Kamala Harris: ಭಾರತೀಯ ಮೂಲದ ಕಪ್ಪು ಮಹಿಳೆ ಕಮಲಾ ಹ್ಯಾರಿಸ್​ ಅಮೆರಿಕ ಉಪಾಧ್ಯಕ್ಷೆ

Kamala Harris : ಭಾರತೀಯ ಮೂಲದ ಹ್ಯಾರಿಸ್​ ಶ್ವೇತಭವನ ಪ್ರವೇಶ ಭಾರತೀಯರಲ್ಲಿಯೂ ಸಂತಸ ತಂದಿದೆ. ಹ್ಯಾರಿಸ್​ ತಾಯಿ ಭಾರತೀಯರಾದರೆ, ತಂದೆ ಜಮೈಕಾದವರು.

ಕಮಲ ಹ್ಯಾರಿಸ್​​

ಕಮಲ ಹ್ಯಾರಿಸ್​​

 • Share this:
  ಜೋಸೆಫ್​ ಬಿಡೆನ್​ ಅಮೆರಿಕ ಅಧ್ಯಕ್ಷರಾಗುತ್ತಿದ್ದಂತೆ ಕಮಲ ಹ್ಯಾರಿಸ್​ ಉಪಾಧ್ಯಕ್ಷರಾಗಿದ್ದಾರೆ. ಈ ಮೂಲಕ ಶ್ವೇತಭವನಕ್ಕೆ ಪ್ರವೇಶಿಸಿದ ಬ್ಲಾಕ್​ ಅಮೆರಿಕನ್​ ಅವರಾಗಿದ್ದಾರೆ. ಅಮೆರಿಕದ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ ಮೊದಲ ಏಷ್ಯಾನ್​ ಅಮೆರಿಕನ್​ ಮಹಿಳೆ ಇವರಾಗಿದ್ದಾರೆ. ಕ್ಯಾಲಿಫೋರ್ನಿಯಾದ ಸೆನೆಟರ್​ ಆಗಿರುವ ಹ್ಯಾರಿಸ್​, ಈ ಮೊದಲು ಸ್ಯಾನ್​ಫ್ರಾಸಿಸ್ಕೋದಲ್ಲಿ ವಕೀಲರಾಗಿದ್ದರು. ಅಲ್ಲದೇ ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್​ ಆಗಿ ಕೂಡ ಸೇವೆ ಸಲ್ಲಿಸಿದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಭಾರತೀಯ ಮೂಲದ ಹ್ಯಾರಿಸ್​ ಶ್ವೇತಭವನ ಪ್ರವೇಶ ಭಾರತೀಯರಲ್ಲಿಯೂ ಸಂತಸ ತಂದಿದೆ. ಹ್ಯಾರಿಸ್​ ತಾಯಿ ಭಾರತೀಯರಾದರೆ, ತಂದೆ ಜಮೈಕಾದವರು. ಇವರಿಬ್ಬರು ಹಲವು ವರ್ಷಗಳ ಹಿಂದೆ ಅಮೆರಿಕದಲ್ಲಿ ವಾಸ್ತವ್ಯ ಆರಂಭಿಸಿದ್ದರು.

  ಆಗಸ್ಟ್​ನಲ್ಲಿ ಸಂಗಾತಿಯಾಗಿ ಬಿಡೆನ್​ ಹ್ಯಾರಿಸ್​ ಅವರನ್ನು ಆಯ್ಕೆ ಮಾಡಿದ್ದರು. ಅಲ್ಲದೇ ತಮ್ಮ ನಿರ್ಣಾಯಕ ಪಾಲುದಾರರನ್ನಾಗಿ ಮಾಡಿಕೊಂಡಿದ್ದರು. ಬಿಡೆನ್​ ವಿಜಯದಲ್ಲಿ ಹ್ಯಾರಿಸ್​ ಪಾತ್ರ ಕೂಡ ಬಹಳಷ್ಟಿದೆ. ಮಹಿಳೆಯರು ಮತ್ತು ಕಪ್ಪು ವರ್ಣಿಯರನ್ನು ಸೆಳೆಯುವಲ್ಲಿ ಹ್ಯಾರಿಸ್​ ಪ್ರಮುಖ ಪಾತ್ರವಹಿಸಿದರು.

  ಇದನ್ನು ಓದಿ: paneer tikka: ಅಮೆರಿಕ ಚುನಾವಣೆಗೆ ಮುನ್ನ ಟ್ವೀಟರ್​ನಲ್ಲಿ ಟ್ರೆಂಡ್​ ಆದ ಪನ್ನೀರ್​ ಟಿಕ್ಕಾ; ಕಾರಣವೇನು?

  ಚುನಾವಣೆ ವಂಚನೆ ಕುರಿತು ಟ್ರಂಪ್​ ಆರೋಪಿಸುತ್ತಿದ್ದಂತೆ ತಿರುಗೇಟು ನೀಡಿದ ಹ್ಯಾರಿಸ್​, ನಮ್ಮ ಚುನಾವಣಾ ಪ್ರಕ್ರಿಯೆ ಮೇಲೆ ನಂಬಿಕೆ ಹೊಂದಿದ್ದರಿಂದಲೇ ಮೊದಲ ದಿನವೇ 100 ಮಿಲಿಯನ್​ ಅಮೆರಿಕನ್ನರು ಮತಚಲಾಯಿಸಿದರು. ಆದರೆ, ಟ್ರಂಪ್​ ಈ ಮತಗಳನ್ನು ಅಮಾನ್ಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ನಾವು ಮತ್ತೆ ಹೋರಾಡಬೇಕು. ಇದಕ್ಕೆ ಅಮರಿಕನ್ನರ ಬೆಂಬಲಬೇಕು ಎಂದು ಟ್ವೀಟ್​ ಮಾಡಿದ್ದರು.

  ಪ್ರಚಾರದ ಅಂತಿಮ ದಿನಗಳಲ್ಲಿಯೂ ಜಾರ್ಜಿಯಾ, ನಾರ್ಥ್​ ಕರೊಲಿನಾ, ಪೆನ್ಸಿಲ್ವೇನಿಯಾ ಮತ್ತು ಫ್ಲೋರಿಡಾಗಳಲ್ಲಿ ಬಹಳಷ್ಟು ಹೋರಾಟ ನಡೆಸಿದರು. ಭಾರತೀಯ ಅಮೆರಿಕನ್​ ಸಮುದಾಯವನ್ನು ಸೆಳೆಯುವಲ್ಲಿ ಇವರು ಬಹಳ ಮುಖ್ಯಪಾತ್ರಹಿಸಿದರು. ಅಲ್ಲದೇ ನಿಧಿ ಸಂಗ್ರಹಣೆಯಲ್ಲಿಯೂ ಬಿಡೆನ್​ಗೆ ಬೆಂಬಲವಾಗಿ ನಿಂತರು.
  Published by:Seema R
  First published: