ನವದೆಹಲಿ: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ (Bharat Jodo Padayatra) ಇಂದಿಗೆ ರಾಷ್ಟ್ರ ರಾಜಧಾನಿ ನವದೆಹಲಿಗೆ (New Delhi) ಕಾಲಿಟ್ಟಿದೆ. ಈಗಾಗಲೇ ದೇಶದಲ್ಲಿ ಸುಮಾರು 3,000 ಕಿ.ಮೀ ಪಾದಯಾತ್ರೆ ಮುಗಿಸಿರುವ ಕಾಂಗ್ರೆಸ್ ಇಂದಿನಿಂದ ನವದೆಹಲಿಯಲ್ಲಿ ಪಾದಯಾತ್ರೆ ಪ್ರಾರಂಭಿದೆ. ಈ ನಡುವೆ ಕಾಲಿವುಡ್ (Kollywood) ಹಿರಿಯ ನಟ ಮತ್ತು ಮಕ್ಕಳ್ ನೀಧಿ ಮೈಯಂ ಅಧ್ಯಕ್ಷ ಕಮಲ್ ಹಾಸನ್ (Kamal Hassan) ಅವರು ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ರಾಹುಲ್ ಗಾಂಧಿಗೆ ಸಾಥ್ ನೀಡಿದರು. ಕನ್ಯಾಕುಮಾರಿಯಿಂದ (Kanya Kumari) ಕಾಶ್ಮೀರದವರೆಗೂ (Kashmir) ನಡೆಯುತ್ತಿರುವ ಈ ಪಾದಯಾತ್ರೆಯು ಸೆಪ್ಟೆಂಬರ್ 7 ರಂದು ಆರಂಭವಾಗಿದೆ. ಇಲ್ಲಿಯವರೆಗೂ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಹಾಗೂ ಹರಿಯಾಣದಲ್ಲಿ ಪಾದಯಾತ್ರೆ ನಡೆಸಿದ್ದು, ಇದೀಗ ದೆಹಲಿಗೆ ತಲುಪಿದೆ.
मैं आईने के सामने खड़ा हुआ और खुद से कहा- यही वक्त है जब देश को मेरी सबसे ज्यादा जरूरत है।
फिर मेरे अंदर से आवाज आई - "कमल... भारत तोड़ने की मदद मत करो, जोड़ने की मदद करो।"
- @ikamalhaasan जी#JodoJodoDilliJodo pic.twitter.com/DCYVtiEXiv
— Congress (@INCIndia) December 24, 2022
ಸದ್ಯ ಇಂದು ದೆಹಲಿಯತ್ತ ಆಗಮಿಸಿರುವ ಪಾದಯಾತ್ರೆಯಲ್ಲಿ ರಾಹುಲ್ ಜೊತೆಗೆ ಕಮಲ್ ಹಾಸನ್ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದರು. ದೆಹಲಿಯ ಕೆಂಪು ಕೋಟೆಯವರೆಗೂ ಜೊತೆಯಾಗಿ ನಡೆದು ನಂತರ ಮಾತನಾಡಿದ ಅವರು, ನನ್ನ ತಂದೆ ಕಾಂಗ್ರೆಸ್ಸಿಗರಾಗಿದ್ದರು. ನಾನು ನನ್ನದೇ ಆದ ಕೆಲವು ಸಿದ್ದಾಂತಗಳನ್ನು ಹೊಂದಿದ್ದೇನೆ ಮತ್ತು ನನ್ನದೇ ಆದ ರಾಜಕೀಯ ಪಕ್ಷವನ್ನು ಆರಂಭಿಸಿದ್ದೇನೆ. ಆದರೆ ದೇಶದ ವಿಚಾರ ಬಂದಾಗ ಎಲ್ಲಾ ರಾಜಕೀಯ ಪಕ್ಷದ ಗೆರೆಯನ್ನು ದಾಟಬೇಕಾಗುತ್ತದೆ. ನಾನೀಗ ಆ ಗೆರೆಯನ್ನು ದಾಟಿ ಇಲ್ಲಿಗೆ ಬಂದಿದ್ದೇನೆ ಎಂದರು ಹೇಳಿದರು.
ದೇಶಕ್ಕೆ ಇದು ನನ್ನ ಅಗತ್ಯದ ಸಮಯ
ಕನ್ನಡಿಯ ಮುಂದೆ ನಿಂತುಕೊಂಡು ನನ್ನನ್ನೇ ನಾನು ಕೇಳಿಕೊಂಡೆ - ಇದು ದೇಶಕ್ಕೆ ನನ್ನ ಅಗತ್ಯವಿರುವ ಸಮಯ. ಆಗ ನನ್ನೊಳಗಿನಿಂದ ಕಮಲ್.. ಭಾರತವನ್ನು ಒಡೆಯುವುದಕ್ಕೆ ಸಹಾಯ ಮಾಡಬೇಡಿ.. ಒಗ್ಗೂಡಿಸಲು ಸಹಾಯ ಮಾಡಿ ಎಂಬ ಧ್ವನಿ ಕೇಳಿ ಬಂತು ಎಂದರು.
ಜನವರಿ ಕೊನೆಗೆ ಭಾರತ್ ಜೋಡೋ ಯಾತ್ರೆ ಅಂತ್ಯ ಸಾಧ್ಯತೆ
ಇನ್ನೂ ಕಮಲ್ ಹಾಸನ್ ಜೊತೆಗೆ ರಾಹುಲ್ ಗಾಂಧಿ, ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಅವರ ಮಗಳು ಪ್ರಿಯಾಂಕ ಗಾಂಧಿ, ಅಳಿಯ ಮತ್ತು ಮೊಮ್ಮಕ್ಕಳು ಸಹ ಪಾದಯಾತ್ರೆಯಲ್ಲಿ ಪಾಲ್ಗೊಂಡು ಒಟ್ಟಿಗೆ ನಡೆದರು. ಒಟ್ಟಾರೆ ಜನವರಿ ಅಂತ್ಯದ ವೇಳೆಗೆ ಭಾರತ್ ಜೋಡೋ ಯಾತ್ರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕೊನೆಗೊಳ್ಳಲಿದ್ದು, ಅಷ್ಟೋತ್ತಿಗೆ 3,570 ಕಿ.ಮೀವರೆಗೂ ಸಾಗಲಿದೆ.
Superstar Kamal Haasan joins Rahul Gandhi in Bharat Jodo Yatra ⚡⚡💕 pic.twitter.com/UTang9y5IO
— Srinivas BV (@srinivasiyc) December 24, 2022
ಕೊರೊನಾ ನಿಯಮ ಪಾಲಿಸದಿದ್ದರೆ ಭಾರತ್ ಜೋಡೋ ಯಾತ್ರೆ ನಿಲ್ಲಿಸಿ
ಮತ್ತೊಂದೆಡ ದೇಶದಲ್ಲಿ ಕೊರೊನಾ ಆತಂಕ ಎದುರಾಗಿದ್ದು, ಕೋವಿಡ್-19 ನಿಮಯಗಳನ್ನು ಪಾಲಿಸದಿದ್ದರೆ, ಭಾರತ್ ಜೋಡೋ ಯಾತ್ರೆಯನ್ನು ನಿಲ್ಲಿಸುವಂತೆ ಕೇಂದ್ರ ಆರೋಗ್ಯ ಸಚಿವ ಮನ್ಸೂಕ್ ಮಾಂಡವೀಯ ತಿಳಿಸಿದ್ದಾರೆ.
ಕೋವಿಡ್ 19 ದೇಶದಲ್ಲಿ ಹರಡದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯ
ಈ ಕುರಿತಂತೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಕೋವಿಡ್ 19 ದೇಶದಲ್ಲಿ ಹರಡದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯ. ಆದರೆ ಒಬ್ಬ ಮಂತ್ರಿಯನ್ನು ಪ್ರಶ್ನಿಸುವುದು ಹೇಗೆ ಎಂಬುವುದನ್ನು ಆಲೋಚಿಸುತ್ತಿದ್ದರೆ, ಅವರಿಗೆ ನಾವೇನು ಮಾಡಬೇಕು? ಈ ರೀತಿ ಪ್ರಶ್ನಿಸುವುದು ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದಂತೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ