Sushma ChakreSushma Chakre
|
news18-kannada Updated:February 20, 2020, 8:35 AM IST
ಸಾಂದರ್ಭಿಕ ಚಿತ್ರ
ಲಕ್ನೋ (ಫೆ. 20): ಮಹಿಳೆಯೊಬ್ಬರನ್ನು ಹೋಟೆಲ್ ರೂಮಿನಲ್ಲಿಟ್ಟು 1 ತಿಂಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿದ್ದ ಉತ್ತರ ಪ್ರದೇಶದ ಬಿಜೆಪಿ ಶಾಸಕ ರವೀಂದ್ರನಾಥ್ ತ್ರಿಪಾಠಿ ಮತ್ತು ಇತರೆ 6 ಜನರ ಮೇಲೆ ಕೇಸು ದಾಖಲಿಸಿಕೊಳ್ಳಲಾಗಿದೆ.
ಉತ್ತರ ಪ್ರದೇಶದ ಭದೋಹಿಯಲ್ಲಿ 2017ರಲ್ಲಿ ನಡೆದಿದ್ದ ಈ ಘಟನೆಯ ಬಗ್ಗೆ ಕಳೆದ ವಾರ ದೂರು ದಾಖಲಾಗಿತ್ತು. ಭದೋಹಿಯ
ಬಿಜೆಪಿ ಶಾಸಕ ರವೀಂದ್ರನಾಥ್ ತ್ರಿಪಾಠಿ ಮತ್ತು 6 ಜನರ ವಿರುದ್ಧ 40 ವರ್ಷದ ಮಹಿಳೆಯೊಬ್ಬರು ಅತ್ಯಾಚಾರದ ಆರೋಪ ಮಾಡಿದ್ದರು. ಸಂತ್ರಸ್ತ ಮಹಿಳೆಯ ಗಂಡ 2007ರಲ್ಲಿ ಸಾವನ್ನಪ್ಪಿದ್ದರು. ಅದಾದ ನಂತರ 2014ರಲ್ಲಿ ಆಕೆ ಶಾಸಕ ರವೀಂದ್ರನಾಥ್ ತ್ರಿಪಾಠಿ ಅವರ ಅಣ್ಣನ ಮಗನನ್ನು ಭೇಟಿಯಾಗಿದ್ದರು.
ಈ ವೇಳೆ ತನ್ನ ಮೇಲೆ ಬಿಜೆಪಿ ಶಾಸಕ ಮತ್ತು 6 ಜನ ಸೇರಿ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾರೆ. ಹಲವು ವರ್ಷಗಳ ಕಾಲ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ. ಈ ವಿಷಯವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದರಿಂದ ಸುಮ್ಮನಾಗಿದ್ದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಸಂತ್ರಸ್ತೆ ತಿಳಿಸಿದ್ದರು.
ಇದನ್ನೂ ಓದಿ: ಗಂಡನ ಕನಸು ನನಸಾಗಿಸಲು ಸೇನೆ ಸೇರಿದ ಹೆಂಡತಿ; ಇದು ಹುತಾತ್ಮ ಯೋಧನ ಪತ್ನಿಯ ಮನಕಲಕುವ ಕತೆ
ತಮ್ಮ ಮೇಲಿನ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ರವೀಂದ್ರನಾಥ್ ತ್ರಿಪಾಠಿ, ಆ ಮಹಿಳೆ ಯಾರೆಂದು ನನಗೆ ಗೊತ್ತಿಲ್ಲ. ಈ ಪ್ರಕರಣದ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ವಿನಾಕಾರಣ ನನ್ನ ವರ್ಚಸ್ಸಿಗೆ ಧಕ್ಕೆಯುಂಟು ಮಾಡಲು ಈ ಆರೋಪ ಮಾಡಲಾಗಿದೆ. ನನ್ನ ಮೇಲೆ ದೂರು ಬಂದಿರುವುದರಿಂದ ತನಿಖೆಗೆ ಸಹಕರಿಸುತ್ತೇನೆ. ಒಂದುವೇಳೆ ಈ ಆರೋಪ ನಿಜವೆಂದು ತನಿಖೆಯಲ್ಲಿ ಸಾಬೀತಾದರೆ ನಾನು ಮತ್ತು ನಮ್ಮ ಕುಟುಂಬದವರು ನೇಣಿಗೇರಲು ಸಿದ್ಧರಿದ್ದೇವೆ ಎಂದಿದ್ದಾರೆ.
ನಾನು ನಮ್ಮ ಕ್ಷೇತ್ರದ ಭೂ ಮಾಫಿಯಾ ಮತ್ತು ಕ್ರಿಮಿನಲ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆದೇಶ ನೀಡಿದ್ದೆ. ಗ್ಯಾನ್ಪುರದ ಶಾಸಕ ವಿಜಯ್ ಮಿಶ್ರಾ ಮೇಲೂ 78 ಕ್ರಿಮಿನಲ್ ಕೇಸುಗಳಿದ್ದವು. ಹೀಗಾಗಿ, ಆ ದ್ವೇಷವನ್ನು ತೀರಿಸಿಕೊಳ್ಳಲು ಆತನ ಕಡೆಯವರೇ ನಮ್ಮ ಮೇಲೆ ಈ ರೀತಿ ದೂರು ಕೊಡಿಸಿದ್ದಾರೆ. 2017ರ ಚುನಾವಣೆ ಸಮಯದಲ್ಲೇ ಆ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದ್ದರೆ ಇಷ್ಟು ದಿನ ಆಕೆ ಯಾಕೆ ದೂರು ನೀಡಲಿಲ್ಲ? ಇದೆಲ್ಲವೂ ನನ್ನನ್ನು ರಾಜಕೀಯವಾಗಿ ಮುಗಿಸುವ ಸಂಚು ಎಂದು ತ್ರಿಪಾಠಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಶಾಸಕನ ಮೇಲೆ ಅತ್ಯಾಚಾರದ ಆರೋಪ; 1 ತಿಂಗಳ ನರಕಯಾತನೆಯ ಕತೆ ಬಿಚ್ಚಿಟ್ಟ ಸಂತ್ರಸ್ತೆಬಿಜೆಪಿ ಶಾಸಕ ತ್ರಿಪಾಠಿ ಅವರ ಅಣ್ಣನ ಮಗ 2017ರಲ್ಲಿ 1 ತಿಂಗಳ ಕಾಲ ಆಕೆಯನ್ನು ಭದೋಹಿಯ ಖಾಸಗಿ ಹೋಟೆಲ್ನ ರೂಮಿನಲ್ಲಿ ಇರಿಸಿದ್ದ. ಆಗ
ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯುತ್ತಿತ್ತು. ಆ 1 ತಿಂಗಳ ಕಾಲ ಪ್ರತಿದಿನವೂ ಶಾಸಕ ಮತ್ತು ಆತನ ಕುಟುಂಬದ 6 ಜನರು ಆಕೆಯ ಮೇಲೆ ಅತ್ಯಾಚಾರ ನಡೆಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಈ ಪ್ರಕರಣವನ್ನು ಹೆಚ್ಚುವರಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ಗೆ ಹಸ್ತಾಂತರಿಸಲಾಗಿತ್ತು. ಬಿಜೆಪಿ ಶಾಸಕನ ಹೆಸರೂ ಅತ್ಯಾಚಾರ ಪ್ರಕರಣದಲ್ಲಿ ಕೇಳಿಬಂದಿದ್ದರಿಂದ ಈ ಪ್ರಕರಣ ಭಾರೀ ಸಂಚಲನ ಸೃಷ್ಟಿಸಿತ್ತು. ಹೀಗಾಗಿ, ಈ ಕೇಸನ್ನು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ವಹಿಸಲಾಗಿತ್ತು.
First published:
February 20, 2020, 8:35 AM IST