ಭಾರತ, ಪಾಕಿಸ್ತಾನ ಸೇರಿ 13 ರಾಷ್ಟ್ರಗಳ ಪ್ರಯಾಣಿಕರಿಗೆ ಯುಎಇಗೆ ಎಂಟ್ರಿ ನಿಷೇಧ

ಸೌದಿ ರಾಷ್ಟ್ರಗಳಿಗೆ ಭಾರತ, ಪಾಕಿಸ್ತಾನ, ಅಮೆರಿಕ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ವಿಯೆಟ್ನಾಂ, ಕಾಂಗೋ, ಉಗಾಂಡ, ಲಿಬೆರಿಯ, ದಕ್ಷಿಣ ಆಫ್ರಿಕಾ, ನೈಜೀರಿಯ ದೇಶಗಳ ಜನರ ಪ್ರವೇಶವನ್ನು ನಿಷೇಧಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ (ಜು. 2): ಕೊರೋನಾ ಅಟ್ಟಹಾಸದಿಂದಾಗಿ ಅನೇಕ ದೇಶಗಳಲ್ಲಿ ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಭಾರತದಲ್ಲಿ ಕೂಡ ಜುಲೈ 31ರವರೆಗೆ ಅಂತಾರಾಷ್ಟ್ರೀಯ ಕಮರ್ಷಿಯಲ್ ವಿಮಾನ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಇದರ ನಡುವೆ ಸೌದಿ ರಾಷ್ಟ್ರಗಳಿಗೆ ಭಾರತ, ಪಾಕಿಸ್ತಾನ, ಅಮೆರಿಕ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ವಿಯೆಟ್ನಾಂ, ಕಾಂಗೋ, ಉಗಾಂಡ, ಲಿಬೆರಿಯ, ದಕ್ಷಿಣ ಆಫ್ರಿಕಾ, ನೈಜೀರಿಯ ದೇಶಗಳ ಜನರ ಪ್ರವೇಶವನ್ನು ನಿಷೇಧಿಸಲಾಗಿದೆ.

ಭಾರತದಲ್ಲಿ ಕೊರೋನಾ ಮೂರನೇ ಅಲೆಯ ಆತಂಕ ಹೆಚ್ಚಾಗಿದ್ದು, ಇದರ ಜೊತೆಗೆ ಬ್ಲಾಕ್ ಫಂಗಸ್, ವೈಟ್ ಫಂಗಸ್, ಡೆಲ್ಟಾ ಪ್ಲಸ್ ಮುಂತಾದ ಹೊಸ ರೂಪದ ಸೋಂಕುಗಳು ಪತ್ತೆಯಾಗುತ್ತಿವೆ. ಇದರಿಂದ ಹಲವು ದೇಶಗಳಲ್ಲಿ ಭಾರತದ ವಿಮಾನಗಳ ಪ್ರವೇಶಕ್ಕೆ ಅನುಮತಿ ನೀಡುತ್ತಿಲ್ಲ. ಯುಎಇ ಕೂಡ ಭಾರತ, ಪಾಕಿಸ್ತಾನ ಸೇರಿ 13 ರಾಷ್ಟ್ರಗಳ ಪ್ರಯಾಣಿಕರಿಗೆ ನಿಷೇಧ ಹೇರಿದೆ. ಜುಲೈ 21ರವರೆಗೆ ಈ ನಿಷೇಧ ಮುಂದುವರೆಯಲಿದೆ. ಕೊರೋನಾ ಸೋಂಕು ಹೆಚ್ಚಿರುವ 13 ರಾಷ್ಟ್ರಗಳಿಗೆ ಈ ನಿಷೇಧ ಅನ್ವಯವಾಗಲಿದೆ.

ಇದನ್ನೂ ಓದಿ: Murder News: ಪ್ರೇಯಸಿಯನ್ನು ಕೊಂದು ಅಡುಗೆಮನೆಯಲ್ಲೇ ಸಮಾಧಿ; ಪೇಂಟಿಂಗ್​ನಿಂದ ಬಯಲಾಯ್ತು ಕೊಲೆ ರಹಸ್ಯ!

ಕೊರೋನಾ ಹಾವಳಿ ಹೆಚ್ಚಾಗಿರುವುದರಿಂದ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಸೇರಿ 13 ರಾಷ್ಟ್ರಗಳ ಪ್ರಯಾಣಿಕರಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಯುಎಇಯ ನಾಗರಿಕ ವಿಮಾನಯಾನ ಪ್ರಾಧಿಕಾರ ಘೋಷಿಸಿದೆ. ಭಾರತದಲ್ಲಿ ಲಾಕ್​ಡೌನ್ ತೆರವುಗೊಳಿಸಿದ ಬಳಿಕ ಜೂನ್ 23ರಿಂದ ದುಬೈನಿಂದ ಭಾರತಕ್ಕೆ ವಿಮಾನ ಸಂಚಾರ ಶುರುವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಜುಲೈ 7ರಿಂದ ವಿಮಾನಗಳಿಗೆ ಟಿಕೆಟ್ ಬುಕಿಂಗ್ ಕೂಡ ಆರಂಭಿಸಲಾಗಿತ್ತು. ಆದರೆ, ಮತ್ತೆ ಪ್ರವೇಶ ನಿಷೇಧದ ಗಡುವನ್ನು ವಿಸ್ತರಿಸಲಾಗಿದೆ.

ಕಳೆದ ಏಪ್ರಿಲ್​ನಿಂದ ಅರಬ್ ರಾಷ್ಟ್ರಗಳಿಗೆ ಭಾರತದಿಂದ ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿದೆ. ಜೂನ್ ಅಂತ್ಯದ ವೇಳೆಗೆ ಈ ನಿರ್ಬಂಧ ತೆರವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈ ತಿಂಗಳಾಂತ್ಯದವರೆಗೆ ಮತ್ತೆ ನಿರ್ಬಂಧ ವಿಸ್ತರಿಸಲಾಗಿದೆ. ಆದರೆ, ಯುಎಇ ನಾಗರಿಕರು, ಅಧಿಕಾರಿಗಳಿಗೆ ಈ ನಿರ್ಬಂಧ ಅನ್ವಯವಾಗುವುದಿಲ್ಲ.

ಭಾರತದಲ್ಲಿ ಕೂಡ ಅಂತಾರಾಷ್ಟ್ರೀಯ ವಿಮಾನಗಳ ಮೇಲೆ ಹೇರಿದ್ದ ನಿರ್ಬಂಧವನ್ನು ಜುಲೈ 31ರವರೆಗೆ ವಿಸ್ತರಿಸಲಾಗಿದೆ. ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನಯಾನವನ್ನು ಜು. 31ರವರೆಗೆ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ.
Published by:Sushma Chakre
First published: