Kangana Ranaut: ಪೊಲೀಸ್​​ ವಿಚಾರಣೆಗೆ ಹಾಜರಾಗುವಂತೆ ಕಂಗನಾ ಸಹೋದರಿಯರಿಗೆ ಸಮನ್ಸ್​ ಜಾರಿ

ವಿಜಯದಶಮಿ ಹಬ್ಬದ ದಿನವಾದ ಅ.26 ಮತ್ತು 27ರಂದು ಅವರು ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ

ಕಂಗನಾ-ರಂಗೋಲಿ

ಕಂಗನಾ-ರಂಗೋಲಿ

 • Share this:
  ಮುಂಬೈ  (ಅ.21) :ಪೊಲೀಸ್​ ವಿಚಾರಣೆಗೆ ಹಾಜರಾಗುವಂತೆ ನಟಿ ಕಂಗನಾ ರನೌತ್​ ಮತ್ತು ಆಕೆಯ ಸಹೋದರಿ ರಂಗೋಲಿ ಚಾಂದೆಲ್​ ಅವರಿಗೆ ಸಮನ್ಸ್​ ಜಾರಿ ಮಾಡಲಾಗಿದೆ. ದೇಶದ್ರೋಹ ಪ್ರಕರಣದ ಅಡಿ ಈ ಸಮನ್ಸ್​ ಜಾರಿ ಮಾಡಲಾಗಿದೆ. ವಿಜಯದಶಮಿ ಹಬ್ಬದ ದಿನವಾದ ಅ.26 ಮತ್ತು 27ರಂದು ಅವರು ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. ಬಾಲಿವುಡ್​ ನಟಿ ಕಂಗನಾ ರನೌತ್​ ಹಾಗೂ ಆಕೆಯ ಸಹೋದರಿ ರಂಗೋಲಿ ಚಾಂದೆಲ್​ ತಮ್ಮ ಟ್ವೀಟ್​ಗಳ ಮೂಲಕ ಕೋಮು ದ್ವೇಷವನ್ನು ಹರಡುವ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ​ ದೂರಿನ ಕುರಿತು ದಾಖಲಾದ ಎಫ್​ಐಆರ್​ ಅಡಿ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು.

  ನಟಿ ಕಂಗನಾ ಮತ್ತವರ ಸಹೋದರಿ ಟ್ವೀಟ್​ ಮೂಲಕ ಕೋಮುದ್ವೇಷ ಹರಡುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿ ನಿರ್ದೇಶಕ ಸಾಹಿಲ್​ ಆಸ್ರಫ್​ಆಲಿ ಸಯ್ಯದ್​ ಬಾಂದ್ರಾ ಮೆಟ್ರೋಪಾಲಿಟನ್​ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ಈ ಕ್ರಮಕ್ಕೆ ಮುಂದಾಗಲಾಗಿದೆ.

  ಇದನ್ನು ಓದಿ: ಕಂಗನಾ ರನೌತ್​ ಮನೆಯಲ್ಲಿ ಮದುವೆ ಸಂಭ್ರಮ: ಇಲ್ಲಿವೆ ಚಿತ್ರಗಳು..!

  ಕಂಗನಾ ಸೋಹದರರಿಯರ ಮೇಲೆ ಐಪಿಸಿ ಸೆಕ್ಷನ್​ 153ಎ (ದ್ವೇಷವನ್ನು ಉತ್ತೇಜಿಸುವುದು), 295ಎ (ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ಉದ್ದೇಶದಿಂದ ನಡೆಸುವ ದುರುದ್ದೇಶ ಪೂರಿತ ಕೃತ್ಯಗಳು), 124 ಎ (ದೇಶದ್ರೋಹ) ಅಡಿಯಲ್ಲಿ ಅವರು ಎಫ್​ಐಆರ್​ ದಾಖಲಾಗಿದೆ.

  ಕಂಗಾನಾ ಆಕ್ಷೇಪಾರ್ಹ ಟ್ವೀಟ್​ ಮಾಡಿದ್ದಾರೆ. ಇದು ಧಾರ್ಮಿಕ ಮನೋಭಾವಕ್ಕೆ ಧಕ್ಕೆ ತರುವಂತೆ ಇದೆ. ಅಷ್ಟೇ ಅಲ್ಲದೇ , ಅನೇಕ ಕಲಾವಿದರ ಭಾವನೆಗಳು ಚ್ಯುತಿ ತರುತ್ತಿದೆ. ಕಂಗನಾ ಕಲಾವಿದರನ್ನು ಕೋಮು ವರ್ಗದಲ್ಲಿ ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಯ್ಯದ್​ ದೂರು ನೀಡಿದ್ದಾರೆ.

  ಅವರ ಸಹೋದರಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಎರಡು ಸಮುದಾಯಗಳ ನಡುವೆ ಕೋಮು ದ್ವೇಷ ಹರಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ ಇದಕ್ಕೆ ಸಂಬಂಧಪಟ್ಟ ಅಗತ್ಯ ದಾಖಲೆಗಳನ್ನು ಒದಗಿಸಲಾಗಿದೆ. ಈ ದೂರಿನ ಅನ್ವಯ ಅಗತ್ಯ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚನೆ ನೀಡಿತು.
  ಸದ್ಯ ನಟಿ ಕಂಗನಾ ತಮ್ಮ ತವರು ಮನಾಲಿಯಲ್ಲಿದ್ದು, ನವರಾತ್ರಿ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.
  Published by:Seema R
  First published: