Karachi Terror Attack: ಕರಾಚಿ ಸ್ಟಾಕ್​​ ಎಕ್ಸ್​ಚೇಂಜ್​ ಕೇಂದ್ರದ ಮೇಲೆ ಉಗ್ರರ ದಾಳಿ​: ಒಂಬತ್ತು ಸಾವು

ಇನ್ನು, ಉಗ್ರರ ದಾಳಿಯಲ್ಲಿ ಹತರಾಗುವ ಮುನ್ನ ಪೊಲೀಸರು ಪ್ರತಿದಾಳಿ ನಡೆಸಿದ್ದಾರೆ. ಉಗ್ರರು ಕರಾಚಿಯ ಸ್ಟಾಕ್​​ ಎಕ್ಸ್​​ಚೇಂಜ್​ ಆವರಣದಲ್ಲಿರುವ ಜನರ ಮೇಲೆ ದಾಳಿ ನಡೆಸಲು ಮುಂದಾದಾಗ ಪೊಲೀಸರು ಫೈರ್​​ ಮಾಡಿದ್ದಾರೆ. ಪೊಲೀಸರು ಪ್ರತಿದಾಳಿಯಲ್ಲಿ ನಾಲ್ವರು ಉಗ್ರರನ್ನು ಹೊಡೆದುರುಳಿಸಿದ್ಧಾರೆ.

news18-kannada
Updated:June 29, 2020, 1:51 PM IST
Karachi Terror Attack: ಕರಾಚಿ ಸ್ಟಾಕ್​​ ಎಕ್ಸ್​ಚೇಂಜ್​ ಕೇಂದ್ರದ ಮೇಲೆ ಉಗ್ರರ ದಾಳಿ​: ಒಂಬತ್ತು ಸಾವು
ಕರಾಚಿ ಟೆರರ್​​ ಅಟ್ಯಾಕ್​​
  • Share this:
ನವದೆಹಲಿ(ಜೂ.29): ಪಾಕಿಸ್ತಾನದ ಕರಾಚಿಯ ಸ್ಟಾಕ್​​ ಎಕ್ಸ್​​ಚೇಂಜ್​​ ಮೇಲೆ ಉಗ್ರರ ದಾಳಿ ನಡೆದಿದೆ. ಉಗ್ರರು ದಾಳಿ ನಡೆಸಿದ ವಿಚಾರ ಗೊತ್ತಾಗುತ್ತಿದ್ದಂತೆಯೇ ಸ್ಥಳೀಯ ಪೊಲೀಸರು ಸ್ಟಾಕ್​​ ಎಕ್ಸ್​​ಚೇಂಜ್ ಆವರಣವನ್ನು ರೌಂಡಪ್​​ ಮಾಡಿದ್ದಾರೆ. ಈ ಉಗ್ರರು ನಡೆಸಿದ ದಾಳಿಯಲ್ಲಿ ಪೊಲೀಸ್​​ ಸಬ್​​ ಇನ್ಸ್​ಪೆಕ್ಟರ್​​ ಸೇರಿದಂತೆ ನಾಲ್ವರು ಭದ್ರತಾ ಸಿಬ್ಬಂದಿ ಅಸುನೀಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇನ್ನು, ಉಗ್ರರ ದಾಳಿಯಲ್ಲಿ ಹತರಾಗುವ ಮುನ್ನ ಪೊಲೀಸರು ಪ್ರತಿದಾಳಿ ನಡೆಸಿದ್ದಾರೆ. ಉಗ್ರರು ಕರಾಚಿಯ ಸ್ಟಾಕ್​​ ಎಕ್ಸ್​​ಚೇಂಜ್​ ಆವರಣದಲ್ಲಿರುವ ಜನರ ಮೇಲೆ ದಾಳಿ ನಡೆಸಲು ಮುಂದಾದಾಗ ಪೊಲೀಸರು ಫೈರ್​​ ಮಾಡಿದ್ದಾರೆ. ಪೊಲೀಸರು ಪ್ರತಿದಾಳಿಯಲ್ಲಿ ನಾಲ್ವರು ಉಗ್ರರನ್ನು ಹೊಡೆದುರುಳಿಸಿದ್ಧಾರೆ.

ಕರಾಚಿಯ ಸ್ಟಾಕ್​​ ಎಕ್ಸ್​​ಚೇಂಜ್​ ಆವರಣದಲ್ಲಿ ನಡೆದ ದಾಳಿ ಮತ್ತು ಪ್ರತಿದಾಳಿಯಲ್ಲಿ ನಾಲ್ವರು ಉಗ್ರರು ಮತ್ತು ಓರ್ವ ಪೊಲೀಸ್​​ ಸಬ್​​ ಇನ್ಸ್​ಪೆಕ್ಟರ್​​ ಸೇರಿದಂತೆ ನಾಲ್ಕು ಮಂದಿ ಭದ್ರತಾ ಸಿಬ್ಬಂದಿ ಅಂದರೆ 9 ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಸ್ಥಳದಲ್ಲೇ ಗಾಯಗೊಂಡಿದ್ದ 7 ಮಂದಿಯನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನೆ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕೊರೋನಾ ತೀವ್ರಗೊಂಡ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ, ಪೊಲೀಸರು: ಇಂದಿನಿಂದ ಬಿಗಿಕ್ರಮ

ನಾಲ್ವರು ಉಗ್ರರು ಸ್ಟಾಕ್​​ ಎಕ್ಸ್​​ಚೇಂಜ್​ ಕೇಂದ್ರಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದರು. ಈ ಮುನ್ನ ಪ್ರವೇಶ ದ್ವಾರದ ಮೇಲೆ ಗ್ರೆನೇಡ್‌ ದಾಳಿ ನಡೆಸಿದರು. ನಂತರ ಸ್ಟಾಕ್​​ ಎಕ್ಸ್​​ಚೇಂಜ್​ ಕೇಂದ್ರಕ್ಕೆ ಪ್ರವೇಶಿಸಲು ಮುಂದಾದಾಗ ನಾಲ್ವರು ಭಯೋತ್ಪಾದಕರನ್ನು ಸುತ್ತುವರೆದ ಪೊಲೀಸರು ಕೊಂದಿದ್ದಾರೆ ಎಂದು ಕರಾಚಿಯ ಇನ್ಸ್​ಪೆಕ್ಟರ್​​ ಜನರಲ್ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.
First published: June 29, 2020, 1:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading