• Home
  • »
  • News
  • »
  • national-international
  • »
  • ಸಿಎಎ, ಎನ್ಆರ್​​ಸಿ ವಿರುದ್ಧ ಕನ್ಹಯ್ಯ ಕುಮಾರ್​ ಪ್ರತಿಭಟನಾ ರ‍್ಯಾಲಿ; ಬಿಹಾರ್ ಪೊಲೀಸರಿಂದ ಬಂಧನ

ಸಿಎಎ, ಎನ್ಆರ್​​ಸಿ ವಿರುದ್ಧ ಕನ್ಹಯ್ಯ ಕುಮಾರ್​ ಪ್ರತಿಭಟನಾ ರ‍್ಯಾಲಿ; ಬಿಹಾರ್ ಪೊಲೀಸರಿಂದ ಬಂಧನ

ಕನ್ಹಯ್ಯ ಕುಮಾರ್​.

ಕನ್ಹಯ್ಯ ಕುಮಾರ್​.

ಯಾರ ವಿರುದ್ಧವೂ ತಾರತಮ್ಯ ಎಸಗಬಾರದು ಎಂಬುದು ಗಾಂಧಿ ಅವರ ನಿಲುವಾಗಿತ್ತು. ಆದರೆ, ನರೇಂದ್ರ ಮೋದಿ ಮತ್ತು ಅಮಿತ್​ ಶಾ ಧರ್ಮದ ಹೆಸರಿನಲ್ಲಿ ಹಿಂದೂ ಮತ್ತು ಮುಸಲ್ಮಾನರನ್ನು ಒಡೆದು ರಾಜಕಾರಣ ಮಾಡಲು ಮುಂದಾಗಿದ್ದಾರೆ ಎಂದು ಕನ್ಹಯ್ಯ ಕುಮಾರ್​ ಕಿಡಿಕಾರಿದ್ದಾರೆ.

  • Share this:

ಪಾಟ್ನಾ (ಜನವರಿ 30: ಕೇಂದ್ರ ಸರ್ಕಾರದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ ಕಾಯ್ದೆಯ ವಿರುದ್ಧ ಬಿಹಾರದ ಚಂಪಾರನ್​ನಲ್ಲಿ ವಿದ್ಯಾರ್ಥಿ ಮುಖಂಡ ಹಾಗೂ ಕಮ್ಯೂನಿಸ್ಟ್ ಪಕ್ಷದ ನಾಯಕ ಕನ್ಹಯ್ಯ ಕುಮಾರ್ ಇಂದು ಜನ-ಗಣ ಮನುಷ್ಯ ಯಾತ್ರೆಗೆ ಕರೆ ನೀಡಿದ್ದರು. ಆದರೆ, ಪ್ರತಿಭಟನಾ ರ‍್ಯಾಲಿ ಆರಂಭಕ್ಕೂ ಮುನ್ನವೇ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಕನ್ಹಯ್ಯ ಕುಮಾರ್ ಹಾಗೂ ಅವರ ಬೆಂಬಲಿಗರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.


ಪೊಲೀಸರು ವಶಕ್ಕೆ ಪಡೆಯುವ ಸಂದರ್ಭದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಕನ್ಹಯ್ಯ ಕುಮಾರ್, “ಪ್ರತಿಭಟನಾಕಾರರು ಸಿಎಎ ಮತ್ತು ಎನ್ಆರ್​ಸಿ ವಿರುದ್ಧ ಒಂದು ತಿಂಗಳ ಕಾಲ ಮೆರವಣಿಗೆ ಕೈಗೊಳ್ಳಬೇಕು. ಆ ಮೂಲಕ ಮಹಾತ್ಮ ಮೋಹನ್ ದಾಸ್ ಕರಮ್ ಚಂದ್ ಗಾಂಧಿ ಅವರಿಗೆ ಗೌರವ ಸಲ್ಲಿಸಬೇಕು” ಎಂದು ತಿಳಿಸಿದ್ದಾರೆ."ಯಾರ ವಿರುದ್ಧವೂ ತಾರತಮ್ಯ ಎಸಗಬಾರದು ಎಂಬುದು ಗಾಂಧಿ ಅವರ ನಿಲುವಾಗಿತ್ತು. ಆದರೆ, ನರೇಂದ್ರ ಮೋದಿ ಮತ್ತು ಅಮಿತ್​ ಶಾ ಧರ್ಮದ ಹೆಸರಿನಲ್ಲಿ ಹಿಂದೂ ಮತ್ತು ಮುಸಲ್ಮಾನರನ್ನು ಒಡೆದು ರಾಜಕಾರಣ ಮಾಡಲು ಮುಂದಾಗಿದ್ದಾರೆ. ದೇಶದಲ್ಲಿರುವ ಸಮಸ್ಯೆಯನ್ನು ಯಾರಾದರೂ ಪ್ರಶ್ನೆ ಮಾಡಿದರೆ ಆಗ ಸರ್ಕಾರ ಅವರ ಪೌರತ್ವ ಕೇಳುತ್ತದೆ. ಜೈಲಿಗೆ ಅಟ್ಟುತ್ತದೆ" ಎಂದು ಕಿಡಿಕಾರಿದ್ದಾರೆ.


ಇದನ್ನೂ ಓದಿ : ಜೆಡಿಯು ಉಚ್ಛಾಟಿತ ನಾಯಕ ಪ್ರಶಾಂತ್​ ಕಿಶೋರ್ ಜೆಡಿಎಸ್​ ತೆಕ್ಕೆಗೆ?; ಚುನಾವಣಾ ತಂತ್ರಜ್ಞನನ್ನು ಸೆಳೆಯಲು ಮುಂದಾದ ತೆನೆ!

Published by:MAshok Kumar
First published: