Reliance Jio: ಮೊದಲ ತ್ರೈಮಾಸಿಕದಲ್ಲಿ ರಿಲಯನ್ಸ್​ಗೆ 13,248 ಕೋಟಿ ರೂ. ಲಾಭ; ಜಿಯೋ ಆದಾಯ ಶೇ.7.4 ವೃದ್ಧಿ

Reliance Jio Q1 Result: ಲಾಕ್​ಡೌನ್​ನಿಂದಾಗಿ ಬಹುತೇಕ ಎಲ್ಲ ಕಂಪನಿಗಳೂ ಮನೆಯಿಂದಲೇ ಕೆಲಸ ಮಾಡುವ ಆಯ್ಕೆಯನ್ನು ನೀಡಿವೆ. ಇದರಿಂದ ಜಿಯೋ ಡೇಟಾ ಬಳಕೆಯ ಪ್ರಮಾಣ ಹೆಚ್ಚಿದೆ. ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್​ನ ಅಂಗಸಂಸ್ಥೆಯಾದ ರಿಲಯನ್ಸ್ ಜಿಯೋ 2020ರ ಜೂನ್ ತ್ರೈಮಾಸಿಕದಲ್ಲಿ 2,520 ಕೋಟಿ ರೂ.ಗಳ ಲಾಭ ಪಡೆದಿದೆ.

news18-kannada
Updated:July 30, 2020, 9:20 PM IST
Reliance Jio: ಮೊದಲ ತ್ರೈಮಾಸಿಕದಲ್ಲಿ ರಿಲಯನ್ಸ್​ಗೆ 13,248 ಕೋಟಿ ರೂ. ಲಾಭ; ಜಿಯೋ ಆದಾಯ ಶೇ.7.4 ವೃದ್ಧಿ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಜು. 30): ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ ಲಾಭದ ಓಘ ಮುಂದುವರೆದಿದೆ. ರಿಲಯನ್ಸ್​ನ ಡಿಜಿಟಲ್ ಸೇವೆಯ ಖ್ಯಾತಿ ಮತ್ತು ರೀಟೇಲ್ ಯುನಿಟ್​ನ ಬೆಳವಣಿಗೆ ಹೆಚ್ಚಾಗಿದೆ. ಇಂದು ಬಿಡುಗಡೆಯಾದ ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ನ ಮೊದಲ ತ್ರೈಮಾಸಿಕ ಫಲಿತಾಂಶ ಪ್ರಕಟವಾಗಿದೆ.

ಮೊದಲ ತ್ರೈಮಾಸಿಕ ಅವಧಿಯಲ್ಲಿ 13,248 ಕೋಟಿ ರೂ.ಗಳ ಲಾಭಾಂಶ ಲಭಿಸಿದೆ ಎಂದು ರಿಲಯನ್ಸ್​ ಇಂಡಸ್ಟ್ರೀಸ್​ ತಿಳಿಸಿದೆ. ಸ್ಟ್ರೀಟ್ ನಿರೀಕ್ಷೆಗಳನ್ನು ಮೀರಿ ಆರ್​ಐಎಲ್ ಶೇ. 140.3 ರೂ. ಗಳಿಸಿದೆ. ಅಲ್ಲದೆ, ಜಿಯೋದ ಎಆರ್​ಪಿಯು ಬೆಳವಣಿಗೆ ಶೇ. 7.4ಕ್ಕೆ ಏರಿಕೆಯಾಗಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.

ಅಲ್ಟಾಮೌಂಟ್ ಕ್ಯಾಪಿಟಲ್‌ನ ಪ್ರಕಾಶ್ ದಿವಾನ್ ಸಿಎನ್‌ಬಿಸಿ-ಟಿವಿ 18ಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಜಿಯೋ ಎಆರ್‌ಪಿಯು ಮತ್ತಷ್ಟು ಏರಿಕೆಯಾಗುವುದಿಲ್ಲ ಎನ್ನಲು ಯಾವುದೇ ಕಾರಣಗಳಿಲ್ಲ. ರೀಟೇಲ್ ವ್ಯಾಪಾರವು ಭವಿಷ್ಯದ ಉದ್ಯಮ ಕ್ಷೇತ್ರದ ದೊಡ್ಡ ಆಶಾಕಿರಣವಾಗಿದೆ. ರಿಲಯನ್ಸ್​ ಇಂಡಸ್ಟ್ರೀಸ್​​ನ ಷೇರಿನ ಮೇಲೆ ಯಾವುದೇ ಮಾರಾಟದ ಒತ್ತಡವಿಲ್ಲ. ಹಾಗೇ, ಆಗಸ್ಟ್​ ತಿಂಗಳಲ್ಲಿ ಇನ್ನೂ 2,300 ರೂ. ವಲಯವನ್ನು ತಲುಪುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Coronavirus Updates: ದೆಹಲಿಯಲ್ಲಿ ಒಂದೇ 1,093 ಕೊರೋನಾ ಕೇಸ್​​ ಪತ್ತೆ; 1.34 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

ಜುಲೈ 27ರಂದು ಈ ಷೇರು ದಾಖಲೆಯ ಗರಿಷ್ಠ 2,198.70 ರೂ.ಗೆ ತಲುಪಿತ್ತು. ಮತ್ತು ಜಾಗತಿಕ ಹೂಡಿಕೆದಾರರು ಮತ್ತು ತಂತ್ರಜ್ಞಾನ ಆಟಗಾರರಿಗೆ ಬ್ಯಾಲೆನ್ಸ್ ಶೀಟ್ ಮತ್ತು ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿನ ಷೇರುಗಳ ಮಾರಾಟದಿಂದಾಗಿ ಬ್ರೋಕರೇಜ್‌ಗಳು ತಮ್ಮ ನಿಗದಿತ ಬೆಲೆಯನ್ನು ಹೆಚ್ಚಿಸಿವೆ. ವಾಸ್ತವವಾಗಿ, ಆರ್​ಐಎಲ್ ನಿಫ್ಟಿ ಷೇರುಗಳಲ್ಲಿ ಅತಿಹೆಚ್ಚು ಲಾಭ ಗಳಿಸಿದೆ. ಇದು ಮಾರ್ಚ್ 23ರ ಕನಿಷ್ಠ ಮಟ್ಟದಿಂದ 145 ಪ್ರತಿಶತದಷ್ಟು ಏರಿಕೆಯಾಗಿದೆ. ಹಾಗೇ, ಒಂದು ವರ್ಷದಿಂದ ಇಲ್ಲಿಯವರೆಗೆ ಶೇ. 41ರಷ್ಟು ಹೆಚ್ಚಳ ಕಂಡಿದೆ.

2020 ರ ಮಾರ್ಚ್ ತ್ರೈಮಾಸಿಕದಲ್ಲಿ ಏಕೀಕೃತ ಲಾಭವು 6,348 ಕೋಟಿ ರೂ. ಮತ್ತು ಕಳೆದ ವರ್ಷದ ಇದೇ ಅವಧಿಯಲ್ಲಿ 10,104 ಕೋಟಿ ರೂ. ಆಗಿದೆ. ತ್ರೈಮಾಸಿಕದಲ್ಲಿ ಒಟ್ಟು ಆದಾಯವು 88,253 ಕೋಟಿ ರೂ.ಗಳಾಗಿದ್ದು, ವರ್ಷಕ್ಕೆ 1,36,240 ಕೋಟಿ ರೂ. ಮತ್ತು 1,56,976 ಕೋಟಿ ರೂ. ಲಾಭ ಗಳಿಸಿದೆ.

ಇದನ್ನೂ ಓದಿ: Sonia Gandhi Hospitalized: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಸ್ವಸ್ಥ; ಆಸ್ಪತ್ರೆಗೆ ದಾಖಲುಲಾಕ್​ಡೌನ್​ನಿಂದಾಗಿ ಬಹುತೇಕ ಎಲ್ಲ ಕಂಪನಿಗಳೂ ಮನೆಯಿಂದಲೇ ಕೆಲಸ ಮಾಡುವ ಆಯ್ಕೆಯನ್ನು ನೀಡಿವೆ. ಇದರಿಂದ ಜಿಯೋ ಡೇಟಾ ಬಳಕೆಯ ಪ್ರಮಾಣ ಹೆಚ್ಚಿದೆ. ಬಿಲಿಯನೇರ್ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್​ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ರಿಲಯನ್ಸ್ ಜಿಯೋ 2020ರ ಜೂನ್ ತ್ರೈಮಾಸಿಕದಲ್ಲಿ 2,520 ಕೋಟಿ ರೂ.ಗಳ ಲಾಭ ಪಡೆದಿದೆ. ಮಾರ್ಚ್ ತ್ರೈಮಾಸಿಕದಲ್ಲಿ 2,331 ಕೋಟಿ ರೂ. ಲಾಭ ಗಳಿಸಿದೆ. ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು 200 ನಗರಗಳಲ್ಲಿ ಜಿಯೋಮಾರ್ಟ್ ಬೀಟಾ ಆವೃತ್ತಿಯನ್ನು ಪ್ರಾರಂಭಿಸಲಾಗಿದೆ. ಜಿಯೋದ ಧ್ವನಿ ಮತ್ತು ಡೇಟಾ ಎರಡರ ಬಳಕೆಯೂ ಹೆಚ್ಚಾಗಿದೆ.

ಆರ್‌ಐಎಲ್‌ನ ಡಿಜಿಟಲ್ ಯುನಿಟ್ ಜಿಯೋ ಪ್ಲಾಟ್‌ಫಾರ್ಮ್‌ಗಳು, ತ್ರೈಮಾಸಿಕದಲ್ಲಿ 1,52,056 ಕೋಟಿ ರೂ.ಗಳ ವಹಿವಾಟು ನಡೆಸಿದೆ. ಕೊರೋನಾ ವೈರಸ್ ಲಾಕ್‌ಡೌನ್ ಸಮಯದಲ್ಲಿ ಬೆಳೆದ ಕೆಲವೇ ಕಂಪನಿಗಳಲ್ಲಿ ಜಿಯೋ ಕೂಡ ಒಂದಾಗಿದೆ. ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ ಜಗತ್ತಿನ 50 ಮೌಲ್ಯಯುತ ಕಂಪನಿಗಳಲ್ಲಿ ಒಂದಾಗಿದೆ. ಮಾರ್ಚ್ ತ್ರೈಮಾಸಿಕದಲ್ಲಿ ಪ್ರವರ್ತಕರ ಷೇರುದಾರರ ಪ್ರಮಾಣವು ಜೂನ್ ತ್ರೈಮಾಸಿಕದಲ್ಲಿ 50.07 ರಷ್ಟಿದೆ.



ಮೊಬೈಲ್ ಡೇಟಾ ಬಳಕೆಯಲ್ಲಿ ಭಾರತವು ವಿಶ್ವದಲ್ಲೇ ಮೊದಲ ಸ್ಥಾನ ಪಡೆದಿದೆ. ರಾಷ್ಟ್ರದ ಅತಿದೊಡ್ಡ ಮೊಬೈಲ್ ಡೇಟಾ ನೆಟ್‌ವರ್ಕ್ ಆದ ಜಿಯೋ ಕರ್ನಾಟಕದಲ್ಲಿ ಎರಡು ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ಸದೃಢ ಹಾಗೂ ವಿಸ್ತಾರವಾದ 4ಜಿ ನೆಟ್‌ವರ್ಕ್ ಆದ ಅನ್​ಲಿಮಿಟೆಡ್​ ವಾಯ್ಸ್ ಮತ್ತು ಡೇಟಾ ಆಯ್ಕೆಗಳು ಕೈಗೆಟುಕುವ ದರದಲ್ಲಿವೆ. ಜಿಯೋಟಿವಿ, ಜಿಯೋ ಮ್ಯೂಸಿಕ್, ಜಿಯೋ ಸಿನೆಮಾ, ಜಿಯೋ ಸಾವನ್ ಮತ್ತಿತರ ಇನ್ ಹೌಸ್ ಆಪ್‌ಗಳ ಮೂಲಕ ದೊಡ್ಡ ಪ್ರಮಾಣದ ಜಿಯೋ ಪ್ರೀಮಿಯಂ ಕಂಟೆಂಟ್ ಪಡೆದುಕೊಳ್ಳುವ ಅವಕಾಶವಿದೆ. ರಾಜ್ಯಾದ್ಯಂತ ಜಿಯೋ ಸಿಮ್‌ಗಳ ಸುಲಭ ಲಭ್ಯತೆಯಿದೆ. ಹೀಗಾಗಿ, ಜಿಯೋ ಗ್ರಾಹಕರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ.
Published by: Sushma Chakre
First published: July 30, 2020, 9:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading