

Published by:Latha CG
First published: