ಮುಂಬೈ ದಾಳಿ ನಂತರ ಕಸಬ್ ನಕಲಿ ಹಿಂದು ವ್ಯಕ್ತಿಯಾಗಿ ಸಾಯಲು ನಡೆದಿತ್ತು ಪ್ಲಾನ್​; ಸತ್ಯ ಬಿಚ್ಚಿಟ್ಟ ಮಾಜಿ ಕಮೀಷನರ್​

ಆರಂಭದಲ್ಲಿ ಕಸಬ್​ ಕಳ್ಳತನ ಮಾಡಲು ಲಷ್ಕರ್​-ಎ-ತೊಯ್ಬಾ ಸೇರ್ಪಡೆ ಆಗಿದ್ದನಂತೆ! 'ಲೆಟ್​ ಮಿ ಸೇ ಇಟ್​ ನವ್’​ ಪುಸ್ತಕದಲ್ಲಿ ಪೊಲೀಸ್​ ಕಮಿಷನರ್​ ರಾಕೇಶ್​ ಮರಿಯಾ ಈ ವಿಚಾರಗಳನ್ನು ಬರೆದುಕೊಂಡಿದ್ದಾರೆ.

ಕಸಬ್

ಕಸಬ್

  • Share this:
ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ 2008ರ ನವೆಂಬರ್​​ 28ರಂದು ಉಗ್ರ ದಾಳಿ ನಡೆದಿತ್ತು. ಈ ಕರಾಳ ಘಟನೆ ನಡೆದು 11 ವರ್ಷ ಕಳೆದಿವೆ. ಈ ದಾಳಿಯಲ್ಲಿ ಭಾಗಿಯಾಗಿದ್ದ 9 ಉಗ್ರರರನ್ನು ಹತ್ಯೆ ಮಾಡಿದ್ದರೆ, ಪ್ರಮುಖ ಉಗ್ರ ಅಜ್ಮಲ್​ ಅಮಿರ್​ ಕಸಬ್​ನನ್ನು ಬಂಧಿಸಿ ಗಲ್ಲಿಗೇರಿಸಲಾಗಿತ್ತು. ಈ ಘಟನೆ ಬಗ್ಗೆ ಮುಂಬೈ ಮಾಜಿ ಪೊಲೀಸ್​ ಕಮಿಷನರ್​ ರಾಕೇಶ್​ ಮರಿಯಾ ಅಚ್ಚರಿಯ ವಿಚಾರ ಬಿಚ್ಚಿಟ್ಟಿದ್ದಾರೆ.

‘ಲೆಟ್​ ಮಿ ಸೇ ಇಟ್​ ನಾವ್’​ ಪುಸ್ತಕದಲ್ಲಿ ರಾಕೇಶ್​ ಮರಿಯಾ ಹಲವು ವಿಚಾರಗಳನ್ನು ಬರೆದುಕೊಂಡಿದ್ದಾರೆ. “2008ರ ಉಗ್ರರ ದಾಳಿಯನ್ನು ಹಿಂದೂಗಳು ನಡೆಸಿದ ಕೃತ್ಯ ಎಂದು ಬಣ್ಣಿಸುವ ಕೆಲಸ ನಡೆದಿತ್ತು. ಸಾಮಾನ್ಯವಾಗಿ ಹಿಂದುಗಳು ಕೈಗೆ ಕೆಂಪು ದಾರ ಕಟ್ಟಿಕೊಳ್ಳುತ್ತಾರೆ. ಇದೇ ಕಾರಣಕ್ಕೆ ಕಸಬ್​ ಕೈಯಲ್ಲಿ ಕೆಂಪು ದಾರವಿತ್ತು. ಇದನ್ನು ನೋಡಿ ಆತ ಹಿಂದು ಎಂದು ಜನರು ಅಂದುಕೊಳ್ಳುತ್ತಾರೆ ಎನ್ನುವುದು ಉಗ್ರ ಸಂಘಟನೆಯ ಲೆಕ್ಕಾಚಾರವಾಗಿತ್ತು. ಅದೃಷ್ಟವಶಾತ್​ ಆ ರೀತಿ ಆಗಿಲ್ಲ,” ಎಂದು ಮರಿಯಾ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

“ದಾಳಿಯಲ್ಲಿ ಹತ್ಯೆಯಾದ ಉಗ್ರರಿಗೆ ಹೈದರಾಬಾದ್​​ನ ಅರುಣೋದಯ ಕಾಲೆಜ್​ನ ನಕಲಿ ಐಡಿ ಕಾರ್ಡ್​ ನೀಡಲಾಗಿತ್ತು. ಕಸಬ್​ನಿಂದ ವಶಪಡಿಸಿಕೊಂಡ ಐಡಿ ಕಾರ್ಡ್​ನಲ್ಲಿ ಆತ​ ಬೆಂಗಳೂರು ನಿವಾಸಿ ಎಂದಿತ್ತು. ಅಲ್ಲದೆ, ಆತನ ಹೆಸರು ಸಮಿರ್​ ದಿನೇಶ್​ ಚೌಧರಿ ಎಂದು ನಕಲಿ ದಾಖಲೆ ಸೃಷ್ಟಿಸಲಾಗಿತ್ತು. ಇವೆಲ್ಲವೂ ನಕಲಿ ಗುರುತಿನ ಚೀಟಿಗಳಾಗಿದ್ದವು,” ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.ಆರಂಭದಲ್ಲಿ ಕಸಬ್​ ಕಳ್ಳತನ ಮಾಡಲು ಲಷ್ಕರ್​-ಎ-ತೊಯ್ಬಾ ಸಂಘಟನೆಗೆ ಸೇರ್ಪಡೆ ಆಗಿದ್ದನಂತೆ. “ಕಸಬ್​ ಹಾಗೂ ಆತನ ಗೆಳೆಯ ಮುಜಾಫರ್​ ಲಾಲ್​ ಖಾನ್​ ರಾಬರಿ ಮಾಡುವ ಉದ್ದೇಶ ಇಟ್ಟುಕೊಂಡಿದ್ದರು. ಈ ಮೂಲಕ ಶ್ರೀಮಂತನಾಗುವ ಕನಸನ್ನು ಆತ ಕಂಡಿದ್ದ. ಇದಕ್ಕೆ ಎಲ್​ಇಟಿ ವೇದಿಕೆ ಆಗಲಿದೆ ಎಂದುಕೊಂಡಿದ್ದ,” ಎಂದಿದ್ದಾರೆ ಮರಿಯಾ.

ಭಾರತದ ಮುಸ್ಲಿಂಗಳಿಗೆ ನಮಾಜ್​ ಮಾಡಲು ಅವಕಾಶ ನೀಡುವುದಿಲ್ಲ, ಭಾರತದ ಮಸೀದಿಗಳಿಗೆ ಬೀಗ ಹಾಕಿಡಲಾಗುತ್ತದೆ ಎನ್ನುವುದನ್ನು ಕಸಬ್​ ಬಲವಾಗಿ ನಂಬಿದ್ದ ಎಂದಿರುವ ಮರಿಯಾ, “ಕಸಬ್​ ಹಲವಷ್ಟು ತಪ್ಪು ಕಲ್ಪನೆಗಳನ್ನು ಇಟ್ಟುಕೊಂಡಿದ್ದ. ಆದರೆ, ಆತ ಜೈಲಿನಲ್ಲಿದ್ದಾಗ ದಿನಕ್ಕೆ 5 ಬಾರಿ ಆಜಾನ್​​ ಕೇಳುತ್ತಿತ್ತು. ಇದಾದ ನಂತರ ಆತನಿಗೆ ತನ್ನ ಕಲ್ಪನೆಗಳು ತಪ್ಪು ಎನ್ನುವುದು ಗೊತ್ತಾಗಿತ್ತು. ಅಲ್ಲದೆ, ಆತನನ್ನು ಹತ್ತಿರದ ಮಸೀದಿಗೆ ಕರೆದುಕೊಂಡು ಹೋಗಿ ನಮಾಜ್​ ಮಾಡುತ್ತಿರುವವರನ್ನು ತೋರಿಸಲಾಗಿತ್ತು. ಈ ವೇಳೆ ಕಸಬ್​ ದಿಗ್ಭ್ರಮೆ ಗೊಂಡಿದ್ದ,” ಎಂದು ಮರಿಯಾ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

(ವರದಿ: ವಿನಯ ದೇಶಪಾಂಡೆ)
First published: