ಜೈಲಿನಲ್ಲಿ ನಿರ್ಭಯಾ ಅತ್ಯಾಚಾರಿಯ ಹೈಡ್ರಾಮ; ಗೋಡೆಗೆ ತಲೆ ಚಚ್ಚಿಕೊಂಡ ಅಪರಾಧಿ

Nirbhaya Rape Case: ನಿರ್ಭಯಾ ಪ್ರಕರಣದ ನಾಲ್ವರು ದೋಷಿಗಳನ್ನೂ ಮಾರ್ಚ್​ 3ರಂದು ಗಲ್ಲಿಗೇರಿಸುವಂತೆ ದೆಹಲಿ ಪಟಿಯಾಲ ಕೋರ್ಟ್​ ಆದೇಶ ನೀಡಿದೆ. ಜೈಲಿನಲ್ಲಿರುವ ಅಪರಾಧಿ ವಿನಯ್ ಶರ್ಮ ಸೋಮವಾರ ಬೆಳಗ್ಗೆ ತನ್ನ ಸೆಲ್​ನಲ್ಲಿ ಗೋಡೆಗೆ ತಲೆ ಚಚ್ಚಿಕೊಂಡಿದ್ದಾನೆ.

ನಿರ್ಭಯಾ ಅತ್ಯಾಚಾರಿ ವಿನಯ್ ಶರ್ಮ

ನಿರ್ಭಯಾ ಅತ್ಯಾಚಾರಿ ವಿನಯ್ ಶರ್ಮ

  • Share this:
ನವದೆಹಲಿ (ಫೆ. 20): 8 ವರ್ಷದ ಹಿಂದೆ ದೇಶವನ್ನೇ ಬೆಚ್ಚಿಬೀಳಿಸಿದ್ದ ದೆಹಲಿಯ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳು ಮಾರ್ಚ್​ 3ರಂದು ಬೆಳಗ್ಗೆ 6 ಗಂಟೆಗೆ ಗಲ್ಲಿಗೇರಲಿದ್ದಾರೆ. ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾಗಿರುವ ವಿನಯ್ ಶರ್ಮ ಜೈಲಿನ ಗೋಡೆಗೆ ತಲೆ ಚಚ್ಚಿಕೊಂಡು ಗಾಯಗೊಂಡಿದ್ದಾನೆ.

ನಿರ್ಭಯಾ  ಅತ್ಯಾಚಾರ ಪ್ರಕರಣದ ನಾಲ್ವರು ದೋಷಿಗಳನ್ನೂ ಮಾರ್ಚ್​ 3ರಂದು ಗಲ್ಲಿಗೇರಿಸುವಂತೆ ದೆಹಲಿ ಪಟಿಯಾಲ ಕೋರ್ಟ್​ ಆದೇಶ ನೀಡಿದೆ. ಜೈಲಿನಲ್ಲಿರುವ ಅಪರಾಧಿ ವಿನಯ್ ಶರ್ಮ ಸೋಮವಾರ ಬೆಳಗ್ಗೆ ತನ್ನ ಸೆಲ್​ನಲ್ಲಿ ಗೋಡೆಗೆ ತಲೆ ಚಚ್ಚಿಕೊಂಡಿದ್ದಾನೆ. ಆತನ ತಲೆಗೆ ಸಣ್ಣ ಗಾಯವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಗಲ್ಲುಶಿಕ್ಷೆಯಿಂದ ಬಚಾವಾಗಲು ನಾನಾ ರೀತಿಯ ಪ್ರಯತ್ನ ಪಟ್ಟಿದ್ದ ನಾಲ್ವರು ಅಪರಾಧಿಗಳಿಗೆ ಇದುವರೆಗೂ 4 ಬಾರಿ ಡೆತ್ ವಾರೆಂಟ್ ಹೊರಡಿಸಲಾಗಿದೆ. ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ್ದ ವಿನಯ್ ಶರ್ಮನ ಕ್ಷಮಾಪಣಾ ಅರ್ಜಿಯನ್ನು ರಾಷ್ಟ್ರಪತಿ ತಿರಸ್ಕರಿಸಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿ ಪಟಿಯಾಲ ನ್ಯಾಯಾಲಯ ಹೊಸ ಡೆತ್​ ವಾರೆಂಟ್ ಹೊರಡಿಸಿತ್ತು.

ಇದನ್ನೂ ಓದಿ: ನಿರ್ಭಯಾ ಅಪರಾಧಿಗಳಿಗೆ ನಾಲ್ಕನೇ ಬಾರಿಗೆ ಡೆತ್​ ವಾರೆಂಟ್​ ಹೊರಡಿಸಿದ ಪಟಿಯಾಲ ಕೋರ್ಟ್​​; ಮಾರ್ಚ್​.3 ಕ್ಕೆ ಗಲ್ಲು

ಈ 4 ಅಪರಾಧಿಗಳಲ್ಲಿ ಒಬ್ಬನಾದ ವಿನಯ್ ಶರ್ಮ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ಈತನನ್ನು ಗಲ್ಲಿಗೆ ಏರಿಸಬಾರದು ಎಂದು ಒಂದಷ್ಟು ವಕೀಲರು ನ್ಯಾಯಾಂಗ ವ್ಯವಸ್ಥೆಯ ಎದುರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತಿಹಾರ್ ಜೈಲಿನಲ್ಲಿರುವ ವಿನಯ್ ಶರ್ಮನ ಮೇಲೆ ಬಂಧೀಖಾನೆ ಸಿಬ್ಬಂದಿ ಹೆಚ್ಚಿನ ನಿಗಾ ವಹಿಸಿದ್ದರು.

ವಿನಯ್ ಶರ್ಮ ಗೋಡೆಗೆ ಹಣೆ ಚಚ್ಚಿಕೊಳ್ಳುತ್ತಿರುವುದನ್ನು ಕಂಡ ಜೈಲು ಸಿಬ್ಬಂದಿ ತಕ್ಷಣ ಆತನನ್ನು ತಡೆದಿದ್ದಾರೆ. ಸಣ್ಣದಾಗಿ ಗಾಯವಾಗಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ. ಇದೇ ವಿನಯ್ ಶರ್ಮ ಜೈಲಿನ ಕಂಬಿಗಳ ನಡುವೆ ಕೈಯನ್ನು ಇಟ್ಟುಕೊಂಡು ಕೈಗಳಿಗೆ ಗಾಯ ಮಾಡಿಕೊಂಡಿದ್ದ. ಅಲ್ಲದೆ, ಆತನ ತಾಯಿ ಆತನನ್ನು ನೋಡಲು ಬಂದಾಗಲೇ ವಿನಯ್ ಆಕೆಯನ್ನು ಗುರುತುಹಿಡಿದಿರಲಿಲ್ಲ. ಹೊಸ ವಾರಂಟ್ ಜಾರಿಯಾದಾಗಿನಿಂದ ವಿನಯ್ ಮಾನಸಿಕ ಸ್ಥಿತಿ ಸ್ಥಿಮಿತದಲ್ಲಿಲ್ಲ ಎಂದು ಜೈಲಧಿಕಾರಿಗಳು ತಿಳಿಸಿದ್ದರು.

ಇದನ್ನೂ ಓದಿ: 2017ರ ಉತ್ತರ ಪ್ರದೇಶ ಚುನಾವಣೆ ವೇಳೆ ಅತ್ಯಾಚಾರ; ಬಿಜೆಪಿ ಶಾಸಕ ಸೇರಿ 6 ಜನರ ಮೇಲೆ ಕೇಸ್ ದಾಖಲು

ಏನಿದು ಪ್ರಕರಣ?:

2012ರಲ್ಲಿ ದೆಹಲಿಯಲ್ಲಿ ಆರು ಜನರು ಸೇರಿ ನಿರ್ಭಯಾ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದರು. ಕೆಲ ದಿನಗಳ ಬಳಿಕ ಆಕೆ ಬಹು ಅಂಗಾಂಗ ವೈಫಲ್ಯಕ್ಕೊಳಗಾಗಿ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಇವರು ತಪ್ಪೆಸಗಿದ್ದು ನ್ಯಾಯಾಲಯದಲ್ಲಿ ಸಾಬೀತಾಗಿದೆ. ಒಬ್ಬಾತ ಅಪ್ರಾಪ್ತನಾಗಿದ್ದರಿಂದ ಬಾಲಾಪರಾಧ ನ್ಯಾಯಾಲಯದಲ್ಲಿ ಆತನ ವಿಚಾರಣೆ ನಡೆದು 3 ವರ್ಷ ಆತನನ್ನು ಪರಿವರ್ತನಾ ಗೃಹದಲ್ಲಿರಿಸಿ ಬಿಡುಗಡೆಗೊಳಿಸಲಾಗಿದೆ. ರಾಮ್ ಸಿಂಗ್ ಎಂಬಾತ ತಿಹಾರ್ ಜೈಲಿನಲ್ಲಿ ನೇಣಿಗೆ ಶರಣಾಗಿದ್ದ. ಉಳಿದ ದೋಷಿಗಳಾದ ಮುಖೇಶ್ ಸಿಂಗ್, ವಿನಯ್ ಶರ್ಮ, ಅಕ್ಷಯ್ ಕುಮಾರ್ ಸಿಂಗ್ ಮತ್ತು ಪವನ್ ಗುಪ್ತಾ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಇವರು ಸಲ್ಲಿಸಿದ್ದ ಮೇಲ್ಮನವಿಗಳೆಲ್ಲವೂ ತಿರಸ್ಕೃತಗೊಂಡಿವೆ.

 
First published: