ಜರ್ಮನಿಯ 2 ಹುಕ್ಕಾಬಾರ್​​ನಲ್ಲಿ ಗುಂಡಿನ ದಾಳಿ; 8 ಜನರ ಸಾವು

ನಗರದ ಮಧ್ಯಭಾಗದಲ್ಲಿ ಹುಕ್ಕಾ ಬಾರ್​ನಲ್ಲಿ ಗುಂಡಿನ ದಾಳಿ ನಡೆದಿದ್ದು, 8 ಜನರು ಸಾವನ್ನಪ್ಪಿದ್ದಾರೆ ಎಂದು ಪ್ರಾದೇಶಿಕ ಸಾರ್ವಜನಿಕ ಬ್ರಾಡ್​ಕಾಸ್ಟರ್​​ ಹೆಸಿಸ್ಚೆರ್​​ ರುಂಡ್​ಫಂಕ್ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಜರ್ಮನಿ(ಫೆ.20): ಜರ್ಮನಿಯ ಹನೌನಗರದಲ್ಲಿ ಎರಡು ಹುಕ್ಕಾಬಾರ್​ಗಳ ಮೇಲೆ ಗುಂಡಿನ ದಾಳಿ ನಡೆದು 8 ಮಂದಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

  ನಿನ್ನೆ ರಾತ್ರಿ 10 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎರಡು ಹುಕ್ಕಾ ಬಾರ್​ಗಳನ್ನು ಗುರಿಯಾಗಿಸಿಕೊಂಡು ಫೈರಿಂಗ್​ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

  ಘಟನೆ ನಡೆದ 3 ಗಂಟೆಗಳ ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿ ದುಷ್ಕರ್ಮಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ದುರಂತದಲ್ಲಿ ಸಾವನ್ನಪ್ಪಿದವರ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

  ಜಪಾನ್​ನ ಡೈಮಂಡ್ ಪ್ರಿನ್ಸಸ್ ಹಡಗಿನ ಮತ್ತೋರ್ವ ಭಾರತೀಯ ಸಿಬ್ಬಂದಿಯಲ್ಲಿ ಮಾರಕ ಕೊರೊನಾ ವೈರಸ್ ಪತ್ತೆ!

  ನಗರದ ಮಧ್ಯಭಾಗದಲ್ಲಿ ಹುಕ್ಕಾ ಬಾರ್​ನಲ್ಲಿ ಗುಂಡಿನ ದಾಳಿ ನಡೆದಿದ್ದು, 8 ಜನರು ಸಾವನ್ನಪ್ಪಿದ್ದಾರೆ ಎಂದು ಪ್ರಾದೇಶಿಕ ಸಾರ್ವಜನಿಕ ಬ್ರಾಡ್​ಕಾಸ್ಟರ್​​ ಹೆಸಿಸ್ಚೆರ್​​ ರುಂಡ್​ಫಂಕ್ ತಿಳಿಸಿದ್ದಾರೆ.

  ನೈರುತ್ಯ ಜರ್ಮನಿಯಲ್ಲಿರುವ ಹನೌನಗರ ಫ್ರಾಂಕ್​ಫರ್ಟ್​​​ನಿಂದ 20 ಕಿ.ಮೀ. ದೂರದಲ್ಲಿದೆ. ನಗರದಲ್ಲಿ ಒಂದು ಲಕ್ಷ ಜನಸಂಖ್ಯೆ ಇದೆ.

  KSRTC Bus Accident: ಬೆಂಗಳೂರಿನಿಂದ ಕೊಚ್ಚಿಗೆ ಹೊರಟಿದ್ದ ಬಸ್-ಲಾರಿ ನಡುವೆ ಡಿಕ್ಕಿ; 20 ಜನರ ಸಾವು
  First published: