HOME » NEWS » National-international » KAMALA HARRIS RESPONDS TO RACIST BIRTHER ATTACK SAYS SHES READY FOR A FIGHT MAK

ಜನಾಂಗೀಯ ದ್ವೇಷದ ವಿರುದ್ಧದ ಹೋರಾಟಕ್ಕೆ ನಾನು ಸಜ್ಜಾಗಿದ್ದೇನೆ; ಕಮಲಾ ಹ್ಯಾರಿಸ್‌

ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ ಜನಾಂಗೀಯ ದಾಳಿ ನಡೆಸುವ ಮೂಲಕ ಅತ್ಯಂತ ಕೆಟ್ಟ ಮತ್ತು ನೀಚ ರಾಜಕೀಯಕ್ಕೆ ಮುಂದಾಗಿದ್ದಾರೆ. ಆದರೆ, ನಾನು ಇದರ ವಿರುದ್ಧ ಹೋರಾಡಲು ಸಿದ್ದಳಿದ್ದೇನೆ. ಜನಾಂಗೀಯ ನಿಂದನೆ ಎಂಬ ಕೆಟ್ಟ ಪದ್ಧತಿಯನ್ನು ಅಮೆರಿಕದಿಂದ ತೊಲಗಿಸಲು ನಮ್ಮ ಹೋರಾಟ ನಡೆಯುತ್ತಲೆ ಇರುತ್ತದೆ ಎಂದು ಕಮಲಾ ಹ್ಯಾರಿಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

news18-kannada
Updated:August 17, 2020, 3:06 PM IST
ಜನಾಂಗೀಯ ದ್ವೇಷದ ವಿರುದ್ಧದ ಹೋರಾಟಕ್ಕೆ ನಾನು ಸಜ್ಜಾಗಿದ್ದೇನೆ; ಕಮಲಾ ಹ್ಯಾರಿಸ್‌
ಕಮಲಾ ಹ್ಯಾರಿಸ್
  • Share this:
ವಾಷಿಂಗ್ಟನ್‌ (ಆಗಸ್ಟ್‌ 17); ಅಮೆರಿಕದಲ್ಲಿ ತಲೆದೋರಿರುವ ಜನಾಂಗೀಯ ದಾಳಿಯನ್ನು, ನನ್ನ ವಿರುದ್ಧವೂ ರೂಪುಗೊಂಡಿರುವ ಜನಾಂಗೀಯ ದ್ವೇಷವನ್ನು ಹಿಮ್ಮೆಟ್ಟಿಸುವ ಹೋರಾಟಕ್ಕೆ ನಾನು ಸಜ್ಜಾಗಿದ್ದೇನೆ ಎಂದು ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಭಾರತೀಯ ಮೂಲಕ ಕಮಲಾ ಹ್ಯಾರಿಸ್‌ ತಿಳಿಸಿದ್ದಾರೆ.

ಅಮೆರಿಕದಲ್ಲಿ ಮುಂದಿನ ತಿಂಗಳು ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷೀಯ ಸ್ಥಾನಕ್ಕೆ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಸ್ಪರ್ಧಿಸುತ್ತಿದ್ದರೆ, ಡೆಮಾಕ್ರೆಟಿಕ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಜೋ ಬಿಡೆನ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಭಾರತದ ಮೂಲದ ಕಮಲಾ ಹ್ಯಾರೀಸ್‌ ಸ್ಪರ್ಧಿಸುತ್ತಿದ್ದಾರೆ.

ಈ ಮೂಲಕ ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ದಕ್ಷಿಣ ಏಷ್ಯಾ ಮೂಲದ ಮೊದಲ ಕಪ್ಪು ವರ್ಣದ ಮಹಿಳೆ ಎಂಬ ಶ್ರೇಯಕ್ಕೆ ಕಮಲಾ ಹ್ಯಾರೀಸ್‌ ಪಾತ್ರರಾಗಿದ್ದಾರೆ. ಪ್ರಸ್ತುತ ಕಮಲಾ ಹ್ಯಾರಿಸ್ ಕ್ಯಾಲಿಫೋರ್ನಿಯಾ ಪ್ರಾಂತ್ಯದ ಸೆನೆಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಆದರೆ, ಉಪಾಧ್ಯಕ್ಷೆ ಸ್ಥಾನದ ಸ್ಪರ್ಧೆಗೆ ಕಮಲಾ ಹ್ಯಾರೀಸ್‌ ಹೆಸರು ಖಚಿತವಾಗುತ್ತಿದ್ದಂತೆ ಅಮೆರಿಕದಲ್ಲಿ ಅವರ ವಿರುದ್ಧ ಜನಾಂಗೀಯ ನಿಂದನೆಗಳು, ಇವರ ವಿರುದ್ಧದ ದಾಳಿಗಳು ವ್ಯಾಪಕವಾಗಿ ಕಂಡುಬರುತ್ತಿವೆ. ಅವರು ವಲಸಿಗರಾಗಿದ್ದು, ಅವರ ಪೌರತ್ವದ ಬಗ್ಗೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಎತ್ತುತ್ತಿದ್ದಾರೆ.

ಈ ಕುರಿತು ಸ್ಥಳೀಯ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯವನ್ನು ಹೊರಹಾಕಿರುವ ಕಮಲಾ ಹ್ಯಾರೀಸ್‌, "ರಾಜಕೀಯ ವಿರೋಧಿಗಳು ಸುಳ್ಳುಗಳನ್ನು ಪೋಣಿಸುವ ಮೂಲಕ ಜನರಲ್ಲಿ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ಸಮಾಜದಲ್ಲಿ ಸುಳ್ಳು ಮತ್ತು ಮೋಸವನ್ನು ಬಿತ್ತುವ ಮೂಲಕ ಅಮೆರಿಕದ ಜನರ ಮೇಲೆ ಪರಿಣಾಮ ಬೀರುತ್ತಿರುವ ನೈಜ ಸಮಸ್ಯೆಗಳನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ : JEE main NEET 2020 Exam: ಪರೀಕ್ಷಾ ದಿನಾಂಕದಲ್ಲಿ ಬದಲಾವಣೆ ಇಲ್ಲ; ಮುಂದೂಡಿಕೆಗೆ ಸುಪ್ರೀಂ ನಕಾರ

ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ ಜನಾಂಗೀಯ ದಾಳಿ ನಡೆಸುವ ಮೂಲಕ ಅತ್ಯಂತ ಕೆಟ್ಟ ಮತ್ತು ನೀಚ ರಾಜಕೀಯಕ್ಕೆ ಮುಂದಾಗಿದ್ದಾರೆ. ಆದರೆ, ನಾನು ಇದರ ವಿರುದ್ಧ ಹೋರಾಡಲು ಸಿದ್ದಳಿದ್ದೇನೆ. ಜನಾಂಗೀಯ ನಿಂದನೆ ಎಂಬ ಕೆಟ್ಟ ಪದ್ಧತಿಯನ್ನು ಅಮೆರಿಕದಿಂದ ತೊಲಗಿಸಲು ನಮ್ಮ ಹೋರಾಟ ನಡೆಯುತ್ತಲೆ ಇರುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ತಮ್ಮ ಪಕ್ಷದ ಹಿಂದಿನ ಮಾಜಿ ಅಧ್ಯಕ್ಷ ಬರಾಕ್ ಒಬಾಮ ವಿರುದ್ಧವೂ ಇದೇ ರೀತಿಯ ಪಿತೂರಿ ಸಿದ್ಧಾಂತವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಡಿಸಿದ್ದರು. ಈಗಲೂ ನನ್ನ ಹೆತ್ತವರು ವಲಸಿಗರು ಎಂದು ದೂರುತ್ತಿದ್ದಾರೆ. ಈ ಎಲ್ಲಾ ಅಡೆತಡೆಗಳನ್ನು ಮೆಟ್ಟಿ ನಿಲ್ಲುತ್ತೇನೆ" ಎಂದು ಕಮಲಾ ಹ್ಯಾರಿಸ್ ಸ್ಪಷ್ಟಪಡಿಸಿದ್ದಾರೆ.
Published by: MAshok Kumar
First published: August 17, 2020, 3:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories