ಬಿಹಾರ (ಜು. 10): ಬಿಹಾರದ ಪಶ್ಚಿಮ ಚಂಪರನ್ ಜಿಲ್ಲೆಯಲ್ಲಿ ಇಂದು ಮುಂಜಾನೆ ನಡೆದ ಎನ್ಕೌಂಟರ್ನಲ್ಲಿ ನಾಲ್ವರು ನಕ್ಸಲರು ಸಾವನ್ನಪ್ಪಿದ್ದಾರೆ. ಸಶಸ್ತ್ರ ಸೀಮಾ ಬಲ (ಎಸ್ಎಸ್ಬಿ) ಮತ್ತು ಸ್ಪೆಷಲ್ ಟಾಸ್ಕ್ ಫೋರ್ಸ್ (ಎಸ್ಟಿಎಫ್) ಸಿಬ್ಬಂದಿ ಇಂದು ಬೆಳಗ್ಗೆ ಎನ್ಕೌಂಟರ್ ಕಾರ್ಯಾಚರಣೆ ನಡೆಸಿದ್ದಾರೆ.
ಈ ಬಗ್ಗೆ ಎಸ್ಎಸ್ಬಿಯ ಐಜಿ ಸಂಜಯ್ ಕುಮಾರ್ ಮಾಹಿತಿ ನೀಡಿದ್ದು, ಸಾವನ್ನಪ್ಪಿದ ನಕ್ಸಲರಿಂದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಅವರ ಬಳಿ ಎಕೆ-56, ಸೆಲ್ಫ್ ಲೋಡಿಂಗ್ ರೈಫಲ್ಗಳಿದ್ದವು. ವಾಲ್ಮೀಕಿನಗರದ ಕಾಡಿನಲ್ಲಿ ಎನ್ಕೌಂಟರ್ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
Four Naxals have been killed in an encounter with a joint team of Sashastra Seema Bal (SSB) and Special Task Force (STF) in Bagaha area of Pashchim Champaran district, Bihar. Arms & ammunition recovered: Lokaria Police, Bagaha