ಸಿಎಎ ವಿರೋಧಿ ಪ್ರತಿಭಟನಾಕಾರರ ಆಹಾರ, ಹೊದಿಕೆ ಹೊತ್ತೊಯ್ದ ಪೊಲೀಸರು; ಕಂಬಳಿ ಕಳ್ಳರ ವಿಡಿಯೋ ವೈರಲ್

ಸಿಎಎ ವಿರೋಧಿಸಿ ಉತ್ತರ ಪ್ರದೇಶದ ಲಕ್ನೋದ ಕ್ಲಾಕ್​ ಟವರ್ ಬಳಿ ತೀವ್ರ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನಾಕಾರರ ಹೊದಿಕೆ, ಚಾಪೆಗಳನ್ನು ಹೊತ್ತೊಯ್ಯುತ್ತಿರುವ ಪೊಲೀಸರ ವಿಡಿಯೋ ಟ್ವಿಟ್ಟರ್​ನಲ್ಲಿ ವೈರಲ್ ಆಗಿವೆ.

Sushma Chakre | news18-kannada
Updated:January 19, 2020, 1:55 PM IST
ಸಿಎಎ ವಿರೋಧಿ ಪ್ರತಿಭಟನಾಕಾರರ ಆಹಾರ, ಹೊದಿಕೆ ಹೊತ್ತೊಯ್ದ ಪೊಲೀಸರು; ಕಂಬಳಿ ಕಳ್ಳರ ವಿಡಿಯೋ ವೈರಲ್
ಪ್ರತಿಭಟನಾಕಾರರ ಬ್ಲಾಂಕೆಟ್ ಹೊತ್ತೊಯ್ಯುತ್ತಿರುವ ಪೊಲೀಸರು
  • Share this:
ಲಕ್ನೋ (ಜ. 19): ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್​ಆರ್​ಸಿ ಜಾರಿಗೆ ತರುವುದನ್ನು ವಿರೋಧಿಸಿ ದೇಶಾದ್ಯಂತ ಭಾರೀ ಪ್ರತಿಭಟನೆಗಳು ನಡೆದಿದ್ದವು. ಉತ್ತರ ಪ್ರದೇಶದಲ್ಲಿ ಆ ಪ್ರತಿಭಟನೆ ಇನ್ನೂ ಮುಂದುವರೆಯುತ್ತಿದ್ದು, ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರ ಆಹಾರ, ಬ್ಲಾಂಕೆಟ್​ಗಳನ್ನು ಕಿತ್ತುಕೊಂಡು ಹೋಗುತ್ತಿರುವ ವಿಡಿಯೋಗಳು ವೈರಲ್ ಆಗಿವೆ.

ಸಿಎಎ ವಿರೋಧಿಸಿ ಉತ್ತರ ಪ್ರದೇಶದ ಲಕ್ನೋದ ಕ್ಲಾಕ್​ ಟವರ್ ಬಳಿ ತೀವ್ರ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನಾಕಾರರ ಹೊದಿಕೆ, ಚಾಪೆಗಳನ್ನು ಹೊತ್ತೊಯ್ಯುತ್ತಿರುವ ಪೊಲೀಸರ ವಿಡಿಯೋ ಟ್ವಿಟ್ಟರ್​ನಲ್ಲಿ ಹರಿದಾಡುತ್ತಿವೆ.

ಪ್ರತಿಭಟನಾಕಾರರನ್ನು ತಣ್ಣಗಾಗಿಸಬೇಕೆಂದು ಪ್ರಯತ್ನ ಪಡುತ್ತಿರುವ ಪೊಲೀಸರು ಅವರ ಅಗತ್ಯ ವಸ್ತುಗಳನ್ನು ಕಿತ್ತುಕೊಂಡು, ಪ್ರತಿಭಟನೆಯನ್ನು ನಿಲ್ಲಿಸುವಂತೆ ಮಾಡಲು ಹರಸಾಹಸ ಪಡುತ್ತಿದ್ದಾರೆ. ಪೊಲೀಸರ ಈ ದೌರ್ಜನ್ಯಕ್ಕೆ ಟ್ವಿಟ್ಟರ್​ನಲ್ಲಿ ತೀವ್ರ ಆಕ್ರೋಶ ಕೇಳಿಬರುತ್ತಿದೆ.

#KAMBALCHOR_UPPOLICE (ಕಂಬಳಿ ಕಳ್ಳ ಪೊಲೀಸರು) ಹ್ಯಾಶ್​ ಟ್ಯಾಗ್​ ಹಾಕಿ ಟ್ವೀಟ್ ಮಾಡುವ ಮೂಲಕ ಉತ್ತರ ಪ್ರದೇಶ ಪೊಲೀಸರ ವರ್ತನೆಯನ್ನು ಪ್ರತಿಭಟನಾಕಾರರು ಖಂಡಿಸಿದ್ದಾರೆ.
ಸಿಎಎ ವಿರೋಧಿಸಿ ಉತ್ತರ ಪ್ರದೇಶದ ಅಲಿಘಡದಲ್ಲಿ ಪ್ರತಿಭಟನೆ ನಡೆಸಿದ ಸುಮಾರು 50 ಮಹಿಳೆಯರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಸೆಕ್ಷನ್ 144 ಉಲ್ಲಂಘಿಸಿ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ. ಆದ್ದರಿಂದ ಸುಮಾರು 50 ಅಪರಿಚಿತ ಮಹಿಳೆಯರ ವಿರುದ್ಧ ದೂರು ದಾಖಲಿಸಲಾಗಿದೆ.

(ವರದಿ: ಪ್ರಾಂಶು ಮಿಶ್ರಾ)
First published: January 19, 2020, 1:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading