ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕನ್ನಡಿಗರ ಕಲರವ; ಅಭ್ಯರ್ಥಿಯಿಂದ ಹಿಡಿದು ಸ್ಟಾರ್ ಪ್ರಚಾರಕ ಪಟ್ಟಿಯಲ್ಲೂ ಸ್ಥಾನ

ಈ ಬಾರಿಯ ದೆಹಲಿ ವಿಧಾನಸಭಾ ಚುನಾವಣೆ ಕನ್ನಡಿಗರೊಬ್ಬರು ಕಣಕ್ಕಿಳಿದಿದ್ದಾರೆ. ನ್ಯೂ ಡೆಲ್ಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕು ಬರಡೊಲಾ ಗ್ರಾಮದ ವೆಂಕಟೇಶ್ವರ ಮಹಾಸ್ವಾಮೀಜಿ ಕಣಕ್ಕಿಳಿದಿರುವ ಕನ್ನಡಿಗರಾಗಿದ್ದಾರೆ.

news18-kannada
Updated:January 23, 2020, 6:24 PM IST
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕನ್ನಡಿಗರ ಕಲರವ; ಅಭ್ಯರ್ಥಿಯಿಂದ ಹಿಡಿದು ಸ್ಟಾರ್ ಪ್ರಚಾರಕ ಪಟ್ಟಿಯಲ್ಲೂ ಸ್ಥಾನ
ವೆಂಕಟೇಶ್ ಮೌರ್ಯ, ವೆಂಕಟೇಶ್ ಸ್ವಾಮೀಜಿ, ಮತ್ತು ಶ್ರೀನಿವಾಸ್.
  • Share this:
ನವದೆಹಲಿ: ರಾಷ್ಟ್ರ ರಾಜಕಾರಣದಲ್ಲಿ ಕನ್ನಡಿಗರಿಗೆ ಕಿಮ್ಮತ್ತಿಲ್ಲ, ಕರುನಾಡಿನ ಕುಡಿಗಳನ್ನು ಕೇಳುವವರಿಲ್ಲ ಎಂಬ ಕೊರಗಿನ ಮಧ್ಯೆ ಈ ಬಾರಿದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕನ್ನಡಿಗರ ಪಾತ್ರ ಕಂಡುಬರುತ್ತಿದೆ.

ಇತ್ತೀಚೆಗಿನ ವರ್ಷಗಳಲ್ಲಿ ಎಚ್.ಡಿ. ದೇವೇಗೌಡರು ಪ್ರಧಾನಿ ಆಗಿದ್ದಾಗ, ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸಚಿವರು ಮತ್ತು‌ ಪ್ರತಿಪಕ್ಷದ ನಾಯಕರಾಗಿದ್ದಾಗ, ಅನಂತಕುಮಾರ್ ಕೇಂದ್ರ ಸಚಿವರಾಗಿದ್ದಾಗ ರಾಷ್ಟ್ರ ರಾಜಕಾರಣದಲ್ಲಿ ಕನ್ನಡಿಗರನ್ನು ಪ್ರತಿನಿಧಿಸುತ್ತಿದ್ದರು. ಬಳಿಕ ಶೂನ್ಯಭಾವ ಸೃಷ್ಟಿಯಾಗಿತ್ತು. ಈಗ ಕನ್ನಡದ ಯುವಕರು ಮತ್ತೆ ಮುನ್ನಲೆಗೆ ಬರುತ್ತಿದ್ದಾರೆ. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕನ್ನಡಿಗರು ಮಹತ್ವದ ಪಾತ್ರ ವಹಿಸಿರುವುದು ಕಂಡುಬರುತ್ತಿದೆ.

ಫೆಬ್ರವರಿ 8ರಂದು ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಗೆ ಮೂರು ಪಕ್ಷಗಳು ಭರ್ಜರಿ ತಯಾರಿ ಆರಂಭಿಸಿವೆ. ಕಳೆದ ಚುನಾವಣೆಯ ಭರ್ಜರಿ ಯಶಸ್ಸಿನ ನಿರೀಕ್ಷೆಯಲ್ಲಿ ಎಎಪಿ ಪ್ರಚಾರ ಕಾರ್ಯ ಆರಂಭಿಸಿದೆ. ಕೇವಲ ಮೂರು ಸ್ಥಾನ ಪಡೆದಿದ್ದ ಬಿಜೆಪಿ, ಈ ಬಾರಿ ಹೇಗಾದರೂ ಮಾಡಿ, ಎಎಪಿಯಿಂದ ಅಧಿಕಾರ ಪಡೆಯಲು ಹೊಸ ಹೊಸ ರಾಜಕೀಯ ತಂತ್ರಗಾರಿಕೆ ಹೂಡುತ್ತಿದೆ. ಇನ್ನು ಕಳೆದ ಬಾರಿ ಖಾತೆಯನ್ನು ತೆರೆಯಲು ವಿಫಲವಾಗಿದ್ದ ಕಾಂಗ್ರೆಸ್​ ಈ ಬಾರಿ ತನ್ನ ಅಸ್ತಿತ್ವ ಮರುಸೃಷ್ಟಿಸಿಕೊಳ್ಳುವ ಶತಪ್ರಯತ್ನ ನಡೆಸುತ್ತಿದೆ.

ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಕನ್ನಡಿಗ

ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಗಿದ್ದ ಕನ್ನಡಿಗೆ ಬಿ.ವಿ. ಶ್ರೀನಿವಾಸ್ ಅವರು ಈಗ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ. ಇವರ ಕೆಲಸವನ್ನು ಗುರುತಿಸಿರುವ ಕಾಂಗ್ರೆಸ್ ಪಕ್ಷ ಈ ಬಾರಿಯ ದೆಹಲಿ ವಿಧಾನಸಭಾ ಚುನಾವಣೆಗೆ ಬಿಡುಗಡೆ ಮಾಡಿರುವ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಶ್ರೀನಿವಾಸ್ ಹೆಸರನ್ನು ಸೇರಿಸಿದೆ‌. ಮಲ್ಲಿಕಾರ್ಜುನ ಖರ್ಗೆ, ಬಿ.ಕೆ. ಹರಿಪ್ರಸಾದ್ ಅವರಂಥವರಿಗೂ ಸಿಗದ ಮನ್ನಣೆ ಶ್ರೀನಿವಾಸ್ ಅವರಿಗೆ ಸಿಕ್ಕಿದೆ‌. ಶ್ರೀನಿವಾಸ್ ಈಗ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಡಾ. ಮನಮೋಹನ್ ಸಿಂಗ್ ಅವರೊಂದಿಗೆ ಪಟ್ಟಿಯಲ್ಲಿದ್ದಾರೆ.

ಬಿಜೆಪಿ ಸಂಘಟನೆಗೆ ಕನ್ನಡದ ಮೌರ್ಯ

ಬಿಜೆಪಿಯ ಎಸ್​ಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಹಾಗೂ ಅಖಿಲ ಭಾರತೀಯ ಬೋವಿ ಸಂಘದ ಅಧ್ಯಕ್ಷರಾದ ಕನ್ನಡಿಗ ವೆಂಕಟೇಶ್ ಮೌರ್ಯ ಅವರನ್ನು ಅವರ ಪಕ್ಷ ದೆಹಲಿಯ ಆರ್.ಕೆ. ಪುರಂ ಮತ್ತು ಛತರ್ ಪುರ್ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಘಟನಾ ಕೆಲಸಕ್ಕೆ ಹಚ್ಚಿದೆ. ಆರ್.ಕೆ. ಪುರಂ ಕ್ಷೇತ್ರದಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಹಾಗೂ ಛತರ್ ಪುರ್ ಕ್ಷೇತ್ರದಲ್ಲಿ ಪಾಕಿಸ್ತಾನದಿಂದ ಬಂದಿರುವ ಬೋವಿ ಜನಾಂಗದವರು ಇರುವ ಕಾರಣದಿಂದ ವೆಂಕಟೇಶ್ ಮೌರ್ಯ ಅವರಿಗೆ‌ ಜವಾಬ್ದಾರಿ ನೀಡಲಾಗಿದೆ. ವೆಂಕಟೇಶ್ ಮೌರ್ಯ ಅವರು ಇತ್ತೀಚೆಗೆ ಪಾಕಿಸ್ತಾನದಿಂದ ಬಂದಿರುವ ಬೋವಿ ಜನಾಂಗದವರನ್ನು ಸಂಘಟಿಸಿ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರ ಮೆರವಣಿಗೆ ನಡೆಸಿದ್ದರು.ಇದನ್ನು ಓದಿ: ಆರು ಗಂಟೆಗಳ ಕಾಲ ಕಾದು, ಕಡೆಗೂ ಕೊನೆ ದಿನ ನಾಮಪತ್ರ ಸಲ್ಲಿಸಿದ ಮುಖ್ಯಮಂತ್ರಿ ಕೇಜ್ರಿವಾಲ್! ಇನ್ನು ಅಸಲಿ ಆಟ ಶುರು

ಚುನಾವಣಾ ಕಣಕ್ಕೂ ಇಳಿದ ಕನ್ನಡಿಗ

ಈ ಬಾರಿಯ ದೆಹಲಿ ವಿಧಾನಸಭಾ ಚುನಾವಣೆ ಕನ್ನಡಿಗರೊಬ್ಬರು ಕಣಕ್ಕಿಳಿದಿದ್ದಾರೆ. ನ್ಯೂ ಡೆಲ್ಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕು ಬರಡೊಲಾ ಗ್ರಾಮದ ವೆಂಕಟೇಶ್ವರ ಮಹಾಸ್ವಾಮೀಜಿ ಕಣಕ್ಕಿಳಿದಿರುವ ಕನ್ನಡಿಗರಾಗಿದ್ದಾರೆ. ವಿಶೇಷ ಎಂದರೆ ಇವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧವೇ ನಾಮಪತ್ರ ಸಲ್ಲಿಸಿದ್ದಾರೆ. ಇವರ ಪೂರ್ವಾಶ್ರಮದ ಹೆಸರು ದೀಪಕ್. ವೆಂಕಟೇಶ್ವರ ಸ್ವಾಮೀಜಿ ಜನವರಿ 14ರಂದೇ ನಾಮಪತ್ರ ಸಲ್ಲಿಸಿದ್ದು, ಚುನಾವಣಾ ಅಫಿಡವಿಟ್‍ನಲ್ಲಿ ತನ್ನ ಬಳಿ ಇರೋದು ಕೇವಲ 9 ರೂಪಾಯಿ ಅಂತಾ ಘೋಷಿಸಿಕೊಂಡಿದ್ದಾರೆ. ಆದರೆ ಇವರಿಗೆ 99,999 ರೂಪಾಯಿ ಸಾಲ ಇದೆ. ಅದನ್ನೂ ಹೇಳಿಕೊಂಡಿದ್ದಾರೆ. ಈವರೆಗೆ ಇವರು ತಮ್ಮ ಗ್ರಾಮ ಪಂಚಾಯ್ತಿಯಿಂದ ಹಿಡಿದು ಲೋಕಸಭಾ, ರಾಜ್ಯಸಭಾ ಚುನಾವಣೆವರೆಗೆ ಕರ್ನಾಟಕ, ಗುಜರಾತ್, ಉತ್ತರ ಪ್ರದೇಶ, ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ ಒಟ್ಟು 18 ಚುನಾವಣೆಗಳಲ್ಲಿ ಸ್ಪರ್ಧೆ ಮಾಡಿದ್ದಾರೆ.
First published: January 23, 2020, 6:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading