• Home
  • »
  • News
  • »
  • national-international
  • »
  • TamilNadu Election: ತಮಿಳುನಾಡು ಚುನಾವಣೆಯಲ್ಲಿ 154 ಸ್ಥಾನಗಳಲ್ಲಿ ಅಖಾಡಕ್ಕೆ ಇಳಿಯಲು ಸಿದ್ಧವಾದ ನಟ ಕಮಲಹಾಸನ್ ಪಕ್ಷ

TamilNadu Election: ತಮಿಳುನಾಡು ಚುನಾವಣೆಯಲ್ಲಿ 154 ಸ್ಥಾನಗಳಲ್ಲಿ ಅಖಾಡಕ್ಕೆ ಇಳಿಯಲು ಸಿದ್ಧವಾದ ನಟ ಕಮಲಹಾಸನ್ ಪಕ್ಷ

ನಟ ಕಮಲಹಾಸನ್.

ನಟ ಕಮಲಹಾಸನ್.

2019 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಮಲಹಾಸನ್​ ನೇತೃತ್ವದ ಮಕ್ಕಳ್ ನೀಧಿ ಮಯ್ಯಂ ಪಕ್ಷ ಶೇ.4 ರಷ್ಟು ಮತಗಳನ್ನು ಗಳಿಸಿತ್ತು. ಇದೀಗ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಈ ಪಕ್ಷ ಶೇ.10 ರಷ್ಟು ಮತಗಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

  • Share this:

    ಚೆನ್ನೈ (ಮಾರ್ಚ್​ 09); ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 234 ವಿಧಾನಸಭಾ ಸ್ಥಾನಗಳ ಪೈಕಿ 154 ರಲ್ಲಿ ಸ್ಪರ್ಧಿಸುವುದಾಗಿ ನಟ-ರಾಜಕಾರಣಿ ಕಮಲಹಾಸನ್ ಅವರ ಪಕ್ಷದ ಮಕ್ಕಲ್ ನೀಧಿ ಮಯ್ಯಂ (MNM) ಸೋಮವಾರ ಪ್ರಕಟಿಸಿದೆ. ಪಕ್ಷವು ತನ್ನ ಎರಡು ಮೈತ್ರಿ ಪಾಲುದಾರರಾದ ಅಖಿಲ ಭಾರತೀಯ ಸಮತ್ತುವ ಮಕ್ಕಲ್ ಪಕ್ಷ ಮತ್ತು ಇಂಡಿಯಾ ಜನನಾಯಾಗ ಪಕ್ಷಕ್ಕೆ ಉಳಿದ 80 ಸ್ಥಾನಗಳನ್ನು ಬಿಟ್ಟುಕೊಟ್ಟಿದ್ದು, ಈ ಪಕ್ಷಗಳು ತಲಾ 40 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ ಎಂದು ಸೀಟು ಹಂಚಿಕೆ ಒಪ್ಪಂದವನ್ನು ಎಂಎನ್‌ಎಂ ಸೋಮವಾರ ತಡರಾತ್ರಿ ಘೋಷಿಸಿದೆ.


    "ಜನರ ಬಹುದಿನಗಳ ಆಕಾಂಕ್ಷೆಗಳನ್ನು ಈಡೇರಿಸುವ ಮೂಲಕ ತಮಿಳುನಾಡನ್ನು ಪರಿವರ್ತಿಸುವ ಸಾಮಾನ್ಯ ಗುರಿಯೊಂದಿಗೆ ಪಕ್ಷಗಳು ಬದ್ಧವಾಗಿವೆ. ತಮಿಳುನಾಡಿನ ಹೆಮ್ಮೆ ಮತ್ತು ವೈಭವವನ್ನು ಪುನಃಸ್ಥಾಪಿಸುವ ಸಾಮಾನ್ಯ ಕಾರ್ಯಸೂಚಿಯೊಂದಿಗೆ, ಅವರು ಒಟ್ಟಾಗಿ ದೀರ್ಘಕಾಲೀನ ಪ್ರಯಾಣವನ್ನು ಕೈಗೊಳ್ಳಲು ನಿರ್ಧರಿಸಿದ್ದಾರೆ" ಎಂದು ಮಕ್ಕಳ್ ನೀಧಿ ಮಯ್ಯಂ ಪಕ್ಷದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


    2019 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಮಲಹಾಸನ್​ ನೇತೃತ್ವದ ಮಕ್ಕಳ್ ನೀಧಿ ಮಯ್ಯಂ ಪಕ್ಷ ಶೇ.4 ರಷ್ಟು ಮತಗಳನ್ನು ಗಳಿಸಿತ್ತು. ಇದೀಗ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಈ ಪಕ್ಷ ಶೇ.10 ರಷ್ಟು ಮತಗಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.


    ಇದನ್ನೂ ಓದಿ: TamilNadu Election: ತಮಿಳುನಾಡು ಚುನಾವಣೆಯಲ್ಲಿ ಸೀಟು ಹಂಚಿಕೆಯಲ್ಲಿ ಭಿನ್ನಮತ; AIADMK-BJP ಮೈತ್ರಿಯಿಂದ ಹೊರನಡೆದ DMDK


    ಮಕ್ಕಳ್ ನೀಧಿ ಮಯ್ಯಂ ಪಕ್ಷವು ವಿಶಿಷ್ಟವಾದ ಟಿಕೆಟ್ ವಿತರಣಾ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಅಲ್ಲಿ ಸಾಮಾನ್ಯ ಜನರೇ ಅಭ್ಯರ್ಥಿಗಳಾಗಿ ಅರ್ಜಿ ಸಲ್ಲಿಸಲು ಆನ್‌ಲೈನ್ ವ್ಯವಸ್ಥೆಯನ್ನು ಪ್ರಾರಂಭಿಸಿದ್ದಾರೆ ಮತ್ತು ನಂತರ ಚುನಾವಣೆಯಲ್ಲಿ ಅಂತಿಮವಾಗಿ ಆಯ್ಕೆಯಾಗಲು ಶಾರ್ಟ್‌ಲಿಸ್ಟ್ ಮಾಡಿದವರ ಸಂದರ್ಶನಗಳು ನಡೆಯುತ್ತವೆ. ಈ ಸಂದರ್ಶನದ ನಂತರ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಲಿದೆ ಎನ್ನಲಾಗಿದೆ.


    ಎಂಎನ್‌ಎಂ ಭ್ರಷ್ಟಾಚಾರ, ಉದ್ಯೋಗಗಳು, ಅಭಿವೃದ್ಧಿ ಹೊಂದುತ್ತಿರುವ ಹಳ್ಳಿಗಳು ಮತ್ತು ಜನ ಸ್ನೇಹಿ ಇ-ಆಡಳಿತ, ಸರ್ಕಾರಿ ಯೋಜನೆಗಳನ್ನು ಸುಲಭವಾಗಿ ಪಡೆಯಲು ಜನರಿಗೆ ಸಹಾಯ ಮಾಡುವುದು, ಸಾರ್ವಜನಿಕ ಸಂಪನ್ಮೂಲವಾಗಿ ಗೃಹಿಣಿಯರಿಗೆ ಸಂಬಳ ಮತ್ತು ಎಲ್ಲಾ ಮನೆಗಳಲ್ಲಿ ಇಂಟರ್ನೆಟ್ ಹೊಂದಿರುವ ಉಚಿತ ಕಂಪ್ಯೂಟರ್‌ ನೀಡುವುದು ಹೀಗೆ ಅನೇಕ ಭರವಸೆಗಳೊಂದಿದೆ ಚುನಾವಣೆ ಎದುರಿಸುತ್ತಿದೆ.

    Published by:MAshok Kumar
    First published: