Udaipur Murder Case: ಬಿಗಿ ಭದ್ರತೆಯಲ್ಲಿ ಕನ್ಹಯ್ಯ ಲಾಲ್ ಅಂತ್ಯಕ್ರಿಯೆ, ಹಂತಕರಿಗೆ ಮರಣ ದಂಡನೆ ನೀಡುವಂತೆ ಪತ್ನಿ ಆಗ್ರಹ

ಅಂತ್ಯ ಕ್ರಿಯೆ ವೇಳೆ ಕನ್ಹಯ್ಯ ಲಾಲ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಕನ್ಹಯ್ಯ ಪತ್ನಿ (Wife), ತಮ್ಮ ಗಂಡನನ್ನು ಹತ್ಯೆ ಮಾಡಿದ ಹಂತಕರಿಗೆ ಮರಣ ದಂಡನೆ (sentenced to death) ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು.

ಮೃತ ಕನ್ಹಯ್ಯ ಲಾಲ್ ಪತ್ನಿ ಕಣ್ಣೀರು

ಮೃತ ಕನ್ಹಯ್ಯ ಲಾಲ್ ಪತ್ನಿ ಕಣ್ಣೀರು

  • Share this:
ರಾಜಸ್ಥಾನ: ನಿನ್ನೆ ಇಬ್ಬರು ವ್ಯಕ್ತಿಗಳಿಂದ ಹತ್ಯೆಗೆ ಒಳಗಾದ ರಾಜಸ್ಥಾನದ (Rajasthan) ಉದಯಪುರದ (Udaipur) ಟೈಲರ್ (Tailor) ಕನ್ಹಯ್ಯಾ ಲಾಲ್ (Kanhaiya Lal) ಅವರ ಅಂತ್ಯಕ್ರಿಯೆಯು (Funeral) ಇಂದು ನಡೆಯಿತು. ತೀವ್ರ ಬಿಗಿ ಪೊಲೀಸ್ ಭದ್ರತೆಯಲ್ಲಿ (Police Security) ಕನ್ಹಯ್ಯ ಲಾಲ್ ಅಂತ್ಯಕ್ರಿಯೆ ನೆರವೇರಿಸಲಾಯ್ತು. ಈ ವೇಳೆ ಅವರ ಕುಟುಂಬಸ್ಥರಷ್ಟೇ (Family) ಅಲ್ಲದೇ, ಗ್ರಾಮಸ್ಥರು, ಅಪಾರ ಸಂಖ್ಯೆಯ ಸಾರ್ವಜನಿಕರು, ಹಿಂದೂ ಸಂಘಟನೆ ಕಾರ್ಯಕರ್ತರು ಸೇರಿದಂತೆ ಅಪಾರ ಜನ ಸೇರಿದ್ದರು. ಅಂತ್ಯ ಕ್ರಿಯೆ ವೇಳೆ ಕನ್ಹಯ್ಯ ಲಾಲ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಕನ್ಹಯ್ಯ ಪತ್ನಿ (Wife), ತಮ್ಮ ಗಂಡನನ್ನು ಹತ್ಯೆ ಮಾಡಿದ ಹಂತಕರಿಗೆ ಮರಣ ದಂಡನೆ (sentenced to death) ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು.

ಬಿಗಿ ಪೊಲೀಸ್ ಭದ್ರತೆಯಲ್ಲಿ ಕನ್ಹಯ್ಯ ಲಾಲ್ ಅಂತ್ಯಕ್ರಿಯೆ

ಇಂದು ಉದಯಪುರ ನಗರದಲ್ಲಿ ಕನ್ಹಯ್ಯ ಲಾಲ್ ಅಂತ್ಯಕ್ರಿಯೆ ನಡೆಯಿತು. ಹತ್ಯೆ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವುದರಿಂದ ನಗರದ ಎಲ್ಲೆಡೆ ಕರ್ಫ್ಯೂ ವಿಧಿಸಲಾಗಿತ್ತು. ಜೊತೆಗೆ ತೀವ್ರ ಪೊಲೀಸ್ ಭದ್ರತೆಯಲ್ಲಿ ಅವರ ಸಂಬಂಧಿಕರು ಮತ್ತು ಸ್ಥಳೀಯರು ಸೇರಿದಂತೆ ಅಪಾರ ಸಂಖ್ಯೆಯ ಜನರ ಸಮ್ಮುಖದಲ್ಲಿ ಕನ್ಹಯ್ಯ ಲಾಲ್ ಅಂತ್ಯಕ್ರಿಯೆ ನಡೆಯಿತು.

ಕನ್ಹಯ್ಯ ಹತ್ಯೆ ವಿರೋಧಿಸಿ ನಗರ ಬಂದ್

ಕನ್ಹಯ್ಯಾ ಲಾಲ್ ಹತ್ಯೆಯನ್ನು ವಿರೋಧಿಸಿ ಇಡೀ ನಗರವನ್ನು ಬಂದ್ ಮಾಡಲಾಗಿತ್ತು. ಯಾವುದೇ ಪರಿಸ್ಥಿತಿ ಎದುರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು. ಅದಕ್ಕೂ ಮೊದಲು ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ನಿವಾಸಕ್ಕೆ ಕೊಂಡೊಯ್ಯಲಾಯಿತು. ಬಳಿಕ ಮೆರವಣಿಗೆ ಮೂಲಕ ಮೃತದೇಹ ಕೊಂಡೊಯ್ದು ಅಂತ್ಯಕ್ರಿಯೆ ಮಾಡಲಾಯಿತು.

ಇದನ್ನೂ ಓದಿ: Udaipur Murder Case: ಟೈಲರ್ ಹತ್ಯೆ ಕೇಸ್ ತನಿಖೆ ಹೊಣೆ ಎನ್ಐಎ ಹೆಗಲಿಗೆ, ಉಗ್ರರ ಜಾಡು ಹಿಡಿದು ಹೊರಟ ಅಧಿಕಾರಿಗಳು

“ನನ್ನ ಗಂಡನಿಗೆ ಬಂದ ಪರಿಸ್ಥಿತಿ ಯಾರಿಗೂ ಬರಬಾರದು”

ಅಂತ್ಯ ಸಂಸ್ಕಾರದ ವೇಳೆ ಕನ್ಹಯ್ಯ ಲಾಲ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ವೇಳೆ ಮಾತನಾಡಿದ ಅವರ ಪತ್ನಿ ಯಶೋಧಾ, ನನ್ನ ಗಂಡನಿಗೆ ಬಂದ ಪರಿಸ್ಥಿತಿ ಯಾರಿಗೂ ಬರಬಾರದು ಅಂತ ಕಣ್ಣೀರಿಟ್ಟರು. ಇಂದು ನನ್ನ ಗಂಡನನ್ನು ಕೊಂದಿದ್ದಾರೆ, ನಾಳೆ ಇತರರನ್ನು ಕೊಲ್ಲುತ್ತಾರೆ' ಎಂದು ಆಕ್ರೋಶ ಹೊರ ಹಾಕಿದರು. ಸರ್ಕಾರ ನಮಗೆ ಪರಿಹಾರ ನೀಡಿದೆ. ಆದರೆ, ಅದರಿಂದ ಏನು ಮಾಡುವುದು .

“ಹಂತಕರನ್ನು ಗಲ್ಲಿಗೇರಿಸಿ” ಎಂದ ಯಶೋಧಾ

ಇನ್ನು "ಹಂತಕರನ್ನು ಗಲ್ಲಿಗೇರಿಸಿ. ಇಂದು ನನ್ನ ಗಂಡನನ್ನು ಕೊಂದಿದ್ದಾರೆ. ನಾಳೆ ಇತರರನ್ನೂ ಕೊಲ್ಲುತ್ತಾರೆ" ಎಂದು ಅವರ ಪತ್ನಿ ತೀವ್ರ ಆತಂಕ ವ್ಯಕ್ತಪಡಿಸಿದರು. ಇನ್ನು ಕನ್ಹಯ್ಯ ಕುಟುಂಬಸ್ಥರೂ ಸಹ ಆರೋಪಿಗಳಿಗೆ ಉಗ್ರ ಶಿಕ್ಷೆಯಾಗಬೇಕು ಅಂತ ಆಗ್ರಹಿಸಿದ್ದಾರೆ.



“ಈ ಹಿಂದೆಯೂ ಬೆದರಿಕೆ ಕರೆ ಬರುತ್ತಿತ್ತು”

"ನನ್ನ ಗಂಡನಿಗೆ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿದ್ದವು. ಅಂಗಡಿಗೆ ಬಂದು ಕೈ ಕತ್ತರಿಸುವಂತೆ ಬೆದರಿಸುತ್ತಿದ್ದರು ಅಂತ ಯಶೋಧಾ ಹೇಳಿದ್ದಾರೆ. ಹೀಗಾಗಿ ನಾವು ಸಹ ಮನೆಯಿಂದ ಹೊರಬಂದಿರಲಿಲ್ಲ. ಮಂಗಳವಾರದಂದು ಮನೆಯಿಂದ ಊಟದ ಬಾಕ್ಸ್​ ತೆಗೆದುಕೊಂಡು ಅವರು ಕೆಲಸಕ್ಕೆ ಹೋಗಿದ್ದರು. ಈ ವೇಳೆ ಈ ಕೃತ್ಯ ನಡೆಸಿದ್ದಾರೆ" ಎಂದು ಅವರು ವಿವರಿಸಿದ್ದಾರೆ.

 ಇದನ್ನೂ ಓದಿ: Udaipur Murder: ಕೊಲೆಯಾದ ಕನ್ಹಯ್ಯ ಲಾಲ್ ಕುಟುಂಬಕ್ಕೆ 31 ಲಕ್ಷ ಪರಿಹಾರ

 26 ಬಾರಿ ಮಾರಕಾಸ್ತ್ರಗಳಿಂದ ಇರಿತ

ಕನ್ಹಯ್ಯಾಲಾಲ್ ಅವರ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ ಆರೋಪಿಯು 26 ಬಾರಿ ಹರಿತವಾದ ಆಯುಧಗಳಿಂದ ಕನ್ಹಯ್ಯಾ ಮೇಲೆ ಹಲ್ಲೆ ಮಾಡಿದ್ದಾರೆ. ಆತನ ಮೈಮೇಲೆ 13 ಗಾಯಗಳಾಗಿವೆ. ಇವುಗಳಲ್ಲಿ ಹೆಚ್ಚಿನವು ಕುತ್ತಿಗೆಯ ಸುತ್ತ ಇದ್ದವು. ಇದೇ ಸಮಯದಲ್ಲಿ, ಆರೋಪಿಗಳು ದೇಹದಿಂದ ಕುತ್ತಿಗೆಯನ್ನು ಬೇರ್ಪಡಿಸಲು ಪ್ರಯತ್ನಿಸಿದ್ದರು ಎಂದು ಮರಣೋತ್ತರ ಪರೀಕ್ಷೆಯ ರಿಪೋರ್ಟ್ ನಲ್ಲಿ ತಿಳಿಸಲಾಗಿದೆ.
Published by:Annappa Achari
First published: