Russia-Ukraine ಯುದ್ಧದ ಬಗ್ಗೆ ಕಮಲಾ ಹ್ಯಾರಿಸ್ ಹೀಗೆಲ್ಲಾ ಹೇಳಿದ್ರಾ? ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಆಕ್ರೋಶ
ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ರೆಡಿಯೋ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಕಮಲಾ ಹ್ಯಾರಿಸ್, ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ ಎನ್ನಲಾಗುತ್ತಿದೆ. ಹಾಗಿದ್ರೆ ಅವರು ಹೇಳಿದ್ದೇನು? ನೆಟ್ಟಿಗರ ಆಕ್ರೋಶಕ್ಕೆ ಕಾರಣವೇನು?
ರಷ್ಯಾ (Russia) ಹಾಗೂ ಉಕ್ರೇನ್ (Ukraine) ನಡುವಿನ ಯುದ್ಧ ಮತ್ತಷ್ಟು ತೀವ್ರವಾಗುತ್ತಿದೆ. ರಷ್ಯಾವಂತೂ ಉಕ್ರೇನ್ ಮೇಲಿನ ದಾಳಿಯನ್ನು (Attack) ಇನ್ನಷ್ಟು ಹೆಚ್ಚಿಸಿದ್ದು, ಅನೇಕ ನಾಗರಿಕರನ್ನು (Citizen) ಕೊಂದು ಹಾಕಿದೆ. ಉಕ್ರೇನ್ ರಾಜಧಾನಿ (Capital) ಕೈವ್ (Kyiv), ದೇಶದ ಎರಡನೇ ಪ್ರಮುಖ ನಗರ ಖಾರ್ಕೋವ್ (Kharkiv) ಸೇರಿದಂತೆ ವಿವಿಧ ನಗರಗಳನ್ನು ಹಾಳು ಗೆಡವುತ್ತಿದೆ. ರಷ್ಯಾ ಆಕ್ರಮಣಕ್ಕೆ ಅಮೆರಿಕಾ (America) ಸೇರಿ ವಿಶ್ವದ ಅನೇಕ ದೇಶಗಳು ರಷ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಮುಖ್ಯವಾಗಿ ಅಮೆರಿಕಾ ಅಧ್ಯಕ್ಷ (US President) ಜೋ ಬೈಡನ್ (Joe Biden) ಅವರು ಉಕ್ರೇನ್ ಮೇಲಿನ ರಷ್ಯಾ ದಾಳಿಯನ್ನು ಬಲವಾಗಿ ಖಂಡಿಸಿದ್ದಾರೆ. ಆದರೆ ಅಮೆರಿಕಾ ಉಪಾಧ್ಯಕ್ಷೆ (Vice President of America) ಕಮಲಾ ಹ್ಯಾರಿಸ್ (Kamala Harris) ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದ ಬಗ್ಗೆ ಲಘು ಹೇಳಿಕೆ ನೀಡಿದ್ದಾರೆ. ರೆಡಿಯೋ (Radio) ಕಾರ್ಯಕ್ರಮವೊಂದರಲ್ಲಿ ಕಮಲಾ ಹ್ಯಾರಿಸ್ ನೀಡಿದ ಹೇಳಿಕೆ ಇದೀಗ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಕಮಲಾ ಹ್ಯಾರಿಸ್ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ (Social Media) ಭಾರೀ ಆಕ್ರೋಶ ವ್ಯಕ್ತವಾಗಿದೆ.
ರೆಡಿಯೋ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಮಲಾ ಹ್ಯಾರಿಸ್
ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅಮೆರಿಕಾದ ಜನಪ್ರಿಯ ರೆಡಿಯೋ ಒಂದರ ‘ಮಾರ್ನಿಂಗ್ ಹಸ್ಲ್’ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗಿಯಾಗಿದ್ದರು. ಈ ವೇಳೆ ರೆಡಿಯೋ ಜಾಕಿ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದ ಕುರಿತಂತೆ ಕಮಲಾ ಹ್ಯಾರಿಸ್ ಅವರ ಅಭಿಪ್ರಾಯವನ್ನು ಕೇಳಿದ್ದಾರೆ. ಆಗ ಕಮಲಾ ಹ್ಯಾರಿಸ್ ಲಘುವಾಗಿ ಮಾತನಾಡಿದ್ದಾರೆ ಎಂಬ ಟೀಕೆಗಳು ಕೇಳಿ ಬಂದಿವೆ.
ಯುದ್ಧದ ಬಗ್ಗೆ ಕಮಲಾ ಹ್ಯಾರಿಸ್ ಹೇಳಿದ್ದೇನು?
ರೆಡಿಯೋ ನಿರೂಪಕರು ರಷ್ಯಾ ಹಾಗೂ ಉಕ್ರೇನ್ ಯುದ್ಧದ ಬಗ್ಗೆ ಸರಳವಾಗಿ ಹೇಳಿ ಅಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕಮಲಾ ಹ್ಯಾರಿಸ್, “ಉಕ್ರೇನ್ ಯುರೋಪಿನ ಒಂದು ದೇಶ. ಇದು ರಷ್ಯಾ ಎಂಬ ಇನ್ನೊಂದು ದೇಶದ ಪಕ್ಕದಲ್ಲಿ ಅಸ್ತಿತ್ವದಲ್ಲಿದೆ. ರಷ್ಯಾ ದೊಡ್ಡ ದೇಶ. ರಷ್ಯಾ ಪ್ರಬಲ ದೇಶ. ರಷ್ಯಾ ಉಕ್ರೇನ್ ಎಂಬ ಸಣ್ಣ ದೇಶವನ್ನು ಆಕ್ರಮಿಸಲು ನಿರ್ಧರಿಸಿತು. ಆದ್ದರಿಂದ, ಮೂಲಭೂತವಾಗಿ, ಅದು ತಪ್ಪು, ಇದು ಅಮೆರಿಕದ ನೀತಿಗೂ ವಿರುದ್ಧವಾಗಿದೆ” ಅಂತ ಚುಟುಕಾಗಿ ಉತ್ತರಿಸಿದರು.
ಕಮಲಾ ಹ್ಯಾರಿಸ್ ಲಘು ಹೇಳಿಕೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಆಕ್ರೋಶ
ರೆಡಿಯೋ ಕಾರ್ಯಕ್ರಮದಲ್ಲಿ ಕಮಲಾ ಹ್ಯಾರಿಸ್ ನೀಡಿದ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅಮೆರಿಕಾ ಉಪಾಧ್ಯಕ್ಷೆಯಂತಹ ಪ್ರಮುಖ ಹಾಗೂ ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತು ಈ ರೀತಿ ಲಘು ಹೇಳಿಕೆ ನೀಡಿದ್ದು ಸರಿಯಲ್ಲ ಅಂತ ನೆಟ್ಟಿಗರು ಟೀಕಿಸಿದ್ದಾರೆ.
OH… MY… GOD
Q: “What’s going on in Ukraine?”
Kamala: “Ukraine is a country in Europe. It exists next to another country called Russia. Russia is a bigger country. Russia decided to invade a smaller country called Ukraine so basically that’s wrong.” pic.twitter.com/gDJDJQVsWb
ರಿಪಬ್ಲಿಕನ್ ಸೆನೆಟರ್ ಟೆಡ್ ಕ್ರೂಜ್ ಜಿಫ್ ಅನ್ನು ಹಂಚಿಕೊಳ್ಳುವ ಮೂಲಕ ಉಪಾಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರೆ, ಪತ್ರಕರ್ತ ಬೆನ್ ಶಪಿರೊ ಹ್ಯಾರಿಸ್ ಅವರನ್ನು "ರಾಜಕೀಯದ ಮೈಕೆಲ್ ಸ್ಕಾಟ್" ಎಂದು ಕರೆದಿದ್ದಾರೆ.
4 ವರ್ಷದ ಮಗು ಎಂದು ಕರೆದ ನೆಟ್ಟಿಗ
ಇನ್ನೊಬ್ಬ ಟ್ವಿಟ್ಟರ್ ಬಳಕೆದಾರ ಬೆನ್ ಡೊಮೆನೆಕ್, "ಸ್ಪಷ್ಟವಾಗಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅಮೆರಿಕದ ಸಾಮಾನ್ಯ 4 ವರ್ಷದ ಮಗುವಿನಂತೆ ಮಾತನಾಡಿದ್ದಾರೆ" ಎಂದು ವ್ಯಂಗ್ಯವಾಡಿದ್ದಾರೆ.
ಫಾಕ್ಸ್ ನ್ಯೂಸ್ ನಿರೂಪಕ ಟಮ್ಮಿ ಬ್ರೂಸ್, "ಇದು ವಿಡಂಬನೆ ಎಂದು ನಾನು ಭಾವಿಸಿದೆವು. ಕಮಲಾ ಹ್ಯಾರಿಸ್ ಅವರ ಅಸಮರ್ಥತೆ ಮತ್ತು ಅಸಂಬದ್ಧತೆಯ ಬಗ್ಗೆ ನಮಗೆ ತಿಳಿದಿರುವ ಎಲ್ಲದರ ಜೊತೆಗೆ ಇದು ಗಮನಾರ್ಹವಾಗಿದೆ." ಅಂತ ಟೀಕಿಸಿದ್ದಾರೆ.
Published by:Annappa Achari
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ