ಇನ್ನೂ ಹಿರಿದಾಗಲಿದೆ ರಿಲಾಯನ್ಸ್​​ ಒಡೆತನದ ನೆಟ್ವರ್ಕ್​18; ಮುಖೇಶ್​ ಅಂಬಾನಿಯಿಂದ ಮಹತ್ವದ ನಿರ್ಧಾರ

ನೆಟ್ವರ್ಕ್​18 ಅಡಿಯಲ್ಲಿ ಬರುವ ಟಿವಿ18 ಭಾರತದ ಅತಿದೊಡ್ಡ ನ್ಯೂಸ್​ ನೆಟ್ವರ್ಕ್​. ಕಲರ್ಸ್​ ನೆಟ್ವರ್ಕ್​​, ವಿಡಿಯೋ ಸ್ಟ್ರೀಮೀಂಗ್​ ಆ್ಯಪ್​ ವೂಟ್ ಟಿವಿ18 ಅಡಿಯಲ್ಲಿ ಬರಲಿದೆ.

news18-kannada
Updated:February 20, 2020, 12:37 PM IST
ಇನ್ನೂ ಹಿರಿದಾಗಲಿದೆ ರಿಲಾಯನ್ಸ್​​ ಒಡೆತನದ ನೆಟ್ವರ್ಕ್​18; ಮುಖೇಶ್​ ಅಂಬಾನಿಯಿಂದ ಮಹತ್ವದ ನಿರ್ಧಾರ
ಮುಖೇಶ್​​ ಅಂಬಾನಿ
  • Share this:
ನವದೆಹಲಿ (ಫೆ.18): ಮುಖೇಶ್​ ಅಂಬಾನಿ ಒಡೆತನದ ದೇಶದ ಬೃಹತ್​ ಉದ್ಯಮ ರಿಲಾಯನ್ಸ್​ ಇಂಡಸ್ಟ್ರೀಸ್​ ಸೋಮವಾರದ ಸಭೆಯಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ತನ್ನ ಒಡೆತನದ ಮೀಡಿಯಾ ಹಾಗೂ ಡಿಸ್ಟ್ರಿಬ್ಯುಷನ್​ ಪ್ರಾಪರ್ಟಿಸ್​ಗಳನ್ನು ನೆಟ್ವರ್ಕ್​18 ಜತೆ ಸೇರಿಸಲು ನಿರ್ಧರಿಸಿದೆ.

ಟಿವಿ18 ಬ್ರಾಡ್​ಕಾಸ್ಟ್​, ಹಾತ್​ವೇ ಕೇಬಲ್​ ಆ್ಯಂಡ್​ ಡಾಟಾಕಾಮ್, ಡೆನ್​ ನೆಟ್ವರ್ಕ್ಸ್​​ ಮತ್ತು ನೆಟ್ವರ್ಕ್​18 ಮೀಡಿಯಾ ಆ್ಯಂಡ್​ ಇನ್ವೆಸ್ಟ್​ಮೆಂಟ್​ನ ಶೇರುದಾರರ ಸಭೆ ನಡೆದಿತ್ತು. ಈ ವೇಳೆ ಮಹತ್ವದ ನಿರ್ಧಾರಕ್ಕೆ ಒಪ್ಪಿಗೆ ಸಿಕ್ಕಿದೆ.

ನೆಟ್ವರ್ಕ್​​18 ಭಾರತದ ಅತಿದೊಡ್ಡ ಮೀಡಿಯಾ ಸಂಸ್ಥೆ. ಮೀಡಿಯಾ ಹಾಗೂ ಡಿಸ್ಟ್ರಿಬ್ಯುಷನ್​ ಪ್ರಾಪರ್ಟಿಸ್​ಗಳನ್ನು ನೆಟ್ವರ್ಕ್​18 ಅಡಿಯಲ್ಲಿ ತರುವುದರಿಂದ ಇದರ ಒಟ್ಟು ಆದಾಯ ವರ್ಷಕ್ಕೆ 8,000 ಕೋಟಿ ರೂಪಾಯಿ ಆಗಲಿದೆ ಎಂದು ಅಂದಾಜಿಸಲಾಗಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ರಿಲಾಯನ್ಸ್​​ಗೆ ನೆಟ್ವರ್ಕ್​ 18ಮೇಲಿನ ಹಿಡಿತ ಶೇ.75ರಿಂದ ಶೇ.64ಕ್ಕೆ ಇಳಿಕೆ ಆಗಲಿದೆ.

ನೆಟ್ವರ್ಕ್​18 ಅಡಿಯಲ್ಲಿ ಬರುವ ಟಿವಿ18 ಭಾರತದ ಅತಿದೊಡ್ಡ ನ್ಯೂಸ್​ ನೆಟ್ವರ್ಕ್​. ಕಲರ್ಸ್​ ನೆಟ್ವರ್ಕ್​​, ವಿಡಿಯೋ ಸ್ಟ್ರೀಮೀಂಗ್​ ಆ್ಯಪ್​ ವೂಟ್ ಟಿವಿ18 ಅಡಿಯಲ್ಲಿ ಬರಲಿದೆ. ಇನ್ನು, ಹಾತ್​ವೇ ಮತ್ತು ಡೆನ್​ ದೇಶದಲ್ಲಿ ಕೇಬಲ್​ ಸೇವೆ ನೀಡುತ್ತಿದ್ದು ಶೇ. 30 ಮಾರುಕಟ್ಟೆಯನ್ನು ನಿಯಂತ್ರಣ ಮಾಡುತ್ತಿವೆ.

ಇದನ್ನೂ ಓದಿ: ಗ್ರಾಹಕರಿಗಾಗಿ ರಿಲಾಯನ್ಸ್​ ‘ಗಿಗಾ ಫೈಬರ್​‘ನಲ್ಲಿ ಏನೆಲ್ಲಾ ಸೇವೆ ಸಿಗಲಿದೆ ಗೊತ್ತಾ?

2019-20ರ ಅವಧಿಯಲ್ಲಿ ನೆಟ್ವರ್ಕ್​ 18 ಆದಾಯ ಹೆಚ್ಚಿದೆ. ಜೀ ಎಂಟ್ರಟೇನ್​ಮೆಂಟ್​ ಹಾಗೂ ಸನ್​ ಟಿವಿ ನೆಟ್ವರ್ಕ್​ ಆದಾಯವನ್ನೂ ಮೀರಿದ ಗಳಿಕೆಯನ್ನು ನೆಟ್ವರ್ಕ್​ 18 ಮಾಡಿದೆ.

ರಿಲಾಯನ್ಸ್​ ಇಂಡಸ್ಟ್ರೀಸ್​ ಭಾರತದ ಅತಿದೊಡ್ಡ ಉದ್ಯಮವಾಗಿದೆ. ರಿಟೇಲ್​, ತೈಲ, ರಿಫೈನ್​ ಮತ್ತು ಪೆಟ್ರೋಕೆಮಿಕಲ್​ನಂಥ ಕ್ಷೇತ್ರದಲ್ಲಿ ರಿಲಾಯನ್ಸ್​ ದಾಪುಗಾಲು ಇಟ್ಟಿದೆ.
First published: February 18, 2020, 8:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading