Kamala Harris: ಟಿಕ್​ಟಾಕ್ ವಾಪ್ ಚಾಲೆಂಜ್​ನಲ್ಲಿ ಭಾಂಗ್ರಾ ನೃತ್ಯ ಪ್ರದರ್ಶಿಸಿದ ಅಮೆರಿಕ ಸೆನೆಟರ್ ಕಮಲಾ ಹ್ಯಾರೀಸ್; ವಿಡಿಯೋ ವೈರಲ್

Kamala Harris Bhangra Video: ಪಂಜಾಬಿ ಶೈಲಿಯ ನೃತ್ಯ ಅಮೆರಿಕ ಲಂಡನ್​ ಸೇರಿದಂತೆ ವಿಶ್ವದ ಅನೇಕ ಕಡೆಗಳಲ್ಲಿ ಜನಪ್ರಿಯವಾಗಿದೆ. ಒಲಂಪಿಕ್ ಕ್ರೀಡಾಕೂಟದಲ್ಲೂ ಸಹ ಈ ನೃತ್ಯವನ್ನು ಪ್ರದರ್ಶಿಸಲಾಗುತ್ತದೆ. ಇಂತಹ ನೃತ್ಯದ ಚಾಲೆಂಜ್ ಅನ್ನು ಅಮೆರಿಕದ ಸೆನೆಟರ್ ಕಮಲಾ ಹ್ಯಾರೀಸ್​ ಸ್ವೀಕರಿಸಿರುವುದು ವಿಶೇಷವಾಗಿದೆ.

ಕಮಲಾ ಹ್ಯಾರೀಸ್​.

ಕಮಲಾ ಹ್ಯಾರೀಸ್​.

 • Share this:
  ಟಿಕ್​ಟಾಕ್​ ವಿಡಿಯೋ ಸವಾಲನ್ನು ಎದುರಿಸುವುದು ಇತ್ತೀಚೆಗೆ ಅಮೆರಿಕದಲ್ಲಿ ಹೊಸದೊಂದು ಟ್ರೆಂಡ್ ಅನ್ನು ಕ್ರಿಯೇಟ್ ಮಾಡಿದೆ. ಹೀಗಾಗಿ ಬಹುತೇಕ ಅಮೇರಿಕನ್ನರು ಇದೀಗ ಟಿಕ್​ಟಾಕ್​ನಲ್ಲಿ ಬ್ಯುಸಿಯಾಗಿದ್ದಾರೆ. ಪ್ರತಿನಿತ್ಯ ಒಂದಿಲ್ಲೊಂದು ಹೊಸ ಚಾಲೆಂಜ್​ಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇದೆ. ಈ ನಡುವೆ ಈ ಭಾರಿ ಅಮೆರಿಕದ ಉಪಾಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿರುವ ಸೆನೆಟರ್​, ಭಾರತದ ಮೂಲದ ಕಮಲಾ ಹ್ಯಾರೀಸ್ ಅವರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ. ಟಿಕ್​ಟಾಕ್​ನಲ್ಲಿ ಪಂಜಾಬ್​ ಶೈಲಿಯ ಭಾಂಗ್ರಾ ನೃತ್ಯದ ಸವಾಲನ್ನು ಸ್ವೀಕರಿಸಿರುವ ಅವರು, ತಮ್ಮ ನೃತ್ಯವನ್ನು ವಿಡಿಯೋ ಮಾಡಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಮೆರಿಕದಲ್ಲಿ ಈ ವಿಡಿಯೋ ಭಾರೀ ವೈರಲ್​ ಆಗುತ್ತಿದೆ.

  ಭಾಂಗ್ರಾ ಎಂಬುದು ಭಾರತದ ಪಂಜಾಬ್ ಮೂಲದ ಸಾಂಪ್ರದಾಯಿಕ ಮತ್ತು ಆಚರಣೆಯ ಜಾನಪದ ನೃತ್ಯವಾಗಿದ್ದು, ಇದು ಪಂಜಾಬ್ ರಾಜ್ಯದ ಮಾಜಾ ಪ್ರದೇಶದಲ್ಲಿ ಹುಟ್ಟಿಕೊಂಡಿತ್ತು. ಇದು ಪ್ರಾಥಮಿಕವಾಗಿ ವಸಂತ ಸುಗ್ಗಿಯ ಉತ್ಸವದ ಸಂದರ್ಭದಲ್ಲಿ ಈ ನೃತ್ಯವನ್ನು ಸಂಗೀತದ ಜೊತೆಗೆ ಎಲ್ಲರೂ ಒಟ್ಟಾಗಿ ಪ್ರದರ್ಶಿಸುವುದು ಸಂಪ್ರದಾಯ.

  ಈ ಪಂಜಾಬಿ ಶೈಲಿಯ ನೃತ್ಯ ಅಮೆರಿಕ ಲಂಡನ್​ ಸೇರಿದಂತೆ ವಿಶ್ವದ ಅನೇಕ ಕಡೆಗಳಲ್ಲಿ ಜನಪ್ರಿಯವಾಗಿದೆ. ಒಲಂಪಿಕ್ ಕ್ರೀಡಾಕೂಟದಲ್ಲೂ ಸಹ ಈ ನೃತ್ಯವನ್ನು ಪ್ರದರ್ಶಿಸಲಾಗುತ್ತದೆ. ಇಂತಹ ನೃತ್ಯದ ಚಾಲೆಂಜ್ ಅನ್ನು ಅಮೆರಿಕದ ಸೆನೆಟರ್ ಕಮಲಾ ಹ್ಯಾರೀಸ್​ ಸ್ವೀಕರಿಸಿರುವುದು ವಿಶೇಷವಾಗಿದೆ.

  ಇನ್ಸ್ಟಾಗ್ರಾಂನಲ್ಲಿ ಕಮಲಾ ಹ್ಯಾರೀಸ್​ ಹಂಚಿಕೊಂಡಿರುವ ವಿಡಿಯೋದಲ್ಲಿ ಅವರು ಬೂದು ಬಣ್ಣದ ಸೂಟ್​ ಧರಿಸಿದ್ದು, ಪಂಜಾಬಿ ಸಂಗೀತಕ್ಕೆ ನೃತ್ಯ ಮಾಡಿದ್ದಾರೆ. ಅಲ್ಲದೆ, ಈ ವಿಡಿಯೋಗೆ ಶೀರ್ಷಿಕೆ ನೀಡಿರುವ ಅವರು, “WAP ಸಮಸ್ಯೆಗೆ ಕಮಲಾ ಹ್ಯಾರೀಸ್ ಅವರ ಭಾಂಗ್ರಾ ಮಾದರಿಯ ಪರಿಹಾರ” ಎಂದು ಬರೆದುಕೊಂಡಿದ್ದಾರೆ.
  ಕಮಲಾ ಹ್ಯಾರೀಸ್​ ಈ ಭಾರಿಯ ಅಮೆರಿಕದ ಅಧ್ಯಕ್ಷೀಯ ಚುಣಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಟಿಕ್​ ಪಕ್ಷದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಇವರು ಭಾರತೀಯ ಮೂಲದವರಾದ ಕಾರಣ ಈ ಹಿಂದೆ ಡೊನಾಲ್ಡ್​ ಟ್ರಂಪ್ ನೇರವಾಗಿ ಇವರ ವಿರುದ್ಧ ಜನಾಂಗೀಯ ನಿಂಧನೆ ಮಾಡಿದ್ದರು. ಅಲ್ಲದೆ, ಅಮೆರಿಕದಲ್ಲಿ ಇವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲೂ ನಿಂಧನಾತ್ಮಕ ಬರಹಗಳು ಚಾಲ್ತಿಯಲ್ಲಿವೆ.

  ಈ ನಡುವೆ ತಮ್ಮ ವಿರುದ್ಧದ ಜನಾಂಗೀಯ ನಿಂಧನೆಗೆ ಖಡಕ್​ ಆಗಿಯೇ ಉತ್ತರಿಸಿದ್ದ ಕಮಲಾ ಹ್ಯಾರೀಸ್​ ಇದೀಗ ಭಾಂಗ್ರಾ ನೃತ್ಯ ಮಾಡುವ ಮೂಲಕ ಅಮೆರಿಕದಲ್ಲಿ ವೈರಲ್ ಆಗುತ್ತಿದ್ದಾರೆ. ಆದರೆ, ಕಮಲಾ ಹ್ಯಾರೀಸ್ ಮತದಾರರನ್ನು ತಮ್ಮೆಡೆಗೆ ಸೆಳೆಯುವ ಸಲುವಾಗಿ ಈ ನೃತ್ಯ ಮಾಡಿದ್ದಾರೆ ಎಂದು ಅಮೆರಿಕದಲ್ಲಿ ಹೇಳಲಾಗುತ್ತಿದೆ.
  Published by:MAshok Kumar
  First published: