ಫೇಸ್​ಬುಕ್​ ಭಾರತದ ನಿಯಮಾವಳಿಗಳನ್ನು ಪಾಲಿಸುತ್ತಿಲ್ಲ; ಸುಪ್ರೀಂಕೋರ್ಟ್​ಗೆ ಅಫಿಡವಿಟ್ ಸಲ್ಲಿಸಿದ ತಮಿಳುನಾಡು

ಅಪರಿಚಿತರ ಜೊತೆ ಸಂಪರ್ಕ ಹೊಂದಲು ಅನುವು ಮಾಡಿಕೊಡುತ್ತಿರುವ ಸಾಮಾಜಿಕ ಜಾಲತಾಣಗಳು ಅದರ ದುರ್ಬಳಕೆ ಆಗದಂತೆ ಯಾವುದೇ ಕ್ರಮಗಳನ್ನೂ ಕೈಗೊಂಡಿಲ್ಲ. ಈ ವಿಷಯದಲ್ಲಿ ಭಾರತೀಯ ಕಾನೂನು ಪ್ರಕಾರವೂ ಫೇಸ್​ಬುಕ್ ಮತ್ತು ವಾಟ್ಸಾಪ್​ ಸಂಸ್ಥೆಗಳು ನಡೆದುಕೊಳ್ಳುತ್ತಿಲ್ಲ ಎಂದು ತಮಿಳುನಾಡು ಸರ್ಕಾರ ಆರೋಪಿಸಿದೆ.

Sushma Chakre | news18-kannada
Updated:September 13, 2019, 9:53 AM IST
ಫೇಸ್​ಬುಕ್​ ಭಾರತದ ನಿಯಮಾವಳಿಗಳನ್ನು ಪಾಲಿಸುತ್ತಿಲ್ಲ; ಸುಪ್ರೀಂಕೋರ್ಟ್​ಗೆ ಅಫಿಡವಿಟ್ ಸಲ್ಲಿಸಿದ ತಮಿಳುನಾಡು
ಸಾಂದರ್ಭಿಕ ಚಿತ್ರ
Sushma Chakre | news18-kannada
Updated: September 13, 2019, 9:53 AM IST
ನವದೆಹಲಿ (ಸೆ. 12): ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್, ವಾಟ್ಸಾಪ್​ಗಳು ಭಾರತೀಯ ಕಾನೂನಿನ ನಿಯಮಾವಳಿಗಳ ಅನುಸಾರ ನಡೆದುಕೊಳ್ಳುತ್ತಿಲ್ಲ. ಸೋಷಿಯಲ್ ಮೀಡಿಯಾವನ್ನು ಬಳಸಿಕೊಂಡು ನಡೆಯುವ ಅಪರಾಧ ಚಟುವಟಿಕೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಈ ಎರಡು ಕಂಪನಿಗಳು ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನಾಗಲಿ ಆ ಅಪರಾಧಗಳ ಮೂಲವನ್ನು ಕಂಡುಹಿಡಿಯುವ ಪ್ರಯತ್ನವನ್ನಾಗಲಿ ಮಾಡುತ್ತಿಲ್ಲ ಎಂದು ಆರೋಪಿಸಿರುವ ತಮಿಳುನಾಡು ಸರ್ಕಾರ ಈ ಕುರಿತು ಸುಪ್ರೀಂಕೋರ್ಟ್​ನಲ್ಲಿ ಅಫಿಡವಿಟ್ ಸಲ್ಲಿಸಿದೆ.

ಫೇಸ್​ಬುಕ್ ಮತ್ತು ವಾಟ್ಸಾಪ್​ಗಳು ತನ್ನ ಮೂಲಕ ನಡೆಯುತ್ತಿರುವ ಅಪರಾಧಗಳನ್ನು ತಡೆಗಟ್ಟುವಲ್ಲಿ ಸಂಪೂರ್ಣ ವಿಫಲವಾಗಿವೆ. ಕಾನೂನು ಜಾರಿ ಸಂಸ್ಥೆ ಸಾಮಾಜಿಕ ಜಾಲತಾಣಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದು, ಸೋಷಿಯಲ್ ಮೀಡಿಯಾ ಬಳಸಿಕೊಂಡು ಆಗುವ ಅಪರಾಧಗಳನ್ನು ಪತ್ತೆಹಚ್ಚುವಲ್ಲಿ ತನಗೆ ಸಹಕರಿಸಬೇಕೆಂದು ಮನವಿ ಮಾಡಿತ್ತು. ಆದರೆ, ಅದನ್ನು ಉಲ್ಲಂಘಿಸಿರುವ ಈ ಎರಡು ಕಂಪನಿಗಳು ರಾಜ್ಯದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ನಡೆದ ಬಹುಮುಖ್ಯ ಅಪರಾಧಗಳಲ್ಲಿಯೂ ತಪ್ಪಿತಸ್ಥರನ್ನು ಪತ್ತೆಹಚ್ಚಲು ಯಾವುದೇ ಸಹಕಾರ ನೀಡಿಲ್ಲ. ಹಾಗೇ, ಆ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನೂ ಕೈಗೊಂಡಿಲ್ಲ ಎಂದು ತಮಿಳುನಾಡು ಸರ್ಕಾರ ಆರೋಪಿಸಿದೆ.

ಚೆನ್ನೈನಲ್ಲಿ ಯುವತಿಯನ್ನು ಬಲಿ ಪಡೆದ ಎಐಎಡಿಎಂಕೆ ಬ್ಯಾನರ್​!

ಕೆಲವು ಅಪರಾಧಗಳಿಗೆ ಸಂಬಂಧಪಟ್ಟಂತೆ ಮಾಹಿತಿ ಕೇಳಿದರೆ ಅದಕ್ಕೆ ಸೂಕ್ತ ದಾಖಲೆಗಳನ್ನು ನೀಡುವುದರ ಬದಲು ಸಂಬಂಧಪಟ್ಟ ಅಧಿಕಾರಿಗಳಿಂದ ಲಿಖಿತ ಪತ್ರ ಮತ್ತು ಕಾನೂನಿನ ಒಪ್ಪಿಗೆ ಪತ್ರ ತರಬೇಕೆಂದು ಕೇಳಿದ್ದವು. ಭಾರತೀಯ ಮಣ್ಣಿನಲ್ಲೇ ಕೆಲಸ ನಿರ್ವಹಿಸುತ್ತಿರುವ ವಾಟ್ಸಾಪ್, ಫೇಸ್​ಬುಕ್ ಕಂಪನಿಗಳು ನಾವು ಕೇಳಿದ ಎಲ್ಲ ಅಪರಾಧ ಪ್ರಕರಣಗಳಲ್ಲೂ ಸಂಪೂರ್ಣ ಮಾಹಿತಿ ನೀಡಲು ವಿಫಲವಾಗಿವೆ ಎಂದು ಅಫಿಡವಿಟ್​ನಲ್ಲಿ ನಮೂದಿಸಲಾಗಿದೆ.

ಸುಪ್ರೀಂಕೋರ್ಟ್​ನಲ್ಲಿ ಈ ಬಗ್ಗೆ ಸರ್ಕಾರದ ಅಡಿಷನಲ್ ಜನರಲ್ ಬಾಲಾಜಿ ಶ್ರೀನಿವಾಸನ್ ಅಫಿಡವಿಟ್ ಸಲ್ಲಿಸಿದ್ದಾರೆ. ಈ ಅಫಿಡವಿಟ್​ನಲ್ಲಿ ಮುಖ್ಯವಾಗಿ 34 ಕ್ರಿಮಿನಲ್ ಕೇಸ್​ಗಳನ್ನು ಉಲ್ಲೇಖಿಸಲಾಗಿದ್ದು, ಈ ಕೇಸುಗಳಿಗೆ ಸಂಬಂಧಪಟ್ಟ ಪುರಾವೆಗಳು ಮತ್ತು ದಾಖಲೆಗಳನ್ನು ಒದಗಿಸುವಲ್ಲಿ ವಾಟ್ಸಾಪ್​ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

ಪ್ರೇಯಸಿ ಮೇಲಿನ ಕೋಪಕ್ಕೆ ಅಮಾಯಕನನ್ನು ಕೊಲೆ ಮಾಡಿದರು; 24 ಗಂಟೆಯಲ್ಲಿ ಮೂವರನ್ನು ಬಂಧಿಸಿದ ಪೊಲೀಸರು

ತಮಿಳುನಾಡಿನ ಪೊಲ್ಲಾಚಿಯ ಯುವತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಮಾಡಿಕೊಂಡಿದ್ದ ನಾಲ್ವರ ಗುಂಪೊಂದು ಆಕೆಗೆ ಫೋನ್ ಮಾಡಿ ಬಸ್ ನಿಲ್ದಾಣದ ಬಳಿ ಬರುವಂತೆ ಹೇಳಿದ್ದರು. ನಂತರ ಆಕೆಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಕಾರಿನಲ್ಲೇ ಅತ್ಯಾಚಾರವೆಸಗಿ ಅಶ್ಲೀಲ ವಿಡಿಯೋ ಮಾಡಿಕೊಂಡಿದ್ದರು. ನಂತರ ಆಕೆಗೆ ಕರೆ ಮಾಡಿ ಹಣ ಕೊಡದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡುತ್ತಿದ್ದರು. ಇದೇ ರೀತಿ ಇನ್ನೂ ನಾಲ್ಕೈದು ಯುವತಿಯರನ್ನು ಬಳಸಿಕೊಂಡು ಬ್ಲಾಕ್​ಮೇಲ್ ಮಾಡುತ್ತಿದ್ದ ವಿಷಯ ಬೆಳಕಿಗೆ ಬಂದಿತ್ತು. ಈ ಪೊಲ್ಲಾಚಿ ಸೆಕ್ಸ್​ ಹಗರಣ ಸೇರಿದಂತೆ ಚೈಲ್ಡ್​ ಪೋನೋಗ್ರಫಿ, ಲೈಂಗಿಕ ಕಿರುಕುಳ ಮುಂತಾದ ಪ್ರಕರಣಗಳನ್ನು ಅಫಿಡವಿಟ್​ನಲ್ಲಿ ಉಲ್ಲೇಖಿಸಲಾಗಿದೆ.
Loading...

ಪ್ರೇಯಸಿಯ ಶವದೊಂದಿಗೆ 24 ಗಂಟೆ ಕಾರಿನಲ್ಲಿ ಸುತ್ತಾಡಿದ ಯುವಕ ಮಾಡಿದ್ದೇನು ಗೊತ್ತಾ?

ಈ ರೀತಿ ಅಪರಿಚಿತರ ಜೊತೆ ಸಂಪರ್ಕ ಹೊಂದಲು ಅನುವು ಮಾಡಿಕೊಡುತ್ತಿರುವ ಸಾಮಾಜಿಕ ಜಾಲತಾಣಗಳು ಅದರ ದುರ್ಬಳಕೆ ಆಗದಂತೆ ಯಾವುದೇ ಕ್ರಮಗಳನ್ನೂ ಕೈಗೊಂಡಿಲ್ಲ. ಈ ವಿಷಯದಲ್ಲಿ ಭಾರತೀಯ ಕಾನೂನು ಪ್ರಕಾರವೂ ಫೇಸ್​ಬುಕ್ ಮತ್ತು ವಾಟ್ಸಾಪ್​ ಸಂಸ್ಥೆಗಳು ನಡೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿರುವ ತಮಿಳುನಾಡು ಸರ್ಕಾರ ಈ ಜಾಲತಾಣಗಳಲ್ಲಿ ಖಾತೆ ತೆರೆಯುವವರು ಆಧಾರ್ ಕಾರ್ಡ್​ನೊಂದಿಗೆ ತಮ್ಮ ಖಾತೆಯನ್ನು ಲಿಂಕ್ ಮಾಡುವಂತಹ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಆದರೆ, ಈ ವಿಷಯದಲ್ಲಿ ಫೇಸ್​ಬುಕ್ ನ್ಯಾಯಾಲಯವನ್ನು ದಾರಿ ತಪ್ಪಿಸುತ್ತಿದೆ ಎಂದು ಆಗ್ರಹಿಸಿದೆ. ಈ ಬಗ್ಗೆ ನಾಳೆ ಸುಪ್ರೀಂಕೋರ್ಟ್​ ಮತ್ತೊಮ್ಮೆ ವಿಚಾರಣೆ ನಡೆಸಲಿದೆ.

(ವರದಿ: ಉತ್ಕರ್ಷ್​ ಆನಂದ್)

First published:September 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...