ಶಾಹೀನ್ ಬಾಗ್​ ಖ್ಯಾತಿಯ 82 ವರ್ಷದ ಬಿಲ್ಕೀಸ್​ ದಾದಿಯನ್ನು ಪಾಕಿಸ್ತಾನ ಏಜೆಂಟ್​ ಎಂದ ನಟಿ ಕಂಗನಾಗೆ ನೊಟೀಸ್​

ನಟಿಯ ವರ್ತನೆಯನ್ನು ವಿರೋಧಿಸಿರುವ ಪಂಜಾಬ್‌ನ ಜಿರಾಕ್‌ಪುರ ಪಟ್ಟಣದ ವಕೀಲರು ಆಕೆಗೆ ಕಾನೂನು ನೋಟಿಸ್ ಕಳುಹಿಸಿದ್ದು, ಏಳು ದಿನಗಳ ಒಳಗಾಗಿ ಕಂಗನಾ ತಮ್ಮ ಟ್ವೀಟ್‌ಗೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ನಟಿ ಕಂಗನಾ.

ನಟಿ ಕಂಗನಾ.

 • Share this:
  ನವ ದೆಹಲಿ ನವೆಂಬರ್ (02); ಕೇಂದ್ರ ಸರ್ಕಾರ ಕಳೆದ ವರ್ಷ ಪೌರತ್ವ ತಿದ್ದುಪಡಿ ಕಾನೂನನ್ನು ಸಂಸತ್​ನಲ್ಲಿ ಮಂಡಿಸಿ ಅನುಮೋದನೆ ಪಡೆದ ನಂತರ ಈ ಕಾಯ್ದೆಯನ್ನು ವಿರೋಧಿಸಿ ದೆಹಲಿಯ ಶಾಹೀನ್ ಬಾಗ್​ನಲ್ಲಿ ಸುಮಾರು 6 ತಿಂಗಳಿಗೂ ಅಧಿಕ ಕಾಲ ಹೋರಾಟ ನಡೆಸಲಾಗಿತ್ತು. ಈ ಹೋರಾಟದ ವೇಳೆ ಇಡೀ ದೇಶದ ಗಮನ ಸೆಳೆದ ವ್ಯಕ್ತಿ 82 ವರ್ಷದ ಬಿಲ್ಕೀಸ್​ ದಾದಿ. ಈ ಇಳಿ ವಯಸ್ಸಿನಲ್ಲೂ ಅವರು ಹೋರಾಟದಲ್ಲಿ ಪಾಲ್ಗೊಂಡು ಎಲ್ಲರಲ್ಲೂ ಸ್ಪೂರ್ತಿ ತುಂಬಿದ್ದರು. ಇದೇ ಕಾರಣಕ್ಕೆ ಇವರನ್ನು ಟೈಮ್ಸ್​ ನಿಯತಕಾಲಿಕೆ 2020ರ ಪ್ರಭಾವಶಾಲಿ 100 ಜನರಲ್ಲಿ ಒಬ್ಬರು ಎಂದು ಗುರುತಿಸಿತ್ತು. ನಿನ್ನೆ ಸಹ ಬಿಲ್ಕೀಸ್​ ದಾದಿ ದೆಹಲಿಯ ರೈತರ ಹೋರಾಟವನ್ನು ಬೆಂಬಲಿಸಿ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಅವರನ್ನು ಪೊಲೀಸರು ಬಂಧನಕ್ಕೂ ಒಳಪಡಿಸಿದ್ದರು. ಆದರೆ, ಇಂತಹ ವ್ಯಕ್ತಿತ್ವದ ಬಿಲ್ಕೀಸ್​ ಅಜ್ಜಿ ವಿರುದ್ಧ ನಟಿ ಕಂಗನಾ ರಣಾವತ್ ನೀಡಿರುವ ಹೇಳಿಕೆಗೆ ಇದೀಗ ಅವರಿಗೆ ನೊಟೀಸ್​ ಜಾರಿಗೊಳಿಸಲಾಗಿದೆ.

  82 ವರ್ಷದ ಬಿಲ್ಕೀಸ್​ ದಾದಿ ಕುರಿತು ವಿವಾದಾತ್ಮಕವಾಗಿ ಟ್ವೀಟ್​ ಮಾಡಿದ್ದ ನಟಿ ಕಂಗನಾ, "ಹಹಹ ಇದು ಅದೇ ದಾದಿ, ಟೈಮ್ ಮ್ಯಾಗಝಿನ್ ಹೇಳಿರುವ ಅತ್ಯಂತ ಪ್ರಭಾವಶಾಲಿ ಇಂಡಿಯನ್…ಮತ್ತು ಅವರು 100 ರುಪಾಯಿಗೆ ಮಾರಾಟವಾಗಿದ್ದಾರೆ. ಭಾರತ ಮುಜುಗರಕ್ಕೀಡಾಗಲು ಅಂತರಾಷ್ಟ್ರೀಯ ಪಿಆರ್‌ಗಳನ್ನು ಪಾಕಿಸ್ತಾನಿ ಪತ್ರಕರ್ತರು ಹೈಜಾಕ್ ಮಾಡಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಮಗಾಗಿ ಮಾತನಾಡಲು ನಮ್ಮದೇ ಜನರು ಪಾಕಿಸ್ತಾನಿಗಳಿಗೆ ಬೇಕಾಗಿದ್ದಾರೆ" ಎಂದು ಟ್ವೀಟ್ ಮಾಡಿದ್ದರು. ಆದರೆ, ಈ ಟ್ವೀಟ್​ ಅನ್ನು ತದನಂತರ ಅವರು ಅಳಿಸಿದ್ದರು.

  kangana tweet
  ಕಂಗನಾ ರಣಾವತ್​ ಟ್ವೀಟ್​.


  ಆದರೆ, ನಟಿ ಕಂಗನಾ ಅವರ ಟ್ವೀಟ್​ ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ನಟಿಯ ವರ್ತನೆಯನ್ನು ವಿರೋಧಿಸಿರುವ ಪಂಜಾಬ್‌ನ ಜಿರಾಕ್‌ಪುರ ಪಟ್ಟಣದ ವಕೀಲರು ಆಕೆಗೆ ಕಾನೂನು ನೋಟಿಸ್ ಕಳುಹಿಸಿದ್ದು, ಏಳು ದಿನಗಳ ಒಳಗಾಗಿ ಕಂಗನಾ ತಮ್ಮ ಟ್ವೀಟ್‌ಗೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿರುವ ವೃದ್ದ ಮಹಿಳೆಯೊಬ್ಬರನ್ನು ಕಂಗನಾ "ಬಿಲ್ಕಿಸ್ ದಾದಿ" ಎಂದು ತಪ್ಪಾಗಿ ಗುರುತಿಸಿದ್ದಾರೆ ಎಂದು ವಕೀಲರು ತಮ್ಮ ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಸ್ವತಃ ಬಿಲ್ಕಿಸ್ ಬಾನೂ ಅವರೇ ಚಿತ್ರದಲ್ಲಿರುವ ಮಹಿಳೆ ತಾನಲ್ಲ ಎಂದು ದೃಡಪಡಿಸಿದ್ದಾರೆ.

  ಇದನ್ನೂ ಓದಿ : ರೈತ ಹೋರಾಟಕ್ಕೆ ಬಂಬಲ; 82 ವರ್ಷದ ಶಾಹೀನ್​ ಬಾಗ್ ಅಜ್ಜಿ ಬಿಲ್ಕೀಸ್​ರನ್ನು ಬಂಧಿಸಿದ ಪೊಲೀಸರು

  ಅಲ್ಲದೆ, ಕಂಗನಾ ತನ್ನ ಟ್ವೀಟ್ ಮೂಲಕ ರೈತರ ಪ್ರತಿಭಟನೆಯನ್ನು ಅಪಹಾಸ್ಯ ಮಾಡಿದ್ದಾರೆ ಎಂದು ನೋಟಿಸ್‌‌ನಲ್ಲಿ ತಿಳಿಸಲಾಗಿದೆ. "ಈ ರೀತಿಯಾಗಿ ಟ್ವೀಟ್ ಮಾಡುವ ಮೂಲಕ, ರೈತರನ್ನು ಅವಮಾನಿಸಲಾಗುತ್ತಿದೆ. ರೈತ ಹೋರಾಟಗಾರರನ್ನು ಬಾಡಿಗೆಗೆ ತಂದು ಹೋರಾಟ ಮಾಡಿಸಲಾಗುತ್ತಿದೆ ಎಂಬಂತಹ ಧಾಟಿ ಈ ಟ್ವೀಟ್​ನಲ್ಲಿದೆ. ಇದು ಆಕ್ಷೇಪಾರ್ಹ. ಹೀಗಾಗಿ ನಟಿ ಕಂಗನಾ ರೈತರ ಬಳಿ ಕ್ಷಮೆ ಕೋರಲೇಬೇಕು" ಎಂದು ಒತ್ತಾಯಿಸಲಾಗಿದೆ.

  ಮಂಗಳವಾರ ಸಂಜೆ ದೆಹಲಿ-ಹರಿಯಾಣದ ಸಿಂಗು ಗಡಿಯಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಲು ಬಿಲ್ಕೀಸ್ ಬಾನು ಆಗಮಿಸಿದ್ದರು. ಆದರೆ, ಈ ವೇಳೆ ಪೊಲೀಸರು ಅವರನ್ನು ಬಂಧನಕ್ಕೆ ಒಳಪಡಿಸಿದ್ದರು. ಈ ವೇಳೆ ಮಾತನಾಡಿದ್ದ ಬಿಲ್ಕೀಸ್​ ದಾದಿ, "ನಾವು ರೈತರ ಮಕ್ಕಳು. ಹೀಗಾಗಿ ಇಂದಿನ ರೈತರ ಪ್ರತಿಭಟನೆಯನ್ನು ನಾವು ಬೆಂಬಲಿಸುತ್ತೇವೆ. ರೈತ ವಿರೋಧಿ ಸರ್ಕಾರದ ನೀತಿಯ ವಿರುದ್ಧ ಧ್ವನಿ ಎತ್ತುತ್ತೇವೆ. ಸರ್ಕಾರ ನಮ್ಮ ಮಾತನ್ನು ಕೇಳಬೇಕು" ಎಂದು ಒತ್ತಾಯಿಸಿದ್ದಾರೆ.
  Published by:MAshok Kumar
  First published: