ಮಗಳ ಮದುವೆಗೆ ಆಹ್ವಾನಿಸಿದ ಬಡ ರಿಕ್ಷಾವಾಲಾನನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸಿದ ಪ್ರಧಾನಿ ಮೋದಿ

ವಾರಾಣಸಿಯಲ್ಲಿ ರಿಕ್ಷಾ ಓಡಿಸುವ ಈ ವ್ಯಕ್ತಿ ಪ್ರಧಾನಿ ಮೋದಿ ಅವರ ಅಭಿಮಾನಿ. ಇತ್ತೀಚೆಗಷ್ಟೆ ಕೇವತ್​ ಮಗಳ ಮದುವೆ ನೇರವೇರಿಸಿದ್ದಾರೆ. ಫೆ.12ರಂದು ನಡೆದ ಈ ಮದುವೆ ಸಮಾರಂಭಕ್ಕೆ ಪ್ರಧಾನಿ ಮೋದಿಗೂ ವಿಶೇಷ ಆಹ್ವಾನ ನೀಡಿದ್ದರು

Seema.R | news18-kannada
Updated:February 18, 2020, 4:11 PM IST
ಮಗಳ ಮದುವೆಗೆ ಆಹ್ವಾನಿಸಿದ ಬಡ ರಿಕ್ಷಾವಾಲಾನನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸಿದ ಪ್ರಧಾನಿ ಮೋದಿ
ರಿಕ್ಷಾ ಚಾಲಕ ಮಂಗಲ್​ ಭೇಟಿ ಮಾಡಿದ ಪ್ರಧಾನಿ
  • Share this:
ವಾರಾಣಾಸಿ (ಫೆ.18): ಪ್ರಧಾನಿ ನರೇಂದ್ರ ಮೋದಿ ಫೆ.16ರಂದು ತಮ್ಮ ಕ್ಷೇತ್ರ ವಾರಾಣಸಿಗೆ ಭೇಟಿ ನೀಡಿದ್ದರು. ಈ ವೇಳೆ ಅಚ್ಚರಿ ಎಂಬಂತೆ ಇಲ್ಲಿನ ಬಡ ರಿಕ್ಷಾ ಚಾಲಕನನ್ನು ಖುದ್ದು ಭೇಟಿಯಾಗಿ ಮಾತನಾಡಿದ್ದಾರೆ. ಈ ಘಟನೆ ಎಲ್ಲರಲ್ಲಿಯೂ ಅಚ್ಚರಿ ಮೂಡಿಸುವ ಜೊತೆಗೆ ಮೋದಿಯವರ ಸರಳತೆಯನ್ನು ತೋರಿದೆ. ಅಷ್ಟಕ್ಕೂ ಪ್ರಧಾನಿ ಯಾಕೆ ಈ ರಿಕ್ಷಾವಾಲಾರನ್ನು ಭೇಟಿಯಾಗಿದ್ದರು ಎಂಬುದಕ್ಕೆ ಕಾರಣ ಇಲ್ಲಿದೆ.

ಆತನ ಹೆಸರು ಮಂಗಲ್​ ಕೇವತ್​. ವಾರಾಣಸಿಯಲ್ಲಿ ರಿಕ್ಷಾ ಓಡಿಸುವ ಈ ವ್ಯಕ್ತಿ ಪ್ರಧಾನಿ ಮೋದಿ ಅವರ ಅಭಿಮಾನಿ. ಇತ್ತೀಚೆಗಷ್ಟೆ ಕೇವತ್​ ಮಗಳ ಮದುವೆ ನೇರವೇರಿಸಿದ್ದಾರೆ. ಫೆ.12ರಂದು ನಡೆದ ಈ ಮದುವೆ ಸಮಾರಂಭಕ್ಕೆ ಪ್ರಧಾನಿ ಮೋದಿಗೂ ವಿಶೇಷ ಆಹ್ವಾನ ನೀಡಿದ್ದರು. ಅಚ್ಚರಿ ಎಂಬಂತೆ ಪ್ರಧಾನಿ ಕೂಡ ನೂತನ ವಧುವರರಿಗೆ ಶುಭಹಾರೈಸಿ ಪತ್ರ ಬರೆದಿದ್ದರು.

ಮದುವೆ ಕಾರ್ಯ ಮುಗಿದ ಎರಡ್ಮೂರು ದಿನಗಳ ಬಳಿಕ ಕ್ಷೇತ್ರಕ್ಕೆ ಭೇಟಿ ನೀಡಿದ ಪ್ರಧಾನಿ, ರಿಕ್ಷಾವಾಲಾ ಮಂಗಲ್​ ಕೇವತ್​ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿ ಶುಭಾಶಯ ಕೋರಿದ್ದಾರೆ. ಅಲ್ಲದೇ ಈ ವೇಳೆ ತಮ್ಮ ಗ್ರಾಮ ಡೋಮರಿಯಲ್ಲಿ ಗಂಗಾ ನದಿಯ ತಟದಲ್ಲಿ ಸ್ವಚ್ಛ ಭಾರತ್​ ಅಭಿಯಾನ ನಡೆಸುತ್ತಿರುವ ಮಂಗಲ್​ ಕೇವತ್​ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಇದನ್ನು ಓದಿ: ವಾರಣಾಸಿಯಲ್ಲಿ 63 ಅಡಿ ಎತ್ತರದ ದೀನ ದಯಾಳ್​ ಪ್ರತಿಮೆ ಅನಾವರಣಗೊಳಿಸಲಿರುವ ಪ್ರಧಾನಿ ಮೋದಿ

ಇನ್ನು ಈ ಕುರಿತು ಎಎನ್​ಐ ಮಾತನಾಡಿದ ಅವರು, ಮಗಳ ಮದುವೆಗೆ ಪ್ರಧಾನಿ ಮೋದಿ ಆಹ್ವಾನಿಸಬೇಕು ಎಂಬ ಇಚ್ಛೆ ನಮಗೆ ಇತ್ತು. ಅದರಂತೆ ಮೊದಲ ಆಹ್ವಾನ ಪತ್ರಿಕೆಯನ್ನು ಅವರಿಗೆ ಕಳುಹಿಸಿದ್ದೆವು. ನಾವು ಊಹಿಸಿರದ ರೀತಿ ಫೆ.8ರಂದು ಅವರಿಂದ ಶುಭಾಶಯ ಪತ್ರ ಕೂಡ ಬಂತು. ಇದು ನಮಗೆ ಅಚ್ಚರಿ ಮೂಡಿಸುವ ಜೊತೆ ಸಂತೋಷ ಇಮ್ಮಡಿಗೊಳಿಸಿತು ಎಂದಿದ್ದಾರೆ.

ಇದನ್ನು ಓದಿ: ‘ಮಗಳ ಮದುವೆಗೆ ಬನ್ನಿ‘ ಎಂದ ಆಟೋ ಡ್ರೈವರ್​​​ ಆಹ್ವಾನಕ್ಕೆ ಪ್ರಧಾನಿ ಮೋದಿ ಮಾಡಿದ್ದೇನು?

ಇನ್ನು ರಿಕ್ಷಾ ಚಾಲಕನ ಹೆಂಡತಿ ರೇಣು ದೇವಿ ವಾರಾಣಾಸಿಗೆ ಬಂದಾಗ ಪ್ರಧಾನಿ ಮೋದಿಯನ್ನು ಭೇಟಿ ಮಾಡುವ ಉತ್ಸಾಹವನ್ನು ತೋರಿದ್ದಾರೆ.
First published: February 18, 2020, 11:47 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading