ಬಿಜೆಪಿ - ತೃಣಮೂಲ ಕಾಂಗ್ರೆಸ್ ನಡುವೆ ಗಲಾಟೆ; ಪಶ್ಚಿಮ ಬಂಗಾಳದಲ್ಲಿ 7 ಮನೆಗಳು ಸುಟ್ಟು ಭಸ್ಮ

ಫೆ. 14ರಂದು ತೃಣಮೂಲ ಕಾಂಗ್ರೆಸ್​ನ ಮಲ್ಲಿಕ್ ಹಾತ್​ ಬೂತ್ ಅಧ್ಯಕ್ಷ ಬೊಂಬೋಲ್ ಘೋಷ್​ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೊಂಬೋಲ್ ಘೋಷ್ ಕೊನೆಯುಸಿರೆಳೆದಿದ್ದರು.

Sushma Chakre | news18-kannada
Updated:February 24, 2020, 1:19 PM IST
ಬಿಜೆಪಿ - ತೃಣಮೂಲ ಕಾಂಗ್ರೆಸ್ ನಡುವೆ ಗಲಾಟೆ; ಪಶ್ಚಿಮ ಬಂಗಾಳದಲ್ಲಿ 7 ಮನೆಗಳು ಸುಟ್ಟು ಭಸ್ಮ
ಸಾಂದರ್ಭಿಕ ಚಿತ್ರ
  • Share this:
ಕೊಲ್ಕತ್ತಾ (ಫೆ. 24): ಪಶ್ಚಿಮ ಬಂಗಾಳದ ಜಲಪಾಯ್​ಗುರಿ ಜಿಲ್ಲೆಯಲ್ಲಿ ಇಂದು ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳ ಕಾರ್ಯಕರ್ತರ ನಡುವೆ ನಡೆದ ಗಲಾಟೆಗೆ 7 ಮನೆಗಳು ಸುಟ್ಟು ಭಸ್ಮವಾಗಿವೆ.

ಫೆ. 14ರಂದು ತೃಣಮೂಲ ಕಾಂಗ್ರೆಸ್​ನ ಮಲ್ಲಿಕ್ ಹಾತ್​ ಬೂತ್ ಅಧ್ಯಕ್ಷ ಬೊಂಬೋಲ್ ಘೋಷ್​ ಮೇಲೆ ಮಾರಕಾಸ್ತ್ರಗಳಿಂದ  ಹಲ್ಲೆ ನಡೆಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೊಂಬೋಲ್ ಘೋಷ್ ಕೊನೆಯುಸಿರೆಳೆದಿದ್ದರು. ತೃಣಮೂಲ ಕಾಂಗ್ರೆಸ್​​ನ ಸ್ಥಳೀಯ ನಾಯಕ ಬೊಂಬೋಲ್ ಘೋಷ್ ಅವರ ಮೃತದೇಹವನ್ನು ಭಾನುವಾರ ಮೈನಾಗುರಿಯಲ್ಲಿರುವ ಹುಸ್ಲೂರ್​ದಂಗಕ್ಕೆ ತರಲಾಗಿತ್ತು.

ಇದನ್ನೂ ಓದಿ: ಲಾಸ್​ ಏಂಜಲೀಸ್​ನಲ್ಲಿ ಮುಸುಕುಧಾರಿಗಳ ಗುಂಡೇಟಿಗೆ ಭಾರತೀಯ ಬಲಿ

ಈ ಹಿನ್ನೆಲೆಯಲ್ಲಿ ಗಲಾಟೆ ಆರಂಭವಾಗಿದ್ದು, ಟಿಎಂಸಿ ನಾಯಕರು ಈ ದುರಂತಕ್ಕೆ ಬಿಜೆಪಿಯವರೇ ಕಾರಣ ಎಂದು ಆರೋಪಿಸಿದ್ದಾರೆ. ಘೋಷ್​ ಅವರ ಸಾವಿಗೆ ಬಿಜೆಪಿಯವರೇ ಕಾರಣ ಎಂದು ಟಿಎಂಸಿ ನಾಯಕ ಮನೋಜ್ ರಾಯ್ ಆರೋಪಿಸಿದ್ದರು.​ ಆದರೆ, ಬಿಜೆಪಿ ಕಾರ್ಯಕರ್ತರು ಟಿಎಂಸಿ ನಾಯಕರ ಮೇಲೆ ಪ್ರತ್ಯಾರೋಪ ಮಾಡುತ್ತಿದ್ದು, ಪಶ್ಚಿಮ ಬಂಗಾಳದ ಆಡಳಿತ ಪಕ್ಷದವರೇ ಈ ಗಲಭೆಗೆ ಕಾರಣ ಎಂದಿದ್ದಾರೆ ಎಂದು ಎಕನಾಮಿಕ್ ಟೈಮ್ಸ್​ ವರದಿ ಮಾಡಿದೆ.

ಇದೇ ವಿಷಯಕ್ಕೆ ಎರಡೂ ಪಕ್ಷಗಳ ನಡುವೆ ಮಾರಾಮಾರಿ ನಡೆದಿದ್ದು, ಬಿಜೆಪಿ ಕಾರ್ಯಕರ್ತರು 7 ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಟಿಎಂಸಿ ನಾಯಕರು ಆರೋಪಿಸಿದ್ದಾರೆ. ಈ ಬಗ್ಗೆ ಉನ್ನತ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
First published: February 24, 2020, 1:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading