K Kamaraj Birth Anniversary : ತಮಿಳುನಾಡಿನ ಅಪರೂಪದ ರಾಜಕಾರಣಿ ಕೆ. ಕಾಮರಾಜ್ ಅವರ 117ನೇ ಜಯಂತಿ

1903 ಜುಲೈ 15ರಂದು ತಮಿಳುನಾಡಿನ ವಿರುಧುನಗರನಲ್ಲಿ ಕುಮಾರಸಾಮಿ ನಾಡಾರ್ ಹಾಗೂ ಶಿವಗಾಮಿ ಅಮ್ಮಾಳ್ ಅವರ ಮಗನಾಗಿ ಜನಿಸುವ ಕಾಮರಾಜರ್ ಜೀವನ ಸಣ್ಣ ವಯಸ್ಸಿನಿಂದಲೂ ಬಡತನ ಹಾಗೂ ಕಷ್ಟದಿಂದಲೇ ಕೂಡಿತ್ತು

news18-kannada
Updated:July 15, 2020, 1:24 PM IST
K Kamaraj Birth Anniversary : ತಮಿಳುನಾಡಿನ ಅಪರೂಪದ ರಾಜಕಾರಣಿ ಕೆ. ಕಾಮರಾಜ್ ಅವರ 117ನೇ ಜಯಂತಿ
ಕೆ. ಕಾಮರಾಜ್
  • Share this:
ದೇಶದಲ್ಲಿ ಮಧ್ಯಾಹ್ನದ ಬಿಸಿ ಊಟ ಮತ್ತು ಉಚಿತ ಶಿಕ್ಷಣಕ್ಕೆ ಅಡಿಪಾಯ ಹಾಕಿದವರು ಇವರು. ಸ್ವತಂತ್ರ ಭಾರತದ ಮೊದಲ 'ಕಿಂಗ್ ಮೇಕರ್' ಎಂದು ಪರಿಗಣಿಸಲ್ಪಟ್ಟವರು ಇವರು. ಮೂರು ಬಾರಿ ತಮಿಳುನಾಡು ಮುಖ್ಯಮಂತ್ರಿಯಾದವರು. ಸಿಎಂ ಹುದ್ದೆ ತ್ಯಜಿಸಿ ಪಕ್ಷ ಸಂಘಟನೆಗೆ ತೊಡಗಿಸಿಕೊಂಡವರು. ಇವರೇ ಕೆ.ಕಾಮರಾಜ್. ತಮಿಳುನಾಡಿನಲ್ಲಿ ದಶಕಗಳ ಹಿಂದೆ ಕ್ರಾಂತಿಯ ಭಾಷ್ಯ ಬರೆದಿದ್ದ ಕಾಮರಾಜ್ ಅವರ ಜನ್ಮದಿನ ಇಂದು.

1903 ಜುಲೈ 15ರಂದು ತಮಿಳುನಾಡಿನ ವಿರುಧು ನಗರನಲ್ಲಿ ಕುಮಾರಸಾಮಿ ನಾಡಾರ್ ಹಾಗೂ ಶಿವಗಾಮಿ ಅಮ್ಮಾಳ್ ಅವರ ಮಗನಾಗಿ ಜನಿಸುವ ಕಾಮರಾಜರ್ ಜೀವನ ಸಣ್ಣ ವಯಸ್ಸಿನಿಂದಲೂ ಬಡತನ ಹಾಗೂ ಕಷ್ಟದಿಂದಲೇ ಕೂಡಿತ್ತು. ಇವರು ಕೆಳ ಜಾತಿಯವರಾದ ಕಾರಣ ಸಾಮಾಜಿಕವಾಗಿಯೂ ಇವರ ಸ್ಥಾನಮಾನ ಅಷ್ಟು ಉತ್ತಮವಾಗಿರಲಿಲ್ಲ.

ಸಾಮಾಜಿಕ ಅಸಮಾನತೆ ಹಾಗೂ ಬಡತನದಿಂದ ಕಾಮರಾಜ್ ಕುಟುಂಬ ನಲುಗಿತ್ತು. ಅಲ್ಲದೆ ಕಾಮರಾಜ್ ತಮ್ಮ 12 ನೇ ವಯಸ್ಸಿನಲ್ಲೇ ತಮ್ಮ ತಂದೆಯನ್ನು ಕಳೆದುಕೊಳ್ಳುತ್ತಾರೆ. ತಂದೆಯ ಮರಣದಿಂದ ಮನೆ ಜವಾಬ್ದಾರಿ ವಹಿಸಲು ಮುಂದಾಗುವ ಅವರು ಪ್ರಾಥಮಿಕ ಶಾಲೆಗೆ ಶಿಕ್ಷಣ ಮುಗಿಸಿ ತನ್ನ ಸ್ವಂತ ಮಾವನ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಸೇರುತ್ತಾರೆ.

1919ರಲ್ಲಿ ಜಲಿಯನ್ ವಾಲಾಬಾಗ್‍ನಲ್ಲಿ ನಡೆದ ಹತ್ಯಾಕಾಂಡದ ವಿಚಾರ ತಿಳಿಯುವ ಕಾಮರಾಜ್ ಒಡಲಾಳದಲ್ಲಿ ಆಂಗ್ಲರ ವಿರುದ್ಧ ಕ್ರೋಧಾಗ್ನಿ ಹೊರಹೊಮ್ಮುತ್ತದೆ. ಪರಿಣಾಮ ಅತ್ಯಂತ ಚಿಕ್ಕ ವಯಸ್ಸಿಗೆ ಸ್ವಾತಂತ್ರ್ಯ ಚಳುವಳಿಗೆ ಧುಮುಕುವ ಅವರು 1920ರಲ್ಲಿ ಗಾಂಧಿ ಆರಂಭಿಸಿದ್ದ ಅಸಹಕಾರ ಚಳುವಳಿಯಲ್ಲಿ ಭಾಗಿಯಾಗಿದ್ದರು. 16ನೇ ವಯಸ್ಸಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯತ್ವವನ್ನು ಪಡೆಯುತ್ತಾರೆ. 1930ರ ಏಪ್ರಿಲ್‍ನಲ್ಲಿ ವೇದಾರಣ್ಯದಲ್ಲಿ ಗಾಂಧಿ ಆರಂಭಿಸಿದ್ದ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಜೈಲು ಶಿಕ್ಷೆಗೂ ಗುರಿಯಾಗುತ್ತಾರೆ. ನಂತರ ನಡೆಯುವ ಅನೇಕ ಚಳುವಳಿಗಳಲ್ಲಿ ಭಾಗವಹಿಸುವ ಕಾಮರಾಜ್ 5 ಬಾರಿ ಸುಮಾರು 8 ವರ್ಷಕ್ಕೂ ಅಧಿಕ ದಿನ ಜೈಲು ವಾಸದಲ್ಲೇ ಕಳೆಯುತ್ತಾರೆ.

1920 ರ ಜಾರ್ಜ್ ಜೋಸೆಫ್ ನೇತೃತ್ವದ ಸತ್ಯಾಗ್ರಹದಲ್ಲಿ ಹರಿಜನರನ್ನು ದೇವಾಲಯಗಳಿಂದ ಹೊರಗಿಡುವುದರ ವಿರುದ್ಧ ಕಾಮರಾಜ್ ತಮ್ಮ ಪಾತ್ರವನ್ನು ನಿರ್ವಹಿಸಿದರು. ಅವರ ನಾಯಕತ್ವದಲ್ಲಿ, ಮಧ್ಯಾಹ್ನ ಭಾರತ ಯೋಜನೆ ಮೊದಲ ಬಾರಿಗೆ ಸ್ವತಂತ್ರ ಭಾರತದಲ್ಲಿ ಪ್ರಾರಂಭವಾಯಿತು ಮತ್ತು ಇದರ ಜೊತೆಗೆ, ಮದ್ರಾಸ್ ಶಾಲೆಗಳಲ್ಲಿ ಉಚಿತ ಏಕರೂಪದ ಯೋಜನೆಯನ್ನು ಸಹ ಪರಿಚಯಿಸಿದರು.

ಇದನ್ನೂ ಓದಿ : 2nd PUC Results 2020 - ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.90 ಅಂಕ ಗಳಿಸಿದ ವಿದ್ಯಾರ್ಥಿ ; ಫಲಿತಾಂಶ ವೀಕ್ಷಿಸಲು ಆತನೇ ಇಲ್ಲ

ಬಡ ವರ್ಗದಿಂದ ಬರುವ ಮಕ್ಕಳು ಆಹಾರವನ್ನು ತಿನ್ನಲು ಸಾಧ್ಯವಾಗುತ್ತದೆ ಎಂದು ಅವರು ನಂಬಿದ್ದರು. ಇದಲ್ಲದೆ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನೂ ಹೊಗಳುತ್ತಿದ್ದರು. ನೆಹರೂ ಒಮ್ಮೆ 'ಮದ್ರಾಸ್ ಭಾರತದಲ್ಲಿ ಉತ್ತಮ ಆಡಳಿತ ಹೊಂದಿರುವ ರಾಜ್ಯ ಮತ್ತು ಕಾಮರಾಜ್ ಇದರ ಹಿಂದೆ ಇದೆ' ಎಂದು ಹೇಳಿದರು.

ತಮಿಳುನಾಡಿನ ಹಳ್ಳಿಗಳಲ್ಲಿ ವಿದ್ಯುತ್ ವಿಷಯದಲ್ಲಿ ಕಾಮರಾಜ್ ಉತ್ತಮ ಕೆಲಸ ಮಾಡಿದರು, ನೆಹರೂ ಅವರೂ ಸಹ ಅವರನ್ನು ಇಷ್ಟಪಡಲು ಪ್ರಾರಂಭಿಸಿದರು. ಅಕ್ಟೋಬರ್ 2, 1975 ರಂದು ಅವರು ಗಾಂಧಿ ಜಯಂತಿ ದಿನದಂದೇ ಹೃದಯಾಘಾತದಿಂದ ನಿಧನರಾದರು.
Published by: G Hareeshkumar
First published: July 15, 2020, 1:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading