HOME » NEWS » National-international » KAMAL HASSAN DEFEATED IN HE TAMIL NADU ELECTION IN MAKKAL NEEDHI MAIYAM PARTY SESR

Kamal Haasan: ರಾಜಕೀಯ ಕಮಾಲ್​ ಮಾಡುವಲ್ಲಿ ಸೋತ ಕಮಲ್​​; ಮಕ್ಕಳ ನಿಧಿ ಮಯ್ಯಂ ಪಕ್ಷಕ್ಕೆ ಒಂದೂ ಸ್ಥಾನವಿಲ್ಲ

ತಮಿಳುನಾಡು ಚುನಾವಣಾ ಕಣಕ್ಕಿಳಿದ ಮಕ್ಕಳ ನಿಧಿ ಮಯ್ಯಂ ಪಕ್ಷದ ಅಭ್ಯರ್ಥಿಗಳೆಲ್ಲಾ ಸೋಲುಂಡಿದ್ದು, ಕಮಲ್​ ಹಾಸನ್ ಕೂಡ ಪರಜಯ ಅನುಭವಿಸಿದ್ದಾರೆ.

news18-kannada
Updated:May 3, 2021, 2:49 PM IST
Kamal Haasan: ರಾಜಕೀಯ ಕಮಾಲ್​ ಮಾಡುವಲ್ಲಿ ಸೋತ ಕಮಲ್​​; ಮಕ್ಕಳ ನಿಧಿ ಮಯ್ಯಂ ಪಕ್ಷಕ್ಕೆ ಒಂದೂ ಸ್ಥಾನವಿಲ್ಲ
ಕಮಲಹಾಸನ್.
  • Share this:
ಚೆನ್ನೈ (ಮೇ. 2): ತಮಿಳು ನಾಡು ರಾಜಕಾರಣದಲ್ಲಿ ಹೊಸ ಬದಲಾವಣೆ ತರಲು ಮುಂದಾದವರು ನಟ ಕಮಲ್​ ಹಾಸನ್​. ಇದೇ ಉದ್ದೇಶಕ್ಕಾಗಿ ಮಕ್ಕಳ್​ ನಿಧಿ ಮಯ್ಯಂ ಪಕ್ಷವನ್ನು ಕಟ್ಟಿದರು. ಆದರೆ, ನಟನೆಯಲ್ಲಿ ಸಕಲ ಕಲಾ ವಲ್ಲಭನಾಗಿ ಗೆದ್ದ ಕಮಲ್​​ ರಾಜಕಾರಣದಲ್ಲಿ ಎಡವಿದ್ದಾರೆ. ತಮಿಳುನಾಡು ಚುನಾವಣಾ ಕಣಕ್ಕಿಳಿದ ಮಕ್ಕಳ ನಿಧಿ ಮಯ್ಯಂ ಪಕ್ಷದ ಅಭ್ಯರ್ಥಿಗಳೆಲ್ಲಾ ಸೋಲುಂಡಿದ್ದು, ಕಮಲ್​ ಹಾಸನ್ ಕೂಡ ಪರಜಯ ಅನುಭವಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ವನತಿ ಶ್ರೀನಿವಾಸನ್​ ವಿರುದ್ಧ ಸೋಲುಂಡಿದ್ದಾರೆ.  ಕೊಯಮತ್ತೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಮಲ್​ ಆರಂಭದಲ್ಲಿ 2000 ಮತಗಳ ಅಂತರದ ಮುನ್ನಡೆ ಸಾಧಿಸಿದ್ದರು. ಆದರೆ, ಕೊನೆಯ ಸುತ್ತಿನ ಮತ ಏಣಿಕೆ ವೇಳೆ ಅವರು  1300 ಮತಗಳ ಅಂತರದಲ್ಲಿ ಸೋಲಪ್ಪಿದ್ದಾರೆ. ಈ ಮೂಲಕ ಪಕ್ಷದ ಯಾವುದೇ ಅಭ್ಯರ್ಥಿಯು ಗೆಲ್ಲುವಲ್ಲಿ ವಿಫಲರಾಗಿದ್ದಾರೆ

2018ರಲ್ಲಿ ಮಕ್ಕಳ ನಿಧಿ ಮಯ್ಯಂ ಪಕ್ಷ ಸ್ಥಾಪಿಸಿದ ನಟ , ನಿರ್ಮಾಪಕ ಕಮಲ್​ ಹಾಸನ್​ 2019ರ ಲೋಕಸಭಾ ಚುನಾವಣಾದಲ್ಲಿ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಆದರೆ ಕಮಲ್​ ಹಾಸನ್ ಸ್ಪರ್ಧಿಸಲಿಲ್ಲ.

ವಿಧಾನಸಭಾ ಚುನಾವಣೆಗೆ ಸಕಲ ರೀತಿಯ ಸಜ್ಜಾಗಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ ಕಮಲ್​ ಹಾನಸ್​​ ಪಕ್ಷ ಸಂಪೂರ್ಣವಾಗಿ ಜಯಭೇರಿ ಬಾರಿಸದಿದ್ದರೂ, ವಿಧಾನಸಭೆಗೆ ಕೆಲವು ಅಭ್ಯರ್ಥಿಗಳು ಆಯ್ಕೆಯಾಗುವ ಭರವಸೆಯನ್ನು ಹೊಂದಿದ್ದರು. ಆದರೆ, ಅವರ ಭರವಸೆ ಈಡೇರಲಿಲ್ಲ.

ಇದನ್ನು ಓದಿ: ಖುಷ್ಬೂ ಕೈ ಹಿಡಿಯದ ವರ್ಚಸ್ಸು; ಪಕ್ಷಾಂತರವೇ ಹಿನ್ನಡೆಯಾಯ್ತ ನಟಿಗೆ?

ಟಾರ್ಚ್​ ಚಿಹ್ನೆ ಪಡೆದು ಮೊದಲ ಬಾರಿ ಚುನಾವಣಾ ಕಣಕ್ಕೆ ಇಳಿದ ಮಕ್ಕಳ ನಿಧಿ ಮಯ್ಯಂ ಪಕ್ಷ ಭರ್ಜರಿ ಪ್ರಚಾರ ನಡೆಸಿತು. ಅಲ್ಲದೇ ಕಮಲ್​ ಹಾಸನ್​ ಅವರ ಮಕ್ಕಳ ನಿಧಿ ಮಯ್ಯಂ ಪಕ್ಷ ಜೊತೆ ಕೆಲವು ಸಣ್ಣ ಸಣ್ಣ ಪಕ್ಷಗಳೊಂದಿಗೂ ಕೂಡ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿತು. ಮಕ್ಕಳ ಮುದಲ್​ ಕೊಟನಿ ಎಂಬ ಹೆಸರಿನ ಮೂಲಕ ಈ ಮೈತ್ರಿ ಒಕ್ಕೂಟ ರಚಿಸಲಾಯಿತು. ಈ ಮೂಲಕ 227 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿತು.
ಕಮಲ್​ ಹಾಸನ್​ ಅವರ ಮಕ್ಕಳ ನಿಧಿ ಮಯ್ಯಂ ಪಕ್ಷ 142 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದರೆ, ಟಿ. ಆರ್​ ಪರಿವೆನಂದರ್​ ಅವರ ಇಂದಿಯ ಜನನಾಯಜಗ ಕಚಿ 40 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿತು. ಆಲ್​ ಇಂಡಿಯಾ ಸಮತುವ ಮಕ್ಕಲ್​ ಕಚಿ (ಎಐಎಸ್​ಎಂಕೆ) 33 ಕ್ಷೇತ್ರಗಳಲ್ಲಿ ಸ್ಪರ್ಧಿಸಿತು, ಇನ್ನು ಕೆ. ಎಂ ಶರೀವ್​ ಅವರ ತಮಿಳು ಮಕ್ಕಳ್​ ಜನನಾಯಗ ಕಚಿ 9 ಕ್ಷೇತ್ರದಲ್ಲಿ ಹಾಗೂ ದೇವೇಗೌಡ ಅವರ ನೇತೃತ್ವದ ಜನತಾ ದಳ (ಎಸ್​) ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಿತು.

ಪಕ್ಷದಿಂದ ಡಾ ಮಹೇಂದ್ರನ್, ಮಾಜಿ ಐಎಎಸ್​ ಅಧಿಕಾರಿ ಡಾ ಸಂತೋಷ್​ ಬಾಬು ಅಂತಹ ಪ್ರತಿಭಾನ್ವಿತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿತ್ತು. ಆದರೆ ಎಐಎಡಿಎಂಕೆ ಮತ್ತು ಕಾಂಗ್ರೆಸ್​ ಪಕ್ಷದ ಅಬ್ಬರದಲ್ಲಿ ಇಬ್ಬರು ಅಭ್ಯರ್ಥಿಗಳು ಸೋಲನ್ನು ಅನುಭವಿಸಿದರು.ಮೈಲಾಪುರದಿಂದ ಕಣಕ್ಕೆ ಇಳಿದಿದ್ದ ನಟಿ ಸುಪ್ರಿಯಾ ಡಿಎಂಕೆ ಅಭ್ಯರ್ಥಿ ಟಿ ವೇಲು ವಿರುದ್ದ ಸೋತರು. ಹೀಗೆ ಉತ್ತಮ ಅಭ್ಯರ್ಥಿಗಳನ್ನೇ ಕಮಲ್​ ಹಾಸನ್​ ತಮ್ಮ ಪಕ್ಷದ ಮೂಲಕ ಕಣಕ್ಕೆ ಇಳಿಸಿದರೂ ಮಾತ್ರ ಜನರು ಕಮಲ್​ ಪಕ್ಷವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಲಿಲ್ಲ. ಕಡೆಗೆ ಕಮಲ್​ ಹಾಸನ್​ ಅವರ ಏಕೈಕ ಜಯವೊಂದೇ ಪಕ್ಷ ಜೀವಂತವಾಗಿ ಉಳಿಯುವಂತೆ ಸಹಾಯ ಮಾಡಿತು.

ಲೋಕಸಭಾ ಚುನಾವಣೆಯಲ್ಲಿ 14 ತಿಂಗಳ ಕಮಲ್​ ಹಾಸನ್​ ಪಕ್ಷ 3.27 ರಷ್ಟು ಮತ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಈ ಯಶಸ್ಸು ಕಮಲ್​ ಪಕ್ಷದ ಬಗ್ಗೆ ಜನರಿಗೆ ಭರವಸೆ ಮೂಡಿಸಿದೆ ಎನ್ನಲಾಗಿತ್ತು. ಆದರೆ, ವಿಧಾನಸಭಾ ಚುನಾವಣೆಯ ಲೆಕ್ಕಾಚಾರಗಳು ಬೇರೆಯಾದವು.
Published by: Seema R
First published: May 2, 2021, 9:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories