‘ಶಬರಿಮಲೆ ಪ್ರವೇಶಿಸಿದ್ದ ಮಹಿಳೆಗೂ ಗಂಡನ ಜತೆ ಬದುಕುವ ಹಕ್ಕಿದೆ; ಮನೆ ಬಹಿಷ್ಕಾರ ಸಲ್ಲದು ಎಂದು ಕೋರ್ಟ್​​ ಚಾಟಿ!

ಮಹಿಳೆಯರು ಶಬರಿಮಲೆ ದೇವಾಲಯ ಪ್ರವೇಶಿಸಿದ್ದ ಸುದ್ದಿ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದ ಕೂಡಲೇ ಕೇರಳದಾದ್ಯಂತ ಭಾರೀ ಪ್ರತಿಭಟನೆಗಳು ನಡೆದವು. ನಂತರ ಸುದ್ದಿಯಲ್ಲಿದ್ದ ಕನಕಾ ಮನೆಗೆ ವಾಪಾಸಾದ ಕೂಡಲೇ ಅವರ ಅತ್ತೆಯಿಂದಲೇ ಹಲ್ಲೆಗೆ ಒಳಗಾಗಿದ್ದರು. 

ಕನಕ ದುರ್ಗಾ

ಕನಕ ದುರ್ಗಾ

  • News18
  • Last Updated :
  • Share this:
ನವದೆಹಲಿ (ಫೆ.06): ಶಬರಿಮಲೆ ಪ್ರವೇಶಿಸಿದ್ದ ಮಹಿಳೆಗೆ ಕೂಡ ತನ್ನ ಗಂಡನ ಜತೆ ಬದುಕುವ ಹಕ್ಕಿದೆ ಎಂದು ಕೇರಳದ ಮಲಪ್ಪುರಂ ಗ್ರಾಮ ನ್ಯಾಯಲಯ ​ಆದೇಶ ಹೊರಡಿಸಿದೆ. ಪ್ರತಿಯೊಬ್ಬ ಮಹಿಳೆಗೂ ತನ್ನ ಗಂಡನ ಮನೆಯಲ್ಲಿ ಜೀವಿಸುವ ಹಕ್ಕಿದೆ. ಅಯ್ಯಪ್ಪನ ದೇಗುಲ ಪ್ರವೇಶಿದ್ದ ಮಾತ್ರಕ್ಕೆ ಮನೆಯಿಂದ ಬಹಿಷ್ಕಾರ ಹಾಕುವುದು ಸರಿಯಲ್ಲ; ಇದು ಕಾನೂನಿಗೆ ವಿರುದ್ಧ ಎಂದು ನ್ಯಾಯದೀಶ ಕೆ.ಕೆ ನಿಮ್ಮಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಸುಪ್ರೀಂಕೋರ್ಟ್​​​ ಮಹತ್ವದ ಆದೇಶದ ನಂತರದಲ್ಲಿ ಕನಕಾ ದುರ್ಗಾ ಮತ್ತು ಬಿಂದು ಶಬರಿಮಲೆ ಅಯ್ಯಪ್ಪನ ದೇಗುಲ ಪ್ರವೇಶಿಸಿದ್ದರು. ಬಳಿಕ ದೇಗುಲ ಪ್ರವೇಶಿಸಿದ್ದ ಕನಕಾ ದುರ್ಗಾರಿಗೆ ಮನೆಯವರು ಬಹಿಷ್ಕಾರ ಹಾಕಿದ್ದರು. ಕುಟುಂಬದವರು ಕನಕರನ್ನು ಮನೆಗೆ ಬಾರದಂತೆ ತಾಖೀತು ಮಾಡಿ, ಹೊರಗಟ್ಟಿದ್ದರು. ಅದಾದ ನಂತರ ಕನಕ ಅವರು ಕೊನೆಗೂ ಸಂತ್ರಸ್ತರ ಕೇಂದ್ರದಲ್ಲಿ (ಒನ್​ ಸ್ಟಾಪ್​ ಸೆಂಟರ್​) ಆಶ್ರಯ ಪಡೆಯುವಂತಾಗಿತ್ತು.

ಈ ಮಧ್ಯೆ ಇದನ್ನು ಪ್ರಶ್ನಿಸಿ ನ್ಯಾಯಕ್ಕಾಗಿ ಕನಕ ದುರ್ಗಾ ಗ್ರಾಮ ನ್ಯಾಯಲಯ ಮೊರೆ ಹೋಗಿದ್ದರು. ಇದೀಗ ವಿಚಾರಣೆ ನಡೆಸಿರುವ ಕೋರ್ಟ್​​ ಆಕೆಗೂ ಬದುಕುವ ಹಕ್ಕಿದೆ. ಇನ್ನೊಮ್ಮೆ ನೀವು ತನ್ನ ಗಂಡನ ಮನೆಯಿಂದ ಆಕೆಯನ್ನು ಹೊರಗಿಟ್ಟರೇ ಕಾನೂನು ಕ್ರಮಕೈಗೊಳ್ಳುವುದಾಗಿ ಚಾಟಿ ಬೀಸಿದೆ. ಅಲ್ಲದೇ ಇಂದಿನಿಂದಲೇ ಕನಕಾ ದುರ್ಗರನ್ನು ಕ್ಷಮೆ ಕೇಳಿ ಮನೆಗೆ ಸೇರಿಸಿಕೊಳ್ಳಬೇಕೆಂದು ತೀರ್ಪು ನೀಡಿದೆ.

ಇದನ್ನೂ ಓದಿ: Sabarimala Women Entry: ಶಬರಿಮಲೆಗೆ ಮಹಿಳೆಯರ ಪ್ರವೇಶ: ತೀರ್ಪು ಮರುಪರಿಶೀಲನೆಗೆ ಅರ್ಜಿ; ‘ಸುಪ್ರೀಂ’ನಿಂದ ಇಂದು ವಿಚಾರಣೆ!

ಈ ಹಿಂದೆಯೇ ಕೇರಳದ ಶಬರಿಮಲೆ ಅಯ್ಯಪ್ಪನ ದೇವಸ್ಥಾನದೊಳಗೆ ಎಲ್ಲ ವಯಸ್ಸಿನ ಮಹಿಳೆಯರಿಗೂ ಪ್ರವೇಶ ಅವಕಾಶ ನೀಡಬೇಕು ಎಂದು ಸುಪ್ರೀಂಕೋರ್ಟ್ ಸೆ.28ರಂದು ತೀರ್ಪು ನೀಡಿತ್ತು. ಈ ಆದೇಶವನ್ನು ಕೇರಳ ಸರ್ಕಾರವೂ ಅನುಷ್ಠಾನಗೊಳಿಸಲು ಮುಂದಾಗಿತ್ತು. ಈ ಬೆನ್ನಲ್ಲೇ ಕನಕ ದುರ್ಗಾ ಹಾಗೂ ಬಿಂದು ಎಂಬುವರು ದೇವಾಲಯ ಪ್ರವೇಶಿಸಿದ್ದರು.

ಮಹಿಳೆಯರು ದೇವಾಲಯ ಪ್ರವೇಶಿಸಿದ್ದ ಸುದ್ದಿ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದ ಕೂಡಲೇ ಕೇರಳದಾದ್ಯಂತ ಭಾರೀ ಪ್ರತಿಭಟನೆಗಳು ನಡೆದವು. ನಂತರ ಸುದ್ದಿಯಲ್ಲಿದ್ದ ಕನಕಾ ಮನೆಗೆ ವಾಪಾಸಾದ ಕೂಡಲೇ ಅವರ ಅತ್ತೆಯಿಂದಲೇ ಹಲ್ಲೆಗೆ ಒಳಗಾಗಿದ್ದರು. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಕನಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಾಗೆಯೇ ಚೇತರಿಕೆ ಕಂಡಿದ್ದ ಕನಕಾ ಸಂತ್ರಸ್ತರ ಕೇಂದ್ರಕ್ಕೆ ಹಿಂತಿರುಗಿದ್ದರು.

ಇದನ್ನೂ ಓದಿ: ಸರಳ ಜೀವನ, ನಿಷ್ಠುರ ರಾಜಕಾರಣಕ್ಕೆ ಸುದ್ದಿಯಾದ ನಾಯಕಿ: ಸಿಎಂ ಮಮತಾ ಬ್ಯಾನರ್ಜಿ ಸಂಬಳ ಕೇವಲ 1 ರೂಪಾಯಿ!

ಆಸ್ಪತ್ರೆಯಿಂದ ಕನಕಾ ಮತ್ತೆ ಮನೆ ಪ್ರವೇಶಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಅವರ ಅಣ್ಣ ಹಾಗೂ ಗಂಡ ಇದಕ್ಕೆ ಅವಕಾಶ ನೀಡಿರಲಿಲ್ಲ. ಅವರು ಪೊಲೀಸ್​ ಠಾಣೆಯಲ್ಲಿ ತಮ್ಮ ಅಳಲು ತೋಡಿಕೊಂಡಿದ್ದರು. ಹಾಗಾಗಿ, ಒನ್​ ಸ್ಟಾಪ್​ ಸೆಂಟರ್ನಲ್ಲಿ ಅವರಿಗೆ ಆಶ್ರಯ ನೀಡಲಾಗಿತ್ತು. ಇದೀಗ ಮತ್ತೆ ಗಂಡನ ಮನೆಗೆ ಹೋಗಲು ಆಕೆಗೆ ಹಕ್ಕಿದೆ ಎಂದು ಗ್ರಾಮ ನ್ಯಾಯಲಯ ಸೂಚಿಸಿದೆ ಎನ್ನಲಾಗಿದೆ.

---------------------
ಕಮೀಷನರ್ ಆಫೀಸ್ ಬಳಿ ಯುವತಿ ಆತ್ಮಹತ್ಯೆಗೆ ಯತ್ನ
First published: