ಮದುವೆಗೆ ಹೊರಟವರು ಮಸಣ ಸೇರಿದರು; ದಿಬ್ಬಣ ಹೊರಟಿದ್ದ ಬಸ್ ನದಿಗೆ ಬಿದ್ದು 24 ಸಾವು

ರಾಜಸ್ಥಾನದ ಬುಂಡಿ ಜಿಲ್ಲೆಯಲ್ಲಿ 27 ಜನರು ಇಂದು ಮುಂಜಾನೆ ಮದುವೆಗೆ ಹೋಗುತ್ತಿದ್ದಾಗ ಮಾರ್ಗಮಧ್ಯೆ ಬಸ್​ ನದಿಗೆ ಉರುಳಿದ್ದರಿಂದ ಚಾಲಕ ಸೇರಿ ಬಸ್​ನಲ್ಲಿದ್ದ 24 ಜನರು ಸಾವನ್ನಪ್ಪಿದ್ದಾರೆ.

ನದಿಗೆ ಉರುಳಿದ ಬಸ್​- ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸ್ಥಳೀಯರು

ನದಿಗೆ ಉರುಳಿದ ಬಸ್​- ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸ್ಥಳೀಯರು

  • Share this:
ಜೈಪುರ (ಫೆ. 26): ನಮ್ಮ ಆಯಸ್ಸು ಮುಗಿದಿದ್ದರೆ ಯಾರೂ ನಮ್ಮನ್ನು ಕಾಪಾಡಲು ಸಾಧ್ಯವಿಲ್ಲ. ಅನಿರೀಕ್ಷಿತವಾಗಿ ಬಂದೆರಗುವ ಘಟನೆಗಳು ನಮ್ಮ ಬದುಕನ್ನೇ ಬದಲಾಯಿಸಿಬಿಡುತ್ತವೆ. ಇನ್ನು ಕೆಲವು ಘಟನೆಗಳು ಬದುಕನ್ನೇ ಕಸಿದುಕೊಂಡು ಬಿಡುತ್ತವೆ. ಮನೆಯ ಮದುವೆ ಸಂಭ್ರಮದಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದ ಬಸ್​ ಅಪಘಾತದಲ್ಲಿ 24 ಜನ ಸಾವನ್ನಪ್ಪಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ರಾಜಸ್ಥಾನದ ಬುಂಡಿ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಈ ದುರ್ಘಟನೆ ನಡೆದಿದೆ. 27 ಜನರು ಮದುವೆಗೆಂದು ಬಸ್​ನಲ್ಲಿ ಹೊರಟಿದ್ದರು. ಮುಂಜಾನೆ ಮದುವೆಗೆ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಬಸ್ ಚಾಲಕನ ನಿಯಂತ್ರಣ ತಪ್ಪಿ​ ನದಿಗೆ ಉರುಳಿದ್ದರಿಂದ ಚಾಲಕ ಸೇರಿ ಬಸ್​ನಲ್ಲಿದ್ದ 24 ಜನರು ಸಾವನ್ನಪ್ಪಿದ್ದಾರೆ. ಉಳಿದ ನಾಲ್ವರ ಪರಿಸ್ಥಿತಿ ಗಂಭೀರವಾಗಿದೆ. ಈ ಮೂಲಕ ಸಂಭ್ರಮ ತುಂಬಿರಬೇಕಾಗಿದ್ದ ಮದುವೆ ಮನೆಯಲ್ಲಿ ಇದೀಗ ಸೂತಕದ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ: Delhi Violence Live: ದೆಹಲಿ ಹಿಂಸಾಚಾರ; ರಾಷ್ಟ್ರಪತಿ ಭವನಕ್ಕೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಾದಯಾತ್ರೆ

ಸದ್ಯದ ಮಾಹಿತಿ ಪ್ರಕಾರ, ಕೋಟ ಜಿಲ್ಲೆಯ ಸವಾಯ್​ಮದೋಪುರ್​ನಲ್ಲಿ ನಡೆಯುತ್ತಿದ್ದ ಮದುವೆ ಎಲ್ಲರೂ ದಿಬ್ಬಣ ಹೊರಟಿದ್ದರು. ವೇಗವಾಗಿ ಸಾಗುತ್ತಿದ್ದ ಬಸ್​ ಚಾಲಕನ ನಿಯಂತ್ರಣ ತಪ್ಪಿ ಪಾಪ್ಡಿ ಗ್ರಾಮದ ಬಳಿ ಸೇತುವೆಯಿಂದ ನದಿಗೆ ಉರುಳಿತ್ತು. ತಕ್ಷಣ ಸ್ಥಳೀಯರು ನೀರಿಗೆ ಹಾರಿ ಕೆಲವರನ್ನು ದಡಕ್ಕೆ ಎಳೆದುತಂದಿದ್ದಾರೆ. ಆದರೂ ಅಷ್ಟರಲ್ಲಾಗಲೇ ಬಹುತೇಕ ಪ್ರಯಾಣಿಕರು ಸಾವನ್ನಪ್ಪಿದ್ದರು.

ಇದನ್ನೂ ಓದಿ: ಬೆಂಗಳೂರಿನ ಶೂಟೌಟ್​ ಹಿಂದಿತ್ತು ಲವ್​ ಸ್ಟೋರಿ; ಸೇಡು ತೀರಿಸಿಕೊಳ್ಳಲು ಗುಂಡು ಹಾರಿಸಿದ ಮಾಜಿ ಪ್ರಿಯಕರ

ಘಟನೆ ಸಂಭವಿಸಿದ ಸ್ಥಳದಲ್ಲೇ 13 ಜನ ಸಾವನ್ನಪ್ಪಿದ್ದು, ಜೀವಂತವಾಗಿದ್ದ 10 ಜನರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ, ಅವರಲ್ಲಿ 6 ಮಂದಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಉಳಿದ ನಾಲ್ವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಾವನ್ನಪ್ಪಿದವರಲ್ಲಿ 11 ಪುರುಷರು, 10 ಮಹಿಳೆಯರು ಹಾಗೂ 3 ಮಕ್ಕಳೂ ಸೇರಿದ್ದಾರೆ.
First published: