HOME » NEWS » National-international » KANNADA NEWS HOME MINISTER AMIT SHAH LIKELY TO REPLY IN LOKSABHA SESSION ON DELHI VIOLENCE SCT

ಲೋಕಸಭೆಯಲ್ಲಿ ಇಂದು ದೆಹಲಿ ಹಿಂಸಾಚಾರದ ಚರ್ಚೆ; ವಿಪಕ್ಷಗಳ ಟೀಕೆಗೆ ಉತ್ತರಿಸ್ತಾರಾ ಅಮಿತ್​ ಶಾ?

ದೆಹಲಿ ಹಿಂಸಾಚಾರದ ಕುರಿತು ವಿರೋಧ ಪಕ್ಷಗಳ ಆರೋಪಕ್ಕೆ ಹೋಳಿ ಹಬ್ಬದ ನಂತರ ಅಂದರೆ ಮಾರ್ಚ್ 11 ರಂದು ಲೋಕ ಸಭೆಯಲ್ಲಿ ಮತ್ತು ಮಾರ್ಚ್ 12 ರಂದು ರಾಜ್ಯಸಭೆಯಲ್ಲಿ ಉತ್ತರಿಸಲು ಸಿದ್ಧರಿದ್ದೇವೆ ಎಂದು ಸರ್ಕಾರ ಹೇಳಿತ್ತು.

news18-kannada
Updated:March 11, 2020, 12:25 PM IST
ಲೋಕಸಭೆಯಲ್ಲಿ ಇಂದು ದೆಹಲಿ ಹಿಂಸಾಚಾರದ ಚರ್ಚೆ; ವಿಪಕ್ಷಗಳ ಟೀಕೆಗೆ ಉತ್ತರಿಸ್ತಾರಾ ಅಮಿತ್​ ಶಾ?
ಅಮಿತ್​ ಶಾ
  • Share this:
ನವದೆಹಲಿ (ಮಾ. 11): ಇತ್ತೀಚೆಗೆ ನಡೆದ ದೆಹಲಿ ಗಲಭೆಯ ಕುರಿತು ಬುಧವಾರ ಲೋಕಸಭೆಯಲ್ಲಿ ಚರ್ಚೆ ನಡೆಯಲಿದ್ದು ಗೃಹ ಸಚಿವ ಅಮಿತ್ ಶಾ ಪ್ರತಿಪಕ್ಷಗಳ ಆರೋಪಕ್ಕೆ ಉತ್ತರಿಸಲಿದ್ದಾರೆ.

ಸಂಸತ್ತಿನಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ವಿರೋಧ ಪಕ್ಷಗಳು ಉತ್ತರ ದೆಹಲಿಯಲ್ಲಿ ನಡೆದ ಹಿಂಸಾಚಾರದ ವಿಷಯದ ಕುರಿತು ಪದೇಪದೆ ಗೃಹ ಸಚಿವರನ್ನು ಪ್ರಶ್ನಿಸುತ್ತಲೇ ಬಂದಿದ್ದಾರೆ. 50ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಗಲಭೆಯನ್ನು ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಹೀಗಾಗಿ, ಇದರ ಹೊಣೆ ಹೊತ್ತು ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿದ್ದವು. ಆ ಬಗ್ಗೆ ಇಂದು ಲೋಕಸಭೆಯಲ್ಲಿ ಚರ್ಚೆಯಾಗಲಿದ್ದು, ವಿಪಕ್ಷಗಳ ಟೀಕೆಗಳಿಗೆ ಅಮಿತ್​ ಶಾ ಉತ್ತರಿಸಲಿದ್ದಾರೆ.

ವಿರೋಧ ಪಕ್ಷಗಳ ಆರೋಪಕ್ಕೆ ಹೋಳಿ ಹಬ್ಬದ ನಂತರ ಅಂದರೆ ಮಾರ್ಚ್ 11 ರಂದು ಲೋಕ ಸಭೆಯಲ್ಲಿ ಮತ್ತು ಮಾರ್ಚ್ 12 ರಂದು ರಾಜ್ಯಸಭೆಯಲ್ಲಿ ಉತ್ತರಿಸಲು ಸಿದ್ಧರಿದ್ದೇವೆ ಎಂದು ಸರ್ಕಾರ ಹೇಳಿತ್ತು. ಇಂದು ಲೋಕಸಭೆಯಲ್ಲಿ ದೆಹಲಿ ಹಿಂಸಾಚಾರದ ಬಗ್ಗೆ ಚರ್ಚೆ ನಡೆಯಲಿದ್ದು, ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ಚರ್ಚೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ.

ಇದನ್ನೂ ಓದಿ: ದೆಹಲಿ ಹಿಂಸಾಚಾರ: ಇಲ್ಲಿಯವರೆಗೂ 630 ಮಂದಿ ಬಂಧನ; 123 ವಿರುದ್ಧ ಎಫ್​​​ಐಆರ್​​

ಸಂಸತ್ತಿನಲ್ಲಿ ಅಮಿತ್ ಶಾ ಯಾವ ಸಮಯದಲ್ಲಿ ಉತ್ತರಿಸುತ್ತಾರೆ ಎಂಬುದು ಸದನದ ಕಾರ್ಯಚಟುವಟಿಕೆಗಳ ಅನುಸಾರ ನಿರ್ಧರಿಸಲಾಗುತ್ತದೆ. ಆದರೆ ಸಂಜೆ 5.30ರ ಸುಮಾರಿಗೆ ಉತ್ತರಿಸುವ ನಿರೀಕ್ಷೆಯಿದೆ.

ದೆಹಲಿಯ ಕೆಲ ಭಾಗಗಳಲ್ಲಿ ಇತ್ತೀಚೆಗೆ ನಡೆದ ಗಲಭೆಗಳ ಕುರಿತು ತಕ್ಷಣವೇ ಚರ್ಚೆ ನಡೆಸಬೇಕು ಎಂಬ ಪ್ರತಿಪಕ್ಷಗಳ ಬೇಡಿಕೆಯು ಕಳೆದ ವಾರ ಸಂಸತ್ತಿನಲ್ಲಿ ಕೆಲ ಅಡಚಣೆಗಳನ್ನು ಉಂಟು ಮಾಡಿತ್ತು.

ಸಂಸತ್ತಿನಲ್ಲಿ ನಡೆಯಲಿರುವ ಈ ಚರ್ಚೆಯನ್ನು ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಪ್ರಾರಂಭಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕಳೆದ ವಾರ ಕಾನೂನು ಸುವ್ಯವಸ್ಥೆ ಕಾಪಾಡುವ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಗಲಭೆಕೋರರು ಮತ್ತು ಪೊಲೀಸರ ನಡುವೆ ಯಾವುದೋ ಸಂಬಂಧವಿರಬೇಕು. ಈ ಗಲಭೆಯಲ್ಲಿ ಹಲವಾರು ಜನರು ಬಲಿಯಾಗಿದ್ದಾರೆ. ಹಾಗಾಗಿ, ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಚೌಧರಿ ಒತ್ತಾಯಿಸಿದ್ದರು.ಇದನ್ನೂ ಓದಿ: ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು; ಮತ್ತೆ 5 ಕಾಂಗ್ರೆಸ್ ಶಾಸಕರು ಬೆಂಗಳೂರಿನ ರೆಸಾರ್ಟ್​ಗೆ ಶಿಫ್ಟ್​

ವಿರೋಧ ಪಕ್ಷಗಳ ಆರೋಪಕ್ಕೆ ಮಾರ್ಚ್ 11 ರಂದು ಲೋಕ ಸಭೆಯಲ್ಲಿ ಮತ್ತು ಮಾರ್ಚ್ 12 ರಂದು ರಾಜ್ಯಸಭೆಯಲ್ಲಿ ಉತ್ತರಿಸಲು ಸಿದ್ಧರಿದ್ದೇವೆ ಎಂದು ಸರ್ಕಾರ ಹೇಳಿತ್ತು.
ಇನ್ನೂ ಈ ಚರ್ಚೆ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ತನ್ನ ಸರ್ಕಾರವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಸಮಯದಲ್ಲಿ ಈ ಚರ್ಚೆ ನಡೆಯುವ ಸಾಧ್ಯತೆ ಇದೆ.

ಕಾಂಗ್ರೆಸ್​ನ ಹಿರಿಯ ಮುಖಂಡ ಜ್ಯೋತಿರಾಧಿತ್ಯ ಸಿಂಧಿಯಾ ಪಕ್ಷಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ 22 ಕಾಂಗ್ರೆಸ್ ಶಾಸಕರು ಸಹ ತಮ್ಮ ರಾಜೀನಾಮೆಯನ್ನು ನೀಡಿದ್ದಾರೆ. ಸದ್ಯ ಮಧ್ಯಪ್ರದೇಶದ ಕಮಲನಾಥ್ ಸರ್ಕಾರ ಅಳಿವಿನಂಚಿನಲ್ಲಿದೆ.

ಕಳೆದ ತಿಂಗಳು ಈಶಾನ್ಯ ದೆಹಲಿಯಲ್ಲಿ ಸಿಎಎ ಮತ್ತು ಎನ್​ಆರ್​ಸಿ ವಿರುದ್ಧ ನಡೆದ ಪ್ರತಿಭಟನೆ ಕೋಮುಗಲಭೆಯ ರೂಪ ತಳೆದಿತ್ತು. ಎರಡು ಸಮುದಾಯಗಳ ನಡುವಿನ ಬೀಕರ ಕೋಮು ಗಲಭೆಯು ಅಪಾರ ಪ್ರಾಣ ಹಾನಿಯನ್ನುಂಟು ಮಾಡಿತ್ತು. ಅದೆಷ್ಟೋ ಜನರ ಬದುಕನ್ನು ದೆಹಲಿ ಗಲಭೆ ಕಸಿದುಕೊಂಡಿತ್ತು. ಈ ಘಟನೆಯಲ್ಲಿ ಪೊಲೀಸರು, ಸಾರ್ವಜನಿಕರು ಸೇರಿ 50ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು.

(ವರದಿ: ಸಂಧ್ಯಾ ಎಂ)
Youtube Video
First published: March 11, 2020, 12:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories