Kalma in School: ಶಾಲೆಯಲ್ಲಿ ಹಿಂದೂ ಮಕ್ಕಳಿಗೆ ‘ಕಲ್ಮ’ ಕಲಿಕೆ; ವಿವಾದಕ್ಕೀಡಾದ ಇಂಟರ್​​ನ್ಯಾಷನಲ್​ ಸ್ಕೂಲ್

ಪ್ರತಿದಿನ ಪ್ರಾರ್ಥನೆಯ ನಂತರ ಶಾಲೆಯಲ್ಲಿ ಕಲ್ಮ ಕಲಿಸುತ್ತಾರೆ ಎಂದು ಹೇಳಿದರು. ನನ್ನ ಮಗ ಇದನ್ನು ಏಕೆ ಓದಬೇಕು ಎಂಬುದು ನನ್ನ ಕಾಳಜಿ. ಕೆಲವು ದಿನಗಳ ನಂತರ ಅವನು ತನ್ನ ಸ್ವಂತ ಧರ್ಮವನ್ನು ಒಪ್ಪದಿದ್ದರೆ ಏನು ಮಾಡುವುದು ಎಂದು ಪೋಷಕರು ಪ್ರಶ್ನಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಲಖನೌ: ಉತ್ತರ ಪ್ರದೇಶದ ಕಾನ್ಪುರದ ಫ್ಲೋರೆಟ್ಸ್ ಇಂಟರ್‌ನ್ಯಾಷನಲ್ ಶಾಲೆಯು (Florets International school) ಸದ್ಯ ವಿವಾದದ ಸುಳಿಗೆ ಸಿಲುಕಿದೆ. ಶಾಲೆಯಲ್ಲಿ ಮಕ್ಕಳಿಗೆ 'ಕಲ್ಮ' (Kalma) ಕಲಿಸುತ್ತಿದ್ದಾರೆ ಎಂದು ಹಲವಾರು ಪೋಷಕರು ದೂರಿದ್ದಾರೆ. ಸುದ್ದಿ ತಿಳಿದ ಕೂಡಲೇ ಉತ್ತರ ಪ್ರದೇಶ ಪೊಲೀಸರು ಮತ್ತು ಹಿರಿಯ ಅಧಿಕಾರಿಗಳು ಸೋಮವಾರ ಬೆಳಗ್ಗೆ ಶಾಲೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಹಿಂದೂ ವಿದ್ಯಾರ್ಥಿಗಳಿಗೆ ಕಲ್ಮ ಕಲಿಸಲಾಗ್ತಿದೆ ಎಂಬ ಆರೋಪದ ಮೇಲೆ ಖಾಸಗಿ ಶಾಲೆಯ ವಿರುದ್ಧ ದೂರು ದಾಖಲಾಗಿತ್ತು. ಈ ಆಪಾದನೆಗೆ ಶಾಲಾ ಆಡಳಿತ ಮಂಡಳಿಯು ಪ್ರತಿಕ್ರಿಯಿಸಿದ್ದು, ಸರ್ವ ಧರ್ಮ ಸಮ್ಮಾನ್ ಸಿದ್ಧಾಂತವನ್ನು ಹೆಚ್ಚಿಸಲು ಬೆಳಿಗ್ಗೆ ಅಸೆಂಬ್ಲಿ ಸಮಯದಲ್ಲಿ ಎಲ್ಲಾ ನಾಲ್ಕು ಧರ್ಮಗಳ ಪ್ರಾರ್ಥನೆಗಳನ್ನು ಶಾಲೆಯಲ್ಲಿ ಓದಲಾಗಿದೆ ಎಂದು ಹೇಳಿದೆ.

ಕಲ್ಮ ಕಲಿಕೆಯನ್ನು ವಾಪಸ್​ ಪಡೆದಿದ್ದೇವೆ

ಫ್ಲೋರೆಟ್ಸ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಪ್ರಾಂಶುಪಾಲೆ ಅಂಕಿತಾ ಯಾದವ್ ಮಾತನಾಡಿದ್ದು, ನಾವು ನಾಲ್ಕು ಧರ್ಮದ ಪ್ರಾರ್ಥನೆಗಳನ್ನು ಹೊಂದಿದ್ದೇವೆ. ನಾವು ವಿದ್ಯಾರ್ಥಿಗಳಿಗೆ ಎಲ್ಲಾ ಧರ್ಮಗಳು ಸಮಾನವೆಂದು ಕಲಿಸಲು ಬಯಸುತ್ತೇವೆ. ಈಗ ಅದೇ ವಿಷಯಗಳಿಂದ ವಿವಾದಗಳಿಗೆ ಸಿಲುಕಿದ್ದೇವೆ. ಶನಿವಾರದಿಂದಲೇ ನಾವು ಇದರ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಇಂದಿನಿಂದ ನಾವು ಈ ಪ್ರಾರ್ಥನೆಗಳನ್ನು ಪಠಿಸುವುದನ್ನು ನಿಲ್ಲಿಸಿದ್ದೇವೆ. ಬೆಳಗಿನ ಪ್ರಾರ್ಥನೆ ಸಭೆಗಾಗಿ ರಾಷ್ಟ್ರಗೀತೆಯನ್ನು ಮಾತ್ರ ಪ್ರಾರಂಭಿಸಿದ್ದೇವೆ ಎಂದರು. ಶಾಲಾ ವಿದ್ಯಾರ್ಥಿಗಳು ಕಳೆದ 12-13 ವರ್ಷಗಳಿಂದ ಹಿಂದೂ, ಮುಸ್ಲಿಂ, ಸಿಖ್ ಮತ್ತು ಕ್ರಿಶ್ಚಿಯನ್ ಧರ್ಮಗಳ ಪ್ರಾರ್ಥನೆಗಳನ್ನು ಪಠಿಸುತ್ತಾರೆ. ಯಾರೂ ವಿರೋಧಿಸಲಿಲ್ಲ. ನಾಲ್ಕು ದಿನಗಳ ಹಿಂದೆ ಪೋಷಕರ ಕಡೆಯಿಂದ ಈ ಬಗ್ಗೆ ಆಕ್ಷೇಪಣೆ ವ್ಯಕ್ತವಾಗಿತ್ತು ಎಂದು ಅವರು ಹೇಳಿದರು.

ಇದನ್ನೂ ಓದಿ: Robot Teacher: ಈ ಶಾಲೆಯಲ್ಲಿ ಶಿಕ್ಷಕರ ಬದಲಿಗೆ ರೋಬೋಟ್‌ಗಳೇ ಪಾಠ ಮಾಡ್ತವಂತೆ! ಎಲ್ಲಿ ಗೊತ್ತಾ?

ನನ್ನ ಮಗ ಸ್ವಂತ ಧರ್ಮವನ್ನೇ ಕಡೆಗಣಿಸಿದರೆ ಹೇಗೆ?

ಮಕ್ಕಳು ಕಲ್ಮ ಪಠಿಸುವ ಬಗ್ಗೆ ಪೋಷಕರೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ. ನನ್ನ ಮಗ ಈ ಶಾಲೆಯಲ್ಲಿ ಓದುತ್ತಿದ್ದಾನೆ, ಕಳೆದ ಕೆಲವು ದಿನಗಳಿಂದ ನನ್ನ ಮಗ ಮನೆಯಲ್ಲಿ ಕಲ್ಮ ಪಠಿಸುತ್ತಿದ್ದನು. ನನ್ನ ಹೆಂಡತಿ ಈ ಬಗ್ಗೆ ಕಳವಳ ವ್ಯಕ್ತಪಡಿಸಿದಳು. ನಾವು ನಮ್ಮ ಮಗನನ್ನು ಮಾತನಾಡಿಸಿದಾಗ, ಅವರು ಪ್ರತಿದಿನ ಪ್ರಾರ್ಥನೆಯ ನಂತರ ಶಾಲೆಯಲ್ಲಿ ಅದನ್ನು ಕಲಿಸುತ್ತಾರೆ ಎಂದು ಹೇಳಿದರು. ಅವರಿಗೆ, ನನ್ನ ಮಗ ಇದನ್ನು ಏಕೆ ಓದಬೇಕು ಎಂಬುದು ನನ್ನ ಕಾಳಜಿ. ಕೆಲವು ದಿನಗಳ ನಂತರ ಅವನು ತನ್ನ ಸ್ವಂತ ಧರ್ಮವನ್ನು ಒಪ್ಪದಿದ್ದರೆ ಏನು ಮಾಡುವುದು ಎಂದು ಪ್ರಶ್ನಿಸಿದ್ದಾರೆ.

ಪೋಷಕರ ಆರೋಪ ಆಧರಿಸಿ ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಎಸಿಪಿ ನಿಶಾಂಕ್ ಶರ್ಮಾ, ಫ್ಲೋರೆಟ್ಸ್ ಇಂಟರ್‌ನ್ಯಾಶನಲ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಲ್ಮಾ ಕಲಿಸುತ್ತಿರುವ ಬಗ್ಗೆ ನಮಗೆ ಟ್ವೀಟ್ ಮೂಲಕ ತಿಳಿದುಬಂದಿದೆ. ಡಿಎಂ ಮತ್ತು ಸ್ಥಳೀಯ ಪೊಲೀಸರಿಗೂ ಸೂಚನೆ ನೀಡಲಾಗಿದೆ. ಇಂದು ನಾವು ಈ ಬಗ್ಗೆ ತನಿಖೆ ನಡೆಸಲು ಶಾಲೆಗೆ ಭೇಟಿ ನೀಡಿದ್ದೇವೆ. ಆಕ್ಷೇಪಣೆಯ ನಂತರ ಶಾಲಾ ಅಧಿಕಾರಿಗಳು ಅಸೆಂಬ್ಲಿ ಸಮಯದಲ್ಲಿ ರಾಷ್ಟ್ರಗೀತೆಯನ್ನು ಮಾತ್ರ ಪಠಿಸಲಾಗುವುದು ಎಂದು ನಿರ್ಧರಿಸಿದರು. ಅವರು ಎಲ್ಲಾ ಇತರ ಪ್ರಾರ್ಥನೆಗಳನ್ನು ನಿಲ್ಲಿಸಿದ್ದಾರೆ ಎಂದು ಎಸಿಪಿ ಹೇಳಿದ್ದಾರೆ.
Published by:Kavya V
First published: