ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿ ಕಮಲ್​ ನಾಥ್​ ಪ್ರಮಾಣ ವಚನ ಮತ್ತು ಬೆನ್ನಿಗೆ ಬಿದ್ದ ಸಿಖ್​ ಗಲಭೆ ಆರೋಪ

ಸಿಖ್​ ವಿರೋಧಿ ದಂಗೆ ಆರೋಪಿ ಕಾಂಗ್ರೆಸ್​ ನಾಯಕ ಸಜ್ಜನ್​ ಕುಮಾರ್​ ಅವರನ್ನು ದೋಷಿ ಎಂದು ಪರಿಗಣಿಸಿ ದೆಹಲಿ ಹೈ ಕೋರ್ಟ್ ಜೀವವಾಧಿ ಶಿಕ್ಷೆ ವಿಧಿಸಿದ ಬೆನ್ನಲ್ಲೇ ಬಿಜೆಪಿ ಈಗ ಕಮಲ್​ನಾಥ್​ ವಿರುದ್ಧ ಬೊಟ್ಟು ಮಾಡಿದೆ.

Seema.R | news18
Updated:December 17, 2018, 3:13 PM IST
ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿ ಕಮಲ್​ ನಾಥ್​ ಪ್ರಮಾಣ ವಚನ ಮತ್ತು ಬೆನ್ನಿಗೆ ಬಿದ್ದ ಸಿಖ್​ ಗಲಭೆ ಆರೋಪ
ಕಮಲ್ ನಾಥ್ ಅವರ ಫೈಲ್​ ಫೋಟೊ
  • News18
  • Last Updated: December 17, 2018, 3:13 PM IST
  • Share this:
ಭೋಪಾಲ್​ (ಡಿ. 17): ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿ ಕಮಲನಾಥ್​ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಒಂದೆಡೆ ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಕಮಲ್​ ನಾಥ್​ ಸಂತಸದಲ್ಲಿದ್ದರೆ, ಇನ್ನೊಂದೆಡೆ ಸಿಖ್​ ಗಲಭೆಯ ಆರೋಪ ಕಮಲ್​ ನಾಥ್​ ಸುತ್ತಿಕೊಳ್ಳುತ್ತಿದೆ. ಈ ಆರೋಪವನ್ನು ಬಿಜೆಪಿ ಅಸ್ತ್ರವಾಗಿ ಬಳಸಿಕೊಳ್ಳಲು ಮುಂದಾಗಿದೆ.

ಮಹಾಮೈತ್ರಿಯ ನಾಯಕರಾದ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ, ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಕರ್ನಾಟಕ ಮುಖ್ಯಮಂತ್ರಿ ಎಚ್​​.ಡಿ. ಕುಮಾರಸ್ವಾಮಿ, ಸಚಿವ ಡಿ.ಕೆ. ಶಿವಕುಮಾರ್​, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತಿತರ ಗಣ್ಯರ ಉಪಸ್ಥಿತಿಯಲ್ಲಿ ಕಮಲ್​ ನಾಥ್​ ಅಧಿಕಾರ ಸ್ವೀಕರಿಸಿದರು. ಮಾನ್ಯ ರಾಜ್ಯಪಾಲರಾದ ಆನಂದಿ ಬೆನ್​ ಪ್ರಮಾಣ ವಚನ ಬೋಧಿಸಿದರು.

ಮುಖ್ಯಮಂತ್ರಿ ಗಾದಿ, ಬೆನ್ನಿಗೆ ಬಿದ್ದ ಆರೋಪ:

ಸಿಖ್​ ವಿರೋಧಿ ದಂಗೆ ಆರೋಪಿ ಕಾಂಗ್ರೆಸ್​ ನಾಯಕ ಸಜ್ಜನ್​ ಕುಮಾರ್​ ಅವರನ್ನು ದೋಷಿ ಎಂದು ಪರಿಗಣಿಸಿ ದೆಹಲಿ ಹೈ ಕೋರ್ಟ್ ಜೀವವಾಧಿ ಶಿಕ್ಷೆ ವಿಧಿಸಿದ ಬೆನ್ನಲ್ಲೇ ಬಿಜೆಪಿ ಈಗ ಕಮಲ್​ನಾಥ್​ ವಿರುದ್ಧ ಬೊಟ್ಟು ಮಾಡಿದೆ.

​ಇನ್ನು ಈ ಕುರಿತು ಮಾತನಾಡಿರುವ ಕಾಂಗ್ರೆಸ್​ ನಾಯಕ ಅಭಿಷೇಕ್​ ಮನು ಸಿಂಘ್ವಿ, ಈ ಪ್ರಕರಣವನ್ನು ರಾಜಕೀಯಗೊಳಿಸುವ ಅವಶ್ಯಕತೆ ಇಲ್ಲ. ಈಗಾಗಲೇ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗಿದ್ದು, ಕಮಲನಾಥ್​ ಅವರನ್ನು ಆರೋಪ ಮುಕ್ತ ಮಾಡಲಾಗಿದೆ ಎಂದಿದ್ದಾರೆ.

ಸಿಖ್​​ ದಂಗೆ ನಡೆಯುತ್ತಿದ್ದ ಸಂದರ್ಭದಲ್ಲಿ ಕಮಲನಾಥ್​ ದಂಗೆಕೋರರನ್ನು ಪ್ರಚೋಧಿಸಿದ್ದರು. ಅವರು ಗುರುದ್ವಾರದ ಮುಂದೆ ನಿಂತು ದಂಗೆಗೆ ಕುಮ್ಮಕ್ಕು ನೀಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಆದರೆ, ಕಮಲನಾಥ್​ ತಾವು ದಂಗೆಯನ್ನು ತಡೆಯುತ್ತಿದ್ದಾಗಿ ನ್ಯಾಯಾಲಯದ ಮುಂದೆ ತಿಳಿಸಿದ್ದು, ಇವರನ್ನು ನ್ಯಾಯಾಲಯ ಖುಲಾಸೆ ಕೂಡ ಮಾಡಿತು.

ಆದರೆ, ಇದೀಗ ದೆಹಲಿ ಹೈ ಕೋರ್ಟ್​ ತೀರ್ಪು ನೀಡಿದ ಬೆನ್ನಲ್ಲೇ ಮತ್ತೊಮ್ಮೆ ಸಿಖ್​ ದಂಗೆ ಸದ್ದು ಮಾಡಿದ್ದು, ಕಮಲನಾಥ್​ ವಿರುದ್ಧ ಅರುಣ್​ ಜೇಟ್ಲಿ ಹರಿಹಾಯ್ದಿದ್ದಾರೆ. ಕೋಮುಗಲಭೆಯಲ್ಲಿ ಕಮಲನಾಥ್​ ಕೈವಾಡ ಇತ್ತು ಎಂಬ ಬಲವಾದ ಅನುಮಾನವಿದೆ ಎಂದು ಅವರು ಆರೋಪಿಸಿದ್ದಾರೆ.ಆದರೆ, ಬಿಜೆಪಿ ಆರೋಪವನ್ನು ಅಲ್ಲಗಳೆದಿರುವ ಕಾಂಗ್ರೆಸ್​ ಇದು ನ್ಯಾಯಾಲಯದ ತೀರ್ಪಿಗೆ ರಾಜಕೀಯ ಬಣ್ಣ ಬೇಡ. ಇದರಿಂದ ಯಾವುದೇ ಲಾಭವಿಲ್ಲ ಎಂದು ಸಮರ್ಥಿಸಿಕೊಂಡಿದೆ.

ಅಲ್ಲದೇ 2002ರ ಗುಜರಾತ್​ ಗಲಭೆಯಲ್ಲಿ ಹಲವು ಬಿಜೆಪಿ ನಾಯಕರ ಹೆಸರು ಕೂಡ ಇದೆ ಎಂದು ಬಿಜೆಪಿಗೆ ತೀರುಗೇಟು ನೀಡಿದ್ದಾರೆ.

ತೀರ್ಪನ್ನು ಸ್ವಾಗತಿಸಿರುವ ಪಂಜಾಬ್​ ಪ್ರದೇಶ ಕಾಂಗ್ರೆಸ್​ ಅಧ್ಯಕ್ಷ ಸುನೀಲ್​ ಕುಮಾರ್​, ನಾವು ತೀರ್ಪನ್ನು ಸ್ವಾಗತಿಸಿದ್ದೇವೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದಿದ್ದಾರೆ.

 

First published: December 17, 2018, 3:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading