Tamil nadu Rain: ಪ್ರವಾಹದ ನೀರಿನಲ್ಲೇ ಯುವಕರು, ಮಕ್ಕಳ ಮೋಜು: ಹೇಳೋರು, ಕೇಳೋರು ಯಾರಿಲ್ಲ!

Tamilnadu Rain: ಮಳೆಯಿಂದ ಅಸ್ತವ್ಯಸ್ತಗೊಂಡಿದ್ದರೂ ಈ ಅಪಾಯದ ಬಗ್ಗೆ ಕೊಂಚವೂ ಗಾಬರಿಯಿಲ್ಲದೆ ಅಲ್ಲಿನ ಯುವಕರು(Youths) , ಮಕ್ಕಳು(Children's) ನೀರಿನಲ್ಲಿ ಈಜಾಡುತ್ತಿರುವ(Swimming, ವಾಲಿಬಾಲ್(Volleyball) ಆಡುತ್ತಿರುವ ವಿಡಿಯೋಗಳು ಸಾಮಾಜಿಕ ತಾಣ(Social Media)ಗಳಲ್ಲಿ ವೈರಲ್ ಆಗುತ್ತಿವೆ.

ಮಳೆ ನೀರಿನಲ್ಲೇ ಆಟ

ಮಳೆ ನೀರಿನಲ್ಲೇ ಆಟ

  • Share this:

ಕಳೆದ ಹತ್ತು ದಿನಗಳಿಂದ ತಮಿಳುನಾಡಿ(Tamil Nadu)ನಲ್ಲಿ ಮಳೆ(Rain)ಯಿಂದಾಗಿ ನೆರೆಯ ವಾತಾವರಣವೇ ಸೃಷ್ಟಿಯಾಗಿದ್ದು ದುರಂತಗಳ ಸುರಿಮಳೆಯೇ ಸಂಭವಿಸುತ್ತಿದೆ. ಆದರೆ ರಾಜ್ಯದ ರಾಜಧಾನಿ ಕನ್ಯಾಕುಮಾರಿ(Kanyakumari) ಕೂಡ ನೆರೆ ಹಾಗೂ ಎಡೆಬಿಡದೆ ಮಳೆ ಸುರಿಯುತ್ತಿದೆ. ಮಳೆಯಿಂದ ಅಸ್ತವ್ಯಸ್ತಗೊಂಡಿದ್ದರೂ ಈ ಅಪಾಯದ ಬಗ್ಗೆ ಕೊಂಚವೂ ಗಾಬರಿಯಿಲ್ಲದೆ ಅಲ್ಲಿನ ಯುವಕರು(Youths) , ಮಕ್ಕಳು(Children's) ನೀರಿನಲ್ಲಿ ಈಜಾಡುತ್ತಿರುವ(Swimming, ವಾಲಿಬಾಲ್(Volleyball) ಆಡುತ್ತಿರುವ ವಿಡಿಯೋಗಳು ಸಾಮಾಜಿಕ ತಾಣ(Social Media)ಗಳಲ್ಲಿ ವೈರಲ್ ಆಗುತ್ತಿವೆ. ಮಳೆ ನೀರಿನಲ್ಲಿ ಮೋಜು-ಮಸ್ತಿ ಮಾಡುತ್ತಿದ್ದಾರೆ. ಕೊಳಚೆ ನೀರಿನಲ್ಲಿ ವಾಟರ್​ ಪಾರ್ಕ್(Water Park)​ನಲ್ಲಿ ಆಟವಾಡುವಂತೆ ಇಲ್ಲಿ ಆಡುತ್ತಿದ್ದಾರೆ. ಈ ವಿಡಿಯೋಗಳು ಇದೀಗ ಎಲ್ಲೆಡೆ ಸಖತ್​ ವೈರಲ್ ಆಗಿದೆ. 


ಪ್ರವಾಹದ ನೀರಿನಲ್ಲೇ ಯುವಕರು, ಮಕ್ಕಳ ಆಟ


ವಿಡಿಯೋದಲ್ಲಿ ಕಂಡುಬಂದ ದೃಶ್ಯಾವಳಿಗಳ ಪ್ರಕಾರ ನೆರೆಯಿಂದಾಗಿ ತುಂಬಿರುವ ಪ್ರದೇಶದಲ್ಲಿ ವಾಟರ್ ಥೀಮ್‌ನಂತಹ ವಾತಾವರಣ ಏರ್ಪಟ್ಟಿರುವಂತೆ ಹಾಗೂ ಯುವಕರು ಮಕ್ಕಳು ನೆರೆ ನೀರಿನಲ್ಲಿ ಆಟವಾಡುತ್ತಾ, ಈಜುತ್ತಾ ಒಂದು ರೀತಿಯ ಮೋಜಿನಲ್ಲಿ ಮೈ ಮರೆತಿರುವಂತೆ ಕಂಡುಬರುತ್ತಿತ್ತು. ಇನ್ನು ಕೆಲವೊಂದಷ್ಟು ಜನ ನೀರಿನಲ್ಲಿ ಮೀನು ಹಿಡಿಯುತ್ತಾ ಪರಸ್ಪರ ನೀರೆರಚಿಕೊಂಡು ಆಟವಾಡುತ್ತಾ ಇರುವ ದೃಶ್ಯ ಕೂಡ ವಿಡಿಯೋದಲ್ಲಿ ಕಂಡುಬಂದಿದೆ. ಕಳೆದ ನಾಲ್ಕು ದಿನಗಳಿಂದ ಧಾರಾಕಾರ ಮಳೆ ಕನ್ಯಾಕುಮಾರಿಯಲ್ಲಿ ಸುರಿಯುತ್ತಿದ್ದು ಪೆಚ್ಚುಪಾರೈ ಡ್ಯಾಮ್ ಹಾಗೂ ಪೆರುಂಚಾನಿ ಡ್ಯಾಮ್‌ನಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದ್ದು, ಕನ್ಯಾಕುಮಾರಿಗೆ ಹತ್ತಿರುವಿರುವ ಈ ಜಲಾಶಯಗಳಿಂದ 12,000 ಕ್ಯೂಸೆಕ್ ಹೆಚ್ಚುವರಿ ನೀರನ್ನು ಹೊರಬಿಡಲಾಗಿದೆ.


ಸಾಮಾಜಿಕ ತಾಣದಲ್ಲಿ ವೈರಲ್ ಆದ ವಿಡಿಯೋ


ಭಾನುವಾರದಿಂದಲೇ ಈ ವಿಡಿಯೋಗಳು ಸಾಮಾಜಿಕ ತಾಣದಲ್ಲಿ ವೈರಲ್ ಅಗುತ್ತಿದ್ದು, ಅಪಾಯದ ಅರಿವೇ ಇಲ್ಲದೆ ಯುವಕರು ಮಕ್ಕಳು ಮೋಜು ಮಾಡುತ್ತಿರುವುದಕ್ಕೆ ಆಕ್ಷೇಪವನ್ನು ವ್ಯಕ್ತಪಡಿಸಿರುವ ನೆಟ್ಟಿಗರು ಕೊಂಚವಾದರೂ ಗಂಭೀರತೆಯಿಂದ ವರ್ತಿಸಿ ಎಂದು ಕಾಮೆಂಟ್ ಮಾಡಿದ್ದಾರೆ. ನೆರೆನೀರಿನಲ್ಲಿ ಯುವಕರು ಮಕ್ಕಳು ಮೈಮರೆತು ಆಟವಾಡುತ್ತಿದ್ದು ಅಪಾಯದೊಂದಿಗೆ ಸರಸವಾಡುತ್ತಿದ್ದಾರೆ ಎಂದು ಸಾಮಾಜಿಕ ಬಳಕೆದಾರರು ಎಚ್ಚರಿಕೆ ರವಾನಿಸುತ್ತಿದ್ದಾರೆ. ಇನ್ನು ಅಲ್ಲಿನ ಜನರು ಕೂಡ ಯುವಕರ ಮಕ್ಕಳ ಈ ಆಟಗಳಿಗೆ ಯಾವುದೇ ಆಕ್ಷೇಪವನ್ನು ವ್ಯಕ್ತಪಡಿಸದೇ ಬೆಂಬಲ ನೀಡುವಂತೆ ಮಾತನಾಡಿದ್ದಾರೆ. ಚಿಕ್ಕ ವಯಸ್ಸಿನಿಂದಲೇ ಉತ್ತಮ ಈಜುಗಾರರಾಗಿರುವುದರಿಂದ ಹಾಗೂ ಅದೇ ಪ್ರದೇಶದಲ್ಲಿ ಹುಟ್ಟಿ ಬೆಳೆದಿರುವುದರಿಂದ ಮಕ್ಕಳು ಹಾಗೂ ಯುವಕರು ಹತ್ತಿರದ ಜಲಮೂಲಗಳ ಬಗ್ಗೆ ಚೆನ್ನಾಗಿ ಅರಿತುಕೊಂಡಿದ್ದಾರೆ.  ಮಿತಿಗಳ ಬಗ್ಗೆ ಅವರಿಗೆ ಅರಿವಿದೆ ಎಂದು ಕನ್ಯಾಕುಮಾರಿಯ ನಿವಾಸಿಯೊಬ್ಬರು ತಿಳಿಸಿದ್ದಾರೆ.


ಇದನ್ನು ಓದಿ : ತಮಿಳುನಾಡಿನಲ್ಲಿ ಇಂದು ಮತ್ತು ನಾಳೆ ಕೂಡ ರೆಡ್​ ಆಲರ್ಟ್​; ಚೆನ್ನೈ ಜನರಿಗೆ ಎಚ್ಚರಿಕೆ ಸೂಚನೆ

ರೈಲು ಸಂಚಾರ ರದ್ದು


ಈ ನಡುವೆ ಭಾರೀ ಪ್ರವಾಹ ಉಂಟಾಗಿರುವ ಹಿನ್ನಲೆಯಲ್ಲಿ ಕನ್ಯಾಕುಮಾರಿಗೆ ಪ್ರಯಾಣಿಸುತ್ತಿದ್ದ ಹಲವಾರು ರೈಲುಗಳನ್ನು ರದ್ದುಗೊಳಿಸಲಾಗಿದೆ. ನೂರಾರು ಹೆಕ್ಟೇರ್ ಕೃಷಿ ಭೂಮಿ ಮುಳುಗಿದೆ. 4000 ಕ್ಕೂ ಹೆಚ್ಚು ಜನರು ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ತಾತ್ಕಾಲಿಕವಾಗಿ ಪರಿಹಾರ ಶಿಬಿರಗಳಿಗೆ ಸ್ಥಳಾಂತರಗೊಂಡಿದ್ದಾರೆ. ಕನ್ಯಾಕುಮಾರಿಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯನ್ನು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವಲೋಕಿಸಿದ್ದು ಜನರಿಗೆ ಪರಿಹಾರ ಒದಗಿಸುವ ಭರವಸೆಯನ್ನು ನೀಡಿದ್ದಾರೆ. ನವೆಂಬರ್ 6 ರಂದು ಪ್ರಾರಂಭವಾದ ಧಾರಾಕಾರ ಮಳೆಯು ಚೆನ್ನೈನ ವಿಶಾಲ ಪ್ರದೇಶಗಳನ್ನು ಮುಳುಗಿಸಿದೆ. 2015 ರ ವಿನಾಶಕಾರಿ ಪ್ರವಾಹದ ನೆನಪುಗಳನ್ನು ಮರುಸೃಷ್ಟಿಸಿದೆ ಎಂದರೆ ತಪ್ಪಾಗಲಾರದು.


ಇದನ್ನು ಓದಿ : ದೆಹಲಿಯಲ್ಲಿ ದಟ್ಟ ಹೊಗೆ, ಉಸಿರಾಡೋಕೂ ಕಷ್ಟ: 2 ದಿನ ಲಾಕ್​ಡೌನ್​ ಕನ್ಫರ್ಮ್​!

ಈಗ ತಮಿಳುನಾಡಿನಲ್ಲಿ ಕೊಂಚ ಮಳೆಯ ಅಬ್ಬರ ಕಡಿಮೆಯಾಗಿದೆ. ಮತ್ತೆ ಇಂದು, ನಾಳೆ ಮಳೆಯ ಆರ್ಭಟ ಜೋರಾಗಲಿದೆ ಎಂದು ಹವಮಾನ ಇಲಾಖೆ ಎಚ್ಚರಿಸಿದೆ. ಇದರ ನಡುವೆ ಮಳೆ ಬಂದು ಹೋದಮೇಲೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ತಮಿಳುನಾಡಿನ ಹಲವು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿತ್ತು. ಇದರಿಂದ ಆಚೆ ಬರೋಣ ಅನ್ನುವಷ್ಟರಲ್ಲಿ ಮತ್ತೆ ಮಳೆರಾಯ ಇಂದು ಅಬ್ಬರಿಸಲಿದ್ದಾನೆ.


Published by:Vasudeva M
First published: