Tamilnadu Assembly Elections 2021 | ಕೊಯಮತ್ತೂರು ದಕ್ಷಿಣದಿಂದ ನಟ ಕಮಲ್ ಹಾಸನ್ ಸ್ಪರ್ಧೆ

ಕಮಲಹಾಸನ್.

ಕಮಲಹಾಸನ್.

ತಮಿಳುನಾಡಿನ 234 ವಿಧಾನಸಭೆ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಏಪ್ರಿಲ್ 6ರಂದು ಮತದಾನ ನಡೆಯಲಿದೆ. ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ. ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಪಕ್ಷ 177 ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ. ಉಳಿದ ವಿಧಾನಸಭೆ ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳು ಸ್ಪರ್ಧೆ ಮಾಡಲಿವೆ. 

ಮುಂದೆ ಓದಿ ...
  • Share this:

ನವದೆಹಲಿ: ಐದು ರಾಜ್ಯಗಳಿಗೆ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದೆ. ಪಶ್ಚಿಮಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ, ಪುದುಚೇರಿ ರಾಜ್ಯಗಳಿಗೆ ಇದೇ ಮಾರ್ಚ್ ಹಾಗೂ ಏಪ್ರಿಲ್​ನಲ್ಲಿ ಚುನಾವಣೆ ನಡೆಯಲಿದೆ. ಮೇ 2ರಂದು ಐದು ರಾಜ್ಯಗಳ ಫಲಿತಾಂಶ ಪ್ರಕಟವಾಗಲಿದೆ. ಈಗಾಗಲೇ ಐದು ರಾಜ್ಯಗಳಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಅಧಿಕಾರಕ್ಕೆ ಎಲ್ಲಾ ಪಕ್ಷಗಳ ರಾಜಕೀಯ ಕಸರತ್ತು ಜೋರಾಗಿದೆ.


ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳ ಅಬ್ಬರ ಜೋರಾಗಿದ್ದು, ಡಿಎಂಕೆ ಪಕ್ಷ ಶುಕ್ರವಾರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ 13 ಮಂದಿ ಮಹಿಳೆಯರು ಅಭ್ಯರ್ಥಿಗಳಾಗಿದ್ದಾರೆ. ಡಿಎಂಕೆ ಪಕ್ಷದ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರು ಕೊಲಥೂರ್​ನಿಂದ ಸ್ಪರ್ಧೆಗೆ ಇಳಿದಿದ್ದಾರೆ. ಉದಯನಿಧಿ ಅವರನ್ನು ಚೆಪಾಕ್​ನಿಂದ ಸ್ಪರ್ಧೆಗೆ ಇಳಿಸಲಾಗಿದೆ.


ಅದೇ ರೀತಿ ತಮಿಳುನಾಡಿನ ಸ್ಟಾರ್​ ನಟ ಕಮಲ ಹಾಸನ್​ ಅವರು ಇತ್ತೀಚೆಗೆಷ್ಟೇ ಮಕ್ಕಳ್ ನಿಧಿ ಮಯ್ಯಮ್ ಪಕ್ಷವನ್ನು ಸ್ಥಾಪಿಸಿದ್ದಾರೆ. ಕಮಲ ಹಾಸನ್ ಅವರು ಕೊಯಮತ್ತೂರ್ ದಕ್ಷಿಣದಿಂದ ಸ್ಪರ್ಧೆಗೆ ಇಳಿದಿದ್ದಾರೆ.


ಕೊಯಮತ್ತೂರಿನಲ್ಲಿ ಸ್ಪರ್ಧೆಗೆ ಇಳಿಯುವ ನಿರ್ಧಾರ ಘೋಷಣೆ ಬಳಿಕ ಮಾತನಾಡಿದ ಕಮಲ್ ಹಾಸನ್ ಅವರು, "ನನಗೆ ಕೊಯಮತ್ತೂರಿನೊಂದಿಗೆ ಆಳವಾದ ಸಂಪರ್ಕವಿದೆ. ಇಲ್ಲಿ ಕೊಂಗು ವಾಸಿಸುತ್ತಿದ್ದರೆ, ತಮಿಳುನಾಡು ವಾಸವಿದ್ದಂತೆ. ಆದರೆ ಕೊಂಗು ಪ್ರದೇಶವು ಭ್ರಷ್ಟಾಚಾರದ ಸಮಾನಾರ್ಥಕವಾಗಿದೆ" ಎಂದು ಕಮಲ್ ಹಾಸನ್ ಹೇಳಿದ್ದಾರೆ.


ತಮಿಳಿನ ಮತ್ತೋರ್ವ ನಟ ಹಾಗೂ ರಾಜಕಾರಣಿ ವಿಜಯ ಕಾಂತ್ ನೇತೃತ್ವದ ಡಿಎಂಡಿಕೆ ಪಕ್ಷವು ಎಐಎಡಿಎಂಕೆ- ಬಿಜೆಪಿ ಮೈತ್ರಿಯನ್ನು ಕಡಿದುಕೊಂಡಿದೆ. ನಿರೀಕ್ಷೆ ಸ್ಥಾನಗಳು ಅಥವಾ ಕ್ಷೇತ್ರಗಳನ್ನು ಹಂಚಿಕೆ ಮಾಡದಿರುವುದೇ ಡಿಎಂಡಿಕೆ ಮೈತ್ರಿಯಿಂದ ಹೊರಬರಲು ಕಾರಣ ಎಂದು ಡಿಎಂಡಿಕೆ ಹೇಳಿದೆ.


ಡಿಎಂಡಿಕೆ 41 ಸೀಟುಗಳಿಗೆ ಬೇಡಿಕೆ ಇಟ್ಟಿತ್ತು. ಆದರೆ, ಅಂತಿಮವಾಗಿ 23 ಸೀಟುಗಳನ್ನು ನೀಡಲಾಗಿತ್ತು. ಪಿಎಂಕೆಗೆ 23 ಮತ್ತು ಬಿಜೆಪಿಗೆ 20 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಎಐಎಡಿಎಂಕೆ 39 ಸ್ಥಾನಗಳ ಪೈಕಿ 37ರಲ್ಲಿ ಗೆಲುವು ಸಾಧಿಸಿತ್ತು. ವಿಜಯ ಕಾಂತ್ ಅವರ ಡಿಎಂಡಿಕೆ ಪಕ್ಷ ಒಂದು ಸ್ಥಾನವನ್ನು ಸಹ ಗೆದ್ದಿರಲಿಲ್ಲ. ಹೀಗಾಗಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಡಿಎಂಡಿಕೆ ಪಕ್ಷಕ್ಕೆ ಕೇವಲ 20 ಸ್ಥಾನಗಳನ್ನಷ್ಟೇ ನೀಡಲುಎಐಎಡಿಎಂಕೆ ಪಕ್ಷ  ನಿರ್ಧರಿಸಿತ್ತು. ಹೀಗಾಗಿ ಡಿಎಂಡಿಕೆ ಮೈತ್ರಿಯಿಂದ ಹೊರಬಂದು ಸ್ವತಂತ್ರವಾಗಿ ಸ್ಪರ್ಧೆ ಮಾಡಿದೆ.


ಇದನ್ನು ಓದಿ: Mamata Banerjee: ಹಲ್ಲೆ ಪ್ರಕರಣದಲ್ಲಿ ಮಮತಾ ಬ್ಯಾನರ್ಜಿ ಸುಳ್ಳು ಹರಡುತ್ತಿದ್ದಾರೆ: ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು!


ಉಳಿದಂತೆ ತಮಿಳುನಾಡಿನಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ಸೂಪರ್​ ಸ್ಟಾರ್ ರಜನಿಕಾಂತ್ ಅವರು ರಾಜಕೀಯದಿಂದಲೇ ದೂರ ಉಳಿದಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ರಜನಿಕಾಂತ್ ಅವರು ಇದೇ ಕಾರಣ ನೀಡಿ, ರಾಜಕೀಯದಿಂದ ದೂರ ಉಳಿಯುವುದಾಗಿ ಕೆಲ ತಿಂಗಳ ಹಿಂದೆಯಷ್ಟೇ ಘೋಷಣೆ ಮಾಡಿದ್ದರು.


ತಮಿಳುನಾಡಿನ 234 ವಿಧಾನಸಭೆ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಏಪ್ರಿಲ್ 6ರಂದು ಮತದಾನ ನಡೆಯಲಿದೆ. ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ. ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಪಕ್ಷ 177 ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ. ಉಳಿದ ವಿಧಾನಸಭೆ ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳು ಸ್ಪರ್ಧೆ ಮಾಡಲಿವೆ.

First published: