Kamala Harris: ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಬ್ಲೂಟೂತ್ ಹೆಡ್‌ಫೋನ್‌ನ್ನು ಬಳಸುವುದೇ ಇಲ್ಲವಂತೆ!

Kamala Harris: ಏಕೆಂದರೆ ವೈರ್ಡ್ ಹೆಡ್‌ಫೋನ್‌ಗಳು ಸುರಕ್ಷಿತವಾಗಿವೆ ಮತ್ತು ಬ್ಲೂಟೂತ್ ಹೆಡ್‌ಫೋನ್‌ಗಳು ಹ್ಯಾಕರ್ ಗಳಿಗೆ ಹ್ಯಾಕ್ ಮಾಡಲು ಸುಲಭವಾಗಬಹುದು ಎಂದು ಅವರ ಅಭಿಪ್ರಾಯ.

ಕಮಲಾ ಹ್ಯಾರಿಸ್

ಕಮಲಾ ಹ್ಯಾರಿಸ್

  • Share this:
ಈಗಂತೂ ಬಹುತೇಕರು ತಮ್ಮ ಮೊಬೈಲ್ ಫೋನ್‌ನಲ್ಲಿ(Mobile phone) ಬಂದಂತಹ ಕರೆಗಳನ್ನು ಸ್ವೀಕರಿಸಲು (Receive) ಮತ್ತು ಕರೆಯಲ್ಲಿ ಮಾತಾಡಲು ಬ್ಲೂಟೂತ್ ಹೆಡ್‌ಫೋನ್ ( Bluetooth headphones) ಬಳಸುವುದು ತುಂಬಾನೇ ಸಾಮಾನ್ಯವಾಗಿದೆ. (common) ಆದರೆ ಅಮೆರಿಕದ (America) ಪ್ರಭಾವಿ ವ್ಯಕ್ತಿಯಲ್ಲಿ ಒಬ್ಬರಾದವರು ತಮ್ಮ ಮೊಬೈಲ್ ಫೋನ್ ಗೆ ಬಂದಂತಹ ಕರೆಗಳಲ್ಲಿ(calls) ಮಾತಾಡಲು ಬ್ಲೂಟೂತ್ ಹೆಡ್‌ಫೋನ್ ಅನ್ನು ಎಂದಿಗೂ ಬಳಸಿಲ್ಲವಂತೆ. ಯಾರಪ್ಪಾ ಅವರು ಪ್ರಭಾವಿ (Most influential people) ವ್ಯಕ್ತಿಗಳು ಎಂದು ನಿಮಗೆ ತಿಳಿದುಕೊಳ್ಳಲು ತುಂಬಾನೇ ಕುತೂಹಲವಿರಬೇಕು(curious) ಅಲ್ಲವೇ.

ಕೈಯಲ್ಲಿ ವೈರ್ಡ್ ಇಯರ್ ಫೋನ್‌
ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಬ್ಲೂಟೂತ್ ಹೆಡ್‌ಫೋನ್ ಗಳನ್ನು ಎಂದಿಗೂ ಬಳಸಿಲ್ಲವಂತೆ ಎಂದು ಹೇಳಿದರೆ ನಿಮಗೆ ನಂಬಲು ಸ್ವಲ್ಪ ಕಷ್ಟವಾಗಬಹುದು. ಆದರೆ ಇದು ಸತ್ಯವಾದ ವಿಷಯವಾಗಿದೆ, ಇದಕ್ಕೆ ಕಾರಣವನ್ನು ತಿಳಿದುಕೊಳ್ಳಲು ಮುಂದೆ ಓದಿ.

ಇದನ್ನೂ ಓದಿ: ಅಫ್ಘಾನಿಸ್ತಾನ್​​ ಬಿಕ್ಕಟ್ಟಿನಿಂದ ಬೈಡೆನ್‌ ಜನಪ್ರಿಯತೆ ಕುಸಿತ: ಕಮಲಾ ಹ್ಯಾರಿಸ್‌ ಅಮೆರಿಕಾದ ಅಧ್ಯಕ್ಷರಾಗ್ತಾರಾ?

2020 ರ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿದ್ದಕ್ಕಾಗಿ ಜೋ ಬೈಡೆನ್ ಅವರನ್ನು ಅಭಿನಂದಿಸಲು ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಜೋ ಬೈಡೆನ್ ಅವರಿಗೆ ಕರೆ ಮಾಡಿ ಅವರೊಂದಿಗೆ ಮಾತನಾಡುತ್ತಿರುವುದನ್ನು ಗಮನಿಸಲಾಗಿದೆ. ಹ್ಯಾರಿಸ್ ತನ್ನ ಫೋನ್ ಅನ್ನು ಒಂದು ಕೈಯಲ್ಲಿ ಹಿಡಿದಿದ್ದು ಮತ್ತು ಮತ್ತೊಂದು ಕೈಯಲ್ಲಿ ವೈರ್ಡ್ ಇಯರ್ ಫೋನ್‌ಗಳನ್ನು ಹಿಡಿದಿದ್ದರು ಎಂಬುದನ್ನು ಗಮನಿಸಲಾಗಿದೆ.

ಏಕೆ ಬಳಸುತ್ತಿಲ್ಲ ಗೊತ್ತೇ
ಇತರ ಹಲವಾರು ಸಂದರ್ಭಗಳಲ್ಲಿ, ಹ್ಯಾರಿಸ್ ವೈರ್ಡ್ ಇಯರ್‌ಫೋನ್ ಗಳನ್ನು ಬಳಸುವುದನ್ನು ಕಾಣಬಹುದು, ಇದು ನಮ್ಮನ್ನು ಆಶ್ಚರ್ಯಗೊಳಿಸುತ್ತದೆ. ವೈರ್‌ಲೆಸ್ ಹೆಡ್‌ಫೋನ್‌ಗಳನ್ನು ಯುಎಸ್ ಉಪಾಧ್ಯಕ್ಷೆ ಏಕೆ ಬಳಸುತ್ತಿಲ್ಲ ಎಂದು ನಮಗೆ ನಿಜಕ್ಕೂ ಆಶ್ಚರ್ಯವಾಗಬಹುದು. ಇಲ್ಲೊಂದು ಸುದ್ದಿ ಹೇಳ್ತೀವಿ ಕೇಳಿ, ಹ್ಯಾರಿಸ್ ಬ್ಲೂಟೂತ್ ಹೆಡ್‌ಫೋನ್ ಗಳನ್ನು ಅಷ್ಟಾಗಿ ಇಷ್ಟ ಪಡುವುದಿಲ್ಲ. ಏಕೆಂದರೆ ಅವರು ಭದ್ರತೆ ಮತ್ತು ತಂತ್ರಜ್ಞಾನದ ಬಗ್ಗೆ ತುಂಬಾ ಜಾಗರೂಕರಾಗಿದ್ದಾರೆ ಎಂದು ಹೇಳಲಾಗುತ್ತದೆ.

ತುಂಬಾನೇ ಜಾಗರೂಕರಾಗಿದ್ದಾರೆ
ಹ್ಯಾರಿಸ್ ಬ್ಲೂಟೂತ್ ಹೆಡ್‌ಫೋನ್‌ಗಳ ಬಗ್ಗೆ ತುಂಬಾನೇ ಜಾಗರೂಕರಾಗಿದ್ದಾರೆ ಮತ್ತು ವೈರ್ಡ್ ಹೆಡ್‌ಫೋನ್‌ಗಳಿಗೆ ಆದ್ಯತೆ ನೀಡುತ್ತಾರೆ ಎಂದು ಮಾಧ್ಯಮದ ವರದಿಯೊಂದು ಹೇಳಿದೆ. ಏಕೆಂದರೆ ವೈರ್ಡ್ ಹೆಡ್‌ಫೋನ್‌ಗಳು ಸುರಕ್ಷಿತವಾಗಿವೆ ಮತ್ತು ಬ್ಲೂಟೂತ್ ಹೆಡ್‌ಫೋನ್‌ಗಳು ಹ್ಯಾಕರ್ ಗಳಿಗೆ ಹ್ಯಾಕ್ ಮಾಡಲು ಸುಲಭವಾಗಬಹುದು ಎಂದು ಅವರ ಅಭಿಪ್ರಾಯ.

ಹ್ಯಾಕ್ ಮಾಡಬಹುದು
ಹ್ಯಾಕರ್‌ಗಳು ಸಾಮಾನ್ಯವಾಗಿ ಬ್ಲೂಟೂತ್ ಸಂಪರ್ಕಗಳನ್ನು ಹ್ಯಾಕ್ ಮಾಡಬಹುದು ಎಂದು ಅನೇಕ ವರದಿಗಳು ಹೇಳಿವೆ. ಸೈಬರ್ ಅಪರಾಧಿಗಳು ಬ್ಲೂಟೂತ್ ಸಂಪರ್ಕವನ್ನು ಹ್ಯಾಕ್ ಮಾಡಬಹುದು ಮತ್ತು ಸಾಧನದ ನಿಯಂತ್ರಣವನ್ನು ತೆಗೆದುಕೊಳ್ಳಬಹುದು. ನಿಮ್ಮ ಸಾಧನದಲ್ಲಿ ನೀವು ಏನು ಮಾಡುತ್ತೀರಿ ಎಂಬುದನ್ನು ನೋಡಲು ಅವರು ಮಾಲ್ ವೇರ್ ಅಥವಾ ಸ್ಪೈವೇರ್ ಅನ್ನು ಸಹ ಸ್ಥಾಪಿಸಬಹುದು.

ರೈಲ್ಟನ್ ಟ್ವೀಟ್
ಸಿಟಿಜನ್ ಲ್ಯಾಬ್ಸ್ ನ ಸಂಶೋಧಕ ಜಾನ್ ಸ್ಕಾಟ್ ರೈಲ್ಟನ್ ಅವರು ಹ್ಯಾರಿಸ್ ತುಂಬಾನೇ ಬುದ್ದಿವಂತೆ ಮತ್ತು ಬ್ಲೂಟೂತ್ ಹೆಡ್‌ಫೋನ್‌ಗಳಿಂದ ಬಂದೊದಗುವ ಅಪಾಯಗಳನ್ನು ತಿಳಿದಿದ್ದಾರೆ ಎಂದು ಹೇಳಿದ್ದಾರೆ. ಬ್ಲೂಟೂತ್ ಅನ್ನು ಆಫ್ ಮಾಡುವ ಮೂಲಕ, ಹ್ಯಾರಿಸ್ ತನ್ನ ಸ್ಮಾರ್ಟ್‌ಫೋನ್ ವಿರುದ್ಧ ಆಗಬಹುದಾದ ಹಲವಾರು ಅಪಾಯಗಳಿಂದ ದೂರವಿದ್ದಾರೆ ಎಂದು ರೈಲ್ಟನ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತ ಮೂಲದ ಕಮಲಾಗೆ 85 ನಿಮಿಷ ವಿಶ್ವದ ಅತ್ಯುನ್ನತ ಅಧಿಕಾರ; ಕಾರಣ ಇದು

ತಂತ್ರಜ್ಞಾನದ ಅಪಾಯ

ಜುಲೈನಲ್ಲಿ, ರಾಷ್ಟ್ರೀಯ ಭದ್ರತಾ ಸಂಸ್ಥೆ ಸೈಬರ್ ಭದ್ರತೆ ಮಾರ್ಗದರ್ಶನದ ಮೇಲೆ ಕೇಂದ್ರೀಕರಿಸಿದ ದಾಖಲೆಯನ್ನು ಪ್ರಕಟಿಸಿತ್ತು ಮತ್ತು ಬ್ಲೂಟೂತ್ ತಂತ್ರಜ್ಞಾನದ ಅಪಾಯಗಳನ್ನು ಗಮನಿಸಿತ್ತು. ಪಾಸ್‌ವರ್ಡ್ ಗಳು ಅಥವಾ ಸೂಕ್ಷ್ಮ ವಿಚಾರಗಳನ್ನು ಮಾತನಾಡಲು ಬ್ಲೂಟೂತ್ ಅನ್ನು ಬಳಸಬಾರದು ಎಂದು ತಿಳಿಸಿತ್ತು.
Published by:vanithasanjevani vanithasanjevani
First published: