ಬಿಹಾರದ ಬೇಗುಸರಾಯ್ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಕನ್ಹಯ್ಯಕುಮಾರ್ ಸ್ಪರ್ಧೆ ?

news18
Updated:September 2, 2018, 7:38 PM IST
ಬಿಹಾರದ ಬೇಗುಸರಾಯ್ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಕನ್ಹಯ್ಯಕುಮಾರ್ ಸ್ಪರ್ಧೆ ?
news18
Updated: September 2, 2018, 7:38 PM IST
ನ್ಯೂಸ್ 18 ಕನ್ನಡ 

ದೆಹಲಿ (ಸೆ. 02) :  ಜೆಎನ್​ಯು ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್  ಬರುವ 2019 ರ ಲೋಕಸಭಾ ಚುನಾವಣೆಯಲ್ಲಿ ಬಿಹಾರ ರಾಜ್ಯದ ಬೇಗುಸರಾಯ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮಾಡಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಆರ್​ಜೆಡಿ ಎನ್​ಸಿಪಿ ಜಿತನ್ ರಾಮ್ ಮಾಂಝಿ ಅವರ ಎಚ್​ಎಂ  ಮಹಾಮೈತ್ರಿ ಕೂಟವನ್ನು ಸೇರಿಕೊಳ್ಳಲು ಸಿದ್ದ ಎಂದು ಎಡಪಕ್ಷಗಳು ಹೇಳಿವೆ. ಅಲ್ಲದೇ ಬಿಹಾರದಲ್ಲಿ ಈ ನೇತ್ರತ್ವವನ್ನು ಆರ್​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮಗ ತೇಜಸ್ವಿ ಯಾದವ್ ವಹಿಸಲಿದ್ದಾರೆ. ಆದರಿಂದ ಬೇಗುಸರಾಯ್ ಕ್ಷೇತ್ರವನ್ನು ಆರ್​ಜೆಡಿ ಸಿಪಿಎಂಗೆ ಬಿಟ್ಟು ಕೊಡುವ ಸಾಧ್ಯತೆ ಇದೆ. ಕನ್ಹಯ್ಯ ಕುಮಾರ್ ಸ್ಪರ್ಧೆಗೆ ಕಾಂಗ್ರೆಸ್ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ.

ಕನ್ಹಯ್ಯ ಕುಮಾರ್ ಅವರ ಹುಟ್ಟೂರು ಬೇಗುಸರಾಯ್ ಜಿಲ್ಲೆಯ ಬಿಹಾತ್ ಪಂಚಾಯತ್ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಅವರ ತಾಯಿ ಮೀನಾ ದೇವಿ ಅಂಗನವಾಡಿಯೊಂದರಲ್ಲಿಕಾರ್ಯನಿರ್ವಹಿಸುತ್ತಿದ್ದಾರೆ.

ಈ ಕ್ಷೇತ್ರದಿಂದ2014ರಲ್ಲಿ ಬಿಜೆಪಿ ಪಕ್ಷದ ಭೋಲಾ ಸಿಂಗ ಅವರು ಆರ್​ಜೆಡಿ ಪಕ್ಷದ ತನ್ವಿರ್ ಹಸನ್ ವಿರುದ್ದ 58 ಸಾವಿರ ಮತಗಳಿಂದ ಗೆದ್ದು ಸಂಸದರಾಗಿ ಆಯ್ಕೆಯಾಗಿದ್ದಾರೆ. 


.
First published:September 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ