ಬಿಜೆಪಿ ಹಿರಿಯ ನಾಯಕ, ಯುಪಿ ಮಾಜಿ ಸಿಎಂ ಕಲ್ಯಾಣ್​ ಸಿಂಗ್​ ಅನಾರೋಗ್ಯದಿಂದ ನಿಧನ

ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿ ಕುರ್ಚಿ ಏರಿದ ಮೊದಲ ವ್ಯಕ್ತಿ ಹಾಗೂ ಸದಾ ವಿವಾದಗಳಿಂದಲೇ ಸುದ್ದಿಯಲ್ಲಿದ್ದ ಈ ಹಿರಿಯ ನಾಯಕ, ಹೊಸಾ ರೀತಿಯ ರಾಜಕಾರಣವನ್ನು ಉತ್ತರ ಪ್ರದೇಶದಲ್ಲಿ ಪ್ರಯೋಗಿಸಿ ಚಾಲ್ತಿಗೆ ಬಂದವರು. 

ಕಲ್ಯಾಣ್ ಸಿಂಗ್ ಭೇಟಿಯಾಗಿದ್ದ ಯೋಗಿ ಆದಿತ್ಯನಾಥ್, ಜೆಪಿ ನಡ್ಡಾ.

ಕಲ್ಯಾಣ್ ಸಿಂಗ್ ಭೇಟಿಯಾಗಿದ್ದ ಯೋಗಿ ಆದಿತ್ಯನಾಥ್, ಜೆಪಿ ನಡ್ಡಾ.

 • Share this:

  ಕಲ್ಯಾಣ್ ಸಿಂಗ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕ,  89 ನೇ ವಯಸ್ಸಿನಲ್ಲಿ ಶನಿವಾರ ಲಕ್ನೋದಲ್ಲಿ ನಿಧನರಾದರು. ಜುಲೈ 4 ರಂದು ವಿವಿಧ ಸೋಂಕು ಮತ್ತು ದೇಹದ ಪ್ರಜ್ಞೆಯ ಮಟ್ಟ ಕಡಿಮೆಯಾದ ಕಾರಣ ಸಿಂಗ್ ಅವರನ್ನು ನಗರದ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನಗಳ (ಎಸ್‌ಜಿಪಿಜಿಐಎಂಎಸ್) ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿತ್ತು.


  ಸೆಪ್ಸಿಸ್ ಮತ್ತು ಬಹು ಅಂಗಾಂಗ ವೈಫಲ್ಯದಿಂದ ಸಿಂಗ್ ಮೃತಪಟ್ಟಿದ್ದಾರೆ ಎಂದು ಎಸ್‌ಜಿಪಿಜಿಐಎಂಎಸ್ ಶನಿವಾರ ರಾತ್ರಿ ಹೇಳಿಕೆಯಲ್ಲಿ ತಿಳಿಸಿದೆ. ಉತ್ತರ ಪ್ರದೇಶ ಸರ್ಕಾರ ಮೂರು ದಿನಗಳ ಶೋಕಾಚರಣೆ ಘೋಷಿಸಿದೆ.


  ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿ ಕುರ್ಚಿ ಏರಿದ ಮೊದಲ ವ್ಯಕ್ತಿ ಹಾಗೂ ಸದಾ ವಿವಾದಗಳಿಂದಲೇ ಸುದ್ದಿಯಲ್ಲಿದ್ದ ಈ ಹಿರಿಯ ನಾಯಕ, ಹೊಸಾ ರೀತಿಯ ರಾಜಕಾರಣವನ್ನು ಉತ್ತರ ಪ್ರದೇಶದಲ್ಲಿ ಪ್ರಯೋಗಿಸಿ ಚಾಲ್ತಿಗೆ ಬಂದವರು.

  ಜಾತಿ ರಾಜಕಾರಣ ಎನ್ನುವುದು ಉತ್ತರ ಪ್ರದೇಶದಲ್ಲಿ ಚುನಾವಣೆ ಹೊತ್ತಿನಲ್ಲಿ ಮುನ್ನೆಲೆಗೆ ತಂದ ಕುಖ್ಯಾತಿ ಇವರಿಗಿದೆ. ಅಲ್ಲಿಯ ತನಕ ತೆರೆಮರೆಯಲ್ಲಿ ನಡೆಯುತ್ತಿದ್ದ ಜಾತಿ ಲೆಕ್ಕಾಚಾರವನ್ನು ಬಹಿರಂಗವಾಗಿ ಮುನ್ನೆಲೆಗೆ ತಂದು ಎಲ್ಲಾ ಪಕ್ಷಗಳಿಗೆ ಸರಿಯಾದ ಹೊಡೆತ ಕೊಟ್ಟು ಬಿಜೆಪಿ ಬೆಳೆಯಲು ಕಾರಣವಾದ ವ್ಯಕ್ತಿ ಕಲ್ಯಾಣ್​ ಸಿಂಗ್​ ಎಂದರೆ ತಪ್ಪಾಗಲಾರದು.

  1932 ರಲ್ಲಿ ಜನಿಸಿದ ಕಲ್ಯಾಣ್ ಸಿಂಗ್ ತನ್ನ ಯೌವನದಲ್ಲಿ ಹಿಂದುತ್ವದ ಸಿದ್ಧಾಂತದ ಕಡೆಗೆ ಎಳೆಯಲ್ಪಟ್ಟರು. ಆಗ ರಾಜಕೀಯ ನೆಹರೂವಿಯನ್ ಕಾಂಗ್ರೆಸ್ ಪ್ರಾಬಲ್ಯ ಹೊಂದಿದ್ದ ಕಾಲ. ಹೊಸ ರಸ್ತೆಯಲ್ಲಿ ರಾಜಕೀಯ ಸಾಹಸ ಮಾಡುವುದು ಸುಲಭವಲ್ಲ. ಆದಾಗ್ಯೂ,  ಭಾರತೀಯ ಜನಸಂಘದ ಕಾರ್ಯಕರ್ತರಾಗಿ, ಅವರು ಶೀಘ್ರದಲ್ಲೇ ಹೆಸರು ಮಾಡಿದರು ಮತ್ತು 1967 ರಲ್ಲಿ ಜನ ಸಂಘದ ಟಿಕೆಟ್ ಪಡೆದು ಅತ್ರೌಲಿ ವಿಧಾನ ಸಭಾ ಸ್ಥಾನದಲ್ಲಿ ಸ್ಪರ್ಧಿಸಿ ಗೆದ್ದರು.

  https://twitter.com/narendramodi/status/1429120682160394241

  ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದು, ಹಿರಿಯ ನಾಯಕ ಕಲ್ಯಾಣ್ ಸಿಂಗ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. "ನಾನು ಪದಗಳನ್ನು ಮೀರಿ ದುಃಖಿತನಾಗಿದ್ದೇನೆ. ಕಲ್ಯಾಣ್ ಸಿಂಗ್ ಜೀ ... ರಾಜ್ಯಪಾಲ, ಹಿರಿಯ ಆಡಳಿತಗಾರ, ತಳಮಟ್ಟದ ನಾಯಕ ಮತ್ತು ಮಹಾನ್ ಮಾನವತಾವಾದಿ. ಉತ್ತರ ಪ್ರದೇಶದ ಅಭಿವೃದ್ಧಿಗೆ ಅವರು ಅಳಿಸಲಾಗದ ಕೊಡುಗೆಯನ್ನು ಬಿಟ್ಟು ಹೋಗಿದ್ದಾರೆ. ಅವರ ಪುತ್ರ ರಾಜವೀರ್ ಸಿಂಗ್ ಅವರೊಂದಿಗೆ ಮಾತನಾಡಿದ್ದೇನೆ ಎಂದು ಸಂತಾಪ ವ್ಯಕ್ತಪಡಿಸಿದರು. ಓಂ ಶಾಂತಿ"ಎಂದು ಅವರು ಟ್ವೀಟ್ ಮಾಡಿದ್ದಾರೆ.


  ಕಲ್ಯಾಣ್ ಸಿಂಗ್ ಜೀ ಸಮಾಜದ ಅಂಚಿನಲ್ಲಿರುವ ಕೋಟ್ಯಂತರ ಜನರಿಗೆ ಧ್ವನಿ ನೀಡಿದವರು, ರೈತರು, ಯುವಕರು ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಅವರು ಹಲವಾರು ಪ್ರಯತ್ನಗಳನ್ನು ಮಾಡಿದವರು "ಎಂದು ಪ್ರಧಾನಿ ಹೇಳಿದ್ದಾರೆ.

  ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕೂಡ ಸಂತಾಪ ಸೂಚಿಸಿದ್ದು, ಅಗಲಿದ ಹಿರಿಯ ನಾಯಕನ ಆತ್ಮ ಶಾಂತಿಗೆ ಪ್ರಾರ್ಥಿಸಿದ್ದಾರೆ.

  https://twitter.com/AmitShah/status/1429125162302165013

  ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು "ಗಂಭೀರ" ಸ್ಥಿತಿಯಲ್ಲಿರುವ ಹಿರಿಯ ನಾಯಕನನ್ನು ಶುಕ್ರವಾರ ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದ್ದರು.

  "ಕಲ್ಯಾಣ್ ಸಿಂಗ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಮತ್ತು ಐಸಿಯುನಲ್ಲಿ ಅವರನ್ನು ಉಳೀಸಲು ನಾವು ಪ್ರಯತ್ನಿಸುತ್ತಿದ್ದೇವೆ" ಎಂದು ಆಸ್ಪತ್ರೆಯು ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿತ್ತು. ಅವರು ವೈದ್ಯರ ನಿಕಟ ಮೇಲ್ವಿಚಾರಣೆಯಲ್ಲಿದ್ದಾರೆ ಎಂದು ಆಸ್ಪತ್ರೆ ಹೇಳಿತ್ತು.


  ಈ ಹಿಂದೆ, ಸಿಂಗ್ ಲಖನೌದ ಡಾ.ರಾಮ್ ಮನೋಹರ್ ಲೋಹಿಯಾ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.


  ಇದನ್ನೂ ಓದಿ: ಬಿಗ್​ ಬಿ ಬಚ್ಚನ್​ ಮತ್ತೆ ಕಿರುತೆರೆಯಲ್ಲಿ; ಕೌನ್​ ಬನೇಗಾ ಕರೋಡ್​ಪತಿ ಸೀಜನ್​ 13 ಸೋಮವಾರದಿಂದ ಪ್ರಾರಂಭ

  89 ವರ್ಷದ ಹಿರಿಯ ನಾಯಕ ರಾಜಸ್ಥಾನದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಸುರೇಶ್ ಖನ್ನಾ ಅವರು ಆದಿತ್ಯನಾಥ್ ಅವರೊಂದಿಗೆ ಆಸ್ಪತ್ರೆಗೆ ತೆರಳಿದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: