ನಕಲಿ ಆಲ್ಕೋಹಾಲ್ ಸೇವಿಸಿ ಪಂಜಾಬ್​ನಲ್ಲಿ 32 ಜನ ಸಾವು; ಸಿಎಂ ಅಮರೀಂದರ್ ಸಿಂಗ್ ತನಿಖೆಗೆ ಆದೇಶ

ನಕಲಿ ಆಲ್ಕೋಹಾಲ್ ಸೇವಿಸಿ ಪಂಜಾಬ್​ನಲ್ಲಿ 32 ಜನರು ಸಾವನ್ನಪ್ಪಿದ್ದಾರೆ. ಈ ಪ್ರಕರಣದ ಕುರಿತು ಮ್ಯಾಜಿಸ್ಟ್ರೇಟ್ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಆದೇಶಿಸಿದ್ದಾರೆ.

Sushma Chakre | news18-kannada
Updated:July 31, 2020, 6:59 PM IST
ನಕಲಿ ಆಲ್ಕೋಹಾಲ್ ಸೇವಿಸಿ ಪಂಜಾಬ್​ನಲ್ಲಿ 32 ಜನ ಸಾವು; ಸಿಎಂ ಅಮರೀಂದರ್ ಸಿಂಗ್ ತನಿಖೆಗೆ ಆದೇಶ
ಸಾಂದರ್ಭಿಕ ಚಿತ್ರ
  • Share this:
ಪಂಜಾಬ್ (ಜು. 31): ನಕಲಿ ಆಲ್ಕೋಹಾಲ್ ಸೇವಿಸಿ ಪಂಜಾಬ್​ನಲ್ಲಿ 32ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ. ಪಂಜಾಬ್​ನ ಅಮೃತಸರ, ಬತಾಲ, ತಾರ್ನ್ ಜಿಲ್ಲೆಗಳಲ್ಲಿ ನಕಲಿ ಆಲ್ಕೋಹಾಲ್ ತಯಾರಾಗುತ್ತಿದ್ದು, ಇದನ್ನು ಸೇವಿಸಿದ 32 ಜನರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ವರದಿ ನೀಡುವಂತೆ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಆದೇಶಿಸಿದ್ದಾರೆ.

32 ಜನರ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಇಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಆದೇಶ ನೀಡಿದ್ದಾರೆ. ಪಂಜಾಬ್​ನ ಡಿಜಿಪಿ ದಿನಕರ್ ಗುಪ್ತಾ ಈ ಬಗ್ಗೆ ಮಾಹಿತಿ ನೀಡಿದ್ದು, ಅಮೃತಸರದ ತಂಗಾರ ಗ್ರಾಮ ಮತ್ತು ಮುಚ್ಚುಲ್​ನಲ್ಲಿ ಜುಲೈ 29ರಂದು ಐವರು ಸಾವನ್ನಪ್ಪಿದ ಬಗ್ಗೆ ಮಾಹಿತಿ ಸಿಕ್ಕಿತ್ತು. ಗುರುವಾರ ಸಂಜೆ ವೇಳೆಗೆ ಮುಚ್ಚಲ್​ನಲ್ಲಿ ಇನ್ನೂ ಇಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದರು. ಇನ್ನೋರ್ವ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ. ಮುಚ್ಚುಲ್​ನಲ್ಲಿಯೇ ಮತ್ತೆ ಇಬ್ಬರು ಸಾವನ್ನಪ್ಪಿದರು. ಬಳಿಕ ಬತಾಲದಲ್ಲಿ ಇಬ್ಬರು ಸಾವಿಗೀಡಾದರು. ಇದಕ್ಕೆಲ್ಲ ನಕಲಿ ಆಲ್ಕೋಹಾಲ್ ಸೇವನೆಯೇ ಕಾರಣ ಎಂಬುದು ತಿಳಿದುಬಂದಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.ಇದನ್ನೂ ಓದಿ: Kamal Pant: ಬೆಂಗಳೂರು ಪೊಲೀಸ್ ಆಯುಕ್ತರಾಗಿ ಇಂದು ಸಂಜೆ ಕಮಲ್ ಪಂತ್ ಅಧಿಕಾರ ಸ್ವೀಕಾರ

ಇಂದು ಮತ್ತೆ 9 ಜನರು ಸಾವನ್ನಪ್ಪಿದ್ದಾರೆ. ನಕಲಿ ಆಲ್ಕೋಹಾಲ್ ಸೇವನೆಯಿಂದ ಸಾಯುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗಾಗಿ, ಮುಖ್ಯಮಂತ್ರಿ ಅಮರೀಂದರ್ ಸಿಂಗ್ ತನಿಖೆಗೆ ಆದೇಶ ನೀಡಿದ್ದಾರೆ. ಜಲಂಧರ್​ನ ವಿಭಾಗೀಯ ಕಮಿಷನರ್ ಮೂಲಕ ಮ್ಯಾಜಿಸ್ಟ್ರೇಟ್​ ತನಿಖೆಗೆ ಸಿಎಂ ಆದೇಶ ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಚ್ಚಲ್ ಗ್ರಾಮದ ಬಾಲ್ವಿಂದರ್ ಕೌರ್ ಎಂಬಾತನನ್ನು ಬಂಧಿಸಿದ್ದಾರೆ. ಇಷ್ಟು ಜನರ ಸಾವಿಗೆ ಕಾರಣವಾದ ಆರೋಪಿಗಳು ಯಾರೇ ಇದ್ದರೂ ಅವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಸಿಎಂ ಅಮರೀಂದರ್ ಸಿಂಗ್ ಆದೇಶ ನೀಡಿದ್ದಾರೆ.
Published by: Sushma Chakre
First published: July 31, 2020, 5:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading