ಬಿಹಾರ ಚುನಾವಣೆ; ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಲಂಡನ್ ಮೂಲದ ಮಹಿಳೆ ಪ್ರಿಯಾ ಚೌಧರಿ ಸ್ಪರ್ಧೆ

ಬಿಹಾರದ ದರ್ಭಂಗ ಮೂಲದ ಪ್ರಿಯಾ ಚೌಧರಿ ಹಲವು ವರ್ಷಗಳಿಂದ ಲಂಡನ್​ನಲ್ಲಿ ವಾಸಿಸುತ್ತಿದ್ದು, ಪೂರ್ಣ ಪುಟದ ಜಾಹೀರಾತಿನಲ್ಲಿ ತಮ್ಮ ಉಮೇದುವಾರಿಕೆಯನ್ನು ಘೋಷಿಸಿದ್ದಾರೆ. ಈ ಜಾಹೀರಾತು ಭಾನುವಾರ ಬಿಹಾರದ ಹಲವಾರು ಹಿಂದಿ ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.

ಪ್ರಿಯಾ ಚೌಧರಿ.

ಪ್ರಿಯಾ ಚೌಧರಿ.

  • Share this:
ಪಾಟ್ನಾ (ಮಾರ್ಚ್​ 09); ಸಂಯುಕ್ತ ಜನಾದಳದ ಮಾಜಿ ಎಂಎಲ್ ಸಿ ವಿನೋದ್ ಚೌಧರಿ ಅವರ ಪುತ್ರಿ ಪುಷ್ಪಂ ಪ್ರಿಯಾ ಚೌಧರಿ ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ತಮ್ಮನ್ನು "ಮುಖ್ಯಮಂತ್ರಿ ಅಭ್ಯರ್ಥಿ" ಎಂದು ಘೋಷಿಸಿಕೊಳ್ಳುವ ಮೂಲಕ ಬಿಹಾರದ ರಾಜ್ಯ ರಾಜಕಾರಣದಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಬಿಹಾರದ ದರ್ಭಂಗ ಮೂಲದ ಪ್ರಿಯಾ ಚೌಧರಿ ಹಲವು ವರ್ಷಗಳಿಂದ ಲಂಡನ್​ನಲ್ಲಿ ವಾಸಿಸುತ್ತಿದ್ದು, ಪೂರ್ಣ ಪುಟದ ಜಾಹೀರಾತಿನಲ್ಲಿ ತಮ್ಮ ಉಮೇದುವಾರಿಕೆಯನ್ನು ಘೋಷಿಸಿದ್ದಾರೆ. ಈ ಜಾಹೀರಾತು ಭಾನುವಾರ ಬಿಹಾರದ ಹಲವಾರು ಹಿಂದಿ ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.

ಈ ಜಾಹಿರಾತಿನಲ್ಲಿ ಪ್ರಿಯಾ ಚೌಧರಿ ಹೆಸರನ್ನು ಬಿಹಾರ ಸಂಯುಕ್ತ ಜನತಾ ದಳದ ಅಧ್ಯಕ್ಷೆ ಮತ್ತು ಬಿಹಾರದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಉಲ್ಲೇಖಿಸಲಾಗಿದೆ.

ಬಿಹಾರದಲ್ಲಿ ಪ್ರಸ್ತುತ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಬಿಜೆಪಿ-ಜೆಡಿಯು-ಎಲ್ಜೆಪಿ ಒಕ್ಕೂಟ ಆಡಳಿತ ನಡೆಸುತ್ತಿದೆ.

ಇದನ್ನೂ ಓದಿ : ಕೊರೋನಾ ವೈರಸ್​ಗೆ ಭಾರತದಲ್ಲಿ ಮೊದಲ ಬಲಿ?; ಕೊಲ್ಕತ್ತಾದಲ್ಲಿ ಅನುಮಾನಾಸ್ಪದ ಸಾವು
First published: