ಬೆಂಕಿಯೊಂದಿಗೆ ಆಟವಾಡಬೇಡಿ; ಎನ್​ಅರ್​ಸಿ ವಿರೋಧಿ ಪ್ರತಿಭಟನೆಯಲ್ಲಿ ಬಿಜೆಪಿಗೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಕೆ

ಆಗಸ್ಟ್​ 31ರಂದು ಆಸ್ಸಾಂನಲ್ಲಿ ಅಂತಿಮ ಎನ್​ಆರ್​ಸಿ ಪಟ್ಟಿ ಬಿಡುಗಡೆಯಾಗಿತ್ತು. ಇದರಿಂದ ಸುಮಾರು 19 ಲಕ್ಷ ಜನರು ಹೊರಗೆ ಹೋಗಬೇಕಾಯಿತು. ಎನ್​ಆರ್​ಸಿಗೆ ಸೇರಿಸುವಂತೆ ಒಟ್ಟು 3,30,,27,661 ಜನರು ಅರ್ಜಿ ಸಲ್ಲಿಸಿದ್ದರು. ಇವರಲ್ಲಿ 3,11,21,004 ಜನರ ಹೆಸರು ದಾಖಲೆಯಲ್ಲಿ ಸೇರಿಕೊಂಡಿತು.

HR Ramesh | news18-kannada
Updated:September 13, 2019, 9:23 AM IST
ಬೆಂಕಿಯೊಂದಿಗೆ ಆಟವಾಡಬೇಡಿ; ಎನ್​ಅರ್​ಸಿ ವಿರೋಧಿ ಪ್ರತಿಭಟನೆಯಲ್ಲಿ ಬಿಜೆಪಿಗೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಕೆ
ಎನ್​ಆರ್​​ಸಿ ವಿರೋಧಿ ರ್ಯಾಲಿಯಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ
HR Ramesh | news18-kannada
Updated: September 13, 2019, 9:23 AM IST
ಕೋಲ್ಕತ್ತ: ದೇಶಾದ್ಯಂತ ಬಿಜೆಪಿ ಎನ್​ಆರ್​ಸಿ (ರಾಷ್ಟ್ರೀಯ ನಾಗರಿಕ ನೋಂದಣಿ) ಹೇರಲು ಪ್ರಯತ್ನಿಸುತ್ತಿರುವುದರ ವಿರುದ್ಧ ಗುರುವಾರ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬೃಹತ್​ ರ್ಯಾಲಿ ನಡೆಸಿದರು. ಎನ್​ಆರ್​ಸಿ ಹೆಸರಿನಲ್ಲಿ ಬೆಂಕಿಯೊಂದಿಗೆ ಸರಸವಾಡುವುದು ಬೇಡ ಎಂದು ಇದೇ ವೇಳೆ ಬ್ಯಾನರ್ಜಿ ಬಿಜೆಪಿ ಎಚ್ಚರಿಕೆ ನೀಡಿದರು. 

ಎನ್​ಆರ್​ಸಿ ಹೆಸರಿನಲ್ಲಿ ಬಿಜೆಪಿ ಬಂಗಾಳದಲ್ಲಿ ಒಬ್ಬರೇ ಒಬ್ಬರನ್ನು ಮುಟ್ಟಲು ನಾನು ಬಿಡುವುದಿಲ್ಲ. ನಾನು ಬದುಕಿರುವವರೆಗೂ ಬಂಗಾಳದಲ್ಲಿ ಎನ್​ಆರ್​ಸಿ ಹೇರಿಕೆಗೆ ಅವಕಾಶ ನೀಡುವುದಿಲ್ಲ. ಒಂದು ವೇಳೆ ನಾನು ಸತ್ತ ಬಳಿಕವೂ ನನ್ನ ಯುವ ನಾಯಕರು ಧರ್ಮದ ಹೆಸರಿನಲ್ಲಿ ಒಡೆಯುವ ಪಿತೂರಿ ಮಾಡುತ್ತಿರುವವರ ವಿರುದ್ಧ ಹೋರಾಟ ಮಾಡಲಿದ್ದಾರೆ ಎಂದು ಬ್ಯಾನರ್ಜಿ ಹೇಳಿದರು.

ಕೋಮು ವಾದದ ಹೆಸರಿನಲ್ಲಿ ಬೆನ್ನುಮೂಳೆ ಮುರಿದು, ಬಂಗಾಳ ಜನರ ಒಗ್ಗಟ್ಟನ್ನು ಒಡೆಯಲು ಪ್ರಯತ್ನಿಸಲಾಗುತ್ತಿದೆ. ನಮ್ಮ ಅಸ್ತಿತ್ವಕ್ಕಾಗಿ ನಾವು ಎನ್​ಆರ್​ಸಿ ವಿರುದ್ಧ ಯುದ್ಧ ಮಾಡಬೇಕಿದೆ. ನಮ್ಮ ಅಸ್ತಿತ್ವಕ್ಕಾಗಿ ನಾವೇ ಹೋರಾಡಬೇಕೇ ಹೊರತು ಇನ್ಯಾರೋ ಬರುವುದಿಲ್ಲ. ಈ ಹೋರಾಟ ನಮಗಾಗಿ, ಮತ್ತು ನಾವು ಹೋರಾಡಲೇಬೇಕು ಎಂದು ಬ್ಯಾನರ್ಜಿ ಕರೆ ನೀಡಿದರು.

ನಾಗರಿಕ ನೋಂದಣಿ ವಿರುದ್ಧ ಕೋಲ್ಕತ್ತ ರಾಜ್ಯದ ವಿವಿಧ ಭಾಗಗಳಲ್ಲಿ ಟಿಎಂಸಿ ಕಳೆದ ಸೆ.7 ಮತ್ತು 8 ರಂದು ರ್ಯಾಲಿಗಳನ್ನು ನಡೆಸಿತ್ತು.

ಇದನ್ನು ಓದಿ: ಇದು ಕೇವಲ ಟ್ರೈಲರ್​ ಅಷ್ಟೇ, ಸಿನಿಮಾ ಇನ್ನೂ ಬಾಕಿಯಿದೆ; ನೂರು ದಿನದ ಆಡಳಿತದ ಬಗ್ಗೆ ಪ್ರಧಾನಿ ಮೋದಿ ಬಣ್ಣನೆ

ಆಗಸ್ಟ್​ 31ರಂದು ಆಸ್ಸಾಂನಲ್ಲಿ ಅಂತಿಮ ಎನ್​ಆರ್​ಸಿ ಪಟ್ಟಿ ಬಿಡುಗಡೆಯಾಗಿತ್ತು. ಇದರಿಂದ ಸುಮಾರು 19 ಲಕ್ಷ ಜನರು ಹೊರಗೆ ಹೋಗಬೇಕಾಯಿತು. ಎನ್​ಆರ್​ಸಿಗೆ ಸೇರಿಸುವಂತೆ ಒಟ್ಟು 3,30,,27,661 ಜನರು ಅರ್ಜಿ ಸಲ್ಲಿಸಿದ್ದರು. ಇವರಲ್ಲಿ 3,11,21,004 ಜನರ ಹೆಸರು ದಾಖಲೆಯಲ್ಲಿ ಸೇರಿಕೊಂಡಿತು.

Loading...

First published:September 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...