ತಾರಕಕ್ಕೇರಿದ ದೆಹಲಿ ಹಿಂಸಾಚಾರ; ಸಾವಿನ ಸಂಖ್ಯೆ ಏಳಕ್ಕೆ ಏರಿಕೆ

ಈಶಾನ್ಯ ದೆಹಲಿಯಲ್ಲಿ ಪೊಲೀಸರು ನಿಯೋಜನೆಗೊಂಡಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಪೆಟ್ರೋಲ್​ ಪಂಪ್​, ಎರಡು ಶಾಲೆಗಳಿಗೆ ಹಾನಿ ಉಂಟಾಗಿದೆ. ಹೊತ್ತಿ ಉರಿದ ವಾಹನಗಳಿಗಂತೂ ಲೆಕ್ಕವೇ ಇಲ್ಲ. ಈ ಹಿಂಸಾಚಾರದಿಂದ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ.

Rajesh Duggumane | news18-kannada
Updated:February 25, 2020, 11:30 AM IST
ತಾರಕಕ್ಕೇರಿದ ದೆಹಲಿ ಹಿಂಸಾಚಾರ; ಸಾವಿನ ಸಂಖ್ಯೆ ಏಳಕ್ಕೆ ಏರಿಕೆ
ದೆಹಲಿ ಹಿಂಸಾಚಾರದ ಫೋಟೋ
  • Share this:
ನವದೆಹಲಿ (ಫೆ.25): ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)  ವಿರೋಧಿಸಿ ದೆಹಲಿಯಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಸೋಮವಾರ ನಡೆದ ಹಿಂಸಾಚಾರದಲ್ಲಿ ಮೃತಪಟ್ಟವ ಸಂಖ್ಯೆ ಏಳಕ್ಕೆ ಏರಿಕೆ ಆಗಿದೆ. ಘಟನೆಯಲ್ಲಿ 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 

ಅಮೆರಿಕ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​ ಭಾರತಕ್ಕೆ ಆಗಮಿಸಿದ್ದಾರೆ. ಸೋಮವಾರ ಸಂಜೆ ಅವರು ಆಗ್ರಾದ ತಾಜಮಹಲ್​ಗೆ ಭೇಟಿ ನೀಡಿದ್ದರು. ಇದೇ ಸಂದರ್ಭದಲ್ಲಿ ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರ ನಡೆದಿದೆ. ಎರಡು ಗುಂಪುಗಳು ಪರಸ್ಪರ ಕಲ್ಲು ತೂರಾಟ ನಡೆಸಿದ್ದು, ಈ ವೇಳೆ ಹೆಡ್​ ಕಾನ್ಸ್​ಟೇಬಲ್ ರತನ್​ ಲಾಲ್​ (42)​​​​ ಸೇರಿ 7 ಜನರು ಮೃತಪಟ್ಟಿದ್ದರು. 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿ ಆಗಿದೆ.

ಸದ್ಯ, ಈಶಾನ್ಯ ದೆಹಲಿಯಲ್ಲಿ ಸೆಕ್ಷನ್​ 144 ಜಾರಿ ಮಾಡಲಾಗಿದೆ. ಈ ಭಾಗದಲ್ಲಿ ಕೆಲ ಮನೆ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಸದ್ಯ, ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ: ದೆಹಲಿಯಲ್ಲಿ ಹಿಂಸಾಚಾರ: ಪೊಲೀಸ್​​​ ಕಾನ್ಸ್​ಟೇಬಲ್ ಮತ್ತು ನಾಗರಿಕನ ಮೃತ್ಯು ಬಳಿಕ ಮೂರನೇ ಸಾವು

ಭಾರೀ ನಷ್ಟ:

ಈಶಾನ್ಯ ದೆಹಲಿಯಲ್ಲಿ ಪೊಲೀಸರು ನಿಯೋಜನೆಗೊಂಡಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಪೆಟ್ರೋಲ್​ ಪಂಪ್​, ಎರಡು ಶಾಲೆಗಳಿಗೆ ಹಾನಿ ಉಂಟಾಗಿದೆ. ಹೊತ್ತಿ ಉರಿದ ವಾಹನಗಳಿಗಂತೂ ಲೆಕ್ಕವೇ ಇಲ್ಲ. ಈ ಹಿಂಸಾಚಾರದಿಂದ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ.

ಸದ್ಯ, ಈ ಭಾಗದ ರಸ್ತೆಗಳಲ್ಲಿ ಕೇವಲ ಕಲ್ಲು, ಗ್ಲಾಸ್​ಗಳ ರಾಶಿ, ಸುಟ್ಟು ಕರಕಲಾದ ವಾಹನಗಳು ಕಾಣುತ್ತಿವೆ. ಇಂದು ಹಿಂಸಾಚಾರ ಮುಂದುವರಿಯದಂತೆ ನೋಡಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ.ಕಳೆದ ಎರಡು ತಿಂಗಳಿನಿಂದ ಪ್ರತಿದಿನ ಶಾಹೀನ್ ಬಾಗ್​ನಲ್ಲಿ ಪ್ರತಿಭಟನೆ ನಡೆದಿತ್ತು. ಇಲ್ಲಿನ ಪರಿಸ್ಥಿತಿ ಬಹುತೇಕ ಹಾಗೆಯೇ ಮುಂದುವರಿದಿದೆ. ಇಲ್ಲಿ, ಪೊಲೀಸರು ಭದ್ರತಾ ದೃಷ್ಟಿಯಿಂದ ರಸ್ತೆಯಲ್ಲಿ ಬ್ಯಾರಿಕೇಡ್​ಗಳನ್ನು ಹಾಕಿದ್ಧಾರೆ.

ವಿಡಿಯೋ ವೈರಲ್​:

ಸೋಮವಾರ ರಾತ್ರಿ ಹಿಂಸಾಚಾರದ ವಿಡಿಯೋವನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ನಡೆಯುತ್ತಿರುವ ವೇಳೆ ಕೆಂಪು ಬಟ್ಟೆ ಧರಿಸಿದ ವ್ಯಕ್ತಿಯೋರ್ವ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ. ಈ ವೇಳೆ ಹಿಂಸಾಚಾರ ಏರ್ಪಟ್ಟಿತ್ತು.

ಶಾಲಾ ಕಾಲೇಜುಗಳಿಗೆ ರಜೆ:

ಹಿಂಸಾಚಾರದ ವೇಳೆ ಎರಡು ಶಾಲೆಗೆ ಹಾನಿ ಉಂಟಾಗಿದೆ. ಹೀಗಾಗಿ, ಮುಂಜಾಗ್ರತಾ ಕ್ರಮವಾಗಿ ಇಂದು ಈಶಾನ್ಯ ದೆಹಲಿಯ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಅಲ್ಲದೆ, ಸೂಕ್ಷ್ಮ ಪ್ರದೇಶದ ಶಾಲೆಗಳಿಗೆ ಭದ್ರತೆ ಒದಗಿಸಲಾಗಿದೆ.
First published: February 25, 2020, 8:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading