'ಸ್ವಲ್ಪ ಮರ್ಯಾದೆಯಿಂದ ಮಾತಾಡಿ'- Kangana Ranautಗೆ ಬಿಜೆಪಿ ಲೀಡರ್ ಕ್ಲಾಸ್

Manoj Tiwari And Kangana: ಮೋದಿ ನೇತೃತ್ವದ ಸರ್ಕಾರವನ್ನು ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸಿದ ನಿರ್ಮಾಪಕ ಅನುರಾಗ್ ಕಶ್ಯಪ್ ಅವರೊಂದಿಗೆ ಮಾತನಾಡಿದ್ದೇನೆ ಎಂದು ತಿವಾರಿ ತಿಳಿಸಿದ್ದಾರೆ. ನಾನು ಅನುರಾಗ್ ಕಶ್ಯಪ್‌ಗೆ ಕರೆ ಮಾಡಿ ನಿಮಗೆ ಏನಾಯ್ತು ಎಂದು ಕೇಳಿದೆ.

ಕಂಗನಾ ರಣಾವತ್

ಕಂಗನಾ ರಣಾವತ್

 • Share this:
  ಬಾಲಿವುಡ್ ಕ್ವೀನ್ ಕಂಗನಾ ರಣಾವತ್(Kangana Ranaut) ತಮ್ಮ ಹೇಳಿಕೆಗಳಿಂದಲೇ ಸುದ್ದಿಯಲ್ಲಿರೋ ನಟಿ (Actress). ಬಹಳಷ್ಟು ಸಲ ಅವರ ಮಾತುಗಳು ಭಾರೀ ವಿವಾದಕ್ಕೆ ಕಾರಣವಾಗುತ್ತವೆ. ದೇಶಾದ್ಯಂತ ನಡೆಯುವ ಘಟನೆಗಳು, ಬೆಳವಣಿಗೆಗಳ ಬಗ್ಗೆ ನಟಿ ಬಹಿರಂಗವಾಗಿ ಕಟು ಮಾತುಗಳನ್ನು ಹೇಳಿ ಬೆಂಬಲವನ್ನೂ ವಿರೋಧವನ್ನೂ ಪಡೆಯುತ್ತಾರೆ. ಆದರೆ ಎಷ್ಟೇ ಆದರೂ ಕಂಗನಾ ಮಾತ್ರ ತಮ್ಮ ಮಾತುಗಳಿಗೆ ಲಂಗು-ಲಗಾಮು ಹಾಕುವುದಿಲ್ಲ ಎನ್ನುವುದು ಸತ್ಯ. ಎಲ್ಲವನ್ನೂ ಡೈರೆಕ್ಟ್ ಆಗಿ ಹಾರ್ಶ್ ಆಗಿ ಹೇಳುವುದರಿಂದಲೇ ಅವರ ಹೇಳಿಕೆಗಳಿಗೆ ವಿರೋಧ ವ್ಯಕ್ತವಾಗುತ್ತದೆ. ಬಿಜೆಪಿ ಪರವಾಗಿ ಮಾತನಾಡುವ ಕಂಗನಾಗೆ ಈಗ ಬಿಜೆಪಿ(BJP) ಮುಖಂಡನೇ ಕ್ಲಾಸ್ ತೆಗೆದುಕೊಂಡಿರುವ ಘಟನೆ ನಡೆದಿದೆ.

  ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ರಾಜಕೀಯ ನಿಲುವುಗಳನ್ನು(Political Views) ನೇರವಾಗಿ ಹೇಳುವುದಕ್ಕೆ ಫೇಮಸ್. ಹೀಗೆ ಮಾಡಿಯೇ ಅವರು ಟ್ವಿಟರ್‌ನಿಂದ(Twitter) ಬ್ಯಾನ್ ಆದರು. ನಟಿ ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಮಾತುಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡುತ್ತಾರೆ. ತಾನು ನರೇಂದ್ರ ಮೋದಿ(Narendra Modi) ಅವರ ಕಟ್ಟಾ ಸಪೋರ್ಟರ್ ಎನ್ನುವುದನ್ನು ಕಂಗನಾ ಈಗಾಗಲೇ ತೋರಿಸಿಕೊಟ್ಟಿದ್ದಾರೆ. ಆದರೆ ವಾಸ್ತವದಲ್ಲಿ ಅವರ ಟೀಕೆ, ಹೇಳಿಕೆಗಳ ಬಗ್ಗೆ ಬಿಜೆಪಿಯ ಕೆಲವು ಮುಖಂಡರಿಗೂ ತೀವ್ರ ಅಸಮಾಧಾನವಿದೆ.

  ಕಂಗನಾ ಬಗ್ಗೆ ತಿವಾರಿ ಮಾತು
  ನಟ ಮತ್ತು ರಾಜಕಾರಣಿ ಮನೋಜ್ ತಿವಾರಿ(Manoj Tiwari) ಅವರು ತಮ್ಮ ಇತ್ತೀಚಿನ ಸಂದರ್ಶನದಲ್ಲಿ ಕಂಗನಾ ರಣಾವತ್ ಬಗ್ಗೆ ಮಾತನಾಡಿದ್ದಾರೆ. ಕಂಗನಾರ ಅಭಿಪ್ರಾಯಗಳು ತುಂಬಾ ಹಾರ್ಶ್ ಆಗಿವೆ. ನಾಯಕರ ಬಗ್ಗೆ ಮಾತನಾಡುವಾಗ ಗೌರವದಿಂದ ಇರಲು ಕಲಿಯಬೇಕು ಎಂದು ಸಲಹೆ ನೀಡಿದ್ದಾರೆ. ತಿವಾರಿ ಒಳಗೊಂಡ 'ಅನ್‌ಫಿಲ್ಟರ್ಡ್ ಬೈ ಸಮ್ದೀಶ್' ನ ಇತ್ತೀಚಿನ ಸಂಚಿಕೆಯಲ್ಲಿ, ನಟ, ಒಬ್ಬರ ಅಭಿಪ್ರಾಯವು ಕೇಳುವವರಿಗೆ ನೇರವಾಗಿ ಹೊಡೆಯುವಷ್ಟು ಹಾರ್ಶ್‌ ಆಗಿರಬಾರದು. ನಟ, ನಟಿಯರಿಗೆ ಒಂದಿಷ್ಟು ಜವಾಬ್ದಾರಿಯೂ ಇರುತ್ತದೆ ಎಂದಿದ್ದಾರೆ.

  ಇದನ್ನೂ ಓದಿ: ಪದೇ ಪದೇ ಪಾಕ್ ವಿಷಯ ಪ್ರಸ್ತಾಪಿಸುವ ಬಿಜೆಪಿ ನಾಯಕರೇ ಪಾಕಿಸ್ತಾನದ ಏಜೆಂಟ್​ಗಳು: ನಾಸಿರ್ ಹುಸೇನ್

  ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್(Sushant Singh Rajput) ಸಾವಿನ ನಂತರ ಕಂಗನಾ ಅವರ ಪರವಾಗಿ ಮಾತನಾಡುವಾಗ ಕಂಗನಾ ಸರಿ ಎಂದು ಸೂಚಿಸಿದ್ದರು. ಆದರೆ ಅವರು ಮಹಾರಾಷ್ಟ್ರ ಸರ್ಕಾರದ ಕಡೆಗೆ ತೋರಿಸಿದ ನಡವಳಿಕೆಯನ್ನು ಹಾರ್ಶ್ ಆಗಿತ್ತು ಆಗಿತ್ತು ಎಂದು ಹೇಳಿದ್ದಾರೆ.

  ಕಂಗನಾ ಈ ಹಿಂದೆ ಮುಂಬೈಯನ್ನು(Mumbai)ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ನಗರ ಪೊಲೀಸರನ್ನು ಟೀಕಿಸಿದ್ದರು. ಮುಂಬೈನ ಬಿಎಂಸಿ ಅಧಿಕಾರಿಗಳು ತನ್ನ ಕಚೇರಿಯನ್ನು ಅತಿಕ್ರಮಣ ಎಂದು ಕೆಡವಿದ ನಂತರ, ನಟಿ ಇದು ಅಧಿಕಾರದ ದುರುಪಯೋಗ ಎಂದಿದ್ದರು. ಅವರ ಮುಂಬೈನ ಮನೆಯನ್ನು ಬಿಎಂಸಿ(BMC) ಅಧಿಕಾರಿಗಳು ಭಾಗಶಃ ಕೆಡವಿ ಹಾಕಿದ್ದರು.

  ‘ಅಗೌರವದಿಂದ ಮಾತಾಡೋದು ದೇಶದ ಸಂಸ್ಕೃತಿಯಲ್ಲ’
  ಅವರು ಸುಶಾಂತ್ ಬಗ್ಗೆ ಮಾತನಾಡುವಾಗ ಅವರು ಸರಿಯಾಗಿ ಹೇಳಿದ್ದರು. ಆದರೆ ನಂತರ ಮಹಾರಾಷ್ಟ್ರ ಸರ್ಕಾರದ ಬಗ್ಗೆ ಆಕೆಯ ವರ್ತನೆ ಅಷ್ಟು ಸರಿ ಇರಲಿಲ್ಲ. ಇದು ಸರಿಯಾಗಿಲ್ಲ. ನಿಮಗೆ ಅನಿಸಿದ್ದನ್ನು ನೀವು ಹೇಳಬಹುದು, ಆದರೆ ನೀವು ಗೌರವಯುತವಾಗಿರಬೇಕು, ನಿಮ್ಮ ಮಿತಿಯೊಳಗೆ ಇದ್ದು ಮಾತನಾಡಬೇಕು, ಯಾರ ಜೊತೆಗೂ ಅಗೌರವದಿಂದ ಮಾತನಾಡುವುದು ಈ ದೇಶದ ಸಂಸ್ಕೃತಿಯಲ್ಲ ಎಂದಿದ್ದಾರೆ.

  ಇದನ್ನೂ ಓದಿ: ನಾಳೆ ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ; 623 ಅಭ್ಯರ್ಥಿಗಳು ಕಣದಲ್ಲಿ

  ಮೋದಿ ನೇತೃತ್ವದ ಸರ್ಕಾರವನ್ನು ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸಿದ ನಿರ್ಮಾಪಕ ಅನುರಾಗ್ ಕಶ್ಯಪ್ ಅವರೊಂದಿಗೆ ಮಾತನಾಡಿದ್ದೇನೆ ಎಂದು ತಿವಾರಿ ತಿಳಿಸಿದ್ದಾರೆ. ನಾನು ಅನುರಾಗ್ ಕಶ್ಯಪ್‌ಗೆ ಕರೆ ಮಾಡಿ ನಿಮಗೆ ಏನಾಯ್ತು ಎಂದು ಕೇಳಿದೆ. ನಾನು ಅವರೊದಿಗೆ ಚರ್ಚಿಸಲು ಪ್ರಯತ್ನಿಸಿದೆ, ಆದರೆ ಅವರು ನನ್ನ ಮಾತನ್ನು ಕೇಳಲಿಲ್ಲ. ಹಾಗಾಗಿ ಈಗ ಅವರೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದೇನೆ ಎಂದು ತಿವಾರಿ ಸಂದರ್ಶನದಲ್ಲಿ ಹೇಳಿದ್ದಾರೆ.
  Published by:Sandhya M
  First published: