Javed Akhtar ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಿದ Kangana Ranaut

ಜಾವೇದ್ ಅಖ್ತರ್ ಅವರು ಕಂಗನಾ ವಿರುದ್ಧ ದಾಖಲಿಸಿರುವ ಮಾನಹಾನಿ ಪ್ರಕರಣದ ವಿಚಾರಣೆಯನ್ನು ನವೆಂಬರ್ 15ಕ್ಕೆ ಮುಂದೂಡಲಾಗಿದೆ. ಇನ್ನು ಇದೇ ವೇಳೆ ಕಂಗನಾ ಸಹ ಈಗ ಜಾವೇದ್ ಅಖ್ತರ್ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ.

ಜಾವೇದ್ ಅಖ್ತರ್ ಹಾಗೂ ಕಂಗನಾ ರನೌತ್​

ಜಾವೇದ್ ಅಖ್ತರ್ ಹಾಗೂ ಕಂಗನಾ ರನೌತ್​

  • Share this:
ಜಾವೇದ್​ ಅಖ್ತರ್ (Javed Akhtar) ಅವರು ಕಂಗನಾ ರನೌತ್​ (Kangana Ranaut) ವಿರುದ್ಧ ದಾಖಲಿಸಿದ್ದ ಮಾನಹಾನಿ (Defamation Case) ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ಇತ್ತು. ಕಳೆದ ಬಾರಿ ನ್ಯಾಯಾಲಯಕ್ಕೆ ಗೈರಾಗಿದ್ದ ಕಂಗನಾ ರನೌತ್ ಇಂದು ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಈ ಪ್ರಕರಣದ ವಿಚಾರಣೆಗೆಂದು ಚಿತ್ರಸಾಹಿತಿ ಜಾವೇದ್​ ಅಖ್ತರ್ ಅವರು ಸಮಯಕ್ಕಿಂತ ಮುಂಚೆಯೇ ಕೋರ್ಟ್​ಗೆ ಬಂದಿದ್ದರು. ಇನ್ನು ಕಂಗನಾ ಅವರು ಕೋರ್ಟ್ ಎದುರು ಹಾಜರಾದ ನಂತರ ಅವರ ವಕೀಲರು ನ್ಯಾಯಾಲಯದಲ್ಲಿ ತಮ್ಮ ವಾದ ಮಂಡಿಸಿದ್ದಾರೆ. ಈ ಪ್ರಕರಣದಲ್ಲಿ ಜಾಮೀನು ಸಿಗುವ ಅವಕಾಶ ಇರುವಾಗ ಪದೇ ಪದೇ ಕಂಗನಾ ಅವರನ್ನು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಒತ್ತಡ ಹೇರಲು ಕಾರಣವೇನೆಂದು ಪ್ರಶ್ನಿಸಿದರು.

ಸದ್ಯ ಈ ಮಾನಹಾನಿ ಪ್ರಕರಣದ ವಿಚಾರಣೆಯನ್ನು ನವೆಂಬರ್ 15ಕ್ಕೆ ಮುಂದೂಡಲಾಗಿದೆ. ಈ ಹಿಂದಿನ ವಿಚಾರಣೆಯಲ್ಲಿ ಕಂಗನಾ ರನೌತ್​ ಅವರು ಹಾರಜರಾಗದ ಕಾರಣಕ್ಕೆ ಅವರನ್ನು ಈ ಸಲದ ವಿಚಾರಣೆಗೆ ಹಾಜರಾಗಲೇಬೇಕು, ಇಲ್ಲವಾದಲ್ಲಿ ಬಂಧನ ವಾರೆಂಟ್​ ಹೊರಡಿಸಲಾಗುವುದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿತ್ತು. ಜೊತೆಗೆ ವಿಚಾರಣೆಯನ್ನು ಇಂದಿಗೆ ಅಂದರೆ ಸೆ. 20ಕ್ಕೆ ಮುಂದೂಡಲಾಗಿತ್ತು.

MUMBAI POLICE SUMMON KANGANA RANAUTDEFAMATION CASE FILED BY JAVED AKHTAR, ಕಂಗನಾಗೆ ಮುಂಬೈ ಪೊಲೀಸರು ನೋಟಿಸ್, ಮಾನಹಾನಿ ಪ್ರಕರಣ, ನಟಿ ಕಂಗನಾ ರನೌತ್ ವಿರುದ್ಧ ಮಾನಹಾನಿ ಪ್ರಕರಣ, ಹೃತಿಕ್ ರೋಷನ್​ ಜೊತೆ ಲವ್ ಅಫೇರ್, Defamation Case, Javed Akhtar, kangana ranaut, mumbai police, Kangana Ranaut, kangana ranaut news, kangana ranaut twitter, kangana ranaut mumbai, kangana ranaut age, kangana ranaut security, kangana anaut hot, kangana ranaut house, kangana ranaut latest news, kangana ranaut net worth, kangana ranaut instagram, kangana ranaut movies, kangana ranaut cast, kangana ranaut tweet, Kangana Ranaut mumbai tour, Kangana Ranaut in mumbai, Kangana Ranaut news, Kangana Ranaut fb, Kangana Ranaut twitter, Kangana Ranaut comments on mumbai,bollywood news, ಕಂಗನಾ ರನೌತ್​, ಮುಂಬೈನತ್ತ ಕಂಗನಾ, ಶಿವಸೇನ, ಬಾಲಿವುಡ್​, ಕಂಗನಾಗೆ ನೋಟಿಸ್ ನೀಡಿದ ಮುಂಬೈ ಪೊಲೀಸ್​, ಮಾನಹಾನಿ ಪ್ರಕರಣ, ಜಾವೇದ್​ ಅಖ್ತರ್​, ಸುಶಾಂತ್​ ಸಿಂಗ್​ ಸಾವಿನ ಪ್ರಕರಣ​, Javed Akhtar Moves Application for Kangana Ranauts Arrest in Defamation Case
ಜಾವೇದ್​ ಅಖ್ತರ್ ಹಾಗೂ ಕಂಗನಾ ರನೌತ್​


ಕಂಗನಾ ರನೌತ್ ಅವರು ಜಾವೇದ್ ಅಖ್ತರ್ ಅವರ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಿದ್ದಾರೆ. ಪದೇ ಪದೇ ಜಾವೇದ್​ ಅಖ್ತರ್​ ಅವರು ಹೂಡಿರುವ ಮಾನಹಾನಿ ಪ್ರಕರಣದಲ್ಲಿ ಪ್ರತಿ ವಿಚಾರಣೆಗೂ ಹಾಜರಾಗುವಂತೆ ಹೇಳುತ್ತಿರುವುದನ್ನು ಪ್ರಶ್ನಿಸಿರುವ ಕಂಗನಾ ಪರ ವಕೀಲರು ಈ ಮೊಕದ್ದಮ್ಮೆಯನ್ನು ಸಿಎಂಎಂ ಕೋರ್ಟ್​ಗೆ ವರ್ಗಾಯಿಸುವಂತೆ ಮನವಿ ಮಾಡಿ ಅರ್ಜಿ ಸಲ್ಲಿಸಿದ್ದಾರೆ. ಈ ನ್ಯಾಯಾಲಯದಲ್ಲಿ ನಂಬಿಕೆ ಇಲ್ಲ. ಹಾಗಾಗಿ ಇದನ್ನು ವರ್ಗಾವಣೆ ಮಾಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ. ಈ ಅರ್ಜಿಯ ವಿಚಾರಣೆ ಅಕ್ಟೋಬರ್ 1ಕ್ಕೆ ನಡೆಯಲಿದೆ.

ಇದನ್ನೂ ಓದಿ: ಹಾಸ್ಯದ ಜೊತೆಗೆ ಗಂಭೀರ ವಿಷಯ ಹೊತ್ತು ತಂದ Petromax​: ಟ್ರೇಲರ್​ಗೆ ಸಿಗುತ್ತಿದೆ ಮಿಶ್ರ ಪ್ರತಿಕ್ರಿಯೆ

ಕಂಗನಾ ಅವರು ಈ ಮಾನಹಾನಿ ಪ್ರಕರಣದಲ್ಲಿ ಪ್ರತಿ ವಿಚಾರಣೆಗೂ ಹಾಜರಾಗುವಂತೆ ಒತ್ತಡ ಹೇರಲಾಗುತ್ತಿದೆ. ಅಲ್ಲದೆ ವಿಚಾರಣೆಗೆ ಬರುತ್ತಿಲ್ಲವೆಂದು ಅವರಿಗೆ ಬಂಧನ ವಾರೆಂಟ್​​ ಹೊರಡಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಇದು ಎಲ್ಲಿಯ ನ್ಯಾಯ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ತುಂಡುಡುಗೆ ತೊಟ್ಟು ಗೋವಾದ ಬೀಚ್​ನಲ್ಲಿ ವೀಕೆಂಡ್ ಎಂಜಾಯ್ ಮಾಡಿದ ನಟಿ Sameera Reddy

ಹೃತಿಕ್​ ರೋಷನ್​ ಜೊತೆ ಇದ್ದ ಸಂಬಂಧದ ಬಗ್ಗೆ ಎಲ್ಲೂ ಬಾಯಿಬಿಡದಂತೆ ಮೌನವಹಿಸಬೇಕೆಂದು ಜಾವೇದ್ ಅಖ್ತರ್​ ಒತ್ತಡವೇರಿದ್ದರು ಎಂದು ಕಂಗನಾ ಸಂದರ್ಶನದಲ್ಲಿ ಆರೋಪಿಸಿದ್ದರು. ಈ ಆರೋಪ ಸುಳ್ಳು ಎಂದು ಗೀತ ರಚನೆಕಾರ ನ್ಯಾಯಾಲಯದ ಮೆಟ್ಟಿಲೇರಿದ್ದರು. ಕಂಗನಾ ಹಾಗೂ ಹೃತಿಕ್ ರೋಷನ್​ ಅವರ ನಡುವಿನ ಲವ್ ಅಫೇರ್ ಕುರಿತಾಗಿ ಈ ಹಿಂದೆ ಸಾಕಷ್ಟು ಸುದ್ದಿ ಹರಿದಾಡಿತ್ತು. ನಂತರ ಕಂಗನಾ ತಮ್ಮ ಹಾಗೂ ನೃತಿಕ್ ನಡುವಿನ ಪ್ರೀತಿಯ ವಿಷಯದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದರು.

ಇದನ್ನೂ ಓದಿ: Weight Loss: ತೂಕ ಇಳಿಸಿಕೊಂಡ ನಂತರ ವಿವಾಹವಾದ ಹಾಸ್ಯ ನಟಿ Vidyullekha Raman

ಸದ್ಯ ಕಂಗನಾ ರನೌತ್ ಅವರು ತಮ್ಮ ಸಿನಿಮಾ ತಲೈವಿ ಹಿಟ್​ ಆಗಿರುವ ಖುಷಿಯಲ್ಲಿದ್ದಾರೆ. ಕಂಗನಾ ಅವರ ಅಭಿನಯಕ್ಕೆ ವಿಮರ್ಶಕರು ಹಾಗೂ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಚಿತ್ರಮಂದಿರ ಹಾಗೂ ಒಟಿಟಿಯಲ್ಲಿ ಒಟ್ಟಿಗೆ ಈ ತಲೈವಿ ಸಿನಿಮಾ ತೆರೆ ಕಂಡಿದೆ. ಕಲೆಕ್ಷನ್ ವಿಷಯದಲ್ಲಿ ತಲೈವಿ ಕೊಂಚ ಹಿಂದೆ ಬಿದ್ದರೂ ಸಹ ಸಿನಿಪ್ರಿಯರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾಳೆ.
Published by:Anitha E
First published: